10 ವರ್ಷದ ಹಿಂದೆ ತನ್ನ ಸಾವು ಹೇಗಾಗಿತ್ತು, ತನ್ನ ಮನೆ, ಊರು ಎಲ್ಲಿದೆ ಎಂಬುದನ್ನ ತಿಳಿಸಿದ 4 ವರ್ಷದ ಬಾಲಕಿ: ಆಕೆಯ ಮಾತನ್ನ ಕೇಳಿ ಆ ಹಳ್ಳಿಗೆ ಹೋದಾಗ ತಂದೆ ತಾಯಿಗೆ ಕಾದಿತ್ತು ಬಿಗ್ ಶಾಕ್

in Uncategorized 34,686 views

Shocking Rebirth Story in Rajasthan: ರಾಜಸ್ಥಾನದ ರಾಜ್‌ಸಮಂದ್‌ನ ನಾಥದ್ವಾರದ ಪಕ್ಕದಲ್ಲಿರುವ ಪರವಾಲ್ ಗ್ರಾಮದ ನಿವಾಸಿ 4 ವರ್ಷದ ಕಿಂಜಾಲ್ ಚುಂದಾವತ್ (Kinjal Chundawat Rajsamand) ರಾಜ್‌ಸಮಂದ್ ಪುನರ್ಜನ್ಮ ಪಡೆದಿದ್ದಾಳೆ. ಅವಳು ತನ್ನನ್ನು ತಾನ ಉಷಾ ಎಂದು ಕರೆದುಕೊಳ್ಳುತ್ತಿದ್ದಾಳೆ. ತನ್ನ ತಂದೆ ತಾಯಿ ಮತ್ತು ಸಹೋದರ ಸೇರಿದಂತೆ ಇಡೀ ಕುಟುಂಬವು ಪಿಪ್ಲಾಂತ್ರಿಯಲ್ಲಿ ವಾಸಿಸುತ್ತಿದೆ. ತನ್ನ ಗಂಡನ ಮನೆಯವರು ಓಡಿಯನ್‌ನಲ್ಲಿದ್ದಾರೆ ಎಂದು ಕಿಂಜಾಲ್ ಹೇಳುತ್ತಾಳೆ. ಬಾಲಕಿಯ ಮಾತಿಗೆ ಪೋಷಕರಿಂದ ಹಿಡಿದು ಸಂಬಂಧಿಕರು, ಗ್ರಾಮಸ್ಥರು ಬೆರಗಾದರು. ಬಾಲಕಿ ತಮ್ಮ ಹಿಂದಿನ ಜನ್ಮದ ಬಗ್ಗೆ ಹೇಳಿದ್ದ ಪ್ರತಿಯೊಂದು ವಿಷಯಗಳು ಮತ್ತು ಸ್ಟೋರಿ ಕೂಡ ನಿಜವೇ ಆಗಿತ್ತು. ಕಳೆದ ಒಂದು ವರ್ಷದಿಂದ, ಕಿಂಜಾಲ್ ತನ್ನ ಸಹೋದರನನ್ನು ಭೇಟಿಯಾಗುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಳು. ಆರಂಭದಲ್ಲಿ, ಆಕೆಯ ಪೋಷಕರು ಕಿಂಜಾಲ್ ಮಾತನ್ನ ನಂಬಲಿಲ್ಲ, ಆದರೆ ನಂತರ ತಮ್ಮ ಗ್ರಾಮದಿಂದ 30 ಕಿಮೀ ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮಕ್ಕೆ ಈ ಸುದ್ದಿಯನ್ನು ತಿಳಿಸಿದರು.

ಕಿಂಜಲ್‌ಳ ಈ ಕಥೆ ಪಿಪ್ಲಾಂತ್ರಿಯ ಪಂಕಜ್‌ಗೆ ತಿಳಿದಾಗ ಆತ ಪರವಾಲ್‌ಗೆ ಬಂದನು. ಪಂಕಜ್ ಉಷಾಳ (ಈಗಿನ ಕಿಂಜಲ್) ಸಹೋದರ. ಪಂಕಜ್ ಆಕೆಯನ್ನ ನೋಡಿದ ತಕ್ಷಣ ಕಿಂಜಲ್‌ಳ ಖುಷಿಗೆ ಪಾರವೇ ಇರಲಿಲ್ಲ. ಪಂಕಜ್ ತನ್ನ ಫೋನಿನಲ್ಲಿದ್ದ ತಾಯಿ ಮತ್ತು ಉಷಾ ಫೋಟೋ ತೋರಿಸಿದಾಗ ಕಿಂಜಲ್ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಬಳಿಕ, ಕಿಂಜಲ್ ತನ್ನ ತಾಯಿ ಮತ್ತು ಅಜ್ಜ ಸೇರಿದಂತೆ ತನ್ನ ಕುಟುಂಬದೊಂದಿಗೆ ಪಿಪ್ಲಾಂತ್ರಿಗೆ ಹೋದಳು. ಕಿಂಜಲ್ ಏನೇಲ್ಲಾ ಹೇಳಿದ್ದಳೋ ಅದೆಲ್ಲವೂ ನೂರಕ್ಕೆ ನೂರರಷ್ಟು ಸತ್ಯವಾಗಿತ್ತು. ಉಷಾ 10 ವರ್ಷಗಳ ಹಿಂದೆ ಆಕಸ್ಮಿಕವಾದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಳು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಿಂಜಲ್‌ಳ ಘಟನೆಯ ನಂತರ ಎರಡು ಕುಟುಂಬಗಳ ನಡುವೆ ವಿಶಿಷ್ಟವಾದ ಸಂಬಂಧ ಏರ್ಪಟ್ಟಿತ್ತು.

ರಾಜಸ್‌ಮಂದ್, ರಾಜಸ್ಥಾನ: ರಾಜಸ್ಥಾನದ ರಾಜ್‌ಸಮಂದ್‌ನಲ್ಲಿ 4 ವರ್ಷದ ಬಾಲಕಿಯೊಬ್ಬಳು ತನ್ನ ಪುನರ್ಜನ್ಮದ ಬಗ್ಗೆ ಹೇಳಿಕೊಂಡಿದ್ದಾಳೆ. ಬಾಲಕಿಯ ಮಾತಿಗೆ ಪೋಷಕರಿಂದ ಹಿಡಿದು ಸಂಬಂಧಿಕರು, ಗ್ರಾಮಸ್ಥರು ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಬಾಲಕಿ ತನ್ನ ಹಿಂದಿನ ಜನ್ಮದ ಬಗ್ಗೆ ಹೇಳುತ್ತಿರುವ ವಿಷಯಗಳು ಮತ್ತು ಕಥೆಗಳು ಸತ್ಯ ಸಾಬೀತಾಗಿವೆ. ಹಿಂದಿನ ಜನ್ಮದಲ್ಲಿ ತಾನು ಯಾವಾಗ ಮತ್ತು ಹೇಗೆ ಸತ್ತಳು ಎಂದು ಬಾಲಕಿ ಎಲ್ಲವನ್ನೂ ಹೇಳಿದ್ದಾಳೆ. ಆದರೆ ನಾಲ್ಕು ವರ್ಷದ ಬಾಲಕಿಯಾಗಿರುವ ಕಾರಣ ಆಕೆಯ ಮಾತುಗಳು ಇನ್ನೂ ತೊದಲು ನುಡಿಗಳಲ್ಲೇ ಆಡುತ್ತಾಳೆ. ಪರವಾಲ್ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರದ ಪಕ್ಕದಲ್ಲಿರುವ ಹಳ್ಳಿಯಾಗಿದೆ. ಇಲ್ಲಿ ರತನ್ ಸಿಂಗ್ ಚುಂದಾವತ್ ಅವರಿಗೆ 5 ಹೆಣ್ಣು ಮಕ್ಕಳಿದ್ದಾರೆ. ಅವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ. ಕಳೆದ ಒಂದು ವರ್ಷದಿಂದ, ಅವರ ಕಿರಿಯ ಮಗಳು, ಅಂದರೆ 4 ವರ್ಷದ ಕಿಂಜಲ್, ತನ್ನ ಸಹೋದರನನ್ನು ಭೇಟಿಯಾಬೇಕು ಎಂದು ಪದೇ ಪದೇ ಕೇಳುತ್ತಿದ್ದಳು.

ಕಿಂಜಲ್ ಅವರ ಅಜ್ಜ ರಾಮ್ ಸಿಂಗ್ ಚುಂದಾವತ್ ಅವರು ಮೊದ ಮೊದಲು ಆಕೆಯ ಮಾತುಗಳ ಬಗ್ಗೆ ಗಮನ ಹರಿಸಲಿಲ್ಲ, ಆದರೆ ಎರಡು ತಿಂಗಳ ಹಿಂದೆ ಒಮ್ಮೆ ಕಿಂಜಲ್ ಅವರ ತಾಯಿ ದುರ್ಗಾ ಕಿಂಜಲ್‌ಗೆ “ನಿನ್ನ ತಂದೆ ಇಷ್ಟೊತ್ತಾದರೂ ಬಂದಿಲ್ಲ ಅವರಿಗೆ ಫೋನ್ ಮಾಡು” ಎಂದು ಹೇಳಿದಾಗ ಇದಕ್ಕೆ ಕಿಂಜಲ್, ತನ್ನ ತಂದೆ ಪಿಪ್ಲಾಂತ್ರಿ ಗ್ರಾಮದಲ್ಲಿದ್ದಾರೆ ಎಂದು ಹೇಳಿದಳು. ಹೌದು ಉಷಾ ಎಂಬ ಮಹಿಳೆ ಆಕಸ್ಮಿಕ ಅಗ್ನಿ ಅಘಡದಲ್ಲಿ ಸಾವನ್ನಪ್ಪಿದ ಅದೇ ಪಿಪ್ಲಾಂತ್ರಿ ಗ್ರಾಮದವಳಾಗಿದ್ದಳು. ಪ್ರಸ್ತುತ ಈ ಗ್ರಾಮ ಕಿಂಜಲ್ ಗ್ರಾಮದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ಈಗ ಕಿಂಜಲ್ ತನ್ನನ್ನ ತಾನು ಉಷಾ ಎಂದು ಹೇಳಿಕೊಳ್ಳುತ್ತಿದ್ದಾಳೆ.

ಜನ ಹೇಳಿದ್ದೇನು?

ಉಷಾ ಹತ್ತು ವರ್ಷಗಳ ಹಿಂದೆ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಳು ಎಂದು ಪಿಪ್ಲಾಂತ್ರಿ ಗ್ರಾಮದ ಜನರು ಹೇಳುತ್ತಾರೆ. ಇಲ್ಲಿಂದ ಕಿಂಜಲ್‌ಳ ಪುನರ್ಜನ್ಮದ ಕಥೆ ಆರಂಭವಾಗುತ್ತದೆ. ಕಿಂಜಲ್‌ಳ ಮಾತುಗಳಿಂದ ಇಡೀ ಕುಟುಂಬವೇ ಒಂದು ಕ್ಷಣ ದಂಗಾಯಿತು. ಕಿಂಜಲ್ ಗೆ ತನ್ನ ಪೂರ್ವ ಜನ್ಮದ ತಾಯಿ ದುರ್ಗಾಳ ಬಗ್ಗೆ ಪದೇ ಪದೇ ಪ್ರಶ್ನಿಸಿದಾಗ, ಕಿಂಜಲ್ ತನ್ನ ಪೋಷಕರು ಮತ್ತು ಸಹೋದರ ಸೇರಿದಂತೆ ಇಡೀ ಕುಟುಂಬವು ಪಿಪ್ಲಾಂತ್ರಿಯಲ್ಲಿ ವಾಸಿಸುತ್ತಿದೆ ಎಂದು ಹೇಳುತ್ತಾಳೆ. ತಾನು 10 ವರ್ಷಗಳ ಹಿಂದೆ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ್ದೆ ಎಂದು ಹೇಳುತ್ತಾಳೆ. ತನ್ನ ಕುಟುಂಬದಲ್ಲಿ ಇಬ್ಬರು ಒಡಹುಟ್ಟಿದವರಿದ್ದಾರೆ. ಅಪ್ಪ ಟ್ರಾಕ್ಟರ್ ಓಡಿಸುತ್ತಾನೆ. ಗಂಡನ ಮನೆ ಓಡನ್‌ ನಲ್ಲಿದೆ ಎಂದು ಕಿಂಜಲ್ ಹೇಳುತ್ತಾಳೆ.

ಕಿಂಜಲ್‌ನ ಈ ಕಥೆ ಪಿಪ್ಲಾಂತ್ರಿಯ ಪಂಕಜ್‌ಗೆ ತಿಳಿದಾಗ ಆತ ಪರವಾಲ್‌ಗೆ ಬಂದನು. ಪಂಕಜ್ ಉಷಾಳ (ಈಗಿನ ಕಿಂಜಲ್) ಸಹೋದರ. ಪಂಕಜ್ ಆಕೆಯನ್ನ ನೋಡಿದ ತಕ್ಷಣ ಕಿಂಜಲ್‌ಳ ಖುಷಿಗೆ ಪಾರವೇ ಇರಲಿಲ್ಲ. ಪಂಕಜ್ ತನ್ನ ಫೋನಿನಲ್ಲಿದ್ದ ತಾಯಿ ಮತ್ತು ಉಷಾ ಫೋಟೋ ತೋರಿಸಿದಾಗ ಕಿಂಜಲ್ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಬಳಿಕ, ಕಿಂಜಲ್ ತನ್ನ ತಾಯಿ ಮತ್ತು ಅಜ್ಜ ಸೇರಿದಂತೆ ತನ್ನ ಕುಟುಂಬದೊಂದಿಗೆ ಪಿಪ್ಲಾಂತ್ರಿಗೆ ಹೋದಳು.

ಉಷಾಳ (ಹಿಂದಿನ ಜನ್ಮದಲ್ಲಿ ತೀರಿಕೊಂಡಿದ್ದ ಮಹಿಳೆ) ಗ್ರಾಮಕ್ಕೂ ಹೋದ ಕಿಂಜಲ್

ಕಿಂಜಲ್ ನಮ್ಮ ಗ್ರಾಮಕ್ಕೆ ಬಂದಾಗ ಆಕೆ ಅನೇಕ ವರ್ಷಗಳಿಂದ ಇಲ್ಲಿಯೇ ಇದ್ದಳೇನೋ ಎಂಬಂತೆ ಅನಿಸಿತು ಎಂದು ಉಷಾ ಅವರ ತಾಯಿ ಗೀತಾ ಪಲಿವಾಲ್ ತಿಳಿಸಿದ್ದಾರೆ. ಹಿಂದಿನ ಜನ್ಮದಲ್ಲಿ ತನಗೆ ಪರಿಚಯವಿದ್ದ ಗ್ರಾಮದ ಹೆಂಗಸರ ಜೊತೆ ಮಾತಾಡಿದಳು. ಉಷಾ ಇಷ್ಟಪಟ್ಟ ಹೂವಿನ ಬಗ್ಗೆಯೂ ಕಿಂಜಲ್ ಆ ಹೂವು ಈಗ ಎಲ್ಲಿದೆ ಎಂದು ಕೇಳಿದಳು. ಆಗ ಅದನ್ನು 7-8 ವರ್ಷಗಳ ಹಿಂದೆ ತೆಗೆದಿರುವುದಾಗಿ ಹೇಳಿದ್ದೇವೆ. 2013 ರಲ್ಲಿ ತನ್ನ ಮಗಳು ಉಷಾ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗ್ಯಾಸ್ ಸ್ಟೌವ್‌ ಬಸ್ಟ್ ಆಗಿ ಸಾವನ್ನಪ್ಪಿದ್ದಳು ಎಂದು ಗೀತಾ ಹೇಳಿದ್ದಾರೆ. ಉಷಾಗೂ ಇಬ್ಬರು ಮಕ್ಕಳಿದ್ದಾರೆ.

ಈ ಘಟನೆಯ ನಂತರ, ಕಿಂಜಲ್ ಮತ್ತು ಉಷಾ ಅವರ ಕುಟುಂಬದ ನಡುವೆ ಒಂದು ಅನನ್ಯ ಸಂಬಂಧ ಏರ್ಪಟ್ಟಿತು. ಕಿಂಜಲ್ ತನ್ನ ಕುಟುಂಬದ ಪ್ರಕಾಶ್ ಮತ್ತು ಹಿನಾ ಅವರೊಂದಿಗೆ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಾರೆ. ಉಷಾ ಅವರ ತಾಯಿ ಮಾತನಾಡುತ್ತ, “ನಮಗೂ ಉಷಾಳೊಂದಿಗೇ ಮಾತನಾಡುತ್ತಿರುವಂತೆ ಅನಿಸುತ್ತದೆ. ಉಷಾ ಕೂಡ ಬಾಲ್ಯದಲ್ಲಿ ಹೀಗೆಯೇ ಮಾತನಾಡುತ್ತಿದ್ದಳು” ಎನ್ನುತ್ತಾರೆ.

ಆದರೆ, ಕಿಂಜಲ್ ಇನ್ನೂ ಚಿಕ್ಕವಳಾದ್ದರಿಂದ ಆಕೆಗೆ ಸರಿಯಾಗಿ ಮಾತ‌ನಾಡಲೂ ಬರುವುದಿಲ್ಲ ಆದರೆ ಸನ್ನೆಗಳಲ್ಲಿ ಉಷಾಳ ಕುಟುಂಬದವರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ. ಕಿಂಜಲ್ ಅವರ ಸಂಬಂಧಿಕರು ಕಿಂಜಲ್‌ಗೆ ಕಾಯಿಲೆ ಇರಬಹುದು ಎಂದು ವೈದ್ಯರ ಬಳಿಗೆ ಕರೆದೊಯ್ದಿದ್ದರು, ಆದರೆ ವೈದ್ಯರು ಕಿಂಜಲ್‌ಗೆ ಯಾವುದೇ ಸಮಸ್ಯೆ ಇಲ್ಲ ಆಕೆ ಸಂಪೂರ್ಣವಾಗಿ ಆರೋಗ್ಯವಂತಳು ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಕೆಲವು ಮಕ್ಕಳು ತಮ್ಮ ಹಿಂದಿನ ಜನ್ಮದ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ ಎನ್ನುತ್ತಾರೆ ತಜ್ಞ ವೈದ್ಯರು.

Advertisement
Share this on...