Instagram ನಲ್ಲಿ ಸುಮ್ಮಸುಮ್ಮನೇ ಪೋಸ್ಟ್ ಮಾಡಲ್ಲ ಸೆಲೆಬ್ರಿಟಿಗಳು, ಒಂದು ಪೋಸ್ಟ್ ಗೆ ಸಿಗುತ್ತೆ ಇಷ್ಟು ಕೋಟಿ ಹಣ

in FILM NEWS/Kannada News/News/ಮನರಂಜನೆ/ಸಿನಿಮಾ 110 views

ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ಕೂಡ ಆದಾಯದ ಒಂದು ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಇನ್ಸ್ಟಾಗ್ರಾಮ್ ಅನೇಕ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಆದಾಯ ತಂದುಕೊಡುತ್ತಿದೆ.

Advertisement

ಸಿನಿ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಪೋಸ್ಟ್ ಗಳು ಎಲ್ಲವೂ ಉಚಿತವಾಗಿರುವುದಿಲ್ಲ. ಕೋಟಿ ಕೋಟಿ ಹಣ ಪಡೆದು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಸೈಲೆಂಟ್ ಆಗುತ್ತಾರೆ. ಆದರೆ ಫಾಲೋವರ್ಸ್ ಕಾಮೆಂಟ್, ಲೈಕ್ಸ್, ಟ್ರೋಲ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದೆ ಸೆಲೆಬ್ರಿಟಿಗಳ ಮೌಲ್ಯವನ್ನು ಜಾಸ್ತಿ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಕಂಪನಿ ಹಾಪರ್ ಹೆಚ್ ಕ್ಯೂ, ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಹಣ ಸಂಪಾದನೆ ಮಾಡುವ ಬಾಲಿವುಡ್ ಸ್ಟಾರ್ ಯಾರು ಎನ್ನುವುದನ್ನು ರಿವೀಲ್ ಮಾಡಿದೆ. ಇದರ ಅಂಕಿ ಅಂಶ ನೋಡಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಅಂಕಿ ಅಂಶದ ಪ್ರಕಾರ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ನಿಂದ ಅತೀ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಬಾಲಿವುಡ್ ನಟಿ. 64 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪ್ರಿಯಾಂಕಾ ಒಂದು ಪ್ರಮೋಷನಲ್ ಪೋಸ್ಟ್ ಗೆ ಬರೊಬ್ಬರಿ 1.80 ಕೋಟಿ ರೂ. ಪಡೆಯುತ್ತಾರಂತೆ.

ಇನ್ನೂ ಹೆಚ್ಚು ಹಣ ಪಡೆಯುವ ಸ್ಟಾರ್ ಗಳಲ್ಲಿ ನಟ ಶಾರುಖ್ ಖಾನ್ ಏನು ಹಿಂದೆ ಬಿದ್ದಿಲ್ಲ. ಬ್ರ್ಯಾಂಡ್ ಪ್ರಮೋಷನ್ ಗೆ ಕಿಂಗ್ ಖಾನ್ ಇನ್ಸ್ಟಾಗ್ರಾಮ್ ನಿಂದ 80 ಲಕ್ಷ ರೂ. ಪಡೆಯುತ್ತಿದ್ದಾರೆ. ಇನ್ನು ಅಮಿತಾಬ್ ಕೂಡ ಇನ್ಸ್ಟಾಗ್ರಾಮ್ ನಿಂದ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಅಮಿತಾಬ್ ಕೂಡ ಒಂದು ಪ್ರಮೋಷನಲ್ ಪೋಸ್ಟ್ ಗೆ 50 ಲಕ್ಷ ರೂ. ಪಡೆಯುತ್ತಾರೆ.

ಇನ್ನೂ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರಲ್ಲಿ ಅಲಿಯಾ ಕೂಡ ಒಬ್ಬರು. ಇನ್ಸ್ಟಾಗ್ರಾಮ್ ನಿಂದ ಅತೀ ಹೆಚ್ಚು ಹಣ ಸಂಪಾದಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಲಿಯಾ ಭಟ್ ಕೂಡ ಇದ್ದಾರೆ. ಅಲಿಯಾ ಬರೋಬ್ಬರಿ 1 ಕೋಟಿ ರೂ. ಪಡೆಯುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಅತೀ ದೊಡ್ಡ ಮಟ್ಟದ ಹಣವನ್ನು ಸಾಮಾಜಿಕ ಜಾಲತಾಣದಿಂದ ಸಂಪಾದನೆ ಮಾಡುತ್ತಾರೆ.

ಇದನ್ನೂ ಓದಿ: ನಟ ದರ್ಶನ್‌ರ ಈ ಒಂದು ಮಾತಿಗೆ ಓಡೋಡಿ ಬಂದು ಸೈ ಎಂದ ಜನ

ಕೊರೊನಾದಿಂದ ರಾಜ್ಯದ ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ನಟ ದರ್ಶನ್ ತೂಗುದೀಪ್ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮಾಡಿದ್ದ ಮನವಿಗೆ ಪ್ರಾಣಿಪ್ರಿಯರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಇದೇ ರೀತಿ ಹಲವರು ರಾಜ್ಯದ 9 ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ತಮ್ಮ ಮಾತಿಗೆ ಸ್ಪಂದಿಸಿದ ಜನತೆಗೆ ದರ್ಶನ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ.

ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್‌ ಅವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್‌, ಕೋವಿಡ್‌ನ ಈ ಸಂಕಷ್ಟದ ಸಂದರ್ಭದಲ್ಲಿ ಜನರೂ ತಮ್ಮ ಹತ್ತಿರದ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳನ್ನು ದತ್ತುಪಡೆಯಲು ಕರೆ ನೀಡಿದ್ದರು.

‘ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, ಇವುಗಳಲ್ಲಿ 5 ಸಾವಿರ ಪ್ರಾಣಿಗಳಿವೆ. ಇವುಗಳನ್ನು ನೋಡಲು ದೇಶದಾದ್ಯಂತದಿಂದ ಜನರು ಬರುತ್ತಿದ್ದರು. ಅವರು ಪಡೆಯುತ್ತಿದ್ದ ಟಿಕೆಟ್‌ನಿಂದ ಸಂಗ್ರಹವಾಗುತ್ತಿದ್ದ ಹಣದಿಂದ ಈ ಪ್ರಾಣಿಗಳಿಗೆ ಆಹಾರ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ವೇತನ ನೀಡಲಾಗುತ್ತಿತ್ತು. ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಈ ಮೃಗಾಲಯಗಳು ಸಂಕಷ್ಟದಲ್ಲಿವೆ’ ಎಂದಿದ್ದರು.

‘ಜನರು ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್‌ಬರ್ಡ್‌ಗೆ ವರ್ಷಕ್ಕೆ ₹1 ಸಾವಿರ, ಹುಲಿಗೆ ₹1 ಲಕ್ಷ ಹಾಗೂ ಆನೆಗೆ ₹1.17 ಲಕ್ಷ ನೀಡಿ ದತ್ತುಪಡೆದು ಪ್ರಾಣಿಸಂಕುಲ ಉಳಿಸಲು, ಮೃಗಾಲಯ ಬೆಳೆಸಲು ಎಲ್ಲರೂ ಕೈಜೋಡಿಸಿ. ‘zoo of karnataka’ ಆ್ಯಪ್‌ ಮುಖಾಂತರ ಅಥವಾ ಮೃಗಾಲಯಗಳಿಗೇ ಭೇಟಿ ನೀಡಿ ಈ ದತ್ತು ಪಡೆಯುವ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಬಹುದು. ಈ ಒಳ್ಳೆಯ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ’ ಎಂದು ದರ್ಶನ್‌ ಹೇಳಿದ್ದರು. ಇದಕ್ಕೆ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.

Advertisement
Share this on...