“ಮೊಹಮ್ಮದ್‌ನನ್ನ ಫಾಲೋ ಮಾಡೋರೇ ಉದ್ಧಾರ ಆಗ್ತಾರೆ, ಈ ಬಿಜೆಪಿ & ಮೋದಿ ತಿಪ್ಪರಲಾಗಾ ಹಾಕದ್ರೂ….”: ಪರಮಾಣು ಧಮಕಿ ಹಾಕಿದ ಇಮ್ರಾನ್ ಖಾನ್

in Kannada News/News 355 views

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ವಿರುದ್ಧ ವಿಷವನ್ನು ಕಕ್ಕುವ ಉಗುಳುವ ಮೂಲಕ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. ಕತಾರ್‌ನ ಮಾಧ್ಯಮ ಸಂಸ್ಥೆ ‘ಅಲ್ ಜಜೀರಾ’ಗೆ ಸಂದರ್ಶನ ನೀಡುವಾಗ ಅವರು ಭಾರತಕ್ಕೆ ಈ ಧಮಕಿ ಹಾಕಿದ್ದಾರೆ. ಈ ವೇಳೆ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವಾಗ ಅಲ್ಲಿನ ಜನರ ನೋವನ್ನು ಕೂಡ ಪ್ರಸ್ತಾಪಿಸಿದರು. ಜಮ್ಮು ಮತ್ತು ಕಾಶ್ಮೀರವನ್ನು ‘ಭಾರತದ ಆಕ್ರಮಿತ ಕಾಶ್ಮೀರ’ ಎಂದು ಹೇಳಿದ ಇಮ್ರಾನ್ ಖಾನ್, 80 ಲಕ್ಷ ಕಾಶ್ಮೀರಿಗಳು ‘Open Jail (ತೆರೆದ ಜೈಲಿನಲ್ಲಿ)’ ವಾಸಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.

Advertisement

ಇಮ್ರಾನ್ ಖಾನ್ ಭಾರತ ಸರ್ಕಾರವನ್ನ ‘ಫ್ಯಾಸಿಸ್ಟ್ ಬಿಜೆಪಿ ಸರ್ಕಾರ’ ಎಂಬ ಪದಗಳನ್ನು ಬಳಸಿದ್ದಾರೆ ಮತ್ತು ಈ ಸರ್ಕಾರ ಭಾರತಕ್ಕೆ ಮತ್ತು ಇಡೀ ಪ್ರದೇಶಕ್ಕೆ ಮಾರಕವಾಗಿದೆ ಎಂದು ಹೇಳಿದರು. ಬಿಜೆಪಿಯ ನೀತಿಗಳಿಂದ ಪರಮಾಣು ಯುದ್ಧ ಸಂಭವಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೂಗಳಂತಹ ಬುದ್ದಿವಂತರಿರುವ ದೇಶದಲ್ಲಿ ಬಿಜೆಪಿ ಹೇಗೆ ಆಡಳಿತ ನಡೆಸುತ್ತಿದೆಯೋ ಗೊತ್ತಿಲ್ಲ ಎಂದರು. ಅಫ್ಘಾನಿಸ್ತಾನದಲ್ಲಿ ‘ಹಸಿವು’ ಕುರಿತು ಮಾತನಾಡಿದ ಅವರು, ಅಮೆರಿಕವನ್ನು ಅಫ್ಘಾನಿಸ್ತಾನವನ್ನ ಬೆಂಬಲಿಸುವಂತೆ ಕೇಳಿಕೊಂಡರು. ಅಲ್ಲದೆ ಎರಡು ದಶಕಗಳ ಕಾಲ ಯಾವ ಉದ್ದೇಶಕ್ಕಾಗಿ ಅಮೆರಿಕ ಇತ್ತು ಎಂಬುದು ನನಗೆ ಅರ್ಥವೇ ಆಗಿಲ್ಲ, ಇದು ನನ್ನ ಗ್ರಹಿಕೆಗೆ ಮೀರಿದ್ದು ಎಂದು ಹೇಳಿದ್ದಾರೆ.

ಮತಾಂಧ ಮನಸ್ಸು ಮಾತ್ರ ಹಾಗೆ ಯೋಚಿಸಬಹುದು, ಆದರೆ ಎರಡು ಪರಮಾಣು ಶಕ್ತಿಗಳು ಮುಖಾಮುಖಿಯಾದಾಗ ಪರಿಣಾಮಗಳು ಭೀಕರವಾಗಬಹುದು ಎಂಬ ಭಯವಿದೆ ಎಂದು ಇಮ್ರಾನ್ ಖಾನ್ ಹೇಳಿದರು. ಭಾರತ ವೈಮಾನಿಕ ದಾ ಳಿ ನಡೆಸಿದರೆ, ಪಾಕಿಸ್ತಾನವು ಫೆಬ್ರವರಿ 2019 ರಲ್ಲಿ ಮಾಡಿದ ಆ ಕ್ರ ಮ ಣದಂತೆಯೇ ಪ್ರತ್ಯುತ್ತರ ನೀಡಲಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಭಾರತದ ವೈಯಕ್ತಿಕ ಸಂಬಂಧಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಮೊಸಳೆ ಕಣ್ಣೀರಿಡುತ್ತ ನಾನು ಕಾಶ್ಮೀರ ಸಮಸ್ಯೆಯನ್ನು ಎಲ್ಲಾ ಕಡೆ ಪ್ರಸ್ತಾಪಿಸಿದೆ, ಆದರೆ ಯಾರಿದಲೂ ಯಾವುದೇ ಭರವಸೆಯಾಗಲಿ ಬೆಂಬಲವಾಗಲಿ ಸಿಗಲಿಲ್ಲ ಎಂದು ಹೇಳಿದರು.

ಅದೇ ಸಮಯದಲ್ಲಿ, ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಪ್ರಶ್ನೆಗೆ, ಅವರು ಭುಟ್ಟೋ ಮತ್ತು ಷರೀಫ್ ಕುಟುಂಬವನ್ನು ಹೊಣೆಗಾರರನ್ನಾಗಿ ಮಾಡಿದರು. ಈ ಹಿಂದೆ ಪಾಕಿಸ್ತಾನವು ಸಂಪನ್ಮೂಲಗಳ ವಿಷಯದಲ್ಲಿ ಶ್ರೀಮಂತವಾಗಿತ್ತು, ಆದರೆ ಎರಡು ಶ್ರೀಮಂತ ಕುಟುಂಬಗಳು ಅದನ್ನು ಬಡವಾಗಿಸಿದೆ ಮತ್ತು ತಮ್ಮ ಸರ್ಕಾರವು ಈ ಎರಡರ ವಿರುದ್ಧವೂ ಹೋರಾಡುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಜಕಾರಣವನ್ನು ಸದಾ ಟೀಕಿಸುತ್ತಲೇ ಬಂದಿದ್ದಾರೆ ಎಂದರು. ಇಮ್ರಾನ್ ಖಾನ್ ಪ್ರಕಾರ, ಪ್ರವಾದಿ ಮುಹಮ್ಮದ್ ಅವರ ಮಾದರಿಯನ್ನು ಯಾರು ಅನುಸರಿಸುತ್ತಾರೆ, ಅವರು ಮುಂದೆ ಹೋಗುತ್ತಾರೆ. ಪ್ರವಾದಿ ಮುಹಮ್ಮದರು ಮಾನವ ಜನಾಂಗ ಮತ್ತು ಜನರ ಸ್ವಭಾವವನ್ನು ಬದಲಾಯಿಸಿದರು ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ಪ್ರಧಾನಿ ಇಮ್ರಾನ್ ಖಾನ್ ಮನೆ ನಡೆಸೋಕೂ ಹಣ ಇಲ್ಲ, ಆ ವ್ಯಕ್ತಿ ಪ್ರತಿ ತಿಂಗಳು ಹಣ ಕೊಡ್ತಾನೆ ಎಂದ ಇಮ್ರಾನ್ ಮಾಜಿ ಆಪ್ತ

ನವದೆಹಲಿ: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಸರ್ಕಾರ ರಚನೆಯಾದಾಗಿನಿಂದ, ಒಂದಿಲ್ಲೊಂದು ಕಾರಣಕ್ಕಾಗಿ, ಅದು ವಿವಾದಗಳಿಂದ ಸುತ್ತುವರೆದಿರುತ್ತದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಹಾಸ್ಯಾಸ್ಪದ ಹೇಳಿಕೆಗಳು ಮತ್ತು ವರ್ತನೆಗಳಿಂದ ಬ್ರೇಕಿಂಗ್ ನ್ಯೂಸ್ ಆಗಿ ಉಳಿದಿದ್ದಾರೆ. ಅಷ್ಟೇ ಅಲ್ಲ, ಭ ಯೋತ್ಪಾ ದನೆಯ ಭದ್ರಕೋಟೆ ಎನಿಸಿರುವ ಪಾಕಿಸ್ತಾನಕ್ಕೆ ಭಾರತ ಸೇರಿದಂತೆ ಇಡೀ ವಿಶ್ವವೇ ಈ ರಾಷ್ಟ್ರ ಸುಳ್ಳು ಹೇಳುತ್ತಲೇ ಇರುತ್ತದೆ ಅಂತ ಉಗಿಸಿಕೊಳ್ಳುತ್ತಲೇ ಇರುತ್ತೆ. ಅದೇ ಸಮಯದಲ್ಲಿ, ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಚಿತ್ರ ವಿಚಿತ್ರ ವರ್ತನೆ, ಹೇಳಿಕೆಗಳಿಂದ ಅವಮಾನವನ್ನು ಅನುಭವಿಸುತ್ತಲೇ ಇರುತ್ತಾರೆ. ಏತನ್ಮಧ್ಯೆ, ಇಮ್ರಾನ್ ಖಾನ್ ಅವರ ಮಾಜಿ ನಾಯಕರೊಬ್ಬರು ಕಂಗಾಲಾಗಿರುವ ಪಾಕಿಸ್ತಾನದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ, ನಿವೃತ್ತ ನ್ಯಾಯಮೂರ್ತಿ ವಜಿಹುದ್ದೀನ್ ಅಹ್ಮದ್, ಪಾಕಿಸ್ತಾನದ ಆಡಳಿತ ಪಕ್ಷ ಪಿಟಿಐನ ಮಾಜಿ ನಾಯಕ, ಪಾಕಿಸ್ತಾ ಹಾಗು ಇಮ್ರಾನ್ ಖಾನ್ ಬಗ್ಗೆ ದೊಡ್ಡ ಹೇಳಿಕೆಯೊಂದನ್ನ ನೀಡಿದ್ದಾರೆ. ಅವರ ಈ ಹೇಳಿಕೆಯ ನಂತರ ಇದೀಗ ಪಾಕಿಸ್ತಾನದ ಇಮ್ರಾನ್ ಸರ್ಕಾರವು ಸಂಕಷ್ಟಕ್ಕೆ ಸಿಲುಕಬಹುದು ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ, ಪಕ್ಷದಿಂದ ಈಗ ಬೇರ್ಪಟ್ಟಿರುವ ನಾಯಕ ಜಹಾಂಗೀರ್ ಖಾನ್ ಅವರು ಪ್ರಧಾನಿ ಇಮ್ರಾನ್ ಖಾನ್ ಅವರ ಮನೆಯ ವೆಚ್ಚಕ್ಕಾಗಿ ತಿಂಗಳಿಗೆ 50 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದರು ಎಂದು ಮಾಜಿ ಪಿಟಿಐ ನಾಯಕ ವಾಜಿಹುದ್ದೀನ್ ಅಹ್ಮದ್ ಹೇಳಿದ್ದಾರೆ. ಇಮ್ರಾನ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ ಅವರು, ಪಕ್ಷದ ಅನೇಕ ಜನರು ಪಾಕಿಸ್ತಾನದ ಪ್ರಧಾನಿಯ ಮನೆ ನಡೆಸಲು ಹಣವನ್ನು ಸಹ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ವಾಜಿಹುದ್ದೀನ್ ಅಹ್ಮದ್ ಈ ವಿಷಯಗಳನ್ನು ಹೇಳಿದ್ದಾರೆ. ಇಮ್ರಾನ್ ಖಾನ್ ಪ್ರಾಮಾಣಿಕ ವ್ಯಕ್ತಿ ಎಂದು ಭಾವಿಸುವುದು ಸಂಪೂರ್ಣವಾಗಿ ತಪ್ಪು ಎಂದು ಅವರು ಹೇಳಿದರು. ಅವರು ವರ್ಷಗಳ ಕಾಲ ಅವರ ಸ್ವಂತ ಮನೆಯನ್ನೇ ನಡೆಸಲಾಗಲಿಲ್ಲ ಆರಂಭದಲ್ಲಿ ಜಹಾಂಗೀರ್ ತರೀನ್ ಅವರಂತಹವರು ಅವರ ಮನೆ ನಡೆಸಲು 30 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಆದಾಗ್ಯೂ ಈ ಬಗ್ಗೆ ಚರ್ಚೆ ಹಾಗು ಅವರ ಹೇಳಿಕೆ ವೈರಲ್ ಆದ ನಂತರ, ಜಹಾಂಗೀರ್ ಖಾನ್ ತರೀನ್ ಅವರು ವಾಜಿಹುದ್ದೀನ್ ಅಹ್ಮದ್ ಅವರ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಮನೆ ನಡೆಸಲು ಇಮ್ರಾನ್ ಖಾನ್‌ಗೆ ಒಂದು ರೂಪಾಯಿಯನ್ನೂ ನಾನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.

 

Advertisement
Share this on...