“ಮಸ್ಜಿದ್ ಗಳಲ್ಲಿ ಪ್ರಾರ್ಥಿಸಿದ್ದಕ್ಕೆ ಸಾಯೋ ಸ್ಥಿತಿಯಲ್ಲಿದ್ದ ನನ್ನ ತಂಗಿ ಬದುಕಿ ಬಂದಳು, ಹಿಂದೂ ದೇವರುಗಳನ್ನ ಪೂಜಿಸಿದ್ದಕ್ಕೇ ನನ್ನ ತಂದೆ ಸತ್ತರು, ಅದಕ್ಕೆ ಇಸ್ಲಾಂಗೆ ಮತಾಂತರವಾದ್ವಿ”: ಎ.ಆರ್.ರೆಹಮಾನ್

in Uncategorized 5,759 views

ತಮ್ಮ ಅದ್ಭುತ ಸಂಗೀತದಿಂದ ಜನರ ಮನಸ್ಸನ್ನ ಗೆದ್ದಿರುವ ಖ್ಯಾತ ಸಂಗೀತಗಾರ ಎಆರ್ ರೆಹಮಾನ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿಗೆ ಭಾಜನರಾದ ರೆಹಮಾನ್ ಅವರು ತಮ್ಮ ಸಂಗೀತದಿಂದಲೇ ದೇಶವಷ್ಟೇ ಅಲ್ಲ ಪ್ರಪಂಚದಾದ್ಯಂತ ವಿಶೇಷ ಛಾಪನ್ನ ಮೂಡಿಸಿದ್ದಾರೆ, ಅವರು ಜನವರಿ 6, 1967 ರಂದು ಚೆನ್ನೈನಲ್ಲಿ ಜನಿಸಿದರು. ತಮ್ಮ ಯಶಸ್ಸಿನ ಹಿಂದೆ ನೋವು ಮತ್ತು ಹೋರಾಟದ ಕಥೆಯನ್ನು ಹೊಂದಿರುವ ಕಲಾವಿದರಲ್ಲಿ ರೆಹಮಾನ್ ಕೂಡ ಒಬ್ಬರು. ಸಂಗೀತದ ಹೊರತಾಗಿ, ರೆಹಮಾನ್ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದ ಸಂಗತಿ ಇಂದಿಗೂ ಚರ್ಚೆಯ ವಿಷಯವಾಗಿದೆ.

Advertisement

ಮಲಯಾಳಂ ಚಲನಚಿತ್ರ ಸಂಗೀತ ಸಂಯೋಜಕ ಆರ್‌ಕೆ ಶೇಖರ್ ಅವರ ಪುತ್ರ ಎಆರ್ ರೆಹಮಾನ್ ಅವರಿಗೆ ದಿಲೀಪ್ ಕುಮಾರ್ ಎಂದು ಹೆಸರಿಟ್ಟಿದ್ದರು, ಆದರೆ ಇಸ್ಲಾಂಗೆ ಮತಾಂತರವಾದ ನಂತರ ಅವರು ತಮ್ಮ ಹೆಸರನ್ನು ಅಲ್ಲಾ ರಖಾ ರೆಹಮಾನ್ ಎಂದು ಬದಲಾಯಿಸಿಕೊಂಡರು. ತುಂಬಾ ಶಾಂತ ಸ್ವಭಾವದರಾಗಿದ್ದ ರೆಹಮಾನ್ ಅವರ ಬಾಲ್ಯ ತುಂಬಾ ಕಷ್ಟಕರವಾಗಿತ್ತು. 9ನೇ ವಯಸ್ಸಿನಲ್ಲೇ ತಂದೆ ತೀರಿಕೊಂಡ ನಂತರ ಆರ್ಥಿಕ ಮುಗ್ಗಟ್ಟು ಉಂಟಾಗಿ ಕುಟುಂಬಸ್ಥರು ಸಂಗೀತ ವಾದ್ಯಗಳನ್ನೂ ಮಾರಬೇಕಾಯಿತು.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಎ.ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಅವರಿಗೆ ಮೂವರು ಮಕ್ಕಳಿದ್ದಾರೆ. ಖತೀಜಾ, ರಹೀಮಾ ಮತ್ತು ಎಆರ್ ಅಮೀನ್. ಖತೀಜಾ ತಮಿಳು ಚಲನಚಿತ್ರಗಳ ಹಿನ್ನೆಲೆ ಗಾಯಕಿಯಾಗಿದ್ದು ಅವರು ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ.

ಎ.ಆರ್. ರೆಹಮಾನ್ ಒಮ್ಮೆ ತಮ್ಮ ತಂದೆಯ ಸಾವಿಗೆ ಹಿಂದೂ ದೇವರುಗಳನ್ನು ಹೊಣೆಗಾರರನ್ನಾಗಿಸಿದ್ದರು. ತಂದೆ ಯಾರನ್ನು ಪೂಜಿಸುತ್ತಿದ್ದರೋ ಅದೇ ದೇವರುಗಳಿಂದಲೇ ತಮ್ಮ ತಂದೆ ಪ್ರಾಣ ತೆತ್ತಿದ್ದಾರೆ ಎಂದು ಹೇಳಿದ್ದರು. ಎ.ಆರ್ ರೆಹಮಾನ್ ಅವರ ಕುಟುಂಬವು ಮೊದಲು ಹಿಂದೂವಾಗಿತ್ತು, ಅವರ ತಂದೆಯ ನಿಧನದ ನಂತರ ಅವರು ಕುಟುಂಬವು ಇಸ್ಲಾಂಗೆ ಮತಾಂತರವಾಗಿತ್ತು. ಎ.ಆರ್.ರೆಹಮಾನ್ ತಂದೆ ಮತ್ತು ಸಹೋದರಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ಇಸ್ಲಾಂಗೆ ಮತಾಂತರಗೊಂಡರು.

ಎ.ಆರ್ ರೆಹಮಾನ್ ಸಹೋದರಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಡಾಕ್ಟರ್ ಗಳು ಕೈಚೆಲ್ಲಿದ್ದರು. ಆಗ ಮಸೀದಿಗಳಲ್ಲಿ ದುವಾ ಓದಿದ ನಂತರ ತಮ್ಮ ಸಹೋದರಿ ಗುಣಮುಖಳಾದಳು ಎಂದೂ ಒಮ್ಮೆ ಎ.ಆರ್.ರೆಹಮಾನ್ ಹೇಳಿದ್ದರು. ಎ.ಆರ್.ರೆಹಮಾನ್ ಸಹೋದರಿಯ ಜೀವ ಉಳಿಸುವ ಹೆಸರಿನಲ್ಲಿ ಸೂಫಿಯೊಬ್ಬ ಅವರ ಕುಟುಂಬವನ್ನ ಮತಾಂತರಗೊಳಿಸಿದ್ದ. ಆ ನಂತರ ದಿಲೀಪ್ ಕುಮಾರ್ ನಿಂದ ಅಲ್ಲಾಹ್‌ರಕ್ಖಾ ರೆಹಮಾನ್ ಆದರು.

ಬುರ್ಖಾ ಬಗ್ಗೆಯ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಎ.ಆರ್.ರೆಹಮಾನ್ ಮಗಳು ಖತೀಜಾ

ಖತೀಜಾ ಬುರ್ಖಾ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದಗಳಲ್ಲಿ ಸಿಲುಕಿದ್ದರು. ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಖತೀಜಾ ಅವರ ಬುರ್ಖಾದಲ್ಲಿರುವ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಟ್ರೋಲ್ ಮಾಡಿದ್ದರು. ಫೆಬ್ರವರಿ 11, 2020 ರಂದು ತಸ್ಲಿಮಾ ಅವರು ಟ್ವೀಟ್ ಮಾಡಿ, “ನಾನು ಎ.ಆರ್ ರೆಹಮಾನ್ ಅವರ ಸಂಗೀತವನ್ನು ಪ್ರೀತಿಸುತ್ತೇನೆ, ಆದರೆ ನಾನು ಅವರ ಮುದ್ದಾದ ಮಗಳನ್ನು ನೋಡಿದಾಗಲೆಲ್ಲಾ ನನಗೆ ಉಸಿರುಗಟ್ಟಿದಂತಾಗುತ್ತದೆ. ‘ಸಾಂಸ್ಕೃತಿಕ ಕುಟುಂಬ’ದಲ್ಲಿ ವಿದ್ಯಾವಂತ ಮಹಿಳೆಯನ್ನೂ ಸುಲಭವಾಗಿ ಬ್ರೈನ್‌ವಾಶ್ ಮಾಡಬಹುದು ಎಂದು ತಿಳಿದು ನಿರಾಶೆಯಾಯಿತು” ಎಂದಿದ್ದರು.

ತಸ್ಲೀಮಾ ನಸ್ರೀನ್ ಅವರ ಟ್ವೀಟ್‌ಗೆ ಭಾರೀ ಕೋಲಾಹಲ ಉಂಟಾಗಿತ್ತು. ಆಗ ಎ.ಆರ್.ರೆಹಮಾನ್ ಪುತ್ರಿ ಖತೀಜಾ ಅವರು ಬುರ್ಖಾ ಧರಿಸುವುದನ್ನು ಸಮರ್ಥಿಸಿಕೊಂಡಿದ್ದರು ಮತ್ತು ತಾನು ಸ್ವಯಂಪ್ರೇರಣೆಯಿಂದ ಬುರ್ಖಾ ಧರಿಸುತ್ತೇನೆ ಹೊರತು ಯಾರ ಒತ್ತಾಯದಿಂದಾಗಲಿ ಅಥವ ಬ್ರೈನ್ ವಾಶ್ ನಿಂದಾಗಿ ಅಲ್ಲ ಎಂದು ಹೇಳಿದ್ದಾರೆ. ಬುರ್ಖಾ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುತ್ತದೆ ಎಂದೂ ಅವರು ಹೇಳಿದ್ದರು. ಮಗಳ ಬುರ್ಖಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಎಆರ್ ರೆಹಮಾನ್, ಪುರುಷರೂ ಬುರ್ಖಾ ಧರಿಸುವಂತಿದ್ದರೆ ತಾನೂ ಕೂಡ ಬುರ್ಖಾ ಧರಿಸುತ್ತಿದ್ದೆ. ಇದು ಮಹಿಳೆಯರಿಗೆ ಒಳ್ಳೆಯದು ಎಂದು ಹೇಳಿದ್ದರು.

ಹಿಂದೂ ಎಂಬ ಕಾರಣಕ್ಕೆ ತಮಿಳು ಗೀತರಚನಕಾರರೊಬ್ಬರನ್ನ ಮನೆಗೆ ಪ್ರವೇಶಿಸಲು ತಡೆದಿದ್ದ ರೆಹಮಾನ್ ತಾಯಿ

ತಮಿಳು ಗೀತರಚನೆಕಾರ ಪಿರೈಸೂದನ್ ರವರು ಎ.ಆರ್.ರೆಹಮಾನ್ ಕುಟುಂಬದ ಮತಾಂಧತೆಯನ್ನ ಬಯಲಿಗೆಳೆದಿದ್ದರು. ಜುಲೈ 2020 ರಲ್ಲಿ ಪಿರೈಸುದನ್ ಅವರು ಹಾಡನ್ನು ಬರೆಯಲು ಎಆರ್ ರೆಹಮಾನ್ ಅವರ ಮನೆಗೆ ಹೋದಾಗ, ಎಆರ್ ರೆಹಮಾನ್ ಅವರ ತಾಯಿ ಹಿಂದೂ ಧರ್ಮದ ಚಿಹ್ನೆಗಳಾದ ವಿಭೂತಿ (ಹಣೆಯ ಮೇಲೆ ತಿಲಕ) ಮತ್ತು ಕುಂಕುಮವನ್ನಿಟ್ಟುಕೊಂಡು ಅವರ ಮನೆಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಹೇಳಿದ್ದರು.

Advertisement
Share this on...