“ದಿನವೀಡೀ ಅಳುತ್ತಲೇ ಇರ್ತಿತ್ತು ಒಂದು ತಿಂಗಳ ಮಗು, ಇದನ್ನ ಸಹಿಸೋಕಾಗದೆ ಮಗುವನ್ನ ಗೊಡೆಗೆ ಬಡಿದು….” ಇಂಥಾ ತಾಯಂದಿರು ಇರ್ತಾರೆ ನೋಡಿ

in Kannada News/News 778 views

ಒಬ್ಬ ತಾಯಿಗೆ ಅವಳ ಮಗುವೇ ಇಡೀ ಜಗತ್ತು. ಮಗುವಿನ ಖುಷಿಗಾಗಿ ತಾಯಿ ಯಾವ ಮಟ್ಟಕ್ಕೂ ಹೋಗಬಹುದು. ತಾಯಿಗೆ ತನ್ನ ಮಗುವಿನ ಕಣ್ಣಿನಲ್ಲಿ ಒಂದು ಹನಿ ಕಣ್ಣೀರು ಕೂಡ ನೋಡಲು ಆಗುವುದಿಲ್ಲ. ಮಗು ಅಳುತ್ತಿದ್ದರೆ ರಾತ್ರಿಯಿಡೀ ಎಚ್ಚರಗೊಂಡಿದ್ದು ಮಗುವನ್ನ ಸಮಾಧಾನಪಡಿಸುತ್ತಾಳೆ. ಮಗುವಿನ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಆಸ್ಪತ್ರೆಗಳಿಗೆ ಓಡೋಡಿ ಹೋಗುತ್ತಾಳೆ. ಹಗಲಿರುಳು ಮಗುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ.

Advertisement

ಆದರೆ ಇಂದು ನಾವು ನಿಮಗೆ ತಿಳಿಸಲು ಹೊರಟಿರುವುದು ಕಲಿಯುಗದ ಕ್ರೂರ ತಾಯಿಯೊಬ್ಬಳ ಬಗ್ಗೆ. ಈ ತಾಯಿ ತನ್ನ ಮಗುವಿನ ಅಳುವಿನಿಂದ ಬೇಸತ್ತು ಮಗುವಿನ ತಲೆಯನ್ನು ಗೋಡೆಗೆ ಬಡಿದು ಕೊಂ ದಿ ದ್ದಾಳೆ. ಮಹಿಳೆಗೆ 21 ವರ್ಷ ವಯಸ್ಸಾಗಿದ್ದು, 45 ವರ್ಷದ ಬಾಯ್ ಫ್ರೆಂಡ್ ಕೂಡ ಇದ್ದಾನೆ. ಬನ್ನಿ ಈ ದುಃಖ ಮತ್ತು ಆಘಾತಕಾರಿ ಸುದ್ದಿಯನ್ನು ನಿಮಗೆ ವಿವರವಾಗಿ ತಿಳಿಸುತ್ತೇವೆ.

ಮಗು ಅಳುತ್ತಲೇ ಇರುತ್ತೆ ಅಂತ ಗೋಡೆಗೆ ಬ ಡಿ ದು ಕೊಂ ದ ತಾಯಿ

ನಿಜಕ್ಕೂ ಈ ಹೃದಯವಿದ್ರಾವಕ ಪ್ರಕರಣ ಕೇರಳದ ಪಥಾನಾಮಥಿಟ್ಟಾ ದ್ದಾಗಿದೆ. ಡಿಸೆಂಬರ್ 9 ರಂದು ಈ ಘಟನೆ ನಡೆದಿದೆ. 21 ವರ್ಷದ ತಾಯಿಯೊಬ್ಬಳು ತನ್ನ 27 ದಿನದ ಮಗುವಿನ ಅಳುವಿನಿಂದ ಬೇಸತ್ತಿದ್ದಳು. ಮಗು ಅವಧಿಗೂ ಮುನ್ನವೇ ಜನಿಸಿತ್ತು. ಮಗು ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿತ್ತು. ಅದೇ ಕಾರಣಕ್ಕಾಗಿ ಅದು ಪ್ರತಿ ಕ್ಷಣವೂ ಅಳುತ್ತಲೇ ಇರುತ್ತಿತ್ತು. ಮಗುವಿನ ಆ ಅಳುವನ್ನ ನೋಡಿ ತಾಯಿಗೆ ಕಿರಿಕಿರಿಯಾಗುತ್ತಿತ್ತು. ಹೀಗಿರುವಾಗ ಗುರುವಾರ (ಡಿಸೆಂಬರ್ 9) ಮಗು ತುಂಬಾ ಅಳುತ್ತಿರೋದನ್ನ ನೋಡಿದ ತಾಯಿ ಮಗುವಿನ ತಲೆಯನ್ನು ಗೋ ಡೆ ಗೆ ಬಡಿದಿದ್ದಾಳೆ.

ಆಸ್ಪತ್ರೆಯಲ್ಲಿ ಅಸುನೀಗಿದ ಕಂದಮ್ಮ

ಮಗುವಿನ ತಲೆ ಗೋಡೆಗೆ ಬಡಿದ ನಂತರ ಮಗುವಿನ ಸ್ಥಿತಿ ಹದಗೆಟ್ಟಿದೆ. ರಾತ್ರಿ 11 ಗಂಟೆಗೆ ಮಗುವನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರಿಗೆ ಮಗುವನ್ನ ತೋರಿಸಿ ಮನೆಗೆ ಕರೆತರಲಾಯಿತು. ಆದರೆ ಮರುದಿನ ಮಗುವಿನ ಸ್ಥಿತಿ ಮತ್ತೆ ಗಂಭೀರವಾಯಿತು. ಬಳಿಕ‌ ಮಗುವನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಇಲ್ಲಿ ಅಮಾಯಕ ಹಸುಗೂಸಿ ಕೊನೆಯುಸಿರೆಳೆದಿತ್ತು ಹಾಗು ವೈದ್ಯರು ಮಗು ಇನ್ನಿಲ್ಲ ಎಂದು ಕುಟುಂಬಸ್ಥರಿಗೆ ತಿಳಿಸಿದರು.

ಕ್ರೂ ರಿ ತಾಯಿಯ ಕೃತ್ಯ ಬಯಲಾಗಿದ್ದು ಹೀಗೆ

ಚರ್ಚ್ ನಡೆಸುತ್ತಿರುವ ಫಾದರ್ ಜೋಜಿ ಥಾಮಸ್ ಹೇಳಿಕೆ ನೀಡಿ ಪೊಲೀಸರ ಬಳಿ ಪ್ರಕರಣ ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಅದೇ ಚರ್ಚ್‌ನ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅದೇ ಚರ್ಚ್ ನಲ್ಲಿ ಆಕೆಗೆ 45 ವರ್ಷದ ಬಾಯ್ ಫ್ರೆಂಡ್ ಇದ್ದು ಆತನೂ ಅಲ್ಲೇ ವಾಸಿಸುತ್ತಾನೆ. ಈ ಮಗು ಅವನದ್ದೇ ಆಗಿದೆ. ಡಿಸೆಂಬರ್ 10 ರಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು, ನಂತರ ಮಗುವಿನ ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಮಹಿಳೆಗಿದ್ದಾನೆ ವಿವಾಹಿತ ಬಾಯ್ ಫ್ರೆಂಡ್

ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪೊಲೀಸರು ಮಗುವಿನ ಪೋಷಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಮಹಿಳೆ ಹಾಗೂ ಆಕೆಯ ಪ್ರಿಯಕರನ ನಡುವೆ ಫೋನ್ ಮೂಲಕ ಸಂಪರ್ಕವಾಗಿತ್ತು ಎಂಬುದು ಪೊಲೀಸರಿಗೆ ತಿಳಿದು ಬಂದಿದೆ. ಇಬ್ಬರೂ ಪ್ರೀತಿಸಿದಾಗ, ಆಶ್ರಮದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಮಹಿಳೆಯ ಪ್ರೇಮಿ ಈಗಾಗಲೇ ಮದುವೆಯಾಗಿದ್ದಾನೆ. ಮಹಿಳೆಗೆ ಈ ಬಗ್ಗೆ ಮೊದಲೇ ತಿಳಿದಿತ್ತಾದರೂ ಆತನನ್ನ ಪ್ರೀತಿಸುತ್ತಿದ್ದಳು.

ತಾಯಿಯನ್ನ ಅರೆಸ್ಟ್ ಮಾಡಿದ ಪೋಲಿಸರು

ಪೊಲೀಸರು ಮಹಿಳೆಯನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಮಗುವಿನ ತಲೆಯನ್ನು ಗೋಡೆಗೆ ಹೊಡೆದಿರುವುದನ್ನು ಒಪ್ಪಿಕೊಂಡಿದ್ದಾಳೆ. ಮಗು ಅಸ್ವಸ್ಥಗೊಂಡು ದಿನವಿಡೀ ಅಳುತ್ತಿರುವುದಕ್ಕೆ ಬೇಸತ್ತಿದ್ದರಿಂದ ತಾನು ಕೋಪದಿಂದ ಹಾಗೆ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮಹಿಳೆಯ ಹೇಳಿಕೆಯ ನಂತರ, ಮಗುವಿನ ಹ ತ್ಯೆ ಗಾಗಿ ಪೊಲೀಸರು ಆಕೆಯನ್ನ ಬಂಧಿಸಿದ್ದಾರೆ.

Advertisement
Share this on...