ಇರಾಕ್ನಲ್ಲಿ ನಡೆದ ಬೈಕ್ ರೇಸ್ ಇವೆಂಟ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕ ಹಾಗು ಟೈಟ್ ಡ್ರೆಸ್ ಧರಿಸಿ ಇಲ್ಲಿಗೆ ಬೈಕ್ ರೇಸ್ ನೋಡಲು ಬಂದಿದ್ದ ಯುವತಿಯ ಮೇಲೆ ಕಟ್ಟರಪಂಥೀಯ ಮುಸ್ಲಿಮರು ದಾ-ಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಯುವತಿ ವಯಸ್ಸು ಕೇವಲ 17 ವರ್ಷಗಳು. ಆಕೆಯ ಬಟ್ಟೆ ನೋಡುತ್ತಲೇ ಜಿಹಾದಿಗಳು ಆಕೆಯ ಮೇಲೆ ದಾ-ಳಿ ನಡೆಸುತ್ತ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಡಿಸೆಂಬರ್ 30, 2022 ರಂದು ನಡೆದಿದೆ. ಈ ಪ್ರಕರಣದಲ್ಲಿ 16 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Iraq: A girl was sexuaIIy assauIted by dozens MusIim Kurds in Sulimanaya as she was watching a motorcycle rally!pic.twitter.com/2Z915SttOR
— Azzad Alsalem (@AzzatAlsaleem) December 30, 2022
ಮಾಹಿತಿಯ ಪ್ರಕಾರ, ಇರಾಕ್ನ ಕುರ್ದಿಸ್ತಾನ್ನ ಸುಲೈಮಾನಿಯಾ ನಗರದಲ್ಲಿ ಯುವತಿಯ ಮೇಲೆ ದಾ-ಳಿ ನಡೆದಿದೆ. ಬೈಕ್ ರೇಸ್ ವೀಕ್ಷಿಸಲು ಬಾಲಕಿ ತೆರಳಿದ್ದಳು ಎಂದು ಹೇಳಲಾಗುತ್ತಿದ್ದು, ಅಲ್ಲಿ ಮಹಿಳೆಯರು ಬರಬಾರದು ಎಂಬ ಬೇಡಿಕೆ ಇತ್ತು. ವಿಡಿಯೋ ನೋಡಿದ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವೈರಲ್ ವಿಡಿಯೋದಲ್ಲಿ, ಹುಡುಗಿ ಕಂದು ಬಣ್ಣದ ಟಾಪ್, ಕಾರ್ಡಿಜನ್ ಮತ್ತು ಸ್ಕರ್ಟ್ ಧರಿಸಿರುವುದನ್ನು ನೀವು ನೋಡಬಹುದು. ಆಕ್ರೋಶಭರಿತ ಜನರಿಂದ ಜೀವ ಉಳಿಸಿಕೊಳ್ಳಲು ಆಕೆ ಓಡುತ್ತಿರುವುದನ್ನ ವಿಡಿಯೋದಲ್ಲ ಕಾಣಬಹುದು. ಆದರೆ ಬೈಕ್ ರೇಸ್ ಇವೆಂಟ್ ನಲ್ಲಿ ನೂರಾರು ಮೂಲಭೂತವಾದಿ ಮುಸ್ಲಿಮರು ಇರಾಕಿ ಹುಡುಗಿಯನ್ನು ನೋಡಿ ಜೋರಾಗಿ ಕೂಗುತ್ತಿದ್ದಾರೆ. ಆಕೆಯನ್ನ ಬೆನ್ನಟ್ಟುತ್ತಿದ್ದಾರೆ. ಈ ಸಮಯದಲ್ಲಿ, ಹುಡುಗಿ ತುಂಬಾ ಹೆದರಿದ್ದಾಳೆ. ಅವಳು ಅಲ್ಲಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಾಳೆ, ಆದರೆ ಜನರು ಆಕೆಯನ್ನ ನಾಲ್ಕೂ ಕಡೆಯಿಂದ ಸುತ್ತುವರೆದರು. ಒಬ್ಬ ವ್ಯಕ್ತಿ ಆಕೆಯನ್ನ ಹಿಂದಿನಿಂದ ಒದೆಯುತ್ತಿರುವುದನ್ನು ಸಹ ಕಾಣಬಹುದು. ಈ ಮಧ್ಯೆ, ಒಬ್ಬ ಯುವಕ ಆಕೆಯನ್ನ ಜನರಿಂದ ರಕ್ಷಿಸಲು ಬೈಕಿನಲ್ಲಿ ಬಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ ಗುಂಪಿನಿಂದ ಆಕೆಯನ್ನ ರಕ್ಷಿಸುತ್ತಾನೆ.
She was able to escape from them. pic.twitter.com/g9YEfEjSq3
— Azzad Alsalem (@AzzatAlsaleem) December 30, 2022
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಅಲ್ಲಿದ್ದ ಇಸ್ಲಾಮಿಕ್ ಕಟ್ಟರಪಂಥೀಯ ಗುಂಪು ಯುವತಿಯ ಅವಮಾನ ಮಾಡಿದರು, ಥಳಿಸಿದರು ಇದರಿಂದ ಆಕೆಗೆ ಗಾಯಗಳಾಗಿವೆ. ಈ ಮಧ್ಯೆ ಯುವತಿಯನ್ನ ಬಚಾವ್ ಮಾಡಲು ಬಂದ ಯುವಕನಿಗೆ ಚಾ-ಕು ಇರಿಯಲಾಗಿದೆ ಎಂದು ಹೇಳಲಾಗುತ್ತಿದೆ.
ئێرە سلێمانییە، جاران پێی ئەوترا پایتەختی رۆشنبیری، بەس ئێستا هەموو ئازادییەکان نامۆن پێی. لە سلێمانی سەما قەدەغەیە، چوونە دەرەوەی کچ قەدەغەیە، هەموو ئازادییەکان هێدی هێدی بەرەو قەدەغە بوون ئەچن. بەداخەوە.
— Dilan Sirwan (@DeelanSirwan) December 30, 2022
ದಾ-ಳಿ-ಯಲ್ಲಿ ಭಾಗಿಯಾಗಿದ್ದ 16 ಮಂದಿಯನ್ನು ಬಂಧಿಸಲಾಗಿದೆ ಎಂದು ಸುಲೈಮಾನಿಯಾ ಪೊಲೀಸ್ ಮುಖ್ಯಸ್ಥ ಸರ್ಕಾವತ್ ಅಹ್ಮದ್ ತಿಳಿಸಿದ್ದಾರೆ. ಕುರ್ದಿಸ್ತಾನ್ ಪ್ರಾದೇಶಿಕ ಸರ್ಕಾರವು ದಾ-ಳಿ-ಯನ್ನು ಖಂಡಿಸಿ ಹೇಳಿಕೆಯನ್ನು ನೀಡುತ್ತ, ಇದು ಅಸಹ್ಯಕರ ಎಂದು ಕರೆದಿದೆ. ಸುಲೈಮಾನಿಯಾ ಪ್ರಾಂತ್ಯದಲ್ಲಿ ಈ ವಾರ ಮತ್ತೊಂದು ದಾ-ಳಿ ನಡೆದಿದೆ ಎಂದು ಅವರು ಹೇಳಿದರು. ಏತನ್ಮಧ್ಯೆ, ವಕ್ತಾರ ಜೋಟಿಯಾರ್ ಆದಿಲ್, “ಈ ಘಟನೆಗಳು ಸ್ವೀಕಾರಾರ್ಹವಲ್ಲ” ಎಂದು ಹೇಳಿದರು.
Sulaimani police says they have arrested 16 in connection to the attack on a girl yesterday.
The video of the incident has gone viral and has led to widespread condemnation. pic.twitter.com/9BGDj71Pxq
— Kurdistan Watch (@KurdistanWatch) December 31, 2022
ಕುರ್ದಿಷ್ ಮಾಧ್ಯಮಗಳ ಪ್ರಕಾರ, ಮಹಿಳೆಯರು, ಯುವತಿಯರು ಇವೆಂಟ್ಗೆ ಬಂದರೆ ಅವರ ಬಟ್ಟೆಗಳು ಬೈಕ್ ರೇಸರ್ ಗಳ ಗಮನ ಯುವತಿಯರತ್ತ ಸೆಳೆಯುವಂತೆ ಮಾಡುತ್ತೆ ಹಾಗಾಗಿ ಬೈಕ್ ರೇಸ್ ಈವೆಂಟ್ನಿಂದ ಮಹಿಳೆಯರನ್ನು ಹೊರಗಿಡಬೇಕು ಎಂದು ಪುರುಷರು ಒತ್ತಾಯಿಸಿದ್ದರು. ಹುಡುಗಿಯರು ಇಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಾರದು, ಮಹಿಳೆಯೆರ ಡ್ರೆಸ್ ನಿಂದಾಗಿ ಹಾಗು ಅವರು ಇಲ್ಲಿ ಬಂದಿದ್ದರಿಂದ ಜನರ ಗಮನ ರೇಸ್ ನ ಮೇಲಿರದೆ ಮಹಿಳೆಯರೆಡೆ ತಿರುಗಿತ್ತು ಎಂದು ಯುವತಿಯ ಮೇಲೆ ದಾ-ಳಿ ನಡೆಸಿರುವ ಯುವಕರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ಯೂಸರ್ ಗಳು ಶೇರ್ ಮಾಡಿರುವ ಈ ವಿಡಿಯೋ ಬಗ್ಗೆ ದೇಶದ ಹಿರಿಯ ನಾಯಕರಿಗೂ ಮೆನ್ಶನ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಕುರ್ದಿಸ್ತಾನ್ ಸಂಸತ್ತಿನ ಸ್ಪೀಕರ್ ರೆವಾಜ್ ಫಾಕ್ ಮಾತನಡಿ ಇದು ಮೂರ್ಖ ದಾಳಿ ಎಂದು ಕರೆದಿದ್ದಾರೆ. ಈ ದಾಳಿಯು ನಮ್ಮ ದೇಶದ ಮಹಿಳೆಯರ ಮೇಲಿನ ಅನಾಗರಿಕ ದಾಳಿಯ ಕಥೆಯನ್ನು ಹೇಳುತ್ತಿದೆ ಎಂದಿದ್ದಾರೆ.
ರೆವಾಜ್ ಟ್ವೀಟ್ ಮಾಡಿ, “ಸಾಮಾನ್ಯ ವ್ಯಕ್ತಿಯಂತೆ ರೇಸ್ ನ್ನ ನೋಡಲು ಬಯಸಿದ ಹುಡುಗಿಯ ಮೇಲೆ ಈ ಪುರುಷ ಕಿಡಿಗೇಡಿಗಳು ನಡೆಸಿದ ವಿವೇಚನಾರಹಿತ ಹಲ್ಲೆ ನಮ್ಮ ಮಹಿಳೆಯರ ವಿರುದ್ಧ ವ್ಯವಸ್ಥಿತವಾಗಿ ಬಳಸಲಾದ ಅನಾಗರಿಕ ನಿರೂಪಣೆಯ ಪರಿಣಾಮವಾಗಿದೆ. ಈ ಅನಾಗರಿಕತೆಯಿಂದ ಎಚ್ಚೆತ್ತುಕೊಳ್ಳದ ಸಮಾಜ ಅಥವಾ ಶಕ್ತಿ ಅಕಾಲಿಕ ಮರಣಕ್ಕಾಗಿ ಕಾಯಬೇಕಾಗಿದೆ” ಎಂದಿದ್ದಾರೆ.
The senseless assault by these male predators on the girl who like any ordinary person merely wished to watch a race, is the result of a barbaric narrative used systematically against our women. A society or authority not awakened by this barbarism, should await a rapid death. pic.twitter.com/Od3W51FRaA
— Dr.Rewaz Faeq (@Rewaz_faeq) December 30, 2022