ಹಿಜಾಬ್ ಹಾಕಿದಾಗ ತಲೆ ಕೂದಲು ಮುಚ್ಚಿರಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಯುವತಿಯನ್ನ ಅಟ್ಟಾಡಿಸಿ ಹೊಡೆದ ಮತಾಂಧರು: 22 ವರ್ಷದ ಯುವತಿಯ ಸಾವು

in Uncategorized 136 views

ಹಿಜಾಬ್ ಅನ್ನು ತಪ್ಪಾಗಿ ಧರಿಸಿದ್ದಾಳೆ ಎಂಬ ಕಾರಣಕ್ಕಾಗಿ ಇರಾನ್‌ನಲ್ಲಿ ಮೋರಲ್ ಪೋಲಿಸರು ಥಳಿಸಿದ್ದಕ್ಕೆ ಕೋಮಾಕ್ಕೆ ಬಿದ್ದ 22 ವರ್ಷದ ಮಹ್ಸಾ ಅಮಿನಿ ಶುಕ್ರವಾರ (ಸೆಪ್ಟೆಂಬರ್ 16, 2022) ರಾಜಧಾನಿ ಟೆಹ್ರಾನ್‌ನಲ್ಲಿ ನಿಧನರಾಗಿದ್ದಾರೆ. ಮಾರಲ್ ಪೋಲಿಸರ ಹೊಡೆತಕ್ಕೆ ಸಿಲುಕಿ ಕೋಮಾ ಸ್ಥಿತಿಗೆ ತಲುಪಿದ್ದ ಅಮಿನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಸೆಪ್ಟೆಂಬರ್ 13 ರಂದು ಅಮಿನಿ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಅವರ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಲಾಯಿತು. ತೆಹ್ರಾನ್‌ನ ಮಾರಲ್ ಪೋಲಿಸರು ಆಕೆಯ ಕೂದಲು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬ ಆರೋಪದ ನಂತರ ಆಕೆಯನ್ನು ಬಂಧಿಸಿದ್ದರು. ಇದಾದ ನಂತರ ಆಕೆಯನ್ನು ಬಂಧನ ಕೇಂದ್ರಕ್ಕೆ ಕರೆದೊಯ್ದು ತೀವ್ರವಾಗಿ ಥಳಿಸಿದ್ದರು.

ವರದಿಗಳ ಪ್ರಕಾರ, ಈ ಘಟನೆ ಸೆಪ್ಟೆಂಬರ್ 13 ರಂದು ನಡೆದಿದೆ. ಇರಾನ್‌ನ ಸಘೇಜ್‌ನ ನಿವಾಸಿ ಅಮಿನಿ ತನ್ನ ಸಹೋದರ ಕೈರುಶ್‌ನೊಂದಿಗೆ ಟೆಹ್ರಾನ್‌ಗೆ ಹೋಗಿದ್ದರು. ಇಬ್ಬರೂ ಶಹೀದ್ ಹಘಾನಿ ಎಕ್ಸ್‌ಪ್ರೆಸ್‌ವೇ ಬಳಿ ತಲುಪಿದಾಗ, ‘ಮಾರಲ್ ಪೋಲೀಸ್ (ನೈತಿಕ ಪೋಲಿಸ್)’ ಆಗಮಿಸಿ ಅಮಿನಿಯನ್ನು ಒಂದು ಗಂಟೆಯ ‘ರೀ-ಎಜುಕೇಷನ್ ಕ್ಲಾಸ್’ ಗಾಗಿ ಬಂಧಿಸಿದರು.

ಪೊಲೀಸರು ಮಹಿಳೆಯನ್ನು ವೊಜಾರಾ ಅವೆನ್ಯೂದಲ್ಲಿರುವ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ದೇಶದ ಕಡ್ಡಾಯ ಹಿಜಾಬ್ ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ ಈಗಾಗಲೇ ಡಜನ್ಗಟ್ಟಲೆ ಮಹಿಳೆಯರನ್ನು ಜೈಲಿನಲ್ಲಿಡಲಾಗಿತ್ತು. ಅಲ್ಲಿ ನೈತಿಕ ಪೊಲೀಸರು ಮಹಿಳೆಯರನ್ನು ಥಳಿಸಿ ದೇಶದ ಹಿಜಾಬ್ ನಿಯಮಗಳ ಬಗ್ಗೆ ತಿಳಿಸಿದರು.

ನನ್ನ ಸಹೋದರಿಯನ್ನ‌ ಠಾಣೆಗೆ ಕರೆದೊಯ್ದರು: ಯುವತಿಯ ಸಹೋದರ

ಪೊಲೀಸ್ ವ್ಯಾನ್ ತನ್ನ ಸಹೋದರಿಯನ್ನು ರಸ್ತೆ ಮಧ್ಯದಲ್ಲಿ ತಡೆದು ಅಪಹರಿಸಿದೆ ಎಂದು ಸಂತ್ರಸ್ತೆಯ ಸಹೋದರ ಕೈರಶ್ ಆರೋಪಿಸಿದ್ದಾರೆ. ಕೈರಶ್ ತನ್ನ ಸಹೋದರಿಯನ್ನು ಉಳಿಸಲು ಪ್ರಯತ್ನಿಸಿದಾಗ, ಪೊಲೀಸರು ಅವನಿಗೂ ಥಳಿಸಿ ಕೈ ತಿರುಚಿದರು. ನಂತರ ಆತನ ಸಹೋದರಿಯನ್ನು ಬಂಧನ ಕೇಂದ್ರಕ್ಕೆ ಕರೆದೊಯ್ದರು ಎಂದು ತಿಳಿಸಿದ್ದಾರೆ.

ಇದರ ನಂತರ, ಕರಿಶ್ ಪೊಲೀಸ್ ವ್ಯಾನ್ ಅನ್ನು ವೊಜಾರಾ ಅವೆನ್ಯೂವರೆಗೆ ಹಿಂಬಾಲಿಸಿದರು, ಅಲ್ಲಿ 60 ರಿಂದ 70 ಜನರು ಬಂಧನಕ್ಕೊಳಗಾದ ಮಹಿಳೆಯರಿಗಾಗಿ ಬಟ್ಟೆಗಳನ್ನು ಕೊಂಡೊಯ್ಯುತ್ತಿರುವುದನ್ನ ನೋಡಿದರು. ಕೆಲವು ಮಹಿಳೆಯರನ್ನು ಬಂಧನ ಕೇಂದ್ರದಿಂದ ಬಿಡುಗಡೆ ಮಾಡುವುದನ್ನು ತಾನು ನೋಡಿದ್ದೇನೆ. ಆದರೆ ಒಳಗಿನಿಂದ ಇನ್ನಿತರ ಮಹಿಳೆಯರು ಜೀವಕ್ಕಾಗಿ ಕಿರುಚುತ್ತಿದ್ದರು ಎಂದು ಅವರು ಹೇಳಿದರು.

ಕೈರಶ್ ಮುಂದೆ ಮಾತನಾಡುತ್ತ, “ನಾವು ಎಲ್ಲಾ ಬಾಗಿಲುಗಳನ್ನು ಬಡಿಯುತ್ತಿದ್ದೆವು. ಏಕಾಏಕಿ ಕಟ್ಟಡದಿಂದ ಹೊರಬಂದ ಏಜೆಂಟರು ನಮ್ಮ ಮೇಲೆ ಲಾಠಿ ಮತ್ತು ಅಶ್ರುವಾಯು ಪ್ರಯೋಗಿಸಿದರು. ನನ್ನ ಇಡೀ ದೇಹ ಕಪ್ಪು ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ ಮತ್ತು ನಿನ್ನೆ ರಾತ್ರಿಯಿಂದ ನನ್ನ ಕಣ್ಣುಗಳು ಉರಿಯುತ್ತಿವೆ. ಐದು ನಿಮಿಷಗಳ ನಂತರ ಆಂಬ್ಯುಲೆನ್ಸ್ ಕಟ್ಟಡದಿಂದ ಹೊರಟಿತು. ಒಳಗೆ ಯಾರೋ ಕೊ.ಲ್ಲ.ಲ್ಪಟ್ಟಿದ್ದಾರೆ ಎಂದು ಎಲ್ಲರೂ ಹೇಳಿದರು” ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಪೊಲೀಸರು ತನಗೆ ಸುಳ್ಳು ಹೇಳಿದ್ದು, ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಅದೇ ಸಮಯದಲ್ಲಿ, ಬಿಡುಗಡೆಯಾದ ಮಹಿಳೆಯೊಬ್ಬರು ಕೈರಶ್‌ಗೆ ಅಮಿನಿ ಗಾಯಗೊಂಡಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ಆಕೆ ಅಮಿನಿ ಜೊತೆಗೆ ಇದ್ದಳು ಎಂದು ಹೇಳಿದರು. ಪೊಲೀಸರು ಸಂತ್ರಸ್ತೆಯನ್ನು ಕಸ್ರಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದಾದ ಬಳಿಕ ಕೈರಶ್ ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಸಂತ್ರಸ್ತೆಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಆಸ್ಪತ್ರೆಯಲ್ಲಿ ತಿಳಿಸಿದರು. ಆದರೆ ಆಗಲೂ ಆಕೆಯ ಹೃದಯ ಬಡಿಯುತ್ತಲೇ ಇತ್ತು, ಆದರೆ ಆಕೆಯ ಮೆದುಳು ಕೆಲಸ ಮಾಡುತ್ತಿರಲಿಲ್ಲ. ಇರಾನ್ ವೈರ್ ಜೊತೆ ಮಾತನಾಡಿದ ಕೈರಶ್, ಹೊಡೆತ ಮತ್ತು ನಂತರದ ವೈದ್ಯಕೀಯ ಚಿಕಿತ್ಸೆಯಲ್ಲಿ ವಿಳಂಬದಿಂದಾಗಿ ತನ್ನ ಸಹೋದರಿಯ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಿದರು.

ಮಹಸಾ ಅಮಿನಿ ಕುಟುಂಬದ ಮೇಲೆ ಕಣ್ಣಿಟ್ಟ ಪೋಲಿಸರು

ಸಾಮಾಜಿಕ ಜಾಲತಾಣಗಳಲ್ಲಿ ಮಹ್ಸಾ ಅಮಿನಿ ಕೋಮಾಗೆ ಹೋಗಿರುವ ಸುದ್ದಿ ವೈರಲ್ ಆಗುತ್ತಲೇ ಭದ್ರತಾ ಅಧಿಕಾರಿಗಳನ್ನು ಆಸ್ಪತ್ರೆಗೆ ಕರೆಸಲಾಯಿತು. ಮಂಗಳವಾರ ರಾತ್ರಿಯಿಂದ ಮೃತಳ ಕುಟುಂಬವೂ ಪೊಲೀಸ್ ಕಣ್ಗಾವಲಿನಲ್ಲಿದೆ, ಆದರೆ ಆಸ್ಪತ್ರೆಯ ಪೊಲೀಸ್ ಅಧಿಕಾರಿಯೊಬ್ಬರು ಮಹ್ಸಾ ಮೇಲೆ ದಾ.ಳಿ. ನಡೆಸಿದವರ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಕ್ರಮದ ಬಗ್ಗೆ ಮಾತನಾಡಿದ ಕೈರಶ್, “ಅವರು ನನಗೆ ಪತ್ರವನ್ನು ನೀಡಿದರು ಮತ್ತು ವೊಜರಾ ಅವೆನ್ಯೂನಲ್ಲಿರುವ ಪ್ರಧಾನ ಕಚೇರಿಗೆ ಹೋಗಿ ನನ್ನ ದೂರು ಸಲ್ಲಿಸುವಂತೆ ಹೇಳಿದರು. ನಾನು ನನ್ನ ಮನೆಯಲ್ಲಿ ಯಾರನ್ನಾದರೂ ಕೊಂದರೆ ಅದು ನನ್ನ ತಂದೆಯನ್ನು ಕೊಲೆಗಾರ ಯಾರು? ಆತನ ಹೆಸರೇನು? ಅಂತ ಕೇಳಿದಂತೆ. ನಾನು ಸುಮ್ಮನಿರುವುದಿಲ್ಲ. ಏನಾಯಿತು ಎಂದು ನಾನು ಇರಾನ್‌ನಲ್ಲಿರುವ ಎಲ್ಲರಿಗೂ ಹೇಳುತ್ತೇನೆ” ಎಂದರು.

ಯುವತಿ ಹೃದ್ರೋಗದಿಂದ ಬಳಲುತ್ತಿದ್ದಳು: ಟೆಹ್ರಾನ್ ಪೊಲೀಸರು

ಪೊಲೀಸರು ಈ ವಿಷಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಗುರುವಾರ, ಟೆಹ್ರಾನ್ ಪೊಲೀಸರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಹ್ಸಾ ಅಮಿನಿ ಅವರು ಮೊದಲೇ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಳು ಎಂದು ಹೇಳಿದರು. ಬಂಧನ ಕೇಂದ್ರದಲ್ಲಿ ಯುವತಿಯನ್ನ ಥಳಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

“ಶಿಕ್ಷಣ ಮತ್ತು ಮಾರ್ಗದರ್ಶನಕ್ಕಾಗಿ ಮಹಿಳೆಯೊಬ್ಬರನ್ನು ಗ್ರೇಟರ್ ಟೆಹ್ರಾನ್ ಪೋಲೀಸ್ ಕಾಂಪೌಂಡ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಗೆ ಇದ್ದಕ್ಕಿದ್ದಂತೆ ಹೃದಯದ ಸಮಸ್ಯೆ ಕಾಣಿಸಿಕೊಂಡಿತು. ಪೊಲೀಸರು ಮತ್ತು ತುರ್ತು ಸೇವೆಗಳ ಸಹಾಯದಿಂದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು” ಎಂದು ಪೋಲಿಸರ ಹೇಳಿಕೆಯಲ್ಲಿ ತಿಳಿಸಿದೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುಬ ವಿಷಯವೇನೆಂದರೆ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಒಂಬತ್ತು ವರ್ಷಕ್ಕಿಂತ ಮೇಲ್ಪಟ್ಟ ಇರಾನಿನ ಮಹಿಳೆಯರು ಮತ್ತು ಹುಡುಗಿಯರು ಸಾರ್ವಜನಿಕವಾಗಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಇಂತಹ ನಿಷೇಧಕ್ಕೆ ಇರಾನ್ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಇರಾನ್ ಮಹಿಳೆಯರು ಈ ನಿಷೇಧವನ್ನು ಉಲ್ಲಂಘಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ, ಇರಾನ್‌ನ ಸ್ಟೇಟ್-ಸ್ಪಾನ್ಸರ್ಡ್ ಮಾರಲ್ ಪೊಲೀಸರು ಮಹಿಳೆಯರ ಮೇಲೆ ಅವರ ಉಡುಗೆಯ ಬಗ್ಗೆ ಒತ್ತಡ ಮತ್ತು ಹೊಡೆತಗಳಿಂದ ಕಂಗಾಲಾಗಿದ್ದಾರೆ. ಮಾರಲ್ ಪೊಲೀಸರು ಮತ್ತು ಜೈಲುಗಳಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆಯ ಬಗ್ಗೆ ದೇಶದ ಜನರಿಗಾಗಲಿ ಅಥವ ಹೊರಜಗತ್ತಿಗಾಗಲಿ ಮಾಹಿತಿ ಹೊರ ಬರುವುದೇ ಇಲ್ಲ.

Advertisement
Share this on...