ಮಸ್ಜಿದ್‌ನೊಳಗೆ ಗು-ಂಡು ಮದ್ದು, ಸ್ಪೋಟಕಗಳು: ಹಿಂದೆ ಮುಂದೆ ಯೋಚಿಸದೆ ಇಡೀ ಮಸ್ಜಿದ್‌ನ್ನೇ ಉಡಾಯಿಸಿದ ಇಸ್ರೇಲ್

in Uncategorized 961 views

ಇಸ್ರೇಲಿ ಭದ್ರತಾ ಪಡೆಗಳು ಏರ್ ಸ್ಟ್ರೈಕ್‌ನಲ್ಲಿ ಪ್ಯಾಲೆಸ್ತೀನ್‌ನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿರುವ ಅಲ್ ಅನ್ಸಾರ್ ಮಸೀದಿಯನ್ನು ಹಿಂದೆ ಮುಂದೆ ನೋಡದೇ ಉಡಾಯಿಸಿದ್ದಾರೆ. ಈ ಮಸೀದಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್ ಮತ್ತು ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಭಯೋತ್ಪಾದಕರು ಇಸ್ರೇಲ್ ಮೇಲೆ ದೊಡ್ಡ ದಾಳಿ ನಡೆಸಲು ಯೋಜಿಸುತ್ತಿದ್ದವು ಎಂದು ಇಸ್ರೇಲಿ ಭದ್ರತಾ ಪಡೆಗಳು ಹೇಳಿವೆ.

ಈ ಏರ್ ಸ್ಟ್ರೈಕ್ ಕುರಿತು ಇಸ್ರೇಲಿ ಭದ್ರತಾ ಪಡೆಗಳು ಹೊರಡಿಸಿದ ಹೇಳಿಕೆಯಲ್ಲಿ, ಇದನ್ನು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್‌ನ ಕಮಾಂಡ್ ಸೆಂಟರ್ ಎಂದು ತಿಳಿಸಿದೆ. ಇಸ್ರೇಲಿ ಸೇನೆಯ ಪ್ರಕಾರ, ಜುಲೈ 2023 ರಿಂದ ಇಸ್ರೇಲ್ ಮೇಲೆ ದಾಳಿ ನಡೆಸಲು ಈ ಮಸೀದಿಯನ್ನೇ ಮುಖ್ಯ ನೆಲೆಯಾಗಿ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ.

Advertisement

ಈ ಸಂಬಂಧ ಇಸ್ರೇಲಿ ಭದ್ರತಾ ಪಡೆಗಳು ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿವೆ. ಈ ಕೆಲವು ಚಿತ್ರಗಳು ಮಸೀದಿಯೊಳಗೆ ಇರಿಸಲಾಗಿರುವ ಮದ್ದುಗುಂಡುಗಳನ್ನು ತೋರಿಸುತ್ತಿದ್ದರೆ ಮತ್ತೊಂದು ಚಿತ್ರವು ನೆಲಮಾಳಿಗೆಯ ದಾರಿಯನ್ನು ತೋರಿಸುತ್ತಿದೆ.

ಮಕ್ಕಳ ಆಟವಾಡುವ ಪ್ರದೇಶದಂತೆ ಕಾಣುವ ಜಾಗದಲ್ಲಿ ಮಸೀದಿಯೊಳಗೆ ಎರಡು ಮಹಡಿಗಳಲ್ಲಿ ಮದ್ದುಗುಂಡುಗಳ ಚೀಲಗಳನ್ನು ಇರಿಸಿರುವುದನ್ನು ಫೋಟೋಗಳಲ್ಲಿ ಇಸ್ರೇಲಿ ಭದ್ರತಾ ಪಡೆಗಳು ತೋರಿಸಿವೆ. ನೆಲಮಾಳಿಗೆಯಿಂದ ಮದ್ದುಗುಂಡುಗಳನ್ನು ಸಾಗಿಸಲು ಮಸೀದಿಯೊಳಗೆ ಸಣ್ಣ ಕ್ರೇನ್ ಅನ್ನು ಸಹ ಅಳವಡಿಸಲಾಗಿದೆ. ಇಸ್ರೇಲಿ ಸೇನೆಯ ಈ ದಾಳಿಯಲ್ಲಿ ಒಬ್ಬ ವ್ಯಕ್ತಿಯ ಸಾವನ್ನು ಪ್ಯಾಲೆಸ್ತೀನ್ ಏಜೆನ್ಸಿಗಳು ಖಚಿತಪಡಿಸಿವೆ.

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಪ್ರಾರಂಭವಾದ ನಂತರವೂ ತುಲನಾತ್ಮಕವಾಗಿ ಶಾಂತಿಯುತವಾಗಿ ಉಳಿದಿರುವ ಪ್ರದೇಶದಲ್ಲಿ ಈ ಮಸೀದಿ ಇರೋದು ಅಚ್ಚರಿ ಮೂಡಿಸಿದೆ. ಇಸ್ರೇಲ್ ಗಾಜಾ ಪಟ್ಟಿಯನ್ನು ತನ್ನ ಎಲ್ಲಾ ದಾಳಿಗಳ ಪ್ರಮುಖ ಗುರಿಯನ್ನಾಗಿ ಮಾಡಿದೆ, ಆದರೆ ಈ ದಾಳಿ ಇದೀಗ ಪ್ಯಾಲೆಸ್ಟೈನ್‌ನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ನಡೆದಿದೆ.

ಇಸ್ರೇಲಿ ಭದ್ರತಾ ಪಡೆಗಳು ಈ ದಾಳಿಯಲ್ಲಿ ತನ್ನ ಅಮಾಯಕ ನಾಗರಿಕರ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಕೊಂದಿದ್ದೇವೆ ಎಂದು ಹೇಳಿವೆ. ಗುಪ್ತಚರ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಆದರೆ, ಹತರಾದ ಉಗ್ರರ ಸಂಖ್ಯೆ ಅಥವಾ ಅವರ ಹೆಸರು ಇತ್ಯಾದಿ ಮಾಹಿತಿಗಳನ್ನು ಇಸ್ರೇಲ್ ನೀಡಿಲ್ಲ.

ಈ ಇಸ್ರೇಲಿ ದಾಳಿಯ ನಂತರ, ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ, ಇದರಲ್ಲಿ ಮಸೀದಿಯ ಸುತ್ತಲೂ ಅವಶೇಷಗಳು ಹರಡಿಕೊಂಡಿದ್ದು ಜನರು ಆಂಬ್ಯುಲೆನ್ಸ್ ಕಡೆಗೆ ಓಡುತ್ತಿದ್ದಾರೆ.

ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 1,400 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರತೀಕಾರದಲ್ಲಿ ಇದುವರೆಗೆ 4,300 ಪ್ಯಾಲೆಸ್ತೀನ್ ಭಯೋತ್ಪಾದಕರು ಹತರಾಗಿದ್ದಾರೆ. ಎರಡೂ ಕಡೆ ಗಾಯಗೊಂಡವರ ಸಂಖ್ಯೆಯೂ ಸಾವಿರ ಸಂಖ್ಯೆಯನ್ನ ದಾಟಿದೆ.

ಮುಂದಿನ ದಿನಗಳಲ್ಲಿ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದ್ದು, ಇದಕ್ಕಾಗಿ ದಕ್ಷಿಣದ ಕಡೆಗೆ ತೆರಳುವಂತೆ ಗಾಜಾದ ನಾಗರಿಕರಿಗೆ ಸೂಚಿಸಿದೆ. ಇಸ್ರೇಲ್ ಶೀಘ್ರದಲ್ಲೇ ಗಾಜಾಗೆ ಸೈನ್ಯವನ್ನು ಕಳುಹಿಸುವ ಬಗ್ಗೆಯೂ ಯೋಚಿಸುತ್ತಿದೆ.

Advertisement
Share this on...