ಇಡೀ ವಿಶ್ವವೇ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತಕ್ಕೆ ಪ್ರಭಾವಿತವಾಗಿದೆ. ಹಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ಗಳೂ ಕೂಡ ತಮ್ಮ ದೇಹದ ಮೇಲೆ ಸಂಸ್ಕೃತ ಶ್ಲೋಕಗಳು ಮತ್ತು ಪದಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ ಎಂಬ ಅಂಶದಿಂದ ನೀವು ಸನಾತನ ಧರ್ಮದ ಹಿರಿಮೆಯನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಈ ಪದಗಳು ಅಂದರೆ ಈ ಸ್ಟಾರ್ ಗಳು ಹಾಕಿಕೊಂಡಿರುವ ಹಚ್ಚೆಗಳು ಬಹಳ ಆಳವಾದ ಅರ್ಥವನ್ನು ಹೊಂದಿವೆ. ಅಮೆರಿಕದ ಪ್ರಸಿದ್ಧ ಗಾಯಕರಾದ ಕ್ಯಾಟಿ ಪೆರ್ರಿ ಮತ್ತು ರಿಹಾನಾ ಅವರಿಂದ ಹಿಡಿದು ಏಂಜಲೀನಾ ಜೂಲಿ ಮತ್ತು ಲೇಡಿ ಗಾಗಾ ಅವರವರೆಗೆ ಎಲ್ಲರೂ ತಮ್ಮ ದೇಹದ ಮೇಲೆ ಸಂಸ್ಕೃತ ಪದಗಳ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಏಂಜೆಲಿನಾ ಜೋಲಿ
ಏಂಜಲೀನಾ ಜೋಲೀ ಹಾಲಿವುಡ್‌ನ ಸುಪ್ರಸಿದ್ಧ ನಟಿ. ಅವರು ತಮ್ಮ ಮೊದಲ ಮಗ ಮ್ಯಾಡಾಕ್ಸ್ ಗೌರವಾರ್ಥವಾಗಿ ತಮ್ಮ ಕೈಯಲ್ಲಿ ಸಂಸ್ಕೃತ ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ ಈಗ ತನ್ನ ಮೊದಲ ಪತಿ ಬ್ರಾಡ್ ಪಿಟ್‌ಗೆ ಸಂಬಂಧಿಸಿದ ನೆನಪುಗಳನ್ನು ಅಳಿಸಲು, ಏಂಜಲೀನಾ ಜೋಲೀ ತನ್ನ ಮಾಜಿ ಪತಿಗೆ ಸಂಬಂಧಿಸಿದ ಟ್ಯಾಟೂವನ್ನು ಅಳಿಸಲು ಹೊರಟಿದ್ದಾರೆ.
ಭಾರತದಲ್ಲಿ ಕಿಸಾನ್ ಆಂದೋಲನದ ಸಮಯದಲ್ಲಿ ಟೂಲ್‌ಕಿಟ್ ಅನ್ನು ಬೆಂಬಲಿಸಿ ಸುದ್ದಿಯಾಗಿದ್ದ ಬಾರ್ಬಡಿಯನ್ ಗಾಯಕಿ ಮತ್ತು ನಟಿ ರಿಹಾನಾ ಕೂಡ ಸಂಸ್ಕೃತದ ಬಗ್ಗೆ ಒಲವನ್ನು ಹೊಂದಿದ್ದಾರೆ. ರಿಹಾನ್ನಾ ತನ್ನ ಸೊಂಟದ ಬಲಭಾಗದಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಆದಾಗ್ಯೂ, ಈ ಶ್ಲೋಕ ತಪ್ಪಾಗಿದ್ದು ಅರ್ಧಂಬರ್ಧ ಇದೆ.
ಹಾಲಿವುಡ್‌ನ ಪ್ರಸಿದ್ಧ ನಟಿ ಜೆಸ್ಸಿಕಾ ಆಲ್ಬಾ ಕೂಡ ಸಂಸ್ಕೃತದಿಂದ ಪ್ರಭಾವಿತರಾಗಿದ್ದಾರೆ. ಅವರ ಮಣಿಕಟ್ಟಿನ ಮೇಲೆ ‘ಪದ್ಮ’ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರ ಅರ್ಥ ‘ಕಮಲ’. ಹಿಂದೂ ಧರ್ಮದಲ್ಲಿ, ಕಮಲವನ್ನು ಲಕ್ಷ್ಮಿಯೊಂದಿಗೆ ಸಂಯೋಜಿಸಲಾಗಿದೆ ಮತ್ತು ಲಕ್ಷ್ಮಿಯನ್ನು ಸಂತೋಷ, ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ನಟಿಯಾಗುವುದರ ಜೊತೆಗೆ, ಜೆಸ್ಸಿಕಾ ಆಲ್ಬಾ ಯಶಸ್ವಿ ಬಿಸಿನೆಸ್‌ಮೆನ್ ಕೂಡ ಹೌದು.
ಕ್ಯಾಟಿ ಪೆರ್ರಿ ಪ್ರಸಿದ್ಧ ಅಮೇರಿಕನ್ ಗಾಯಕಿ ಮತ್ತು ಗೀತರಚನೆಕಾರ. ತನ್ನ ಪತಿ ರಸೆಲ್ ಬ್ರಾಂಡ್‌ನ ಮೇಲಿನ ಪ್ರೀತಿಯನ್ನು ತೋರಿಸಲು ಅವರು ತಮ್ಮ ಎಡಗೈಯಲ್ಲಿ ಸಂಸ್ಕೃತ ಪದ ‘ಅನುಗಚ್ಛತಿ ಪ್ರವಾಹ’ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದರ ಅರ್ಥ ‘ಸಮಯದೊಂದಿಗೆ ಮುನ್ನಡೆಯುವುದು’. ಕ್ಯಾಟಿ ಪೆರ್ರಿಯ ಪತಿ ರಸೆಲ್ ಬ್ರಾಂಡ್ ಕೂಡ ಅದೇ ಟ್ಯಾಟೂವನ್ನು ತಮ್ಮ ತೋಳಿನ ಮೇಲೆ ಹಾಕಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ಜನಿಸಿದ ರಸೆಲ್ ಹಿಂದುತ್ವವನ್ನು ನಂಬುತ್ತಾರೆ ಮತ್ತು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಲಿನ್ ಮಿಲಾನೊ ಅವರ ಪುತ್ರಿ ಅಲೀಸಾ ಮಿಲಾನೊ ಕುತ್ತಿಗೆ ಮತ್ತು ಎಡಗೈ ಮೇಲೆ ‘ॐ’ ಎಂಬ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸನಾತನ ಧರ್ಮದಲ್ಲಿ ಓಂಗೆ ವಿಶೇಷ ಮಹತ್ವವಿದೆ.
ಅಮೇರಿಕನ್ ನಟಿ, ಕಂಪೋಸರ್ ಮತ್ತು ಸಿಂಗರ್ ಮೈಲಿ ಸೈರಸ್ ಕೂಡ ಓಂ ಅನ್ನು ತನ್ನ ಮಣಿಕಟ್ಟಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದಲ್ಲದೇ ಬಲಗೈ ಮೇಲೆ ‘ಕರ್ಮ’ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಮ್ಯೂಸಿಕಲ್ ಸ್ಟಾರ್ ವನೆಸಾ ಹಡಜನ್ಸ್ ಕೂಡ ತಮ್ಮ ಕೈಯಲ್ಲಿ ಓಂ ಎಂದು ಬರೆದಿದ್ದಾರೆ. ಆದರೆ ಓಂ ನ್ನ ಕೈ ಮುಗಿದು ನಮಸ್ಕರಿಸುವ ರೀತಿಯಲ್ಲಿ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೇ ಹಾಲಿವುಡ್ ಸ್ಟಾರ್ ಸಿಂಗರ್ ಆ್ಯಡಮ್ ಲೆವಿನ್ ಗೆ ಟ್ಯಾಟೂ ಕ್ರೇಜ್ ಎಷ್ಟಿತ್ತೆಂದರೆ ದೇಹದಾದ್ಯಂತ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ್ಯಡಮ್ ತನ್ನ ಎದೆಯ ಮೇಲೆ ‘ತಪಸ್’ ಎಂಬ ಸಂಸ್ಕೃತ ಪದವನ್ನು ಬರೆದುಕೊಂಡಿದ್ದಾರೆ.
ಅಮೆರಿಕದ ಪ್ರಸಿದ್ಧ ಪಾಪ್ ಸ್ಟಾರ್ ಲೇಡಿ ಗಾಗಾ ಕೂಡ ಸಂಸ್ಕೃತದಲ್ಲಿ ಆಸಕ್ತಿ ಹೊಂದಿದ್ದಾರೆ. ಒಮ್ಮೆ ಅವರು ಸಂಸ್ಕೃತದಲ್ಲಿ ಟ್ವೀಟ್ ಮಾಡಿದ್ದರು. ‘ಲೋಕ: ಸಮಸ್ತ್: ಸುಖಿನೋ ಭವಂತು’ ನ ಅರ್ಥವು ‘ಎಲ್ಲಾ ಜನರು ಸಂತೋಷವಾಗಿರಲಿ.’ ಎಂಬುದಾಗಿದೆ. ಲೇಡಿ ಗಾಗಾ ಹಲವಾರು ಗ್ರ್ಯಾಮಿ ಮತ್ತು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿರುವ ಅಮೇರಿಕನ್ ಗಾಯಕಿಯಾಗಿದ್ದಾರೆ.
ಅದೇ ರೀತಿ ಪಾಪ್ ತಾರೆ ಮಡೋನಾ ಕೂಡ ತಮ್ಮ ಹಾಡೊಂದರಲ್ಲಿ ‘ರೇ ಆಫ್ ಲೈಟ್’ನಲ್ಲಿ ಸಂಸ್ಕೃತ ಪದ್ಯವನ್ನು ಬಳಸಿದ್ದಾರೆ. ಅವರು ಆದಿ ಶಂಕರಾಚಾರ್ಯರ ಶ್ಲೋಕಗಳನ್ನು ಸೇರಿಸಿದ್ದರು.
ಹಾಲಿವುಡ್ ನಟಿ ಮತ್ತು ನಿರ್ಮಾಪಕಿ ಬ್ರಿಟ್ನಿ ಸ್ನಾ ಅವರ ಕಾಲಿನ ಮೇಲೆ ‘ಅಭಯ’ ಎಂಬ ಪದವನ್ನು ಹಾಕಿಕೊಂಡಿದ್ದಾರೆ, ಇದರ ಅರ್ಥ ಭಯವಿಲ್ಲದ ಎಂಬರ್ಥ.