ಉತ್ತರ ಪ್ರದೇಶ ಮೂಲದ ಕಾನ್ಪುರದ ಹಿರಿಯ ಐಎಎಸ್ ಅಧಿಕಾರಿ ಇಫ್ತಿಖರುದ್ದೀನ್‌ನ 3 ವಿಡಿಯೋಗಳು ವೈರಲ್ ಆಗಿದ್ದು, ಇದರಲ್ಲಿ ಆತ ವಿಭಾಗೀಯ ಆಯುಕ್ತರಾಗಿ ನೇಮಕಗೊಂಡ ಸಂದರ್ಭದಲ್ಲಿ ಮುಸ್ಲಿಂ ಮೂಲಭೂತವಾದಿಗಳನ್ನು ತಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನಿಸುವ ಮೂಲಕ ಧಾರ್ಮಿಕ ಮತಾಂತರವನ್ನು ಉತ್ತೇಜಿಸುವ ಪಾಠಗಳನ್ನು ಹೇಳಿಕೊಡುತ್ತಿದ್ದಾನೆ. ಆತ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಇಸ್ಲಾಮಿಕ್ ಮೂಲಭೂತವಾದವನ್ನು ಉತ್ತೇಜಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ‘ಮಠ ಮಂದಿರ ಸಮನ್ವಯ ಸಮಿತಿ’ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದೆ.
ಕಾನ್ಪುರ್ ಸಿಟಿ ಕಮಿಷನರ್ ಈ ಕುರಿತು ಹೇಳಿಕೆ ನೀಡಿ, “ಕಾನ್ಪುರ್ ಆಯುಕ್ತರ ನಿವಾಸದಲ್ಲಿ ತೆಗೆದ ಮೊಹಮ್ಮದ್ ಇಫ್ತಿಖರುದ್ದೀನ್ ಅವರ ವೈರಲ್ ವಿಡಿಯೋವನ್ನು ಕಾನ್ಪುರ ಪೋಲಿಸ್ ADCO East ಗೆ ನೀಡಲಾಗಿದೆ. ವೀಡಿಯೊ ನಿಜವೇ ಮತ್ತು ಅದರಲ್ಲಿ ಯಾವುದೇ ಅಪರಾಧ ನಡೆದಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ” ಎಂದಿದ್ದಾರೆ. ಆದಾಗ್ಯೂ, ಈ ತನಿಖೆಯ ವರದಿ ಯಾವಾಗ ಬರುತ್ತೆ, ಈತನ ವಿರುದ್ಧ ಕ್ರಮ ಕೈಗೊಳ್ಳಲು ಎಷ್ಟು ಸಮಯ ಬೇಕಾಗುತ್ತೆ? ಎಂದು ಅನೇಕ ಜನರು ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.
राष्ट्रीय अध्यक्ष मठ मंदिर समन्वय समिति ने सीएम योगी @myogiadityanath से की शिकायत pic.twitter.com/kP7ng5GVKF
— UttarPradesh.ORG News (@WeUttarPradesh) September 27, 2021
ಕಾನ್ಪುರದ ಹಿರಿಯ ಅಧಿಕಾರಿ ಭೂಪೇಶ್ ಅವಸ್ಥಿ ಕೂಡ ಈ ಸಂಬಂಧ ಸಿಎಂ ಯೋಗಿಗೆ ದೂರು ನೀಡಿದ್ದಾರೆ. ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಕೂಡ ತನಿಖೆಯ ಭರವಸೆ ನೀಡಿದ್ದಾರೆ. ವಿಡಿಯೋ ಒಂದು ಒಳ್ಳೆಯ ಮನೆಯಲ್ಲಿ ನಡೆದದ್ದಾಗಿದ್ದು, ಇದು ಸರ್ಕಾರಿ ನಿವಾಸದಂತೆ ಕಾಣುತ್ತದೆ. ಇದರಲ್ಲಿ, ಕುರ್ಚಿಯ ಮೇಲೆ ಕುಳಿತು, ಅವರು ಕಳಗೆ ಕುಳಿತಿರುವ ಕೆಲವು ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ, ಇದನ್ನು ಐಎಎಸ್ ಇಫ್ತಿಖರುದ್ದೀನ್ ಎಂದು ಹೇಳಲಾಗುತ್ತಿದೆ. ವೀಡಿಯೊವನ್ನು ಆಕ್ಷೇಪಾರ್ಹ ಎಂದು ವಿವರಿಸಿದ ಭೂಪೇಶ್ ಅವಸ್ಥಿ, ಅದರಲ್ಲಿ ಮತಾಂತರದ ಮಾತುಕತೆಯಿದೆ ಎಂದು ಹೇಳಿದ್ದಾರೆ.
‘UttarPradesh.ORG News’ ವರದಿಯ ಪ್ರಕಾರ, ಇಫ್ತಿಖರುದ್ದೀನ್ ಕಾನ್ಪುರದಲ್ಲಿದ್ದಾಗ, ಯಾವುದೇ ಉದ್ಯೋಗಿಯು ರಂಜಾನ್ ಸಮಯದಲ್ಲಿ ತನ್ನ ಕಚೇರಿ ಅಥವಾ ಮನೆಯಲ್ಲಿ ಏನನ್ನೂ ತಿನ್ನಲು ಅಥವಾ ಕುಡಿಯಲು ಅವಕಾಶ ನೀಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ. ಮತಾಂತರ ಮತ್ತು ಇಸ್ಲಾಂ ಹೆಸರಲ್ಲಿ ಜನರನ್ನು ಪ್ರಚೋದಿಸುವ ಆರೋಪವೂ ಈತನ ಮೇಲಿದೆ. ‘ಸುದರ್ಶನ್ ನ್ಯೂಸ್’ ಇದನ್ನು ‘ಯುಪಿಎಸ್‌ಸಿ ಜಿಹಾದ್’ ಎಂದು ಕರೆದಿದೆ ಮತ್ತು ನ್ಯಾಯಾಲಯವು ಈ ವಿಷಯದ ಮೇಲೆ ವೀಡಿಯೊಗಳನ್ನು ಸುದರ್ಶನ್ ನ್ಯೂಸ್ ನಲ್ಲಿ ಪ್ರಸಾರ ಮಾಡದಂತೆ ಆದೇಶಿಸಿದ್ದು, ‘ಖಾನ್ ಮಾರ್ಕೆಟ್ ಗ್ಯಾಂಗ್’ ಕೂಡ ಸುದರ್ಶನ್ ನ್ಯೂಸ್ ವಿರುದ್ಧ ತಿರುಗಿಬಿದ್ದಿದೆ.
ವೀಡಿಯೊದಲ್ಲಿ, ಇನ್ನೊಬ್ಬ ಮೌಲಾನಾ ಮಾತನಾಡುತ್ತ, “ಇಡೀ ಪ್ರಪಂಚದ ಜನರಿಗೆ ಇಸ್ಲಾಂ ಅನ್ನು ಮುಂದಕ್ಕೆ ಕೊಂಡೊಯ್ಯುವಂತೆ ಹೇಳಿ. ಇತ್ತೀಚೆಗೆ, ಪಂಜಾಬಿನಿಂದ ಒಬ್ಬ ಸಹೋದರ ಇಸ್ಲಾಂಗೆ ಮತಾಂತರಗೊಂಡನು, ಆದರೆ ನಾನು ಅವನಿಗೆ ನಿಮಂತ್ರಣ ನೀಡಿರಲಿಲ್ಲ. ನಾನು ಇಸ್ಲಾಂಗೆ ಮತಾಂತರಗೊಳ್ಳಲು ಕಾರಣವೇನು ಎಂದು ಕೇಳಿದೆ, ಆಗ ಆತ ‘ನನ್ನ ಸಹೋದರಿಯ ಸಾವು. ಆಕೆಯನ್ನ ಸು ಟ್ಟಾ ಗ, ಆಕೆಯ ಬಟ್ಟೆಗಳು ಸು ಟ್ಟು ಹೋದವು ಮತ್ತು ಆಕೆ ಬೆ ತ್ತ ಲೆ ಯಾದಳು. ಆಗ ನನಗೂ ಒಬ್ಬ ಮಗಳಿದ್ದಾಳೆ. ನಾಳೆ ಜನರು ನನ್ನನ್ನೂ ಅದೇ ರೀತಿ ನೋಡುತ್ತಾರೆ. ಅದಕ್ಕಾಗಿಯೇ, ನಾನು ಇಸ್ಲಾಂ ಧರ್ಮಕ್ಕಿಂತ ಉತ್ತಮವಾದ ಯಾವುದೇ ಧರ್ಮವನ್ನು ಕಾಣಲಿಲ್ಲ ಮತ್ತು ನಾನು ಇಸ್ಲಾಂಗೆ ಮತಾಂತರವಾದೆ ಎಂದು ಹೇಳಿದರು’ ”
कानपुर आयुक्त आवास में लिए गए #IAS मो. इफ्तिखारुद्दीन के एक वायरल हुए वीडियो की जांच @kanpurnagarpol के ADCP East को दी गई है, जांच की जा रही है कि क्या वीडियो सही है और क्या इसमें कोई अपराध हुआ है। @Uppolice
— POLICE COMMISSIONERATE KANPUR NAGAR (@kanpurnagarpol) September 27, 2021
ಈ ಭಾಷಣದಲ್ಲಿ ಆತ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪುಸ್ತಕವನ್ನೂ ಉಲ್ಲೇಖಿಸಿದ್ದಾನೆ. ಆತ ಮಾತನಾಡುತ್ತ, “ಅಲ್ಲಾ ನಮಗೆ ಇಂತಹ ಸೆಂಟರ್‌ನ್ನ ಉತ್ತರ ಪ್ರದೇಶದ ರೂಪದಲ್ಲಿ ನೀಡಿದ್ದಾರೆ, ಇಲ್ಲಿಂದ ನಾವು ದೇಶ ಮತ್ತು ಪ್ರಪಂಚದಾದ್ಯಂತ ಕೆಲಸ ಮಾಡಬಹುದು. ಅಲ್ಲಾಹುವಿನ ಸಾರ್ವಭೌಮತ್ವವನ್ನು ಭಾರವಷ್ಟೇ ಅಲ್ಲದೆ ಇಡೀ ಜಗತ್ತಿನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಪಂಚದ ಜನರಿಗೆ ಘೋಷಿಸಿ. ಅಲ್ಲಾ ದೀನ್ ಅನ್ನು ಪ್ರತಿ ಮನೆಯಲ್ಲೂ ನಮೂದಿಸಬೇಕು, ಅದನ್ನು ಮಾಡಬೇಕು” ಎನ್ನುತ್ತಿದ್ದಾನೆ. ಈ ವೀಡಿಯೊದಲ್ಲಿ, ಆತ ಇಸ್ಲಾಂಗೆ ಮತಾಂತರಗೊಳ್ಳುವ ಅನುಕೂಲಗಳನ್ನೂ ಆತ ಹೇಳುತ್ತಿದ್ದಾನೆ. ವಿಡಿಯೋ ಎರಡು ತಿಂಗಳು ಹಳೆಯದಾಗಿದ್ದರೂ ಈತನ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ