ದೆಹಲಿ ಹುತಾತ್ಮ ರಿಂಕು ಶರ್ಮಾಗಾಗಿ ಹರಿದುಬಂತು ಇಷ್ಟು ಲಕ್ಷ ಹಣ, 1 ಕೋಟಿ ಮಾಡಿಯೇ ಸಿದ್ಧ ಎಂದ ಬಿಜೆಪಿ ಶಾಸಕ ಕಪಿಲ್ ಮಿಶ್ರಾ

in Kannada News/News 237 views

ನವದೆಹಲಿ: ಕೆಲ ದಿನಗಳ ಹಿಂದೆ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ಲ್ಯಾಬ್ ಟೆಕ್ನಿಶಿಯನ್ ರಿಂಕು ಶರ್ಮಾ ಹ-ತ್ಯೆ ಪ್ರ-ಕರಣ-ದ ತ-ನಿ-ಖೆ-ಯನ್ನು ಕ್ರೈಂ ಬ್ರ್ಯಾಂಚ್ ಗೆ ಒಪ್ಪಿಸಲಾಗಿದೆ ಎಂದು ದೆಹಲಿ ಪೊ-ಲೀಸ-ರು ಶನಿವಾರ ಮಾಹಿತಿ ನೀಡಿದ್ದಾರೆ. 25 ವರ್ಷದ ರಿಂಕು ಶರ್ಮಾ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ತಡರಾತ್ರಿ ಅವರನ್ನು ಕೆಲ ಜನರು (ಶಾಂತಿದೂತರು) ಇ-ರಿ-ದು ಕೊ-ಲೆ ಮಾಡಿದ್ದರು. ಈ ಸಂದರ್ಭದಲ್ಲಿ, ರಿಂಕು ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನದ ಮೂಲಕ ಹಣ ಸಂಗ್ರಹಿಸುತ್ತಿದ್ದ ಆದರೆ ಇತರ ಸಮುದಾದ ಜನರಿಗೆ ಇದು ಸಹಿಸಲಾಗಲಿಲ್ಲ ಹಾಗು ಅವರು ರಿಂಕುನನ್ನ ಕೊಂ-ದ-ರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮತ್ತೊಂದೆಡೆ, ಬುಧವಾರ ತಡರಾತ್ರಿ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ವಾದದ ನಂತರ ರಿಂಕು ಶರ್ಮಾನ ಮೂವರು ಸ್ನೇಹಿತರಿಂದ ಕೊ-ಲೆ ಮಾಡಲಾಗಿದೆ ಎಂದು ಪೊ-ಲೀಸ-ರು ಹೇಳಿದ್ದಾರೆ. ಪ್ರಸ್ತುತ, ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಈ ಪ್ರಕರಣದಲ್ಲಿ ರಿಂಕು ಶರ್ಮಾ ಅವರ ಕುಟುಂಬಕ್ಕೆ ಹಣಕಾಸಿನ ನೆರವು ನೀಡಲು ಹಣವನ್ನು ಸಂಗ್ರಹಿಸಲು ಅಭಿಯಾನ ನಡೆಸುತ್ತಿದ್ದಾರೆ.

ಈ ಅಭಿಯಾನದ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಮಿಶ್ರಾ ಈ ಮಾಹಿತಿಯನ್ನ ನೀಡಿದ್ದು ರಿಂಕು ಶರ್ಮಾ ಕುಟುಂಬಕ್ಕಾಗಿ ಇದುವರೆಗೆ 36 ಲಕ್ಷ ಫಂಡ್ ಕಲೆಕ್ಟ್ ಮಾಡಲಾಗಿದೆ. ಅಷ್ಟೇ ಅಲ್ಲ ಜನ ಕೂಡ ಈ ಅಭಿಯಾನದಲ್ಲಿ ಕೈ ಜೋಡಿಸುತ್ತ ದೇಣಿಗೆ ನೀಡುತ್ತಿದ್ದಾರೆ. ಮತ್ತೊಂದೆಡೆ ಚಲನಚಿತ್ರ ನಿರ್ಮಾಪಕ ಮನೀಶ್ ಕುಂದ್ರಾ ಕೂಡ ಈ ಅಭಿಯಾನದಲ್ಲಿ 5 ಲಕ್ಷ ರೂ.ಗಳ ಸಹಾಯಹಸ್ತ ಚಾಚಿದ್ದಾರೆ.

Advertisement

ಕಪಿಲ್ ಮಿಶ್ರಾ ರವರು ಟ್ವೀಟ್ ಒಂದನ್ನ ಮಾಡಿದ್ದು ಅದರಲ್ಲಿ, “31 ಲಕ್ಷ + 5 ಲಕ್ಷ ಮನೀಷ್ ಮುಂದ್ರಾ ಜೀ ರವರಿಂದ, ಇಲ್ಲಿಯವರೆಗೆ 36 ಲಕ್ಷ ಕಲೆಕ್ಟ್ ಆಗಿದೆ. ರಿಂಕು ಶರ್ಮಾ ಕುಟುಂಬವನ್ನು ನಾನು ಸೋಮವಾರದಂದು ಭೇಟಿಯಾಗಲಿದ್ದೇನೆ, ಸೋಮವಾರದಚರೆಗೆ ನಾವು 1 ಕೋಟಿ ಮಾಡಬಹುದೇ? ರಿಂಕು ತನ್ನ ಮನೆಯ ಏಕೈಕ ಆಧಾರ ಸ್ಥಂಬವಾಗಿದ್ದ, ಅವರು ನಮಗಾಗಿ ಬಲಿದಾನ ಮಾಡಿದ್ದಾರೆ” ಎಂದು ಬರೆದಿದ್ದಾರೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಕಪಿಲ್ ಮಿಶ್ರಾ ರವರ ಈ ಅಭಿಯಾನದಲ್ಲಿ ಸಾಕಷ್ಟು ಜನ ಕೈ ಜೋಡಿಸುತ್ತಿದ್ದಾರೆ. 5 ಲಕ್ಷ ಆರ್ಥಿಕ ಸಹಾಯ ನೀಡಿದ ಮನೀಷ್ ಮುಂದ್ರಾ ಟ್ವೀಟ್ ಮಾಡುತ್ತ, “90 ಲಕ್ಷ ತಲುಪಿದ ಬಳಿಕ ಹೇಳಿ, ನಾನು ಇನ್ನುಳಿದ 10 ಲಕ್ಷ ರೂ.ಗಳನ್ನೂ ಕೊಡುತ್ತೇನೆ” ಎಂದಿದ್ದಾರೆ. ಬಿಜೆಪಿ ಶಾಸಕ ಕಪಿಲ್ ಮಿಶ್ರಾ ರವರು ರಿಂಕು ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಆರ್ಥಿಕ ಸಹಾಯ ಮಾಡಲು ಇಚ್ಛಿಸಿದ್ದಾರೆ. ಅಂಥದ್ರಲ್ಲಿ ಇದು 90 ಲಕ್ಷ ತಲುಪಿದ ಬಳಿಕ ಉಳಿದ 10 ಲಕ್ಷವನ್ನೂ ನೀಡುವುದಾಗಿ ಮನೀಷ್ ಮುಂದ್ರಾ ಹೇಳಿದ್ದಾರೆ.

Advertisement
Share this on...