ಬಸ್‌ನಲ್ಲಿದ್ದ ಸಿಖ್ ಡ್ರೈವರ್‌ನ್ನ ಕೆಳಗಿಳಿಸಿ ಬಸ್‌ನೊಳಗಿದ್ದ 38 ಹಿಂದುಗಳನ್ನ ಸುಟ್ಟುಹಾಕಿದ ಖಾಲಿಸ್ತಾನಿ ಉಗ್ರರು: ಪಂಜಾಬ್‌ನ ಪಟಿಯಾಲಾದಲ್ಲಿ ನಡೆದಿದ್ದ ನರಸಂಹಾರ

in Uncategorized 136 views

ಲಾಲ್‌ಡು ಬಸ್ ಹತ್ಯಾಕಾಂಡ: 38 ಹಿಂದೂಗಳನ್ನು ಕೊಂ‌ದು ಹಾಕಿದ್ದ ಖಾಲಿಸ್ತಾನಿಗಳು

ಈ ಘಟನೆ ಜುಲೈ 6, 1987 ರಂದು ನಡೆದಿತ್ತು. ನಮಗೆ ತಿಳಿದಿರುವಂತೆ, ಇಡೀ ಎಂಬತ್ತರ ದಶಕದಲ್ಲಿ ಪಂಜಾಬ್ ರಾಜ್ಯ ಖಾಲಿಸ್ತಾನಿ ಭಯೋತ್ಪಾದನೆಗಡ ಬಲಿಪಶುವಾಗಿತ್ತು. ಒಂದೆಡೆ ಇಂದಿರಾಗಾಂಧಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಕಥೆಯನ್ನ ಮುಗಿಸಲು ‘ಆಪರೇಷನ್ ಬ್ಲೂ ಸ್ಟಾರ್’ಗೆ ಆದೇಶಿಸಿದರೆ, ಸೇನೆಯು ಗೋಲ್ಡನ್ ಟೆಂಪಲ್‌ಗೆ ಪ್ರವೇಶಿಸಿತ್ತು. ಮತ್ತೊಂದೆಡೆ ಅದರ ಆಕ್ರೋಶ ಹೆಚ್ಚಾಗಿ ಇಂದಿರಾ ಗಾಂಧಿಯವರನ್ನು ಅವರನ್ನ ಆಕೆಯ ಸಿಖ್ ಅಂಗರಕ್ಷಕರೇ ಹ-ತ್ಯೆ ಮಾಡಿದ್ದರು. ಬಳಿಕ ಸಿಖ್ಖರ ಹತ್ಯಾಕಾಂಡ ನಡೆಯಿತು. ಇದರಲ್ಲಿ ಹಲವು ಕಾಂಗ್ರೆಸ್ ನಾಯಕರ ಹೆಸರೂ ಕೇಳಿ ಬಂದಿತ್ತು.

Advertisement

ಖಲಿಸ್ತಾನಿಗಳು ಪ್ರಧಾನಿ ಇಂದಿರಾ ಗಾಂಧಿಯನ್ನು ಮಾತ್ರವಲ್ಲ, ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಮತ್ತು ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಅರುಣ್ ಶ್ರೀಧರ್ ವೈದ್ಯ ಅವರನ್ನೂ ಹ-ತ್ಯೆ ಮಾಡಿದ್ದರು. ಅದೇ ರೀತಿ ಲಾಲ್ದು ಎಂಬಲ್ಲಿ ಹರಿಯಾಣದ ಸರ್ಕಾರಿ ಬಸ್ಸನ್ನು ಸುತ್ತುವರಿದಿದ್ದರು. ಈ ಬಸ್ ಚಂಡೀಗಢದಿಂದ ರಿಷಿಕೇಶಕ್ಕೆ ಹೊರಟಿತ್ತು, ಅದರಲ್ಲಿ 75-79 ಜನ ಹಿಂದುಗಳು ಪ್ರಯಾಣಿಸುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಫಿಯೆಟ್ ಕಾರು ಬಸ್ಸಿನ ಬಳಿ ಬಂದು ನಿಂತಿತ್ತು.

ನಾಲ್ವರು ಬಂದೂಕುಧಾರಿಗಳು ಫಿಯೆಟ್ ಕಾರಿನಿಂದ ಹೊರಬಂದು ಬಸ್ಸಿನೊಳಗೆ ನುಗ್ಗಿ ಬಸ್ ಚಾಲಕನಿಗೆ ತಲೆಯ ಮೇಲೆ ಬಂದೂಕು ಹಿಡಿದು ಬಸ್ಸನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ಯುವಂತೆ ಹೇಳಿದರು. ಖಲಿಸ್ತಾನಿಗಳು ಹಿಂದೂಗಳನ್ನು ಮನಬಂದಂತೆ ಲೂ ಟಿ ಮಾಡಿದರು. ಹಿಂದುಗಳ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡರು. ಇದಾದ ನಂತರ ಅವರನ್ನು ಬಸ್ಸಿನ ಮಧ್ಯದಲ್ಲಿ ಸಾಲಾಗಿ ನಿಲ್ಲಲು ಹೇಳಿದರು. ಇದಾದ ನಂತರ ಆ ಬಂದೂಕುಧಾರಿಗಳು ಬಸ್ಸಿನ ಎರಡೂ ಬದಿಗೆ ಮನಬಂದಂತೆ ಗುಂ-ಡು ಹಾ ರಿ ಸಲು ಆರಂಭಿಸಿದರು. ಗುಂಡಿನ ಚಕಮಕಿಯಲ್ಲಿ ಗುರ್ಮೀತ್ ಸಿಂಗ್ ಎಂಬ ಉ-ಗ್ರ-ನೂ ಹತನಾದ.

ಆದರೆ, ಖಲಿಸ್ತಾನಿ ಉ-ಗ್ರ-ರ ಗುಂ ಡಿ ನ ದಾ-ಳಿ-ಯಲ್ಲಿ 38 ಅಮಾಯಕ ಹಿಂದೂಗಳು ಪ್ರಾಣ ಕಳೆದುಕೊಂಡಿದ್ದರು ಮತ್ತು 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯನ್ನು ‘ಖಲಿಸ್ತಾನಿ ಕಮಾಂಡೋ ಫೋರ್ಸ್ (KCF)’ ಹೆಸರಿನ ಭಯೋತ್ಪಾದಕ ಸಂಘಟನೆ ನಡೆಸಿತ್ತು, ಇದು ಇಂದಿಗೂ ಅಸ್ತಿತ್ವದಲ್ಲಿದೆ. ಇದರ ಸಂಸ್ಥಾಪಕ ಅಮೆರಿಕ, ಕೆನಡಾ ಮತ್ತು ಪಾಕಿಸ್ತಾನದಲ್ಲಿ ಓಡಾಡುತ್ತ ತಲೆ ಮರೆಸಿಕೊಂಡಿದ್ದಾನೆ. ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹ-ತ್ಯೆ-ಯಲ್ಲೂ ಈ ಸಂಘಟನೆಯ ಕೈವಾಡವಿತ್ತು. ಆದರೆ, ಅದರ ವಿರುದ್ಧದ ಅಭಿಯಾನದ ನಂತರ ಅದು ಈಗ ತುಂಬಾ ದುರ್ಬಲವಾಗಿದೆ.

ಲಾಲ್ಡು ಬಗ್ಗೆ ಹೇಳುವುದಾದರೆ ಈ ಸ್ಥಳವು ಪಂಜಾಬ್‌ನ ಪಟಿಯಾಲದಲ್ಲಿದೆ. ಇದಾದ ಕೇವಲ 24 ಗಂಟೆಗಳ ನಂತರ, ಹರಿಯಾಣದ ಹಿಸಾರ್‌ನ ಫತೇಹಾಬಾದ್ ಬಳಿ ಖಲಿಸ್ತಾನಿ ಭಯೋತ್ಪಾದಕರು ಇತರ 22 ನಾಗರಿಕರನ್ನೂ ಕೊಂ ದ ರು. ಲಾಲ್ಡು ಘಟನೆಯಲ್ಲಿ ಬಸ್ಸಿನ ಚಾಲಕ ಹರಿ ಸಿಂಗ್ ಒಬ್ಬ ಸಿಖ್ ಆಗಿದ್ದ. ಆತ ಸಿಖ್ ಎಂಬ ಕಾರಣಕ್ಕೆ ಆತನನ್ನ ಜೀವಂತವಾಗಿ ಬಸ್ಸಿನಿಂದ ಹೊರಗೆ ಕಳುಹಿಸಲಾಗಿತ್ತು. ಘಟನೆಯ ಬಗ್ಗೆ ಪೊಲೀಸರಿಗೆ ಮೊದಲು ಮಾಹಿತಿ ನೀಡಿದ್ದು ಈತನೇ ಆಗಿದ್ದ. ಫಿಯೆಟ್ ಕಾರ್ ಬಸ್ ನ ಬಳಿ ಬಂದು ನಿಂತಾಗ ಆ ಕಾರ್ ಡ್ರೈವರ್ ನಶೆಯಲ್ಲಿರಬಹುದು ಎಂದು ಬಸ್ ಡ್ರೈವರ್ ಭಾವಿಸಿದ್ದ, ಆದರೆ ಆ ಕಾರಿನಿಮಧ ಸ್ಟೆನ್‌ಗನ್ ಹಿಡಿದು ಕೆಲ ವ್ಯಕ್ತಿಗಳು ಹೊರಬಂದರು.

ಮೊದಮೊದಲು ಖಲಿಸ್ತಾನಿಗಳು ಬಸ್ ಲೂಟಿ ಮಾಡಲು ಬಂದಿರುವುದಾಗಿ ಹೇಳಿದರು. ಇದಾದ ನಂತರ ಪ್ರಯಾಣಿಕರು ಭಯದಿಂದ ಅವರಿಗೆ ತಮ್ಮ ಆಭರಣಗಳನ್ನು ನೀಡಿ ಜೀವ ಉಳಿಸಿಕೊಳ್ಳಬಹುದೆಂದು ಭಾವಿಸಿದರು. ಇದಾದ ಬಳಿಕ ಬಸ್ 8 ಕಿ.ಮೀ.ವರೆಗೆ ಚಲಿಸುತ್ತಲೇ ಇತ್ತು. ಈ ಸಮಯದಲ್ಲಿ, ಖಲಿಸ್ತಾನಿ ಹಿಂದೂಗಳನ್ನು ಅಪಹಾಸ್ಯ ಮಾಡುತ್ತ ನಿಮ್ಮ ಜೂಲಿಯೊ ರಿಬೈರೊ ಈಗ ಎಲ್ಲಿದ್ದಾರೆ ಎಂದು ಕೇಳುತ್ತಿದ್ದರು. ಪಂಜಾಬ್‌ನಲ್ಲಿ ಖಲಿಸ್ತಾನದ ದಿನಗಳಲ್ಲಿ, ಜೂಲಿಯೊ ರಿಬೇರೊ ಪಂಜಾಬ್‌ನ ಡಿಜಿಪಿ ಆಗಿದ್ದರು. ಖಡಕ್ ಅಧಿಕಾರಿಗಳಲ್ಲಿ ಪರಿಗಣಿಸಲ್ಪಟ್ಟಿದ್ದ ರಿಬೇರೊ ಮುಂಬೈನ ಪೊಲೀಸ್ ಕಮಿಷನರ್ ಕೂಡ ಆಗಿದ್ದರು.

ಖಾಲಿಸ್ತಾನಿಗಳು ಬಸ್ಸಿನಲ್ಲಿ ಕುಳಿತಿದ್ದ ಹಿಂದೂ ಪ್ರಯಾಣಿಕರನ್ನು ಗೇಲಿ ಮಾಡುತ್ತ, “ಸಿಖ್ ಯುವಕರನ್ನು ಕೊ ಲ್ಲು ವಾಗ ನೀವೆಲ್ಲರೂ ನಗುತ್ತಿದ್ದಿರಿ. ಈಗ ನೋಡಿ ನೀನು ನರಿಯಂತೆ ಹೇಗೆ ಕುಳಿತಿದ್ದೀರ” ಎನ್ನುತ್ತಿದ್ದರು. ಇದಾದ ನಂತರ ಎಲ್ಲ ಪ್ರಯಾಣಿಕರು ‘ಸತ್ ನಾಮ್ ವಹೇ ಗುರು’ ಎಂದು ಕೂಗುವಂತೆ ಒತ್ತಾಯಿಸಲಾಯಿತು. ಆದರೆ, ಈ ವೇಳೆ ಕಲಾವತಿ ಎಂಬ ಪ್ರಯಾಣಿಕರು ಹೇಗೋ ಬಸ್‌ನಿಂದ ಜಿಗಿದು ಪಾರಾದರು. ಆಕೆ ತನ್ನ ಮೂರು ಚಿಕ್ಕ ಮಕ್ಕಳನ್ನು ಸಹ ಕರೆದುಕೊಂಡು ಹಾರಿದ್ದಳು. ಜಮಾಲ್‌ಪುರ ಮತ್ತು ಹಸನ್‌ಪುರ ನಡುವೆ ಬಸ್‌ ನಿಲ್ಲಿಸಿ ಬಸ್‌ನ ಎರಡೂ ಕಡೆಯಿಂದ ಗುಂ ಡಿ ನ ದಾ-ಳಿ ನಡೆಸಲಾಯಿತು.

ಅಬ್ದುಲ್ ಗಫೂರ್ ಎಂಬ ಗಾಯಾಳು ಈ ಸಂಪೂರ್ಣ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದ. ಈ ಫೈರಿಂಗ್ ಕ್ಲೀನ್ ಶೇವ್ ಮಾಡಿದ ವ್ಯಕ್ತಿಯನ್ನು ಸಹ ಕೊಂದಿತು, ಆತನನ್ನ ಗುರ್ಮೀತ್ ಸಿಂಗ್ ಅಲಿಯಾಸ್ ಟೋನಿ ಎಂದು ಗುರುತಿಸಲಾಗಿತ್ತು. ಶ-ವ-ವನ್ನು ಕಾರಿನಲ್ಲಿ ಹಾಕಿಕೊಂಡು ಘಗ್ಗರ್ ನದಿ ದಾಟಿದ ನಂತರ ಭಯೋತ್ಪಾದಕರು ಕಾರನ್ನು ಸು ಡ ಲು ಪ್ರಯತ್ನಿಸಿದರು, ಆದರೆ ಭಾರೀ ಮಳೆಯಿಂದಾಗಿ ಅದು ಸಾಧ್ಯವಾಗದಿದ್ದಾಗ ಅವರು ಅಲ್ಲಿಂದ ಟ್ರಕ್ ಮೂಲಕ ಪರಾರಿಯಾದರು. ಸಿಖ್ ಎಂಬ ಕಾರಣಕ್ಕೆ ಚಾಲಕ ಹರಿ ಸಿಂಗ್ ಅವರನ್ನು ಬಿಡಲಾಗಿತ್ತು.

ಬಸ್ಸಿನಲ್ಲಿ KCF ಸಹ ಒಂದು ನೋಟ್‌ನ್ನೂ (ಚೀಟಿಯನ್ನ) ಬಿಟ್ಟಿತ್ತು, ಅದರಲ್ಲಿ ಪ್ರತಿಯೊಬ್ಬ ಸಿಖ್ ವ್ಯಕ್ತಿಯ ಬದಲಾಗಿ 100 ಹಿಂದೂಗಳನ್ನು ಕೊ ಲ್ಲ ಲಾಗುವುದು ಎಂದು ಬರೆಯಲಾಗಿತ್ತು. ಬಸ್ಸಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಶ ವ ಗಳೂ ಬಿದ್ದಿದ್ದವು. ಇಂದಿಗೂ ಖಲಿಸ್ತಾನಿಗಳ ಚಿಂತನೆ ಒಂದೇ ಆಗಿದ್ದು, ಒಂದಲ್ಲ ಒಂದು ನೆಪದಲ್ಲಿ ಹಿಂದು-ಸಿಖ್ಖರ ನಡುವೆ ಬಿರುಕು ಮೂಡಿಸಿ ಹಿಂದೂಗಳ ರ ಕ್ತ ಹರಿಸಲು ಮುಂದಾಗಿದ್ದಾರೆ. ಪಾಕಿಸ್ತಾನ ಅವರನ್ನು ಬೆಂಬಲಿಸುತ್ತದೆ. ಹೆಚ್ಚಿನ ಸಿಖ್ ಮತಗಳ ಕಾರಣದಿಂದಾಗಿ ಅವರು ಕೆನಡಾದಲ್ಲಿ ಆಶ್ರಯ ಪಡೆಯುತ್ತಾರೆ. ತಾಲಿಬಾನ್‌ಗಳ ಗುರಿ ಏನಿದೆಯೋ ಅದೇ ಗುರು ಇವರಿಗೂ ಇದೆ.

Advertisement
Share this on...