IANS-CVoter ಸಮೀಕ್ಷೆ: ಉತ್ತರಪ್ರದೇಶದಲ್ಲಿ ಮತ್ತೆ ಭರ್ಜರಿ ಜಯ ಗಳಿಸಲಿದೆ ಬಿಜೆಪಿ, ಎಷ್ಟು ಸೀಟು ಗೆಲ್ಲಲಿದೆ ಗೊತ್ತಾ??

in Kannada News/News 882 views

UP ELECTION 2022:

Advertisement
ಮುಂದಿನ ವರ್ಷ 2022 ರಲ್ಲಿ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಬಗ್ಗೆ ಇತ್ತೀಚೆಗೆ ಸಮೀಕ್ಷೆಯೊಂದು ನಡೆಸಲಾಗಿದೆ. ಈ ಸಮೀಕ್ಷೆಯನ್ನು ಐಎಎನ್‌ಎಸ್-ಸಿವೊಟರ್ ಎಂಬ ಹೆಸರಾಂತ ಸಮೀಕ್ಷಾ ಸಂಸ್ಥೆ ನಡೆಸಿದೆ. ಈ ಸಮೀಕ್ಷೆಯ ಪ್ರಕಾರ, 2022 ರ ಚುನಾವಣೆಯಲ್ಲೂ ಭರ್ಜರಿ ಗೆಲುವಿನ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು‌ ಭಾರೀ ಬಹುಮತದೊಂದಿಗೆ ಮತ್ತೆ ಸಿಎಂ ಆಗುತ್ತಾರೆ ಎಂದು ಶೇಕಡಾ 52 ರಷ್ಟು ಜನರು ಹೇಳಿದ್ದಾರೆ. ಸಮೀಕ್ಷೆಯಲ್ಲಿ 37 ಪ್ರತಿಶತದಷ್ಟು ಜನರು ಅಂದರೆ ಮತದಾರರು ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದ್ದಾರೆ. ಈ ಸಮೀಕ್ಷೆಯನ್ನು ಜನರಲ್ಲಿ 12000 ಜನರ ಅಭಿಪ್ರಾಯ ಕೇಳುವ ಮೂಲಕ ಮಾಡಲಾಗಿದೆ.

ಎಲ್ಲಾ 403 ಸೀಟುಗಳಲ್ಲೂ ಗೆಲ್ಲುತ್ತೇವೆ: ಬಿಜೆಪಿ

ವಾಸ್ತವವಾಗಿ, ಉತ್ತರ ಪ್ರದೇಶದಲ್ಲಿ ಮುಂಬರುವ 2022 ರ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಿರೀಕ್ಷಿಸಲಾಗಿದೆ.  ಮತ್ತೊಂದೆಡೆ, ಪ್ರಸ್ತುತ ಸರ್ಕಾರದ ಅಧಿಕಾರಾವಧಿಯು 2022 ರ ಮಾರ್ಚ್ 14 ರವರೆಗೆ ಇರುತ್ತದೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿವೆ. ಭಾರತೀಯ ಜನತಾ ಪಕ್ಷ ಎಲ್ಲಾ ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 39.67 ರಷ್ಟು ವೋಟ್ ಶೇರ್ ನೊಂದಿಗೆ ಬರೋಬ್ಬರಿ 312 ಸೀಟುಗಳನ್ನ ಗೆದ್ದಿತ್ತು. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 75 ಸ್ಥಾನಗಳಲ್ಲಿ 65 ಸ್ಥಾನಗಳು ದೊರೆತಿದ್ದವು ಎಂಬುದು ಗಮನಾರ್ಹ.

ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿಲ್ಲ: ಸಿಎಂ ಯೋಗಿ

ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಬಿಜೆಪಿ ಮುಖಂಡರೊಬ್ಬರು, “75 ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು 65 ಸ್ಥಾನಗಳನ್ನು ಗೆದ್ದಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ. 2022 ರ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಿಂದ ಜಯಗಳಿಸಲಿದೆ. ನಾವು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದು ಹೇಳಿದರು.  ಬಿಜೆಪಿ ತನ್ನ ಗೆಲುವಿನ ಹಾದಿಯನ್ನು ಮುಂದುವರಿಸಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಹೇಗಾದರೂ ಮಾಡಿ ಈ ಚುನಾವಣೆ ಗೆಲ್ಲಲು ಸಮಾಜವಾದಿ ಪಕ್ಷ ಪ್ರಯತ್ನಿಸುತ್ತಿದೆ: ಯೋಗಿ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, 2017 ಮತ್ತು 2019 ರ ಎರಡೂ ವರ್ಷಗಳಲ್ಲಿ, ಅನೇಕ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದವು ಆದರೆ ನಾವು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಇನ್ನೂ ಯೋಚಿಸುತ್ತಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದಾಗ, “ಎರಡು ವಿಷಯಗಳು ಬಹಳ ಸ್ಪಷ್ಟವಾಗಿವೆ. ನಾವು ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ, ಅವರು ಇವಿಎಂಗಳನ್ನು ಸಮರ್ಥಿಸುವುದಿಲ್ಲ. ಈ ಬಾರಿ ಮತಪತ್ರಗಳ ಮೂಲಕ ಚುನಾವಣೆ ನಡೆಸಿದಾಗ ಅವರು ಆಡಳಿತಯಂತ್ರದ ಮೇಲೂ ವಿಶ್ವಾಸ ತೋರಿಸಲಿಲ್ಲ. ಇದರರ್ಥ ಈ ಜನರು ಯಾವುದೇ ರೀತಿಯಲ್ಲಾದರೂ ಸರಿ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಲೇ ಇರುತ್ತಾರೆ” ಎಂದರು.

Advertisement
Share this on...