IAS ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಗರಂ ಆದ ನಟಿ ಕಮ್ ಮಾಜಿ ರಾಜಕಾರಣಿ ರಮ್ಯಾ ಹೇಳಿದ್ದೇನು ಗೊತ್ತಾ?

in FILM NEWS/Kannada News/News 154 views

ದಕ್ಷ ಹಾಗೂ ಪ್ರಾಮಾಣಿಕತೆಯ ಐಎಎಸ್ ಅಧಿಕಾರಿ ಎಂದು ರಾಜ್ಯದಲ್ಲಿ ತನ್ನದೇ ಆದಂತಹ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ರೋಹಿಣಿ ಸಿಂಧೂರಿ. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರು ನಗರದಲ್ಲಿ ನಡೆದಂತಹ ಕೆಲವು ಮಹತ್ವಪೂರ್ಣ ಬೆಳವಣಿಗೆಗಳ ನಂತರ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿದೆ. ಪಕ್ಷಾತೀತವಾಗಿ ರಾಜಕಾರಣಿಗಳು ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿಯನ್ನು ಟೀ ಕಿ ಸಿ , ಅವರು ಮಾಡಿರುವ ತಪ್ಪುಗಳು ಎನ್ನುವಂತೆ ಒಂದಷ್ಟು ವಿಚಾರಗಳನ್ನು ಕೂಡಾ ಹೇಳಿದ್ದರು. ಇನ್ನು ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾದ ಮೇಲೆ ಅನೇಕ ಜನರು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಹಾಗೂ ರಾಜಕಾರಣಿಗಳ ಭ್ರ ಷ್ಟಾ ಚಾರವನ್ನು ಕುರಿತಾಗಿ ತೀವ್ರ ಕೋಪ ಹಾಗೂ ಅ ಸಮಾಧಾನವನ್ನು ಹಾಕಿದ್ದಾರೆ.

Advertisement

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಇದು ಸರಿಯಾದ ಕಾಲದಲ್ಲಿ. ಅಂತಹವರನ್ನು ರಾಜಕಾರಣಿಗಳು ಸಹಿಸುವುದಿಲ್ಲ, ತಮ್ಮ ಕೆಲಸಗಳಿಗೆ ಇಂತಹ ಅಧಿಕಾರಿಗಳು ಅಡ್ಡ ಎಂದು ಅವರ ಮೇಲೆ ಆ ರೋ ಪ ಮಾಡುತ್ತಾರೆ ಎಂದೆಲ್ಲ ಕಾಮೆಂಟ್ ಗಳನ್ನು ಮಾಡುವ ಮೂಲಕ ಜನ ತಮ್ಮ ಸಿ ಟ್ಟನ್ನು ವ್ಯಕ್ತಪಡಿಸಿದ್ದರು. ಇನ್ನ ಇದೇ ವಿಷಯವಾಗಿ ಅಂದರೆ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ಕುರಿತಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ರಾಜಕಾರಣಿಯೂ ಆಗಿರುವ ರಮ್ಯಾ ಅವರು ತನ್ನ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸ್ತುತ ಸಿನಿಮಾ ಹಾಗುವ ರಾಜಕಾರಣ ಎರಡರಿಂದಲೂ ಕೂಡ ಅಂತರವನ್ನು ಕಾಯ್ದುಕೊಳ್ಳುತ್ತಿರುವ ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮತ್ತು ಡಿಸಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ವರ್ಗಾವಣೆಯಲ್ಲಿ ಅಂತ್ಯ ಕಂಡಿದೆ. ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿದ್ರೆ, ಶಿಲ್ಪಾ ನಾಗ್‌ರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕರಾಗಿ ಅಧಿಕಾರ ನೀಡಲಾಗಿದೆ.

ಸೋಶಿಯಲ್ ಮೀಡಿಯಾ ಗಳ ಮೂಲಕ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಕೆಲವೊಂದು ಮಹತ್ವದ ವಿಚಾರಗಳ ಕುರಿತಾಗಿ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಇದೀಗ ರಮ್ಯಾ ಅವರು ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತಾಗಿ ತನ್ನ ಅ ಸಮಾಧಾನವನ್ನು ಹೊರ ಹಾಕುತ್ತಾ, ಇನ್ಸ್ಟಾಗ್ರಾಮ್ ನಲ್ಲಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. “ಸಿಂಧೂರಿ ಅವರ ಕಾರ್ಯವೈಖರಿಯನ್ನು ನಾನು ಅಂದು ಮೆಚ್ಚುತ್ತಿದ್ದೆ. ಇಂದು ಕೂಡಾ ಮೆಚ್ಚಿಕೊಳ್ಳುತ್ತೇನೆ.‌ ಆದರೆ ಪ್ರಸ್ತುತ ರಾಜಕೀಯ ಉತ್ತಮ ಕೆಲಸಗಳನ್ನು, ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಹಾಗೂ ಬೆಂಬಲಿಸುತ್ತಿಲ್ಲ” ಎಂದು ಬರೆದುಕೊಂಡು ತಮ್ಮ ಮನಸ್ಸಿನ ಮಾತನ್ನು ಹೇಳಿದ್ದಾರೆ.

ರೋಹಿಣಿ ಸಿಂಧೂರಿ ಕೆಲಸದ ಬಗ್ಗೆ ರಮ್ಯಾ ಮೆಚ್ಚುಗೆ

ಮೈಸೂರು ಮಾಜಿ ಡಿಸಿ ರೋಹಿಣಿ ಸಿಂಧೂರಿ ಕೆಲಸದ ಬಗ್ಗೆ ಮಂಡ್ಯ ಮಾಜಿ ಸಂಸದೆ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ರಮ್ಯಾ ”ಸಿಂಧೂರಿ ಕಾರ್ಯ ವೈಖರಿಯನ್ನು ನಾನು ಅಂದು ಮೆಚ್ಚಿದ್ದೇನೆ, ಈಗಲೂ ಮೆಚ್ಚಿಕೊಳ್ಳುತ್ತೇನೆ. ಆದರೆ ಇಂದಿನ ರಾಜಕೀಯ, ಉತ್ತಮ ಕೆಲಸಗಳನ್ನು, ಪ್ರಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಹಾಗೂ ಬೆಂಬಲಿಸುತ್ತಿಲ್ಲ” ಎಂದು ನಿರಾಸೆ ವ್ಯಕ್ತಪಡಿಸಿದರು.

ಸಿಂಧೂರಿ ಬಯೋಪಿಕ್ ಚರ್ಚೆ?

ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಅವರ ಕುರಿತು ಸಿನಿಮಾ ಮಾಡುವ ಬಗ್ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲಂಸ್ ಸಂಸ್ಥೆ ಈ ಚಿತ್ರ ನಿರ್ಮಿಸಲು ಚಿಂತನೆ ನಡೆಸಿದ್ದು, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ನಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸಿನಿಮಾ ಮುಗಿದ ಅಧ್ಯಾಯ
ರಾಜಕೀಯಕ್ಕೆ ಎಂಟ್ರಿ ಆದ್ಮೇಲೆ ನಟಿ ರಮ್ಯಾ ಯಾವುದೇ ಸಿನಿಮಾ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದಲೂ ಮೋಹಕತಾರೆ ಅಂತರ ಕಾಯ್ದುಕೊಂಡಿದ್ದಾರೆ. ಹಾಗಾಗಿ, ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ, ಸಿನಿಮಾ ಮುಗಿದ ಅಧ್ಯಾಯ ಎಂದು ರಮ್ಯಾ ಅದಾಗಲೇ ಹೇಳಿಬಿಟ್ಟಿದ್ದಾರೆ.

Advertisement
Share this on...