ಒಂದು ಕಾಲದಲ್ಲಿ ಹೆಣ್ಣು ಮಗು ಮನೆಯಲ್ಲಿ ಜನಿಸಿದರೆ ಜನ ಅದನ್ನು ಶಾಪವೆಂದು ಹೇಳುತ್ತಿದ್ದರು. ಮಗಳು ಹುಟ್ಟಿದ ತಕ್ಷಣ ಕಸದ ತೊಟ್ಟಿಗೆ, ಬೀದಿಗೆ ಎ ಸೆ ಯುವ ಅಥವಾ ಕೊ ಲ್ಲು ವ ಅನೇಕ ವರದಿಗಳನ್ನು ಸಹ ನೀವು ಕೇಳಿರಬೇಕು. 1960 ರಲ್ಲಿ ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೊಟಡಾ ಗ್ರಾಮದಲ್ಲಿ ಜನಿಸಿದ ಗುಲಾಬೊ ಸಪೆರಾ ಜೊತೆಗೂ ಇದೇ ರೀತಿಯ ಘಟನೆ ಸಂಭವಿಸಿತ್ತು. ‘ಬಿಗ್ ಬಾಸ್ 5’ ಸ್ಪರ್ಧಿಯಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಲಾಬೊ ಸಪೆರಾ ಈ ವಿಷಯವನ್ನ ಖುದ್ದು ತಾವೇ ಶೋ ನಲ್ಲಿ ಬಹಿರಂಗಪಡಿಸಿದ್ದರು
ಗುಲಾಬೊ ಅವರ ಹೆಸರು ರಾಜಸ್ಥಾನದ ಪ್ರಸಿದ್ಧ ಕಲ್ಬೇಲಿಯಾ ಡ್ಯಾನ್ಸರ್ ಎಂದೂ ಪ್ರಸಿದ್ಧವಾಗಿದೆ. ಅವರ ಜಾನಪದ ನೃತ್ಯವು ದೇಶ ವಿದೇಶಗಳಲ್ಲಿ ಪ್ರತ್ಯೇಕ ತುಂಬಾ ಫೇಮಸ್ ಆಗಿದೆ. ಅವರು 2016 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕಲ್ಬೆಲಿಯಾ ನೃತ್ಯವನ್ನು ಗುಲಾಬ್ ಆರಂಭಿಸಿದರು. ಅವರು ಅದನ್ನು ಎಲ್ಲಿಂದಲೂ ಕಲಿಯಲಿಲ್ಲ, ಆದರೆ ಆಕೆಯ ಬಾಲ್ಯದಲ್ಲಿ ತನ್ನ ತಂದೆಯ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಗ ಬೀನ್‌ಗೆ ತಕ್ಕಂತೆ ನೃತ್ಯ ಮಾಡುತ್ತಿದ್ದಳು. ಇಲ್ಲಿಂದಲೇ ಅವರು ಕಲ್ಬೇಲಿಯಾ ನೃತ್ಯವನ್ನು ರಚಿಸಿದರು. ಈಗ ಅವರ ಈ ನೃತ್ಯ ದೇಶ ಮತ್ತು ವಿದೇಶಗಳಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಈ ನೃತ್ಯ ಶೈಲಿಯನ್ನ ನೋಡಲು ದೂರದೂರದಿಂದಲೂ ಜನರು ರಾಜಸ್ಥಾನಕ್ಕೆ ಬರುತ್ತಾರೆ.
ಬಿಗ್ ಬಾಸ್ 5 ಕ್ಕೆ ಬಂದ ನಂತರ, ಈ ಗುಲಾಬೋ ರವರ ಈ ಜಾನಪದ ನೃತ್ಯವು ಮತ್ತಷ್ಟು ಪ್ರಸಿದ್ಧಿ ಪಡೆಯಿತು. ಚಲನಚಿತ್ರ ನಿರ್ದೇಶಕ ಜೆಪಿ ದತ್ತಾ ರವರು ಗುಲಾಬೋ ರವರಿಗೆ ತಮ್ಮ ‘ಗುಲಾಮಿ’ ಮತ್ತು ‘ಬಂಟ್ವಾರ’ ಚಿತ್ರಗಳಲ್ಲಿ ನೃತ್ಯ ಮಾಡಲು ಅವಕಾಶ ನೀಡಿದ್ದರು. ಗುಲಾಬೋ ಸಾಧಿಸಿದ ಯಶಸ್ಸು ಅವರ ಕಠಿಣ ಹೋರಾಟದ ಹಿಂದೆ ಅಡಗಿದೆ. ಗುಲಾಬೋ ಹುಟ್ಟಿದಾಗ ಆಕೆಯ ತಂದೆ ಮನೆಯಿಂದ ದೂರವಿದ್ದರು. ಮತ್ತೊಂದೆಡೆ, ಮಗಳು ಜನಿಸಿದ್ದಾಳೆ ಎಂದು ಸಂಬಂಧಿಕರಿಗೆ ತಿಳಿದಾಗ, ಅವರು ಆಕೆಯನ್ನ ಜೀ ವಂ ತ ವಾಗೇ ನೆ ಲ ದ ಲ್ಲಿ ಹೂ ತು ಬಿಟ್ಟಿದ್ದರು.
ಗುಲಾಬೋ ತಾಯಿಗೆ ಪ್ರಜ್ಞೆ ಬಂದಾಗ, ತನ್ನ ಮಗಳನ್ನು ಹೂ ತ ಸ್ಥಳವನ್ನು ತಿಳಿಸುವಂತೆ ಸಂಬಂಧಿಕರ ಕೈ ಕಾಲುಗಳನ್ನು ಬಿದ್ದು ಮಗುವನ್ನ ಅಲ್ಲಿಂದ ಹೊರತೆಗೆದು ಕರೆತರಲು ಮನವಿ ಮಾಡಿಕೊಂಡಳು. ಆದರೆ ಯಾರೂ ಏನನ್ನೂ ಹೇಳಲಿಲ್ಲ. ಗುಲಾಬೋ ಚಿಕ್ಕಮ್ಮನಿಗೆ ಸ್ಥಳ ತಿಳಿದಿದ್ದರೂ ಆಕೆ ಹೇಳಲಿಲ್ಲ ಆದರೆ ನಾವು ರಾತ್ರಿ ಹೋಗೋಣ ಎಂದು ಆಕೆ ತನ್ನ ಸಹೋದರಿಗೆ ತಿಳಿಸಿದಳು. ನಂತರ ರಾತ್ರಿ 12 ಗಂಟೆಗೆ, ಇಬ್ಬರೂ ಹೋಗಿ ಗುಲಾಬೋಳನ್ನು ಅಲ್ಲಿಂದ ಹೊರತೆಗೆದರು. ಆಗ ಮಗು ಇನ್ನೂ ಉ ಸಿ ರಾ ಡು ತ್ತಿತ್ತು. ಈ ರೀತಿಯಾಗಿ ಗುಲಾಬೋಳಿಗೆ ಮತ್ತೆ ಜೀವನದಾನ ಸಿಕ್ಕಿತು.
ಗುಲಾಬೋ ನಿಜವಾದ ಹೆಸರು ಧನ್ವಂತರಿ. ಆಕೆಗೆ ಗುಲಾಬೋ ಅಂತ ಆಕೆಯ ತಂದೆ ಹೆಸರಿಟ್ಟಿದ್ದ. ವಾಸ್ತವವಾಗಿ ಅವಳು ತನ್ನ ಬಾಲ್ಯದಲ್ಲಿ ನೋಡೋಕೆ ಸುಂದರವಾಗಿದ್ದಳು ಮತ್ತು ಆಕೆಯ ಕೆನ್ನೆಗಳು ಸಂಪೂರ್ಣವಾಗಿ ಗುಲಾಬಿ ಬಣ್ಣದ್ದಾಗಿದ್ದವು. ತಮ್ಮ ಸಮುದಾಯದಲ್ಲಿ ಯಾವುದೇ ಸರ್‌ನೇಮ್ ಗಳು ಇರುವುದಿಲ್ಲ ಎಂದು ಗುಲಾಬೋ ಸಂದರ್ಶನವೊಂದರಲ್ಲಿ ಹೇಳಿದ್ದರು. ಗುಲಾಬೋ ನೃತ್ಯದಿಂದಾಗಿ ಆಕೆಗೆ ಸಪೇರಾ ಎಂಬ ಹೆಸರು ಸೇರಿಕೊಂಡಿತು. ವಾಸ್ತವವಾಗಿ, ಗುಲಾಬೋ ತಂದೆ ತನ್ನ ಬಾಸುರಿಯಿಂದ ಹಾ ವ ನ್ನು ತಲೆದೂಗುವಂತೆ ಮಾಡುತ್ತಿದ್ದರು. ಗುಲಾಬೋ ಸ್ವಲ್ಪ ದೊಡ್ಡವಳಾಗಿದ್ದಾಗ, ಆಕೆಯೂ ತನ್ನ ತಂದೆಯೊಂದಿಗೆ ಕೆಲಸಕ್ಕೆ ಹೋಗಲಾರಂಭಿಸಿದಳು. ಇಲ್ಲಿ ಹಾ ವಿ ನ ಜೊತೆಯಲ್ಲಿ, ಆಕೆಯೂ ಬೀನ್ ರಾಗಕ್ಕೆ ನೃತ್ಯ ಮಾಡಲು ಪ್ರಾರಂಭಿಸಿದಳು. ಆಕೆ ಕಲ್ಬೇಲಿಯಾ ನೃತ್ಯವನ್ನು ರಚಿಸಿದ್ದು ಹೀಗೆ.
ನೋಡು ನೋಡುತ್ತಲೇ ಗುಲಾಬೊ ನೃತ್ಯ ಪ್ರಸಿದ್ಧವಾಯಿತು. 17 ನೇ ವಯಸ್ಸಿನಲ್ಲಿ, ಅವರು ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಅವಕಾಶವನ್ನು ಪಡೆದರು. ಈ ಕಾರ್ಯಕ್ರಮ ವಾಷಿಂಗ್ಟನ್‌ನಲ್ಲಿ ನಡೆಯುತ್ತಿದ್ದಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಕೂಡ ಇದ್ದರು. ಈ ರೀತಿಯಾಗಿ ಕಲ್ಬೇಲಿಯಾ ನೃತ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಲಾಯಿತು. ಗುಲಾಬೊ ಪ್ರಸಿದ್ಧರಾದ ನಂತರ, ಆಕೆಯ ಸಮಾಜದ ಜನರು ಹೆಣ್ಣು ಮಗುಗಳನ್ನ ಕೊ ಲ್ಲು ವು ದನ್ನು ನಿಲ್ಲಿಸಿದರು. ಇದು ತನ್ನ ದೊಡ್ಡ ಗೆಲುವು ಎಂದು ಗುಲಾಬೋ ಹೇಳುತ್ತಾರೆ.