ಸೌರಮಂಡಲದ ಈ ಗ್ರಹ ಯಮನ ಆವಾಸಸ್ಥಾನ: ಸೂರ್ಯನನ್ನ ಒಂದು ಸುತ್ತು ಹಾಕಲು ಈ ಗ್ರಹ ತೆಗೆದುಕೊಳ್ಳುತ್ತೆ ಬರೋಬ್ಬರಿ 248 ವರ್ಷ

in Kannada News/News/ಕನ್ನಡ ಮಾಹಿತಿ 2,138 views

ಪ್ಲುಟೊ ಗ್ರಹವನ್ನು ‘ಯಮ ಗ್ರಹ’ ಎಂದೂ ಕರೆಯುತ್ತಾರೆ. ವಾಸ್ತವವಾಗಿ ಈ ಗ್ರಹದ ಬಗ್ಗೆ ಅನೇಕ ವಿಚಿತ್ರ ಮತ್ತು ನಿಗೂಢ ವಿಷಯಗಳೂ ಇವೆ. ಅದೇ ಕಾರಣಕ್ಕಾಗಿ ಇದನ್ನ ಯಮ ಗ್ರಹ ಎಂದು ಹೆಸರಿಡಲಾಗಿದೆ. ಈ ಗ್ರಹವು ಸಾಕಷ್ಟು ದೂರದಲ್ಲಿದೆ ಮತ್ತು ಇದನ್ನು ಫೆಬ್ರವರಿ 18, 1930 ರಂದು ಕಂಡುಹಿಡಿಯಲಾಯಿತು. ಈ ಗ್ರಹವು ವಿಜ್ಞಾನಿಗಳಿಗೆ ಅಚಾನಕ್ಕಾಗಿ ಪತ್ತೆಯಾಗಿತ್ತು ಎಂದು ಹೇಳಲಾಗುತ್ತದೆ. ಖಗೋಳಶಾಸ್ತ್ರಜ್ಞ ಕ್ಲೈಡ್ ಡಬ್ಲ್ಯೂ. ಟೋಂಬಾಗ್ ‘ಪ್ಲಾನೆಟ್ ಎಕ್ಸ್’ ಎಂಬ ಅಪರಿಚಿತ ಗ್ರಹವನ್ನು ಹುಡುಕುತ್ತಿದ್ದ.  ಇದು ಯುರೇನಸ್ (ಅರುಣ್ ಗ್ರಹ) ಮತ್ತು ನೆಪ್ಚೂನ್ (ಅರುಣ ಗ್ರಹ) ಕಕ್ಷೆಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತಿತ್ತು. ಈ ಸಮಯದಲ್ಲಿ, ಅವರು ಈ ಗ್ರಹವನ್ನು ನೋಡಿದರು.

Advertisement

ಅದೇ ಸಮಯದಲ್ಲಿ, ಈ ಗ್ರಹವನ್ನು ಕಂಡುಹಿಡಿದಾಗ, ಅದಕ್ಕೆ ಪ್ಲುಟೊ ಎಂಬ ಹೆಸರನ್ನ ಕೊಟ್ಟಿರಲಿಲ್ಲ. ವೆನೆಟಿಯಾ ಬರ್ನ್‌ನ ಲಂಡನ್‌ನ ಆಕ್ಸ್‌ಫರ್ಡ್ ಸ್ಕೂಲ್ ನಲ್ಲಿ 11 ನೇ ತರಗತಿಯ ವಿದ್ಯಾರ್ಥಿಯು ಈ ಗ್ರಹಕ್ಕೆ ಈ ಹೆಸರನ್ನು ನೀಡಿದ್ದಾನೆ. ಪ್ಲುಟೊ ಗ್ರಹಕ್ಕೆ ಹೆಸರಿಸುವ ಹಿಂದೆ ವೆನೆಟಿಯಾ ಬರ್ನ್ ನೀಡಿದ್ದ ತರ್ಕದ ಪ್ರಕಾರ, ರೋಮ್ ನಲ್ಲಿ ಕತ್ತಲೆಯ ದೇವರನ್ನು ಪ್ಲುಟೊ ಎಂದು ಕರೆಯಲಾಗುತ್ತದೆ ಮತ್ತು ಈ ಗ್ರಹದಲ್ಲಿ ಯಾವಾಗಲೂ ಕತ್ತಲೆ ಇರುತ್ತದೆ. ಇದೇ ಕಾರಣಕ್ಕಾಗಿ ಅದಕ್ಕೆ ಪ್ಲುಟೊ ಎಂದು ಹೆಸರಿಸಲಾಯಿತು. ಈ ಹೆಸರನ್ನು ಸೂಚಿಸಿದ್ದಕ್ಕಾಗಿ ಈ ಹುಡುಗಿಗೆ ಆ ಸಮಯದಲ್ಲಿ ಬಹುಮಾನ ನೀಡಲಾಯಿತು. ವೆನೆಷಿಯಾ ಬರ್ನ್‌ಗೆ ಐದು ಪೌಂಡ್‌ಗಳನ್ನು ಬಹುಮಾನವಾಗಿ ನೀಡಲಾಯಿತು.  ಇದು ಇಂದು ಸುಮಾರು 499 ರೂಪಾಯಿಗಳಷ್ಟಾಗುತ್ತದೆ.

ಪ್ಲೂಟೊ ಗ್ರಹಕ್ಕೆ ಸಂಬಂಧಿಸಿದ ಕೆಲ ರೋಚಕ ಸಂಗತಿಗಳು

1. ಸೂರ್ಯನ ಒಂದು ಸುತ್ತನ್ನು ಪೂರ್ಣಗೊಳಿಸಲು ಪ್ಲುಟೊ 248 ವರ್ಷಗಳನ್ನು ತೆಗೆದುಕೊಳ್ಳುತ್ತದೆ.

2. ಈ ಗ್ರಹದ ಒಂದು ದಿನ ಭೂಮಿಗೆ ಹೋಲಿಸಿದರೆ 6.4 ದಿನಗಳಿಗೆ ಸಮಾನವಾಗಿರುತ್ತದೆ.

3. ಈ ಗ್ರಹದಲ್ಲಿ 24 ಗಂಟೆಗಳು ಸುಮಾರು 153 ಗಂಟೆಗಳಿಗೆ ಸಮನಾಗಿರುತ್ತದೆ

4. ಸೂರ್ಯನ ಬೆಳಕು ಪ್ಲುಟೊವನ್ನು ತಲುಪಲು ಸುಮಾರು ಐದು ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಅದೇ ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಕೇವಲ ಎಂಟು ನಿಮಿಷ 20 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ವಾಸ್ತವವಾಗಿ ಈ ಗ್ರಹವು ಸಾಕಷ್ಟು ದೂರದಲ್ಲಿದೆ. ಇದರಿಂದಾಗಿ ಸೂರ್ಯನ ಬೆಳಕು ಇಲ್ಲಿಗೆ ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

5. ಪ್ಲುಟೊ ಗ್ರಹದಲ್ಲಿ ಹಿಮವಿದ್ದು ಮತ್ತು ಇಲ್ಲಿನ ನೀರಿನ ಪ್ರಮಾಣವು ಭೂಮಿಯ ಎಲ್ಲಾ ಸಾಗರಗಳಿಗಿಂತ ಮೂರು ಪಟ್ಟು ಹೆಚ್ಚಿದೆ. ಇದು ಅದರ ಮೇಲ್ಮೈಯಲ್ಲಿ ದೊಡ್ಡ ಹೊಂಡಗಳನ್ನು ಸಹ ಹೊಂದಿದೆ.

6. ಕಡಿಮೆ ತಾಪಮಾನದಿಂದಾಗಿ ಈ ಗ್ರಹದಲ್ಲಿ ಜೀವನ ಸಾಧ್ಯವಿಲ್ಲ. ಈ ಗ್ರಹದ ಮೇಲ್ಮೈ ತಾಪಮಾನವು ಮೈನಸ್ 233 ರಿಂದ ಮೈನಸ್ 223 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.

7. ಪ್ಲುಟೊ ಗ್ರಹವು ಸೌರವ್ಯೂಹದ ಎಲ್ಲಾ ಗ್ರಹಗಳ ಪೈಕಿ ಚಿಕ್ಕದಾದ ಗ್ರಹವಾಗಿದೆ. ಆದರೆ 2006 ರ ನಂತರ ಅದನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈಗ ಅದು ಕುಬ್ಜ ಗ್ರಹಗಳ ಪಟ್ಟಿಯಲ್ಲಿ ಬರುತ್ತದೆ.

Advertisement
Share this on...