ಇಸ್ಲಾಂನಿಂದ ಬೇಸತ್ತು ಕೊರಳಲ್ಲಿ ಭಗವಾ ಶಾಲ್ ಧರಿಸಿ, ಹೋಮ ಹವನ ಮಾಡಿ ಇಬ್ರಾಹಿಂ ನಿಂದ ಆದಿತ್ಯ ಆದ ಮುಸ್ಲಿಂ ಯುವಕ

in Kannada News/News 422 views

ಭಾರತವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ದೇಶ. ಇಲ್ಲಿ ವಿವಿಧ ಸಮುದಾಯದ ಜನರು ಒಟ್ಟಿಗೆ ವಾಸಿಸುತ್ತಾರೆ. ಆದರೂ ದೇಶದಲ್ಲಿ ದಿನಂಪ್ರತಿ, ಧಾರ್ಮಿಕ ಮತಾಂತೆ ಪ್ರಕರಣಗಳು ವಿವಿಧ ಪ್ರದೇಶಗಳಿಂದ ಕೇಳಿಬರುತ್ತಲೇ ಇರುತ್ತವೆ.

Advertisement

ಒಂದು ಕಾಲದಲ್ಲಿ ಹಿಂದೂ ಸಮುದಾಯದ ಕೆಲವರು ಇಸ್ಲಾಂ, ಕ್ರಿಶ್ಚಿಯನ್ ಮತಕ್ಕೆ ಸೇರುತ್ತಿದ್ದರು. ಆದರೆ ಈಗ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ರಾಜ್ಯದಲ್ಲಿ ನಡೆದ ಒಂದು ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಯುವಕನೊಬ್ಬನನ್ನ ಹಿಂದುಗಳು ಕೊಂಡಾಡುತ್ತಿದ್ದಾರೆ. ಮತ್ತೊಂದೆಡೆ ಈ ರೀತಿಯ ಕೆಲವು ಜನರಿದ್ದು ಅವರು 19 ವರ್ಷದ ಇಬ್ರಾಹಿಂ‌ ಮಾಡಿದ ಕೆಲಸಕ್ಕೆ ತಮ್ಮ ಸಹಮತವನ್ನೂ ವ್ಯಕ್ತಪಡಿಸುತ್ತಿದ್ದಾರೆ. 19ರ ಹರೆಯದ ಇಬ್ರಾಹಿಂ ಎಂಬ ಯುವಕ ಆದಿತ್ಯ ಮಿಶ್ರಾ ಆಗಿದ್ದು ಹೇಗೆ? ಎಂಬುದನ್ನು ಈ ಸುದ್ದಿಯ ಮೂಲಕ ನಿಮಗೆ ತಿಳಿಸುತ್ತೇವೆ.
ಇಬ್ರಾಹಿಂ ನಿಂದ ಆದಿತ್ಯ ಮಿಶ್ರಾ ಆದ 19 ವರ್ಷದ ಮುಸ್ಲಿಂ ಯುವಕ

ಉತ್ತರ ಪ್ರದೇಶದ ಯುವಕನೊಬ್ಬ ಇತ್ತೀಚೆಗೆ ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ್ದಾನೆ. ಈ ಯುವಕನ ಹೆಸರು ಇಬ್ರಾಹಿಂ ಆಗಿದ್ದು, ಈ ಇಬ್ರಾಹಿಂ ಈಗ ಆದಿತ್ಯ ಮಿಶ್ರಾ ಆಗಿದ್ದಾನೆ. ಆದಿತ್ಯ ಮಿಶ್ರಾನ ವಯಸ್ಸು 19 ವರ್ಷ. ಹಿಂದೂ ಧರ್ಮಕ್ಕೆ ಸೇರಿದ ನಂತರ ಆತ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾನೆ. ಅಷ್ಟೇ ಅಲ್ಲ ಹಿಂದೂ ಧರ್ಮಕ್ಕೆ ಸೇರಲು ಕಾರಣವನ್ನೂ ತಿಳಿಸಿದ್ದಾನೆ. ಹಿಂದೂ ಧರ್ಮಕ್ಕೆ ಸೇರಿದ ನಂತರವೇ ಕೆಲವರು ಇಬ್ರಾಹಿಂ ನಿಂದ ಆದಿತ್ಯ ಮಿಶ್ರಾ ಆದ ಯುವಕನ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಇದನ್ನ ವಿರೋಧಿಸುತ್ತಿರೋದು ಕಂಡುಬರುತ್ತಿದೆ.

ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಆದ ಯುವಕ

19 ವರ್ಷದ ಯುವಕ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಸೇರಲು ನಿರ್ಧರಿಸಿದ್ದ. ಈ ಸಂಪೂರ್ಣ ಪ್ರಕ್ರಿಯೆಯನ್ನು ಲಕ್ನೋದ ನರ್ಹಿಯಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಮಾಡಲಾಗಿದೆ. ದೇವಸ್ಥಾನದಲ್ಲಿ ಆದಿತ್ಯ ವೇದ ಮಂತ್ರಗಳನ್ನು ಪಠಿಸಿದ್ದಾನೆ. ಮಂತ್ರಗಳನ್ನು ಪಠಿಸುವುದರೊಂದಿಗೆ ಹೋಮ ಹವನ ಮಾಡುವ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಚಿತ್ರಗಳಲ್ಲಿ, ಆದಿತ್ಯ ಮಿಶ್ರಾ ಕೇಸರಿ ಬಣ್ಣದ ಶಾಲ್ ಧರಿಸಿರುವುದನ್ನು ನೀವು ನೋಡಬಹುದು.

ಹಿಂದೂ ಕುಟುಂಬದಲ್ಲೇ ಜನಿಸಿದ್ದ ಇಬ್ರಾಹಿಂ

ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿನವರು ಹಿಂದೂ ಕುಟುಂಬದಲ್ಲಿ ಜನಿಸಿದವರಾಗಿದ್ದರು. ಆದಿತ್ಯನ ತಾಯಿಯ ಹೆಸರು ಅಲ್ಕಾ ಚತುರ್ವೇದಿ. ಅಲ್ಕಾ ಕಾನ್ಪುರದ ವಿನೋದ್ ಮಿಶ್ರಾ ಅವರನ್ನು 2000 ರಲ್ಲಿ ವಿವಾಹವಾದರು. 2001 ರಲ್ಲಿ ಮಗಳು ಮತ್ತು 2003 ರಲ್ಲಿ ಆದಿತ್ಯ ಜನಿಸಿದರು. ಆದಿತ್ಯ 9 ವರ್ಷ ವಯಸ್ಸಿನವನಾಗಿದ್ದಾಗ ಅವನ ಹೆತ್ತವರು ಡೈವೋರ್ಸ್ ಪಡೆದರು. 2014ರಲ್ಲಿ ಆದಿತ್ಯನ ತಾಯಿ ಲಿಯಾಖತ್ ಖಾನ್ ಎಂಬ ವ್ಯಕ್ತಿಯ ಜೊತೆ ಮದುವೆಯಾದರು. ಅದಾದ ಬಳಿಕವೇ ಆದಿತ್ಯ 2014 ರಲ್ಲಿಯೇ ಇಸ್ಲಾಂ ಮತಕ್ಕೆ ಸೇರಿದ್ದನು.

ಇತ್ತೀಚೆಗಷ್ಟೇ ಹಿಂದೂ ಧರ್ಮಕ್ಕೆ ಸೇರಿದ್ದ 18 ಜನ

ಈ ಪ್ರಕರಣ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಸೂರಜ್ ಕುಂಡ್ ದೇವಾಲಯದದ್ದಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮುಸ್ಲಿಮ್ ಮತಕ್ಕೆ ಮತಾಂತರವಾಗಿದ್ದ ಸುಮಾರು 3 ಕುಟುಂಬಗಳು ಈ ದೇವಸ್ಥಾನದಲ್ಲಿ ಮರಳಿ ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿವೆ. ಬನ್ನಿ ಇದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನ ತಿಳಿಸುತ್ತೇವೆ.

3 ಕುಟುಂಬದ 18 ಜನರ ಘರ್‌ವಾಪಸಿ

ಪಶ್ಚಿಮ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ, ಸೂರಜ್ ಕುಂಡ್ ದೇವಸ್ಥಾನದಲ್ಲಿ ಸೋಮವಾರ ಮೂರು ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಘರ್‌ವಾಪಸಿ ಆಗಿವೆ. ಕುಟುಂಬದ 18 ಸದಸ್ಯರು ಪೂಜೆ, ಹೋಮ ಹವನ ಸಲ್ಲಿಸುವ ಮೂಲಕ ಹಿಂದೂ ಧರ್ಮಕ್ಕೆ ಸೇರಲು ನಿರ್ಧರಿಸಿದ್ದಾರೆ. ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿದ ಇವರು ಮಾತನಾಡುತ್ತ ತಮ್ಮ ಪೂರ್ವಜರು ಕೆಲವು ವರ್ಷಗಳ ಹಿಂದೆ ಹಿಂದುಗಳೇ ಆಗಿದ್ದರು ಹೇಳಿದ್ದರು. ಇಂದಿನಿಂದ ಸುಮಾರು 15 ವರ್ಷಗಳ ಕಾಲ, ಈ ಜನರು ಮುಸ್ಲಿಮ್ ಮತವನ್ನ ಅನುಸರಿಸುತ್ತಿದ್ದರು. ಇಸ್ಲಾಂನ ಸಿದ್ಧಾಂತವನ್ನು ಇಷ್ಟಪಡದ ಕಾರಣ, ಅವರು ಘರ್‌ವಾಪಸಿ ಮಾಡುವುದೇ ಸರಿ ಎಂದು ಭಾವಿಸಿದರು. ಯಶವೀರ ಮಹಾರಾಜರು ಹವನ-ಪೂಜೆಯನ್ನು ಮಾಡುವ ಮೂಲಕ ಅವರನ್ನು ಹಿಂದೂ ಧರ್ಮಕ್ಕೆ ಮರಳುವಂತೆ ಮಾಡಿದ್ದಾರೆ.

15 ವರ್ಷಗಳ ಹಿಂದೆ ಹಿಂದೂ ಆಗಿದ್ದ ಕುಟುಂಬಗಳು

15 ವರ್ಷಗಳ ಹಿಂದೆ ಒಂದು ನಿರ್ದಿಷ್ಟ ಸಮುದಾಯಕ್ಕೆ ಮತಾಂತರವಾದ ಕಾರಣವನ್ನು ವಿವರಿಸಿದ ಕುಟುಂಬ ಸದಸ್ಯರು, ಮಸ್ಲಿಮ್ ಆಗುವಂತೆ ಪ್ರತಿದಿನ ಕೆಲವು ಜನರು ತಮ್ಮನ್ನು ಕೇಳುತ್ತಿದ್ದರು ಎಂದು ಹೇಳಿದರು. ಕುಟುಂಬದ ಮುಖ್ಯಸ್ಥರು ಬಹಳ ಹಿಂದಿನಿಂದಲೂ ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳಲು ಬಯಸಿದ್ದೆವು. ಆದರೆ ಇಸ್ಲಾಂ, ಕಯಾಮತ್ ಅಂತ ಹೇಳಿ ಹೆದರಿಸಿದ್ದರಿಂದ ತಾವು ಹಿಂದೂ ಧರ್ಮಕ್ಕೆ ಮರಳಲು ವಿಳಂಬವಾಗುವಂತೆ ಮಾಡಲಾಯಿತು. ನೀವು ಬೇರೆ ಧರ್ಮಕ್ಕೆ ಸೇರಿದರೆ, ನಿಮಗೆ ಅಲ್ಲಿ ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಮತ್ತು ಸತ್ತ ಬಳಿಕ ನಿಮಗೆ ಜಹನ್ನುಮ್ (ನರಕ) ಗೆ ಹೋಗ್ತೀರ ಅಂತ ಪದೇ ಪದೇ ನಮಗೆ ಹೇಳಲಾಯಿತು ಎಂದು ಅವರು ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ನಮ್ಮಿಂದ ತಪ್ಪಾಗಿತ್ತು ಎಂದ ಕುಟುಂಬ

3 ಕುಟುಂಬಗಳ 18 ಜನರು ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡುವ ಮೂಲಕ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡಲು ಪ್ರಯತ್ನಿಸಿವೆ. ಹಿಂದೂ ಧರ್ಮವನ್ನು ಅಳವಡಿಸಿಕೊಂಡ ನಂತರ, ಈ ಜನರು ಪ್ರತಿಕ್ರಿಯಿಸುತ್ತ ಏನೇ ಆದರೂ ತಾಯಿ ತಾಯಿನೇ, ನಮ್ಮ ಧರ್ಮ ಹೇಗಿದ್ದರೂ ನಮಗೆ ಅದೇ ಚೆಂದ ಎಂದು ಹೇಳಿದರು. ಮತ್ತೊಂದೆಡೆ, ವಿಕಾಸ್ ತಾಯಿ ತನ್ನ ಮೂವರು ಪುತ್ರರು ಸೇರಿದಂತೆ ಇಡೀ ಕುಟುಂಬವನ್ನು ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಿಕಾಸ್ ತಾಯಿ ಶೀಘ್ರದಲ್ಲೇ ತನ್ನ ಗಂಡನನ್ನು ಕೂಡ ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿಸುವುದಾಗಿ ಹೇಳಿದರು. 15 ವರ್ಷಗಳ ಹಿಂದೆ ನಮ್ಮಿಂದ ತಪ್ಪಾಗಿತ್ತು. ತಿಳಿಯದೇ ನಾವು ಬೇರೆ ಮತಕ್ಕೆ ಮತಾಂತರವಾಗಿದ್ದೆವು. ಈಗ ನಾವು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿರುವುದರಿಂದ ಖುಷಿ ಆಗುತ್ತಿದೆ ಎಂದು ಕುಟುಂಬದ ಮುಖ್ಯಸ್ಥರು ಹೇಳಿದ್ದಾರೆ.

Advertisement
Share this on...