“ಒಂದು ನಾಯಿ ಕೂಡ ಮೂಸಿ ನೋಡದಂತಹ ನಟನನ್ನ ಜನ ಅದ್ಹೇಗೆ ಬಾಯ್‌ಕಾಟ್ ಮಾಡೋಕೆ ಸಾಧ್ಯ? ಅರ್ಜುನ್ ಕಪೂರ್‌ನ್ನ ಬಾಯ್‌ಕಾಟ್ ಮಾಡಬೇಡಿ ಅವನ ಫಿಲಂ‌ ಪೋಸ್ಟರ್ ಕಂಡಲ್ಲಿ ಉಚ್ಚೆ ಮಾಡಿ, ಹಃ ಹಃ ಹಃ 😂”: ಬಾಲಿವುಡ್ ನಟ

in Uncategorized 117 views

ಬಾಲಿವುಡ್ ಚಿತ್ರಗಳ ಬಾಯ್‌ಕಾಟ್ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದ ನಟ ಅರ್ಜುನ್ ಕಪೂರ್ ಈಗ ಎಲ್ಲ ಕಡೆಯಿಂದಲೂ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸಾರ್ವಜನಿಕರಿಗೆ ಜನರಿಗೆ ಬೆದರಿಕೆ ಹಾಕುವ ಬದಲು ತಮ್ಮ ನಟನೆಯತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಚಲನಚಿತ್ರ ನಟ-ವಿಮರ್ಶಕ ಕಮಲ್ ರಶೀದ್ ಖಾನ್ (ಕೆಆರ್‌ಕೆ) ಅರ್ಜುನ್ ಕಪೂರ್ ಅವರನ್ನು ಗೇಲಿ ಮಾಡಿದ್ದಾರೆ ಮತ್ತು ನಾಯಿ ಕೂಡ ಚಿತ್ರ ನೋಡಲು ಹೋಗದ ನಟನನ್ನು ಜನ ಹೇಗೆ ಬಾಯ್‌ಕಾಟ್ ಮಾಡ್ತಾರೆ? ಎಂದು ಹೇಳಿದ್ದಾರೆ.

Advertisement

ಕೆಆರ್‌ಕೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 8 ನಿಮಿಷ 29 ಸೆಕೆಂಡುಗಳ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ಅವರು ಅರ್ಜುನ್ ಕಪೂರ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅರ್ಜುನ್ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ಸಾರ್ವಜನಿಕರು ಅಮೀರ್ ಖಾನ್ ಚಿತ್ರವನ್ನು ಬಾಯ್‌ಕಾಟ್ ಮಾಡಿದರೆ ಅದು ಅರ್ಥವಾಗುತ್ತದೆ. ಶಾರುಖ್ ಖಾನ್ ಚಿತ್ರಕ್ಕೆ ಬಹಿಷ್ಕಾರ ಹಾಕಿದರೆ ಅರ್ಥವಾಗುತ್ತದೆ. ಆದರೆ ಅರ್ಜುನ್ ಕಪೂರ್ ಅವರಂತಹ ಸೂಪರ್-ಡ್ಯೂಪರ್ ಗ್ರೇಟ್ ಫ್ಲಾಪ್ ನಾಯಕನನ್ನು ನೀವು ಹೇಗೆ ಅವಮಾನಿಸುತ್ತೀರಿ. ಆತನ ಅಂತಹ ಕಳಪೆ ಚಿತ್ರವನ್ನು ನೀವು ಹೇಗೆ ಬಾಯ್‌ಕಾಟ್ ಮಾಡುತ್ತೀರ? ನಾಯಿ ಕೂಡ ನೋಡಲು ಹೋಗದ ನಟನ ಚಿತ್ರವನ್ನು ನೀವು ಹೇಗೆ ಬಾಯ್‌ಕಾಟ್ ಮಾಡಬಲ್ಲಿರಿ?” ಎಂದಿದ್ದಾರೆ.

ಕೆಆರ್‌ಕೆ ಇಲ್ಲಿಗೆ ನಿಲ್ಲುವುದಿಲ್ಲ, ಅವರು ಮುಂದೆ ಮಾತನಾಡುತ್ತ, “ಪಬ್ಲಿಕ್ ವರುಣ್ ಧವನ್ ಚಿತ್ರಕ್ಕೆ ಬಾಯ್‌ಕಾಟ್ ಮಾಡಿದರೆ ನಾನು ಒಪ್ಪುತ್ತೇನೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ಚಿತ್ರಗಳ ಬಾಯ್‌ಕಾಟ್ ಮಾಡ್ತಾರೆ ಅಂದರೂ ಅದನ್ನ ಅರ್ಥ ಮಾಡಿಕೊಳ್ಳಬಹುದು. ಆದರೆ ನಿಮ್ಮಂತಹ ಲಕ್ಖೇ (ಕೆಲಸಕ ಬಾರದವನ) ಚಿತ್ರವನ್ನು ಸಾರ್ವಜನಿಕರ‌್ಯಾಕೆ ಬಾಯ್‌ಕಾಟ್ ಮಾಡ್ತಾರೆ?” ಎಂದಿದ್ದಾರೆ. ನೀವು ಸಂಪೂರ್ಣ ವೀಡಿಯೊವನ್ನು ಕೆಳಗೆ ವೀಕ್ಷಿಸಬಹುದು.

ಅರ್ಜುನ್ ಕಪೂರ್ ಅವರನ್ನು ಗೇಲಿ ಮಾಡಿದ ಕೆಆರ್‌ಕೆ ಈ ವೀಡಿಯೊದಲ್ಲಿ, “ಭಾಯಿಜಾನ್! ಈಗ ನೀವು ಈ ಸಾರ್ವಜನಿಕರಿಗೆ ಪಾಠ ಕಲಿಸಿ. ಈ ಪಬ್ಲಿಕ್‌ನ್ನ ಬಿಡಬೇಡಿ ಭಾಯಿಜಾನ್, ಈಗ ನಿಮ್ಮ ಚಲನಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಬದಲು, ಅದನ್ನು ನೇರವಾಗಿ YouTube ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿ ಭಾಯಿಜಾನ್. ಯೂಟ್ಯೂಬ್‌ನಲ್ಲಿ ಚಲನಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಲಭ್ಯವಿದ್ದರೆ, ನೀವು ಅದನ್ನು ಖಂಡಿತವಾಗಿ ನೋಡುತ್ತೀರಿ ಮತ್ತು ಅದನ್ನು ನೋಡಿದ ನಂತರ ನೀವು ಹುಚ್ಚರಾಗುತ್ತೀರಿ ಎಂಬುದು ಸ್ಪಷ್ಟವಾಗಿದೆ. ಪಬ್ಲಿಕ್ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಭಾಯಿಜಾನ್!” ಎಂದಿದ್ದಾರೆ.

ಅವರು ಮುಂದೆ ಮಾತನಾಡುತ್ತ, “ಅರ್ಜುನ್ ಕಪೂರ್ ಹೀರೋನಂತೆ ಕಾಣ್ತಾನಾ? ಅರ್ಜುನ್ ಕಪೂರ್ ಗೆ ಆ್ಯಕ್ಟಿಂಗ್ ಬರುತ್ತಾ? ಅರ್ಜುನ್ ಕಪೂರ್‌ನಲ್ಲಿ ನಟನ ಒಂದಾದರೂ ಕ್ವಾಲಿಟಿಗಳಿವೆಯಾ? ಅದಕ್ಕಾಗಿಯೇ ನೀವು ಅರ್ಜುನ್ ಕಪೂರ್ ಅವರ ಚಿತ್ರವನ್ನು ಬಾಯ್‌ಕಾಟ್ ಮಾಡಬೇಡಿ, ಬದಲಿಗೆ ಅರ್ಜುನ್ ಕಪೂರ್‌ನ ಚಿತ್ರದ ಪೋಸ್ಟರ್ ಎಲ್ಲಿ ಕಂಡರೂ ನಿಂತು ಮೂತ್ರ ವಿಸರ್ಜನೆ ಮಾಡಿ” ಎಂದಿದ್ದಾರೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಅರ್ಜುನ್ ಕಪೂರ್ ಅವರನ್ನು ಫ್ಲಾಪ್ ಮತ್ತು ಹತಾಶ ನಟ ಎಂದು ಕರೆದಿದ್ದರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಇನ್ನೊಂದು ಧರ್ಮದ ಮೇಲೆ ಸಿನಿಮಾ ಮಾಡುವ ಧೈರ್ಯವಿಲ್ಲ ಎಂದು ಹೇಳಿದ್ದರು. ಬಾಯ್‌ಕಾಟ್ ಬಗ್ಗೆ ಮೌನವಹಿಸಿ ನಾವು ತಪ್ಪು ಮಾಡಿದೆವು ಮತ್ತು ಅದು ನಮ್ಮ ಮರ್ಯಾದೆ ಎಂದು ನಾನು ಭಾವಿಸುತ್ತೇನೆ, ಆದರೆ ಜನರು ಅದರ ಲಾಭವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದು ಅರ್ಜುನ್ ಕಪೂರ್ ಹೇಳಿದ್ದರು.

Advertisement
Share this on...