ಕಳೆದ ಆಗಷ್ಟ್ 5 ರಂದು ಪ್ರಭು ಶ್ರೀರಾಮನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ಸಿಗರು ರಾಜೀವ್ ಗಾಂಧಿ ಮೊಟ್ಟ ಮೊದಲ ಬಾರಿಗೆ ರಾಮಮಂದಿರದ ಬೀಗ ತೆರೆಸಿದ್ದರು, ಅವರು ರಾಮಮಂದಿರ ನಿರ್ಮಾಣದ ಪರವಾಗಿದ್ದರು ಎಂದು ಹೇಳಿದ್ದರು. ಹೀಗೆ ಹೇಳಿ ಕಾಂಗ್ರೆಸ್ ತಾನೂ ಹಿಂದುಗಳ ಪರವಾಗಿದ್ದೇವೆ ಅಂತ ತೋರಿಸಿಕೊಳ್ಳಲು ಪ್ರಯತ್ನಿಸಿತ್ತು.
ಅಷ್ಟೇ ಅಲ್ಲ ಸ್ವಾತಂತ್ರ್ಯದ ಬಳಿಕ ಸೋಮನಾಥ ಮಂದಿರದ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ರವರ ಮಹಾನ್ ವಿಚಾರಗಳು ಹಾಗು ಸರ್ದಾರ್ ಪಟೇಲರು ಸೋಮನಾಥ ಮಂದಿರದ ನಿರ್ಮಾಣಕ್ಕಾಗಿ ಶ್ರಮಿಸಿದ್ದು ಎಲ್ಲರಿಗೂ ಗೊತ್ತು. ಸೋಮನಾಥ ಮಂದಿರವನ್ನ ನಿರ್ಮಾಣ ಮಾಡಲು ಸರ್ಕಾರದ ಹಣ ಬಳಕೆಯಾಗಬಾರದು ಎಂದು ನೆಹರು ಹೇಳಿದ್ದೆಲ್ಲದರ ಬಗ್ಗೆಯೂ ದಾಖಲೆಗಳಿವೆ. ಕಾಂಗ್ರೆಸಿನ ಹಿಂ-ದೂ ವಿರೋಧಿ ನೀತಿಗಳ ಬಗ್ಗೆಯಂತೂ ಎಲ್ಲರಿಗೂ ತಿಳಿದಿದೆ. ಈ ಮಧ್ಯೆ ಇಂದಿರಾ ಗಾಂಧಿ ಕೂಡ ದೇಶವನ್ನ ನೆಹರು ಬಳಿಕ ಅತಿ ಹೆಚ್ಚು ಬಾರಿ ಪ್ರಧಾನಿಯಾಗಿ ಆಳಿದ್ದ ವಿಚಾರವೂ ನಿಮಗೆ ಗೊತ್ತು. ಇಂದಿರಾ ಗಾಂಧಿಯ ವಿಚಾರಧಾರೆಗಳು ಹೇಗಿದ್ದವು ಅನ್ನೋದನ್ನ ಇಂದಿರಾ ಪ್ರಧಾನಮಂತ್ರಿಯಾಗಿದ್ದಾಗ ವಿದೇಶಾಂಗ ಸಚಿವರಾಗಿದ್ದ ಕುಂವರ್ ನಟವರ್ ಸಿಂಗ್ ಬಹಿರಂಗಪಡಿಸಿದ್ದರು.
ವಾಸ್ತವವಾಗಿ, ಆಗಸ್ಟ್ 1969 ರಲ್ಲಿ, ಇಂದಿರಾ ಗಾಂಧಿ ಅಫ್ಘಾನಿಸ್ತಾನದ ಕಾಬೂಲ್ ಗೆ ಭೇಟಿ ನೀಡಿದಾಗ, ಅವರ ಜೊತೆ ರಾಜೀವ್ ಗಾಂಧಿ ಕೂಡ ಉಪಸ್ಥಿತಿರಿದ್ದರು. ಅಲ್ಲಿ ಅವರು 1947 ರ ನಂತರ ಖಾನ್ ಅಬ್ದುಲ್ ಗಫಾರ್ ಖಾನ್ ಅವರನ್ನು ಭೇಟಿಯಾಗಿದ್ದರು. ಈ ಕಾಬೂಲ್ ಪ್ರವಾಸದಲ್ಲಿ ನಟ್ವರ್ ಸಿಂಗ್ ಕೂಡ ಹಾಜರಿದ್ದರು. ಊಟ ಮುಗಿದಿತ್ತು, ಮಧ್ಯಾಹ್ನದಲ್ಲಿ ಯಾವುದೇ ಕಾರ್ಯಕ್ರಮಗಳು ಇರದಿದ್ದರಿಂದ ಇಂದಿರಾ ಗಾಂಧಿ ತಮ್ಮ ಜೊತೆ ಕಾರಿನಲ್ಲಿ ಒಂದು ಜಾಗಕ್ಕೆ ಹೋಗಲು ನಿರ್ಧರಿಸಿದರು.
ಕಾಬುಲ್ ನಿಂದ ಕೆಲ ಮೈಲುಗಳಷ್ಟು ದೂರದಲ್ಲಿ ಒಂದು ಕಟ್ಟಡ ಕಂಡಿತು, ಆ ಕಟ್ಟಡ ಸಂಪೂರ್ಣವಾಗಿ ಪೊದೆಗಳಿಂದ ಆವೃತವಾಗಿತ್ತು. ಆಗ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಇದೇನು? ಅಂತ ಕೇಳಿದರು. ಆಗ ಉತ್ತರಿಸಿದ ಸಿಬ್ಬಂದಿಗಳು ಇದು ಬಾಗ್-ಎ-ಬಾಬರ್ ಅಂದರೆ ಬಾಬರ್‌ನ ಮಕಬರಾ ಅಂತ ಹೇಳಿದರು. ಅದು ಬಾಬರ್‌ನ ಸಮಾಧಿ ಅಂತ ಗೊತ್ತಾದ ಕೂಡಲೇ ಶ್ರೀಮತಿ ಇಂದಿರಾ ಗಾಂಧಿ ಬಾಬರ್‌ನ ಸಮಾಧಿಗೆ ಹೋಗಲು ನಿರ್ಧರಿಸದರು. ಆದರೆ ಅವರ ಈ ನಿರ್ಣಯ ಪ್ರೋಟೋಕಾಲ್ ವಿಭಾಗಕ್ಕೆ ತಲೆನೋವಾಗಿ ಪರಿಣಮಿಸಿತು. ಕಾರಣ ಆ ಜಾಗವಿರುವ ವ್ಯಾಪ್ತಿಯಲ್ಲಿ ಇಂದಿರಾ ಗಾಂಧಿಯವರಿಗೆ ಭದ್ರತೆ ಒದಗಿಸಿರಲಿಲ್ಲ.
ಆದರೂ ಇಂದಿರಾ ಗಾಂಧಿಯವರು ಬಾಬರ್‌ನ ಸಮಾಧಿಯ ಬಳಿ ತೆರಳಿದರು ಮತ್ತು ಬಾಬರ್‌ನ ಸಮಾಧಿಯ ಎದುರು ತಲೆ ಬಾಗಿಸಿ ನಿಂತರು. ನಾನು (ನಟವರ್ ಸಿಂಗ್) ಅವರ ಹಿಂದೆಯೇ ನಿಂತಿದ್ದೆ. ತಲೆ ಬಾಗಿಸಿ ನಿಂತ ಇಂದಿರಾ ಗಾಂಧಿಯವರು “ನಾನು ಇತಿಹಾಸವನ್ನ ಈಗ ನೆನಪು ಮಾಡಿಕೊಳ್ಳುತ್ತಿದ್ದೇನೆ. ನೀವು ಹಾಗು ನಮ್ಮ ಪೂರ್ವಜರು ಕಂಡ ಕನಸನ್ನ ನಾನು ಈಡೇರಿಸಿದ್ದೇನೆ” ಎಂದರು. ಆಗ ನಾನು “ನನಗೆ ಎರಡು ಇತಿಹಾಸ ನೆನಪು ಮಾಡಿಕೊಳ್ಳುತ್ತಿದ್ದೇನೆ” ಎಂದೆ. ಆಗ ಮಾತನಾಡಿದ ಇಂದಿರಾ ಗಾಂಧಿ, “ಬಾಬರ್‌ಗೆ ಶೃದ್ಧಾಂಜಲಿ ಸಲ್ಲಿಸಿದ್ದು ನನಗೆ ನಿಜಕ್ಕೂ ಗರ್ವದ ವಿಷಯ” ಎಂದು ಹೇಳಿದ್ದರು ಎಂದು ನಟ್ವರ್ ಸಿಂಗ್ ಈಗ ಬಹಿರಂಗಪಡಿಸಿದ್ದಾರೆ.
ಅಷ್ಟಕ್ಕೂ ಬಾಬರ್‌ಗೂ ನೆಹರೂ ಕುಟುಂಬಕ್ಕೂ ಸಂಬಂಧವಾದರೂ ಏನು? ಬಾಬರ್ ಸಮಾಧಿಯ ಎದುರು ನಿಂತು ಇಂದಿರಾ ಗಾಂಧಿ ನಿಮ್ಮ ಆಸೆಯನ್ನ ಈಡೇರಿಸಿದ್ದೇನೆ ಅಂತ ಹೇಳಿದ್ದಾದರೂ ಯಾಕೆ? ಅಷ್ಟಕ್ಕೂ ಬಾಬರ್‌ನ ಆಸೆ ಏನಾಗಿತ್ತು? ಅದನ್ನ ಇಂದಿರಾ ಗಾಂಧಿ ಈಡೇರಿಸಿದ್ದಾದರೂ ಏನು?
– Vinod Hindu Nationalist