ಕ್ರಿಕೆಟ್ ನ್ಯೂಸ್ ಡೆಸ್ಕ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಇದನ್ನು ಅವರು ಫೆಬ್ರವರಿ 12 ರಂದು ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲೂ ಸಾಬೀತುಪಡಿಸಿದ್ದಾರೆ. ಎರಡೂ ತಂಡಗಳು ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ತಮ್ಮ ಆಟ ಆರಂಭಿಸಿದ್ದವು. ಏತನ್ಮಧ್ಯೆ, ರೇಣುಕಾ ಠಾಕೂರ್ ಅವರು ಪಾಕಿಸ್ತಾನಿ ಬ್ಯಾಟ್ಸ್ಮನ್ನ ಪ್ರೈವೆಟ್ ಪಾರ್ಟ್ಗೆ ಬಾಲ್ ನಿಂದ ಹೊಡೆದಿದ್ದು ಅದರ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಿಸೈಲ್ನ ರೀತಿಯಲ್ಲಿ ಬಾಲ್ ಎಸೆದ ರೇಣುಕಾ ಠಾಕೂರ್
— MohiCric (@MohitKu38157375) February 12, 2023
ವಾಸ್ತವವಾಗಿ ಈ ಘಟನೆ ಪಾಕಿಸ್ತಾನದ ಇನಿಂಗ್ಸ್ನ ಮೊದಲ ಓವರ್ನಲ್ಲೇ ನಡೆದಿದೆ. ಈ ಸಂದರ್ಭದಲ್ಲಿ ಭಾರತದ ವೇಗದ ಬೌಲರ್ ರೇಣುಕಾ ಠಾಕೂರ್ ಬೌಲಿಂಗ್ ಮಾಡಲು ಬಂದಿದ್ದರು. ಏತನ್ಮಧ್ಯೆ, ಪಾಕಿಸ್ತಾನಿ ಓಪನರ್ಸ್ ಜೊತೆ ಗಂಭೀರ ಮತ್ತು ತಮಾಷೆಯ ಘಟನೆ ಸಂಭವಿಸಿದೆ. ಕೊನೆಯ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಜವೇರಿಯಾ ಖಾನ್ ಅವರು ರೇಣುಕಾ ಅವರ ತೀಕ್ಷ್ಣ ಎಸೆತದಿಂದ ಡಿಫೆಂಡ್ ಮಾಡಿಕೊಂಡರು.
ಆದರೆ ಅಷ್ಟರಲ್ಲಿ ಆಕೆ ತನ್ನ ಕ್ರೀಸ್ನಿಂದ ಸ್ವಲ್ಪ ಮುಂದೆ ಬಂದಿದ್ದಳು. ಇದನ್ನು ನೋಡಿದ ಠಾಕೂರ್ (ರೇಣುಕಾ ಠಾಕೂರ್) ತಕ್ಷಣವೇ ಬಾಲ್ನ್ನ ಕೈಯಲ್ಲಿ ಹಿಡಿದು ತಡಮಾಡದೆ ಭಾರೀ ವೇಗದಲ್ಲಿ ಸ್ಟಂಪ್ಗೆ ಹೊಡೆಯಲು ಪ್ರಯತ್ನಿಸಿದರು. ಆದರೆ ಜಾವೇರಿಯಾ ವಿಕೆಟ್ ಲೈನ್ ನಲ್ಲಿ ನಿಂತಿದ್ದರು. ಇದರಿಂದಾಗಿ ಬಾಲ್ ಆಕೆಯ ಪ್ರೈವೆಟ್ ಪಾರ್ಟ್ಗೆ ಬಡಿದಿದೆ. ಆಕೆಗೆ ನೋವು ಎಷ್ಟು ತೀವ್ರವಾಗಿತ್ತೆಂದರೆ ತಕ್ಷಣ ಆಕೆ ಬ್ಯಾಟ್ ಅನ್ನು ಕೆಳಗೆ ಬಿಸಾಡಿ ಕುಂಟತೊಡಗಿದಳು. ಇದೀಗ ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡಕ್ಕೆ 7 ವಿಕೆಟ್ ಗಳ ಭರ್ಜರಿ ಜಯ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು.
ದಕ್ಷಿಣ ಆಫ್ರಿಕಾದ ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 150ರನ್ ಗಳ ಸವಾಲಿನ ಗುರಿಯನ್ನು ಭಾರತ ಮಹಿಳಾ ತಂಡ ಕೇವಲ 19 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಬಿಸ್ಮಾ ಮಾರೂಫ್ ಔಟಾಗದೆ 68, ಆಯೇಷಾ ನಸೀಮ್ ಔಟಾಗದೆ 43 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.
ಪಾಕಿಸ್ತಾನ ನೀಡಿದ 150 ರನ್ ಗುರಿ ಬೆನ್ನುಹತ್ತಿದ ಭಾರತ 19 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಭಾರತದ ಪರ ಜೆಮಿಮಾ ರಾಡ್ರಿಗಸ್ ಔಟಾಗದೆ 53, ರಿಚಾ ಘೋಷ್ ಔಟಾಗದೆ 31, ಶಫಾಲಿ ವರ್ಮಾ 33, ಯಾಸ್ತಿಕಾ ಭಾಟಿಯಾ 17, ಹರ್ಮನ್ಪ್ರೀತ್ ಕೌರ್ 16 ರನ್ ಗಳಿಸಿದರು.