“ಹಣೆಯ ಮೇಲೆ ಸಿಂಧೂರ, ಕೊರಳಲ್ಲಿ ತಾಳಿ, ಯಾವ ತೈಮೂರ್ ಗಾಗಲಿ, ಔರಂಗಜೇಬ್ ನಿಗಾಗಲಿ ತಾಯಿಯಾಗಲ್ಲ, ಸನಾತನ ಸಂಸ್ಕೃತಿಯತ್ತ ಸಾಗುತ್ತ….”

in Kannada News/News/ಸಿನಿಮಾ 847 views

ಇತ್ತೀಚೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ ಅವರನ್ನು ರಾಜಸ್ಥಾನದಲ್ಲಿ ವಿವಾಹವಾದರು, ಈ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಇದೀಗ ಹರಿಯಾಣ ಬಿಜೆಪಿ ಉಸ್ತುವಾರಿ ಅರುಣ್ ಯಾದವ್ ಅವರ ಬಗ್ಗೆ ಟ್ವೀಟ್ ಮಾಡಿದ್ದು, ಆ ಟ್ವೀಟ್ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಅರುಣ್ ಯಾದವ್ ತಮ್ಮ ಟ್ವೀಟ್‌ನಲ್ಲಿ, “ಕೊರಳಲ್ಲಿ ಮಂಗಳಸೂತ್ರ, ಹಣೆಯಲ್ಲಿ ಸಿಂಧೂರ, ಸೌಮ್ಯವಾದ ನಗು… ಈಕೆಯನ್ನ ಗೇಲಿ ಮಾಡುವ ಬದಲು, ಈಕೆಯ ಹಳೆಯ ಇತಿಹಾಸವನ್ನ ಮರೆತು ಸ್ವಾಗತಿಸಿ ಏಕೆಂದರೆ ಈಕೆ ಯಾವುದೇ ತೈಮೂರ್ ಅಥವಾ ಔರಂಗಜೇಬ್‌ನ ತಾಯಿಯಾಗುವುದಿಲ್ಲ.” ಎಂದಿದ್ದಾರೆ.

Advertisement

ಇದರೊಂದಿಗೆ ಅವರು ಕತ್ರಿನಾ ಕೈಫ್ ಅವರ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ‘ಲೈವ್ ಹಿಂದೂಸ್ತಾನ್’ ಸುದ್ದಿ ಪ್ರಕಾರ, ಸೆಲೆಬ್ರಿಟಿಗಳು ತಮ್ಮ ಚಿತ್ರಗಳನ್ನು ಹಿಟ್ ಮಾಡಲು ಮತ್ತು ತಮ್ಮನ್ನು ತಾವು ಸದಾ ಸುದ್ದಿಯಲ್ಲಿ ಇರಿಸಿಕೊಳ್ಳಲು ತಮ್ಮ ಲವ್ ಲೈಫ್ (ಪ್ರೇಮ ಜೀವನ) ವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ ಆದರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದರು. ಆದಾಗ್ಯೂ, ಬಾಲಿವುಡ್‌ನಲ್ಲಿ ಮದುವೆಗಳಿಂದ ಸುದ್ದಿ ಗಿಟ್ಟಿಸಿಕೊಂಡು ಅಟೆನ್ಶನ್ ಪಡೆದುಕೊಳ್ಳುವ ಟ್ರೆಂಡ್ ಇದೆ. ಇತ್ತೀಚೆಗೆ, ಕತ್ರಿನಾ ಕೈಫ್ ತನ್ನ ಕೈಗಳ ಮೆಹಂದಿಯನ್ನು ತೋರಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಇಬ್ಬರೂ ಮುಂಬೈನ ಜುಹು ನಲ್ಲಿ ಅಪಾರ್ಟ್‌ಮೆಂಟ್ ಕೂಡ ತೆಗೆದುಕೊಂಡಿದ್ದಾರೆ. ವಿಕ್ಕಿ ಕೌಶಲ್ ಅವರ ಪೋಷಕರಾದ ಸ್ಯಾಮ್ ಕೌಶಲ್ ಮತ್ತು ವೀಣಾ ಕೌಶಲ್ ತಮ್ಮ ಕಾರಿನಲ್ಲಿ ತಮ್ಮ ಹೊಸ ಅಪಾರ್ಟ್ಮೆಂಟ್ಗೆ ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಎರಡೂ ಕುಟುಂಬಗಳು ಅಪಾರ್ಟ್‌ಮೆಂಟ್ ಗೆ ಮೊದಲು ಪಂಡಿತರನ್ನ ಕರೆದರು ಮತ್ತು ಮನೆಯಲ್ಲಿ ಅವರ ಮೂಲಕ ಪೂಜೆ ಮಾಡಿಸಿದರು. ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಮದುವೆಯಾದ ನಂತರ ಇಬ್ಬರೂ ಮುಂಬೈನ ಜುಹು ಪ್ರದೇಶದಲ್ಲಿರುವ ಈ ಅಪಾರ್ಟ್‌ಮೆಂಟ್ ಗೆ ಶಿಫ್ಟ್ ಆದರು, ಈ ಅಪಾರ್ಟ್‌ಮೆಂಟ್ ನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕೆಲಸ ನಡೆಯುತ್ತಿತ್ತು. ಈ 4BHK ಅಪಾರ್ಟ್ಮೆಂಟ್ 5000 ಚದರ ಅಡಿಗಳದ್ದಾಗಿದ್ದು, ಅಲ್ಲಿಂದ ಬೀಚ್ ಸಹ ಗೋಚರಿಸುತ್ತದೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಈ ಮನೆಗೆ 1.75 ಕೋಟಿ ರೂಪಾಯಿಗಳನ್ನು ಡೆಪಾಸಿಟ್ ಮಾಡಿದ್ದಾರೆ ಮತ್ತು ಮುಂದಿನ 36 ತಿಂಗಳಿಗೆ ತಿಂಗಳಿಗೆ 8 ಲಕ್ಷ ಬಾಡಿಗೆಯನ್ನೂ ಡೆಪಾಸಿಟ್ ಠೇವಣಿ ಮಾಡಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಹನಿಮೂನ್‌ನಿಂದ ಹಿಂದಿರುಗಿದ ನಂತರ, ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ‘ಬಧಾಯಿ ಹೋ’ಗೆ ವಿಕ್ಕಿ ಕೌಶಲ್ ಕೂಡ ಉತ್ತರಿಸಿದ್ದಾರೆ. ವಿಕ್ಕಿ ಕೌಶಲ್ ಈಗ ಸಾರಾ ಅಲಿ ಖಾನ್ ಜೊತೆ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುವೆಯ ನಂತರ ಪತಿ ವಿಕ್ಕಿ ಕೌಶಲ್ ಜೊತೆ ಹೊಸ ಮನೆಗೆ ಪ್ರವೇಶಿಸಿದ್ದಾರೆ. ಇದಕ್ಕೂ ಮುನ್ನ ಗೃಹ ಪ್ರವೇಶದ ಪೂಜೆಯನ್ನು ಮನೆಯಲ್ಲಿ ಮಾಡಲಾಗಿದ್ದು, ಅವರ ಕುಟುಂಬದವರೂ ಇದ್ದರು. ಮುಂಬೈನ ಜುಹುದಲ್ಲಿ ನವ ದಂಪತಿಗಳು ಈ ಮನೆಯನ್ನು ತೆಗೆದುಕೊಂಡಿದ್ದಾರೆ. ಭಾನುವಾರ (ಡಿಸೆಂಬರ್ 19) ಗೃಹ ಪ್ರವೇಶ ನಡೆದಿದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಂಡಿತರೊಬ್ಬರು ಮನೆಗೆ ಬರುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದಾದ ನಂತರ ಪೂಜೆ ಹಾಗೂ ಗೃಹಪ್ರವೇಶ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕಾರ್ಯಕ್ರಮದ ನಂತರ ಅವರ ಕುಟುಂಬ ಸದಸ್ಯರು ಕಾರಿನಿಂದ ಇಳಿಯುತ್ತಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ವಿಕ್ಕಿಯ ಪೋಷಕರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.

Advertisement
Share this on...