ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ಸತ್ಯನಾರಾಯಣ ಕಥಾ ಬಗ್ಗೆ ಕೆಟ್ಟ ಭಾಷೆ ಬಳಿಸಿದ್ದು ಬ್ರಾಹ್ಮಣರನ್ನು ಅವಹೇಳನ ಮಾಡಿ ನಿಂದಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜ್ಯ ಸರ್ಕಾರದಲ್ಲಿ ಮೈತ್ರಿ ಪಕ್ಷವಾಗಿರುವ ‘ಹಿಂದೂಸ್ತಾನಿ ಅವಾಮ್ ಮೋರ್ಚಾ (HAM)’ ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಆಗಿದ್ದಾರೆ. ಮಾಂಝಿ ಅವರ ಪುತ್ರ ಸಂತೋಷ್ ಸುಮನ್ ಬಿಹಾರ ಸರ್ಕಾರದಲ್ಲಿ ನೀರಾವರಿ ಇಲಾಖೆ ಹಾಗೂ ಎಸ್‌ಸಿ-ಎಸ್‌ಟಿ ಕಲ್ಯಾಣ ಇಲಾಖೆಯಲ್ಲಿ ಸಚಿವರಾಗಿದ್ದಾರೆ. ಬಿಹಾರದಲ್ಲಿ ಅವರ ಪಕ್ಷವು ಕೇವಲ 4 ಶಾಸಕರನ್ನು ಹೊಂದಿದೆ, ಅದರಲ್ಲಿ ಮಾಂಝಿ ಸ್ವತಃ ಇಮಾಮ್‌ಗಂಜ್‌ನಿಂದ ಗೆದ್ದಿದ್ದಾರೆ.
ಇದೀಗ ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಕೆಂಡಾಮಂಡಲವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದರಲ್ಲಿ ಅವರು ಮಾತನಾಡುತ್ತ, “ಬಾಬಾ ಅಂಬೇಡ್ಕರ್ ಅವರು 1956 ರಲ್ಲಿ ಸಾಯುವ ಮೊದಲು ಹಿಂದೂ ಧರ್ಮದ ತೊರೆದಿದ್ದರು. ಅವರು ಬೌದ್ಧ ಧರ್ಮಕ್ಕೆ ಹೋದರು, ನಂತರ ಅವರು ನಿಧನರಾದರು. ಹಿಂದೂ ಧರ್ಮ ಕೆಟ್ಟ ಧರ್ಮವಾಗಿದೆ ಎಂದರು. ಕ್ಷಮಿಸಿ, ಇಂದಿನ ದಿನಗಳಲ್ಲಿ ನಮ್ಮ ಬಡವರಲ್ಲೂ ಧರ್ಮದ ಶ್ರದ್ಧೆ ಹೆಚ್ಚು ಬರುತ್ತಿದೆ. ಸತ್ಯನಾರಾಯಣ ಪೂಜೆಯ ಹೆಸರು ನಮಗೆ ತಿಳಿದಿರಲಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದಲ್ಲಿ ಎಲ್ಲೆಡೆ ‘%%ಲಾ’ ಪೂಜಿಸಲಾಗುತ್ತದೆ” ಎಂದಿದ್ದಾರೆ.
ಮಾಂಝಿ ಮುಂದೆ ಮಾತನಾಡುತ್ತ, “ನಮ್ಮ ಬಳಿ ಈ ಹರಾಮಿ ಪಂಡಿತರು, ನಾವು ತಿನ್ನುವುದಿಲ್ಲ, ನಮಗೆ ನಗದು ದಕ್ಷಿಣೆ ಮಾತ್ರ ನೀಡಿ ಎಂದು ನಾಚಿಕೆಯಿಲ್ಲದೆ ಕೇಳ್ತಾವೆ” ಎಂದು ಅವರು ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕ ವೇದಿಕೆಯಿಂದ ಇಂತಹ ಭಾಷೆಯನ್ನು ಬಳಸಿದ್ದಾರೆ. ಆದರೆ ಅಲ್ಲಿದ್ದ ಜನ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸುವ ಬದಲು ಚಪ್ಪಾಳೆ ತಟ್ಟಿದರು. ಜಿತನ್ ರಾಮ್ ಮಾಂಝಿ ಅವರ ಪಕ್ಷವು ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ಇತ್ತೀಚೆಗಷ್ಟೇ ಮದ್ಯಪಾನ ನಿಷೇಧದ ಕುರಿತು ದಲಿತ ಸಮಾಜವು ಇದರ ದುಷ್ಪರಿಣಾಮ ಎದುರಿಸುತ್ತಿದೆ ಎಂದ ಅವರು, ಶೇ.60ರಷ್ಟು ಹಿರಿಯರು ರಾತ್ರಿ ವೇಳೆ ಮದ್ಯಪಾನ ಮಾಡುತ್ತಾರೆ ಎಂದಿದ್ದಾರೆ.
ब्राह्मणों पर मांझी का विवादित बयान
सत्य नारायण पूजा का नाम हम नहीं जानते थे लेकिन 'साला' अब हम लोगों के हर टोला में उनकी पूजा हो रही है
पंडित 'हरामी' आते हैं और कहते हैं कि हम खाएंगे नहीं, हमको नगद ही दे दीजिए"- मांझी@KirtiAzaad@shalabhmani@girirajsinghbjp@iChiragPaswan pic.twitter.com/gxo0fli8OE
— शुभम त्रिपाठी (@TheShubhamtv) December 19, 2021
HAM ಪಾರ್ಟಿ ಈಗ ಜಿತನ್ ರಾಮ್ ಮಾಂಝಿ ಹೇಳಿಕೆ ಬಳಿಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಆರಂಭಿಸಿದೆ. ಮಾಂಝಿ ಅವರ ಹೇಳಿಕೆಯನ್ನು ತಿರುಚಲಾಗುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ರಿಜ್ವಾನ್ ಹೇಳಿದ್ದಾರೆ. ಜಿತನ್ ರಾಮ್ ಮಾಂಝಿ ಅವರು ಹಾಗೆ ಹೇಳುತ್ತಿಲ್ಲ, ಆದರೆ ಬ್ರಾಹ್ಮಣರು ದಲಿತರ ಮನೆಗೆ ಹೋಗುತ್ತಾರೆ ಮತ್ತು ಅವರ ಸ್ಥಳದಲ್ಲಿ ಊಟ ತಿನ್ನುವುದಿಲ್ಲ, ಆದರೆ ಹಣ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಮಿಥಿಲೇಶ್ ತಿವಾರಿ, ಮಾಂಝಿ ತಲೆ ಕೆಟ್ಟಿದೆ ಎಂದಿದ್ದಾರೆ.
ಈ ಹೇಳಿಕೆಗೆ HAM ಮುಖ್ಯಸ್ಥರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅವರು ಮಾಡದಿದ್ದರೆ ಬ್ರಾಹ್ಮಣ ಸಮಾಜವು ಆಂದೋಲನ ಮಾಡಬೇಕಾಗುತ್ತದೆಣ ಇದನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಜೆಡಿಯು ವಕ್ತಾರ ನೀರಜ್ ಕುಮಾರ್ ಅವರು ಈ ಹೇಳಿಕೆಯನ್ನು ದುರದೃಷ್ಟಕರ ಎಂದು ಹೇಳಿದ್ದಾರೆ ಮತ್ತು ಇದು ಭಾರತೀಯ ಸಂವಿಧಾನದ ತಿರುಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಮತ್ತು ಯಾವುದೇ ಸಮಾಜವನ್ನು ಈ ರೀತಿ ನೋಯಿಸುವುದು ತಪ್ಪು ಎಂದು ಹೇಳಿದ್ದಾರೆ. ಈ ಹಿಂದೆ, ಮಾಂಝಿ ಶ್ರೀರಾಮನನ್ನು ಕಾಲ್ಪನಿಕ ಎಂದು ಹೇಳಿದ್ದರು ಮತ್ತು ವಾಲ್ಮೀಕಿ ರಾಮನಿಗಿಂತ ‘ಸಾವಿರಾರು ಪಟ್ಟು ದೊಡ್ಡ ಸಂತ’ ಎಂದು ಹೇಳಿದ್ದರು.
ಆದರೆ, ಹೇಳಿಕೆಯ ವಿವಾದ ಮತ್ತು ವಿಡಿಯೋ ವೈರಲ್ ಆದ ನಂತರ ಜಿತನ್ ರಾಮ್ ಮಾಂಝಿ ಅವರು ಆ ಪದವನ್ನು ಬ್ರಾಹ್ಮಣರಿಗಾಗಿ ಅಲ್ಲ ಸಮಾಜಕ್ಕಾಗಿ ಬಳಸಿದ್ದೇನೆ ಎಂದು ಕ್ಷಮೆಯಾಚಿಸಿದ್ದಾರೆ. ಬಿಹಾರದ ರಸ್ತೆ ಮತ್ತು ಸಾರಿಗೆ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ನಬಿನ್ ಸಿನ್ಹಾ ಅವರು ಮಾಂಝಿ ಅವರನ್ನು ಹಿರಿಯ ನಾಯಕ ಎಂದು ಬಣ್ಣಿಸುತ್ತಾ, ಅವರು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ. ಆರ್‌ಜೆಡಿ ಮುಖಂಡ ಮೃತ್ಯುಂಜಯ್ ತಿವಾರಿ ಮಾತನಾಡಿ, ಬಿಜೆಪಿ-ಆರ್‌ಎಸ್‌ಎಸ್ ಮಡಿಲಲ್ಲಿ ಕೂತು ಅವರ ಭಾಷೆ ಹೀಗಿದೆ. ಈ ಹೇಳಿಕೆ ವಿರುದ್ಧ ‘ರಾಷ್ಟ್ರೀಯ ಬ್ರಾಹ್ಮಣ ಮಹಾಸಭಾ, ಪರಶುರಾಮ ಸೇವಾ ಸಂಸ್ಥಾನ’ದ ವಕ್ತಾರ ರಜನೀಶ್ ಕುಮಾರ್ ತಿವಾರಿ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.