ಮುಂದಿನ 3 ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾರ ಸರ್ಕಾರ ರಚನೆಯಾಗಲಿದೆ ಎಂಬುದು ನಿರ್ಧಾರವಾಗಲಿದ್ದು, ಶೀಘ್ರದಲ್ಲೇ ಉತ್ತರ ಪ್ರದೇಶದಲ್ಲಿ ಚುನಾವಣಾ ದಿನಾಂಕ ಕೂಡ ಘೋಷಣೆಯಾಗಲಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೆ ಬರಲಿದೆಯೇ ಅಥವಾ ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ. ಈ ಕುರಿತು ಪ್ರದೀಪ್ ಭಂಡಾರಿ ಅವರು ‘ಜನ್ ಕಿ ಬಾತ್’ನ ಅತ್ಯಂತ ನಿಖರವಾದ ಸಮೀಕ್ಷೆಯನ್ನು ಪ್ರಸ್ತುತಪಡಿಸಿದ್ದಾರೆ.
ಈ ಓಪಿನಿಯನ್ ಪೋಲ್‌ನ ಸರ್ವೇ ಮೂಲಕ, ಡಿಸೆಂಬರ್ 22 ರವರೆಗೆ ಉತ್ತರ ಪ್ರದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಏನೆಂದು ಹೇಳಲು ಇಂಡಿಯಾ ನ್ಯೂಸ್ – ಜನ್ ಕೀ ಬಾತ್ ಪ್ರಯತ್ನಿಸಿದೆ. ಯಾವ ಪಕ್ಷವು ಮುಂದಿದೆ ಮತ್ತು ಯಾವ ಪಕ್ಷವು ಶೇಕಡಾವಾರು ಮತ ಹಂಚಿಕೆಯನ್ನು ಪಡೆಯುತ್ತಿದೆ? ಉತ್ತರ ಪ್ರದೇಶದ ಸಮಸ್ಯೆ ಏನು? ಉತ್ತರ ಪ್ರದೇಶದಲ್ಲಿ ಯಾವ ಮುಖ್ಯಮಂತ್ರಿ ಹೆಚ್ಚು ಜನಪ್ರಿಯರಾಗಿದ್ದಾರೆ? ಉತ್ತರ ಪ್ರದೇಶದ ಜನರು ಯಾರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಪ್ರದೀಪ್ ಭಂಡಾರಿ ತಮ್ಮ ಒಪಿನಿಯನ್ ಪೋಲ್ ಮೂಲಕ ಉತ್ತರ ನೀಡಿದ್ದಾರೆ.
ಸಮೀಕ್ಷೆಯಲ್ಲಿ ಜನ್ ಕಿ ಬಾತ್ ಟೀಮ್ ಉತ್ತರ ಪ್ರದೇಶದ ಎಲ್ಲ 75 ಜಿಲ್ಲೆಗಳಿಗೆ ತೆರಳಿ ಜನರೊಂದಿಗೆ ಮಾತುಕತೆ ನಡೆಸಿದೆ. 20,000 ಕ್ಕೂ ಹೆಚ್ಚು ಜನರೊಂದಿಗೆ ಮಾತನಾಡಿದ ನಂತರ ಜನ್ ಕಿ ಬಾತ್‌ನ ಒಪಿನಿಯನ್ ಪೋಲ್‌ನ್ನ ಪ್ರಸ್ತುತಪಡಿಸಲಾಯಿತು. ಸದ್ಯಕ್ಕೆ, ಪ್ರದೀಪ್ ಭಂಡಾರಿಯವರ ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ 233 ರಿಂದ 252 ಸ್ಥಾನಗಳನ್ನು ಪಡೆಯಬಹುದು, ಇದು ಸರ್ಕಾರ ರಚಿಸಲು ಬೇಕಿರುವ ಬಹುಮತಕ್ಕಿಂತ ಹೆಚ್ಚು. ಮತ್ತೊಂದೆಡೆ, ಸಮಾಜವಾದಿ ಪಕ್ಷ 135 ರಿಂದ 149 ಸ್ಥಾನಗಳನ್ನು ಪಡೆಯಬಹುದು. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ 11-12 ಸ್ಥಾನಗಳನ್ನು ಪಡೆಯಬಹುದು. ಆದರೆ ಕಾಂಗ್ರೆಸ್ 6-3 ಸ್ಥಾನಗಳನ್ನು ಪಡೆಯಬಹುದು. ಮತ್ತೊಂದೆಡೆ, ಇತರರು 1 ರಿಂದ 4 ಸ್ಥಾನಗಳನ್ನು ಪಡೆಯಬಹುದು.
Jan Ki Baat Opinion Poll : BJP govt projected to return in power in Uttar Pradesh & is projected to get 233-252 seats. #YogiReturns @pradip103 @IndiaNews_itv pic.twitter.com/byJqhhnqrw
— Jan Ki Baat (@jankibaat1) December 23, 2021
ಪ್ರದೀಪ್ ಭಂಡಾರಿಯವರ ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಈಗ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲಿದ್ದು, ಯೋಗಿ ಆದಿತ್ಯನಾಥ್ ಮತ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಬಹುದು. ಪ್ರಸ್ತುತ, ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬಹುಮತವನ್ನು ಪಡೆಯುತ್ತಿದೆ.
2017 ರಲ್ಲಿ ನಡೆದ ಚುನಾವಣೆಯಲ್ಲಿನ ಫಲಿತಾಂಶ ಹೇಗಿತ್ತು?
2017 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, 403 ಸದಸ್ಯ ಬಲದ ವಿಧಾನಸಭೆಯಲ್ಲಿ 312 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮ್ಯಾಜಿಕ್ ಫಿಗರ್ 202 ಅನ್ನು ದಾಟಿತ್ತು, ಆದರೆ ಅದರ ಮಿತ್ರಪಕ್ಷಗಳು ಸೇರಿದಂತೆ ಬಿಜೆಪಿಯ ಸಂಖ್ಯೆ 325 ಕ್ಕೆ ತಲುಪಿತ್ತು. ಇನ್ನೊಂದೆಡೆ ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿ, ಬಹುಜನ ಸಮಾಜವಾದಿ ಪಕ್ಷ ಮೂರನೇ ಸ್ಥಾನ ಹಾಗು ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದ್ದವು.
ಉತ್ತರಪ್ರದೇಶದ ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ+ 325, ಸಮಾಜವಾದಿ ಪಕ್ಷ (SP) 54, ಬಹುಜನ ಸಮಾಜವಾದಿ ಪಕ್ಷ (BSP) 19 ಸ್ಥಾನಗಳಲ್ಲಿ ಜಯಗಳಿಸಿದ್ದವು. ಕಾಂಗ್ರೆಸ್ ಪಕ್ಷವಂತೂ ಇತರೇ ಪಕ್ಷಗಳ ಸಾಲಿಗೆ ಸೇರಿಕೊಂಡಿತ್ತು.