CDS ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಯಾರು ಗೊತ್ತೇ? ಹೆಲಿಕಾಪ್ಟರ್ ಕ್ರ್ಯಾಶ್‌ನ ಹಿಂದಿನ ದಿನವೇ ಫೋನ್ ಮಾಡಿ ತಮ್ಮ ಅಣ್ಣನಿಗೆ ಕೊನೆಯ ಆಸೆಯನ್ನ ತಿಳಿಸಿದ್ದರಂತೆ ಮಧುಲಿಕಾ ರಾವತ್

in Kannada News/News 230 views

ಬುಧವಾರ, ಭಾರತದ ರಕ್ಷಣಾ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಜನರಲ್ ಬಿಪಿನ್ ರಾವತ್ ಜೊತೆಗೆ ಅವರ ಪತ್ನಿ ಮಧುಲಿಕಾ ಕೂಡ ಈ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು 13 ಮಂದಿ ಈ ಭೀಕರ ಅಪಘಾತಕ್ಕೆ ಬಲಿಯಾಗಿದ್ದು, ಇಹಲೋಕ ತ್ಯಜಿಸಿದ್ದಾರೆ. ಎಲ್ಲರ ಮೃತ ದೇಹಗಳನ್ನು ಶುಕ್ರವಾರ ಅಂತ್ಯಸಂಸ್ಕಾರ ಮಾಡಲಾಯಿತು.

Advertisement

ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಮಧ್ಯಪ್ರದೇಶದ ಶಾಹಡೋಲ್ ನಿವಾಸಿಯಾಗಿದ್ದರು. ಮಧುಲಿಕಾ ರಾವತ್ ಅವರ ತಂದೆ ಮುರುಗೇಂದ್ರ ಸಿಂಗ್ ಒಂದು ಸಮಯದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. ಮಧುಲಿಕಾ ರಾವತ್‌ಗೆ ಇಬ್ಬರು ಸಹೋದರರು ಇದ್ದರು, ಹಿರಿಯ ಸಹೋದರ ಯಶವರ್ಧನ್ ಸಿಂಗ್ ಮತ್ತು ಕಿರಿಯ ಸಹೋದರ ಹರ್ಷವರ್ಧನ್ ಸಿಂಗ್. ತಮ್ಮ ತಂಗಿ ಹಾಗು ಭಾವ ಬಿಪಿನ್ ರಾವತ್ ಅವರ ಸಾವಿನ ಸುದ್ದಿ ತಿಳಿದ ಸಹೋದರ ಹರ್ಷವರ್ಧನ್ ಅವರು ತಮ್ಮ ಸಹೋದರಿ ಮತ್ತು ಭಾವನ ಬಗ್ಗೆ ಹಲವು ವಿಷಯಗಳನ್ನು ತಿಳಿಸಿದರು.

ಹರ್ಷವರ್ಧನ್ ಸಿಂಗ್ ತಮ್ಮ ಸಹೋದರಿ ಮಧುಲಿಕಾ ಮತ್ತು ಭಾವ ಬಿಪಿನ್ ರಾವತ್ ರವರ ಮದುವೆ ಹೇಗಾಯ್ತು ಅನ್ನೋದನ್ನ ತಿಳಿಸಿದ್ದಾರೆ. ಮದುವೆಯ ಪ್ರಸ್ತಾಪವನ್ನು ಬಿಪಿನ್ ರಾವತ್ ಅವರ ತಂದೆ ಮಧುಲಿಕಾ ರಾವತ್ ಅವರ ತಂದೆಯ ಮುಂದಿಟ್ಟಿದ್ದರು. ನಂತರ ಮಧುಲಿಕಾ ರಾವತ್ ಅವರ ತಂದೆ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡರು. ಮಧುಲಿಕಾ ರಾವತ್ ಮತ್ತು ವಿಪಿನ್ ರಾವತ್ 1986 ರಲ್ಲಿ ವಿವಾಹವಾದರು. ಮದುವೆಯ ನಂತರ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು.

ಹರ್ಷವರ್ಧನ್ ಸಿಂಗ್ ಅವರು ತಮ್ಮ ಭಾವ ಅಂದರೆ ಬಿಪಿನ್ ರಾವತ್ ತುಂಬಾ ಸಂತೋಷದ ಮನಸ್ಥಿತಿ ಮತ್ತು ಸ್ನೇಹಪರ ವ್ಯಕ್ತಿತ್ವದ ವ್ಯಕ್ತಿ ಎಂದು ಹೇಳಿದರು. ಒಂದು ದಿನದ ಹಿಂದೆ ತನ್ನ ಸಹೋದರಿ ಮಧುಲಿಕಾ ತಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು ಮತ್ತು ಅವರು ಯಾವುದೋ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿದ್ದರು ಎಂದು ಅವರು ಹೇಳಿದರು. ಆದರೆ, ಹಿರಿಯ ಸೇನಾಧಿಕಾರಿಗಳ ಈ ಎಲ್ಲ ವಿಷಯಗಳನ್ನು ಗೌಪ್ಯವಾಗಿಡಲಾಗಿರುವುದರಿಂದ ಬೆಳಗ್ಗೆ ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂಬುದನ್ನು ಅವರು ತಿಳಿಸಿರಲಿಲ್ಲ.

ಹರ್ಷವರ್ಧನ್ ಸಿಂಗ್ ಅವರು ತಮ್ಮ ಭಾವ ಬಿಪಿನ್ ರಾವತ್ ಮತ್ತು ಸಹೋದರಿ ಮಧುಲಿಕಾ ಜನವರಿಯಲ್ಲಿ ಶಹಡೋಲ್‌ಗೆ ಬರಲಿದ್ದಾರೆ ಎಂದು ತಿಳಿಸಿದ್ದರು. ಇದರೊಂದಿಗೆ ಶಹಡೋಲ್‌ನಲ್ಲಿ ಸೈನಿಕ ಶಾಲೆ ತೆರೆಯಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಈಗ ಭಾವ ಬಿಪಿನ್ ರಾವತ್ ಹಾಗು ಸಹೋದರಿ ಮಧುಲಿಕಾ ರಾವತ್ ಅವರ ಆ ಕನಸು ಕನಸಾಗೇ ಉಳಿಯುವಂತಾಯ್ತು ಎಂದು ಸುಖ ದುಃಖ ತೋಡಿಕೊಂಡಿದ್ದಾರೆ ಹರ್ಷವರ್ಧನ್ ಸಿಂಗ್.

ಬಿಪಿನ್ ರಾವತ್ ರಂತೆ ಮಧುಲಿಕಾ ರಾವತ್ ಕೂಡ ಸೇನೆಯ ಮಹತ್ವಪೂರ್ಣ ಜವಾಬ್ದಾರಿ ಹೊತ್ತಿದ್ದರು

ಒಂದೆಡೆ ಜನರಲ್ ಬಿಪಿನ್ ರಾವತ್ ಅವರು ದೇಶಕ್ಕಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಮುನ್ನಡೆಯುತ್ತಿದ್ದರೆ, ಮತ್ತೊಂದೆಡೆ ಮಧುಲಿಕಾ ರಾವತ್ ಅವರ ಜೊತೆಗೂಡಿ ಸಮಾಜಸೇವೆಯನ್ನು ಮುಂದುವರೆಸಿದರು. ಜನರಲ್ ಬಿಪಿನ್ ರಾವತ್ ಅವರು ಸೇನೆಯ ಅತ್ಯುನ್ನತ ಹುದ್ದೆಯನ್ನು ತಲುಪಿದಾಗ ಮತ್ತು ನಂತರ ಸಿಡಿಎಸ್ ಜವಾಬ್ದಾರಿಯನ್ನು ವಹಿಸಿಕೊಂಡಾಗ, ಮಧುಲಿಕಾ ರಾವತ್ ಅವರು ಆರ್ಮಿ ವೈಫ್ ಅಸೋಸಿಯೇಷನ್‌ನ ಅಧ್ಯಕ್ಷರ ಜವಾಬ್ದಾರಿಯೊಂದಿಗೆ ಸೇನಾ ಸೈನಿಕರ ಕುಟುಂಬಗಳಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಹಲವು ವರ್ಷಗಳಿಂದ AWWA ಮೂಲಕ ಕೆಲಸ ಮಾಡುತ್ತಿದ್ದರು

ಮಧುಲಿಕಾ ರಾವತ್ ಅವರು ಕಳೆದ ಹಲವಾರು ವರ್ಷಗಳಿಂದ ಆರ್ಮಿ ವೈಫ್ ವೆಲ್ಫೇರ್ ಅಸೋಸಿಯೇಷನ್‌ನೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಪ್ರಮುಖ ಅಧಿಕಾರಿಯಾಗಿ ಮಧುಲಿಕಾ ರಾವತ್ ಅವರು ಸೇನಾ ಸೈನಿಕರ ವಿಧವೆಯರಿಗಾಗಿ ಅನೇಕ ಸಾರ್ವಜನಿಕ ಹಿತಾಸಕ್ತಿ ಮತ್ತು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದ್ದರು. ಸೇನಾ ಮುಖ್ಯಸ್ಥರಾಗಿ ಬಳಿಕ ಜನರಲ್ ಬಿಪಿನ್ ರಾವತ್ ಸಿಡಿಎಸ್ ಆದ ನಂತರ ಮಧುಲಿಕಾ ರಾವತ್ ಅವರು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಆರ್ಮಿ ವೈಫ್ ವೆಲ್ಫೇರ್ ಅಸೋಸಿಯೇಷನ್‌ ಅಧ್ಯಕ್ಷರಾಗಿದ್ದರು.

ಆರ್ಮಿ ವೈವ್ಸ್ ವೆಲ್‌ಫೇರ್ ಅಸೋಸಿಯೇಷನ್ ​​ಅಂದರೆ AWWA ಎಂಬುದು ಸೈನಿಕರ ಹೆಂಡತಿ, ಮಕ್ಕಳು, ಕುಟುಂಬ ಸದಸ್ಯರು ಮತ್ತು ಅವಲಂಬಿತರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನೋಡಲ್ ಸಂಸ್ಥೆಯಾಗಿದೆ. ಇದನ್ನು 1966 ರಲ್ಲಿ ಸ್ಥಾಪಿಸಲಾಯಿತು.

ಈ ಸಂಸ್ಥೆಯು ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರ ಪತ್ನಿಯರು ಮತ್ತು ಅವಲಂಬಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಅವರ ಕುಟುಂಬಗಳಿಗೆ ಯೋಜನೆಗಳನ್ನು ರೂಪಿಸುತ್ತದೆ. AWWA ಹೊರತುಪಡಿಸಿ, ಮಧುಲಿಕಾ ರಾವತ್ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಮಧುಲಿಕಾ ರಾವತ್ ಅವರು ಕ್ಯಾನ್ಸರ್ ಪೀಡಿತರಿಗಾಗಿ ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

Advertisement
Share this on...