ಗ್ರೇಟರ್ ನೋಯ್ಡಾ ವೆಸ್ಟ್ನ ಬಿಸ್ರಖ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಮಹಿಳೆಯ ಮೇಲೆ ಅ ತ್ಯಾ ಚಾ ರ ಎ ಸ ಗಿದ ಜಿಮ್ ಮಾಲೀಕ ಇಂತೇಜಾರ್ ಖಾನ್ನ್ನ ಬಂಧಿಸಲಾಗಿದೆ. ಇಂತೇಜಾರ್ ಖಾನ್ ತನ್ನನ್ನು ಸೋನು ಎಂದು ಹೇಳಿಕೊಂಡು ಈ ಕೃತ್ಯ ಎಸಗಿದ್ದಾನೆ. ಆರೋಪಿ ಇಂತೇಜಾರ್ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆಯೂ ಒತ್ತಡ ಹೇರುತ್ತಿದ್ದು, ಈ ಕೆಲಸಕ್ಕೆ ಆತನ ಅಬ್ಬು (ತಂದೆ) ಮತ್ತು ತಮ್ಮ ಇಬ್ಬರೂ ಬೆಂಬಲ ನೀಡುತ್ತಿದ್ದರು. ಯುವತಿಯ ದೂರಿನ ಮೇರೆಗೆ ಮೂವರನ್ನೂ ಬಂಧಿಸಲಾಗಿದೆ.
ಪತ್ರಕರ್ತ ಅನುರಾಗ್ ಚಡ್ಡಾ ಅವರು ಈ ಘಟನೆಯ ಕುರಿತು ವಿಡಿಯೋ ಕ್ಲಿಪ್ ಶೇರ್ ಮಾಡಿಕೊಳ್ಳುತ್ತ, “ಇಂತಜಾರ್ ಖಾನ್ ಸೋನು ಎಂದು ನಟಿಸಿ ನಂತರ ಜಿಮ್ ಮ್ಯಾನೇಜರ್ ಮೇಲೆ ಅ ತ್ಯಾ ಚಾ ರ ವೆಸಗಿದ್ದಾನೆ, ಇದೀಗ ಆರೋಪಿ ಇಂತೇಜಾರ್ ಮತ್ತು ಆತನ ಬೆಂಬಲಿಗ ಸಹೋದರ ಮತ್ತು ತಂದೆಯನ್ನು ನೋಯ್ಡಾದಿಂದ ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.
इंतज़ार ख़ान ने सोनू बताकर जिम मैनेजर को शादी का झाँसा दिया फिर किया रेप, अब आरोपी इंतज़ार और उसका साथ देने वाले भाई और पिता दोनों नोएडा से गिरफ़्तार। pic.twitter.com/3YE4MCmSkf
— Anurag Chaddha (@AnuragChaddha) December 29, 2022
ಆರೋಪಿ ಇಂತೇಜಾರ್ ಶಾಹಬೇರಿ ನಿವಾಸಿಯಾಗಿದ್ದಾನೆ. ಈತ ಜೂನ್ 2022 ರಲ್ಲಿ ಸಂತ್ರಸ್ತ ಹಿಂದೂ ಯುವತಿಯನ್ನ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದ. ಈ ವೇಳೆ ಇಂತೇಜಾರ್ ತನ್ನ ಹೆಸರನ್ನು ಸೋನು ಎಂದು ಹೇಳಿಕೊಂಡಿದ್ದಾನೆ. ಕೆಲ ದಿನಗಳ ನಂತರ ಇಬ್ಬರೂ ಹತ್ತಿರ ಬಂದರು. ಆರೋಪಿ ಸಂತ್ರಸ್ತೆಗೆ ಮದುವೆಯಾಗುತ್ತೇನೆ ಎಂಬ ಭರವಸೆಯನ್ನೂ ನೀಡುತ್ತಿದ್ದ. ಒಂದು ದಿನ, ಇಂತೇಜಾರ್ ಜ್ಯೂಸ್ಗೆ ಸ್ವಲ್ಪ ಮತ್ತು ಬರಿಸುವ ಪುಡಿ ಮಿಕ್ಸ್ ಮಾಡಿ ಕುಡಿಸಿ ಆಕೆಯ ಮೇಲೆ ಅ ತ್ಯಾ ಚಾ ರ ವೆಸಗಿದ್ದಾನೆ. ಕೆಲವು ದಿನಗಳ ನಂತರ, ಯುವತಿಗೆ ಆತ ಸೋನು ಅಲ್ಲ ಇಂತೇಜಾರ್ ಖಾನ್ ಎಂದು ತಿಳಿದುಬಂದಿದೆ.
ಯುವತಿಗೆ ಆತ ತನ್ನ ಧರ್ಮದ ಬಗ್ಗೆ ಸುಳ್ಳು ಹೇಳಿದ್ದ. ಯುವತಿ ವಿರೋಧಿಸಲು ಆರಂಭಿಸಿದಾಗ ಆರೋಪಿ ತನ್ನ ತಂದೆ ಅಬ್ಬಾಸ್ ಅಲಿ ಹಾಗೂ ತಮ್ಮ ಸೋಹೈಲ್ ಅಲಿಯೊಂದಿಗೆ ಸೇರಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದು, ಮಹಿಳೆಯ ದೂರಿನ ಮೇರೆಗೆ ನೋಯ್ಡಾ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯ ತಂದೆ ಮತ್ತು ಸಹೋದರನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಶಹಬೇರಿಯಲ್ಲಿ ಎಎಸ್ಆರ್ ಜಿಮ್ ನಡೆಸುತ್ತಿದ್ದರು.
Breaking News: Intezaar had posed as Sonu, a hindu man & trapped a hindu woman in love jihad on pretext of marriage at a Gym in noida (UP), then raped her.
Intezaar along with his companion Suhel & Abbas Ali (brother & father) has been arrested by Bisrakh Police Station
+ pic.twitter.com/XRJPnG9gYZ— Ashwini Shrivastava (@AshwiniSahaya) December 29, 2022
ಸೆಂಟ್ರಲ್ ನೋಯ್ಡಾ ಎಡಿಸಿಪಿ ಸಾದ್ ಮಿಯಾನ್ ಖಾನ್ ಮಾತನಾಡುತ್ತ, “ಪಿಎಸ್ ಬಿಸ್ರಖ್ನಲ್ಲಿ ಮಾಹಿತಿ ಬಂದಿದ್ದು, ಜಿಮ್ನಲ್ಲಿ ಇಂತೇಜಾರ್ ಎಂಬ ಯುವಕನೊಂದಿಗೆ ತಾನು ಸಂಪರ್ಕಕ್ಕೆ ಬಂದಿದ್ದೆ ಎಂದು ದೂರುದಾರರು ಹೇಳಿದ್ದಾರೆ. ಆತ ಆರಂಭದಲ್ಲಿ ತನ್ನ ಗುರುತನ್ನು ಮರೆಮಾಚಿ ತನ್ನ ಹೆಸರನ್ನು ಸೋನು ಎಂದು ಹೇಳಿದ್ದ. ಇಂತಜಾರ್ ತನ್ನ ಮೇಲೆ ಅ ತ್ಯಾ ಚಾ ರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಆತನ ವಿರುದ್ಧ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ವಿರುದ್ಧ ಮತಾಂತರ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
“ಇಸ್ಲಾಂಗೆ ಮತಾಂತರ ಮಾಡದ್ರೆ 15 ಲಕ್ಷ ಸಿಗುತ್ತೆ, ಆ ಹಣ ನೀನ್ ಕೊಡು ನಾವು ಹುಡುಗೀನ ಬಿಟ್ಟು ಕಳಸ್ತೀವಿ”: 5 ವರ್ಷದಲ್ಲಿ ಹಿಂದೂ ಹುಡುಗಿಯ ಅನೇಕ ಬಾರಿ ರೇ-ಪ್, ತಂದೆಯಿಂದ FIR
ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಲವ್ ಜಿಹಾದ್ ಮತ್ತು ಧಾರ್ಮಿಕ ಮತಾಂತರ ಪ್ರಕರಣ ಮುನ್ನೆಲೆಗೆ ಬಂದಿದೆ. ಇಲ್ಲಿ ಮುಸ್ಲಿಂ ಯುವಕನೊಬ್ಬ ಮೊದಲು ಉದ್ಯಮಿಯ ಮಗಳನ್ನು ಅಪಹರಿಸಿ ನಂತರ ಆಕೆಯ ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡಿದ ಆರೋಪವಿದೆ. ಬಳಿಕ ಸಂತ್ರಸ್ತೆಯನ್ನು ಬ್ಲ್ಯಾಕ್ಮೇಲ್ ಮಾಡಿ ಆಕೆಯ ಮೇಲೆ ಸಾಮೂಹಿಕ ಅ-ತ್ಯಾ-ಚಾರ ಎಸಗಿದ್ದರು. ಹಿಂದೂ ಯುವತಿಯ ಮತಾಂತರಕ್ಕೆ 15 ಲಕ್ಷ ರೂಪಾಯಿ ಪಡೆದಿರುವುದಾಗಿ ಮುಸ್ಲಿಂ ಯುವಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸಂತ್ರಸ್ತೆಯ ಸಂಬಂಧಿಕರ ದೂರಿನ ಮೇರೆಗೆ ಮಹಿಳಾ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಸಂತ್ರಸ್ತೆಯ ಸಂಬಂಧಿಕರು ಪೊಲೀಸ್ ದೂರಿನಲ್ಲಿ ತಮ್ಮ ಮಗಳು 14 ವರ್ಷದವಳಿದ್ದಾಗಿನಿಂದ ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಆರೋಪಿಗಳು ಬಾಲಕಿಗೆ ಕಿರುಕುಳ ನೀಡುತ್ತಿದ್ದರು. ಈ ವರ್ತನೆಗಳ ಮಧ್ಯೆ ಆರೋಪಿಗಳು 2021ರ ಮಾರ್ಚ್ನಲ್ಲಿ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ. ಬಾಲಕಿಯ ಕುಟುಂಬಸ್ಥರು ತಮ್ಮೆಲ್ಲ ಪ್ರಯತ್ನದಿಂದ ಆಕೆಯನ್ನು ಆರೋಪಿಗಳ ಕಪಿಮುಷ್ಠಿಯಿಂದ ಮುಕ್ತಗೊಳಿಸಿದ್ದಾರೆ. ನಂತರ ಜೂನ್ 14, 2022 ರಂದು ಆರೋಪಿಗಳು ಮತ್ತೊಮ್ಮೆ ಸಂತ್ರಸ್ತೆಯನ್ನು ಅಪಹರಿಸಿದರು. ಬಾಲಕಿಯ ಕುಟುಂಬಸ್ಥರು ಈ ಬಾರಿಯೂ ಸಂತ್ರಸ್ತೆಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ತಮ್ಮ ಮಗಳಿಗೆ 18 ವರ್ಷ ತುಂಬಿದೆ ಎಂದು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಅಕ್ಟೋಬರ್ 19, 2022 ರಂದು, ಆರೋಪಿಗಳು ಯುವತಿಯನ್ನ ಮೂರನೇ ಬಾರಿಗೆ ಅಪಹರಿಸಿದರು. ಘಟನೆಯ ದೂರು ಸ್ವೀಕರಿಸಿದ ಪೊಲೀಸರು ಹಲವು ಪ್ರಯತ್ನಗಳ ನಂತರ ಬಾಲಕಿಯನ್ನು ರಕ್ಷಿಸಿದ್ದಾರೆ. ಯುವತಿಯನ್ನ ನಾರಿ ನಿಕೇತನಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ಮತ್ತೆ ಪೋಷಕರ ಬಳಿಗೆ ಬಂದಿದ್ದಾಳೆ. ಯುವತಿಯ ಸಂಬಂಧಿಕರ ಪ್ರಕಾರ, ಸಂತ್ರಸ್ತೆಗೆ ಆರೋಪಿಗಳಿಂದ ಬೆದರಿಕೆಗಳು ಬರುತ್ತಿವೆ. ಇದೇ ಕಾರಣಕ್ಕೆ ಸಂತ್ರಸ್ತೆ ಆರೋಪಿಗಳ ಪರ ಹೇಳಿಕೆ ನೀಡಿದ್ದಾಳೆ ಎಂದು ತಿಳಿಸಿದ್ದಾರೆ.
ಆರೋಪಿಯು ಕಳೆದ 5 ವರ್ಷಗಳಿಂದ ಸಂತ್ರಸ್ತೆಯ ಮೇಲೆ ನಿರಂತರವಾಗಿ ಅ-ತ್ಯಾ-ಚಾರ ಎಸಗಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ತಿಳಿಸಿದ್ದಾರೆ. ಈ ವೇಳೆ ಸಂವೇದನಾಶೀಲ ಆರೋಪ ಮಾಡಿರುವ ಬಾಲಕಿಯ ಕುಟುಂಬಸ್ಥರು ಆರೋಪಿಗಳು ತಮ್ಮ ಮಗಳನ್ನು ಬಿಟ್ಟು ಕಳಿಸಲು 15 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಿಂದೂ ಯುವತಿಯನ್ನು ಮತಾಂತರಗೊಳಿಸಿದ ನಂತರ ಈ ಹಣವನ್ನು ಆರೋಪಿಗಳು ಸ್ವೀಕರಿಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಈ ಹಣವನ್ನು ಆರೋಪಿಗೆ ಯಾರು ನೀಡುತ್ತಾರೆ ಎಂಬ ಮಾಹಿತಿಯನ್ನು ಸಂತ್ರಸ್ತೆಯ ಕುಟುಂಬದವರು ನೀಡಿಲ್ಲ.
ಈ ಪ್ರಕರಣದ ಪೊಲೀಸ್ ತನಿಖೆಯ ಪ್ರಕಾರ, ಆರೋಪಿಯು ಆರ್ಯ ಸಮಾಜ ವೈದಿಕ್ ಸಂಸ್ಕಾರ ಟ್ರಸ್ಟ್ನಲ್ಲಿ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿದ್ದನು. ಆರೋಪಿ ನಕಲಿ ಮದುವೆ ಪ್ರಮಾಣ ಪತ್ರ ಪಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ದಾಖಲೆಗಳ ಆಧಾರದ ಮೇಲೆ ಆರೋಪಿಗಳು ಬಾಲಕಿಯ ಮೂಲಕ ಪೊಲೀಸ್ ರಕ್ಷಣೆಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವಂಚನೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರ ವರ್ತನೆಯನ್ನು ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಟೀಕಿಸಿದ್ದಾರೆ.
सवाई माधोपुर में अपहृत बच्ची की FIR दर्ज नहीं करना पुलिस की शर्मनाक घटना!
प्रदेश के कलेक्टरों की कितनी मानती है पुलिस यह मैं जानता हूं पुलिस से कलेक्टर ही नहीं खुद गहलोत भी परेशान है!मैं परेशान नहीं हूं मेरे पर पुलिस की मेहरबानी है कि मेरे कहने से काम कर ही देती हैं!डॉ किरोड़ी pic.twitter.com/ZsJxdgwWWC
— Bheem singh Bonl (@BheemSinghBonl) December 2, 2022