ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಕೂಡ ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯಲ್ಲಿ ನಗರಗಳ ಹೆಸರನ್ನು ಬದಲಾಯಿಸುವ ಹಾದಿಯಲ್ಲಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರು ಮೊದಲು ಹೋಶಂಗಾಬಾದ್ ಹೆಸರನ್ನು ‘ನರ್ಮದಾಪುರಂ’ ಎಂದು ಬದಲಾಯಿಸುವುದಾಗಿ ಘೋಷಿಸಿದ್ದಾರೆ. ಮಾ ನರ್ಮದಾ ಜಯಂತಿಯಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಅವರು ತಮ್ಮ ಹೆಂಡತಿಯೊಂದಿಗೆ ಭಾಗವಹಿಸಿದ್ದರು ಮತ್ತು ವೇದಿಕೆಯಿಂದ ಅವರು ಹೋಶಂಗಾಬಾದ್ ಹೆಸರನ್ನು ನರ್ಮದಾಪುರಂ ಎಂದು ಬದಲಾಯಿಸುವ ಬಗ್ಗೆ ಮಾತನಾಡಿದರು.
Hoshangabad district will be renamed as Narmadapuram: Madhya Pradesh CM Shivraj Singh Chouhan
(file photo) pic.twitter.com/2gEv5vbA1k
— ANI (@ANI) February 19, 2021
ಈ ನಾಯಕರ ಆಗ್ರಹವೂ ಇತ್ತು
ಹೋಶಂಗಾಬಾದ್ ಹೆಸರನ್ನು ಬದಲಾಯಿಸಲು ಶೀಘ್ರದಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅವರು ಹೇಳಿದರು. ಮುಖ್ಯಮಂತ್ರಿಗಳ ಈ ಘೋಷಣೆಯ ನಂತರ ಬಿಜೆಪಿ ನಾಯಕರಲ್ಲಿ ಸಂತೋಷದ ಅಲೆಯಿದೆ. ಹೋಶಂಗಾಬಾದ್ ಅನ್ನು ನರ್ಮದಾಪುರಂ ಎಂದು ಹೆಸರಿಸಬೇಕೆಂದು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಪ್ರೊಟೆಮ್ ಸ್ಪೀಕರ್ ರಾಮೇಶ್ವರ್ ಶರ್ಮಾ ಒತ್ತಾಯಿಸಿದ್ದರು. ಈ ಬಿಜೆಪಿ ನಾಯಕರಿಬ್ಬರೂ ಇನ್ನೂ ಅದೆಷ್ಟು ಕಾಲ ದ-ರೋ-ಡೆ-ಕೋ-ರ ಹುಷಾಂಗ್ ಷಾ ಹೆಸರಿನಿಂದ ಈ ನಗರ (ಹೋಶಂಗಾಬಾದ್) ವನ್ನು ಗುರುತಿಸಬೇಕೇ? ಎಂದು ಹೇಳಿದ್ದರು. ನಮ್ಮ ಮಠ-ಮಂದಿರಗಳನ್ನ ಒ-ಡೆ-ದ, ಭೋಲೆನಾಥನ ಮಂದಿರದ ಶಿಖರವನ್ನು ಮು-ರಿ-ದ ದ-ರೋ-ಡೆ-ಕೋ-ರನ ಹೆಸರಿನಲ್ಲಿ ನಗರದ ಹೆಸರು ಸ್ವೀಕಾರಾರ್ಹವೇ? ನಗರವನ್ನು ಮೋಕ್ಷದಾಯಿಣಿ, ಸದ್ಗುಣಶೀಲ ಸಲೀಲಾ ಮಾ ನರ್ಮದಾ ಎಂಬ ಹೆಸರಿನಿಂದ ಗುರುತಿಸಬೇಕು. ಶಿವರಾಜ್ ಸರ್ಕಾರ ಈಗಾಗಲೇ ವಿಭಾಗವನ್ನು ನರ್ಮದಾಪುರಂ ವಿಭಾಗ ಎಂದು ಹೆಸರಿಸಿದೆ. ಈಗ ನಗರಕ್ಕೆ ನರ್ಮದಾಪುರಂ ಎಂಂದು ಹೆಸರಿಡಬೇಕು ಎಂದರು.
नर्मदा मैया की कृपा सर्वदा हम सब पर ऐसे ही बनी रहे।
मां रेवा के चरणों में करबद्ध प्रार्थना करते हुए आज मैं घोषणा करता हूं कि होशंगाबाद को अब नर्मदापुरम् के नाम से जाना जायेगा। #NarmadaJayanti pic.twitter.com/lTBjMo2AU3
— Shivraj Singh Chouhan (@ChouhanShivraj) February 19, 2021
ಹೊಸ ಹೆಸರನ್ನು ಘೋಷಿಸಿದ ಸಿಎಂ, ಹೋಶಂಗಾಬಾದ್ ಆಸ್ಪತ್ರೆಯನ್ನು ಎಲ್ಲಾ ಸೌಲಭ್ಯಗಳೊಂದಿಗೆ ಮಾಡರ್ನ್ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಅಲ್ಲದೆ ಸಭಾಂಗಣ, ದಸರಾ ಮೈದಾನವನ್ನು ನವೀಕರಿಸಲಾಗುವುದು. ನರ್ಮದಾ ದಡದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಚೌಹಾ್, ಸರ್ಕಾರವು ಹೋಶಂಗಾಬಾದ್ ಹೆಸರನ್ನು ಬದಲಾಯಿಸಬೇಕೇ ಎಂದು ಕೇಳಿದರು. ಈ ಕುರಿತು ಜನರು ಅವರಿಗೆ ಹೌದು ಎಂದು ಉತ್ತರಿಸಿದರು.
ಚೌಹಾಣ್ ಜನರನ್ನು ಉದ್ದೇಶಿಸಿ, “ಹೊಸ ಹೆಸರು ಏನಾಗಬೇಕು?” ಇದಕ್ಕುತ್ತರಿಸಿದ ಜನರು – “ನರ್ಮದಾಪುರಂ” ಎಂದರು. ಇದರ ನಂತರ ಚೌಹಾಣ್ ಅವರು ಈಗ ಹೋಶಂಗಾಬಾದ್ ಹೆಸರನ್ನು ನರ್ಮದಾಪುರಂ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು. ನರ್ಮದಾ ನದಿಯ ದಡದಲ್ಲಿ ಸಿಮೆಂಟ್ ಕಾಂಕ್ರೀಟ್ ಅರಣ್ಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಇದರ ಜೊತೆಗೆ, ನರ್ಮದಾ ತೀರದಲ್ಲಿರುವ ನಗರಗಳಲ್ಲಿಯೂ ಕೊ-ಳ-ಚೆ ನೀರಿನ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ರಾಮೇಶ್ವರ ಶರ್ಮಾ ನೇತೃತ್ವದಲ್ಲಿ ಮುಖ್ಯಮಂತ್ರಿಯವರ ಘೋಷಣೆಗೆ ಸಂತಸ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ಶನಿವಾರ (ಫೆಬ್ರವರಿ 20, 2021) ಬೆಳಿಗ್ಗೆ ಪ-ಟಾ-ಕಿ ಸಿ-ಡಿ-ಸಿ ಸಂಭ್ರಮಾಚರಣೆ ಆಚರಿಸಿದರು. “ಇದು ಒಂದು ಐತಿಹಾಸಿಕ ಕ್ಷಣ. ನರ್ಮದಾ ನದಿ ಮಧ್ಯಪ್ರದೇಶದ ಜೀವಸೆಲೆ. ಹೋಶಂಗಾಬಾದ್ ನ್ನ ಇಲ್ಲಿಯವರೆಗೆ ಆ-ಕ್ರ-ಮ-ಣ-ಕಾ-ರ ಹೋಶಾಂಗ್ ಷಾ ಹೆಸರಿನಿಂದ ಕರೆಯಲಾಗುತ್ತಿತ್ತು ಆದರೆ ಈಗ ಮಧ್ಯಪ್ರದೇಶದ ಜೀವನಾಡಿಯಾಗಿರುವ ತಾಯಿ ನರ್ಮದಾ ಮಾತೆಯ ಹೆಸರಿನಿಂದ ಎಂದು ಕರೆಯಲ್ಪಡುತ್ತದೆ. ಇದು ಸಂತಸದ ವಿಷಯ. ಸಾರ್ವಜನಿಕ ಭಾವನೆಗಳನ್ನು ಗೌರವಿಸಿ ಈ ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು” ಎಂದರು.
ಈಗ ಹೋಶಂಗಾಬಾದ್ ನಗರಕ್ಕೆ ಮರುನಾಮಕರಣ ಮಾಡುವ ಪ್ರಕ್ರಿಯೆಯನ್ನ ಕುರಿತು ಕ್ಯಾಬಿನೆಟ್ ಸಚಿವ ವಿಶ್ವಸ್ ಸಾರಂಗ್ ಸ್ವಾಗತಿಸಿದ್ದಾರೆ. ಸಿಎಂ ಶಿವರಾಜ್ ಅವರನ್ನು ಅಭಿನಂದಿಸುತ್ತೇನೆ. ಅವರು ಹೋಶಂಗಾಬಾದ್ ಹೆಸರನ್ನು ಬದಲಾಯಿಸುವ ಬಗ್ಗೆ ಮಾತನಾಡಿದ್ದಾರೆ. ನಾನು ಸಹ ಬೆಂಬಲಿಸುತ್ತೇನೆ. ಅದು ಹಲಾಲಿ ಅಣೆಕಟ್ಟು ಅಥವಾ ಮತ್ಯಾವುದೇ ಇರಲಿ ಗು-ಲಾ-ಮ-ಗಿ-ರಿ-ಯ ಹೆಸರನ್ನು ಸೂಚಿಸುವ ಅಂತಹ ಸ್ಥಳಗಳ ಹೆಸರನ್ನು ಬದಲಾಯಿಸಬೇಕು” ಎಂದು ಹೇಳಿದರು.