36 ವರ್ಷದ ವ್ಯಕ್ತಿ ತನ್ನ 15 ವರ್ಷದ ಅಪ್ರಾಪ್ತ ಮಗಳನ್ನೇ ಮದುವೆಯಾಗಿ ಆಕೆಯನ್ನ ಗರ್ಭಿಣಿ ಮಾಡಿದ್ದಾನೆ. ತನ್ನ ಅನೈತಿಕ ಕಾಮಕ್ಕೆ ಆತ, “ಇದಕ್ಕೆ ಅಲ್ಲಾಹ್‌ನ ದೈವಿಕ ಅನುಮತಿ ಇದೆ” ಎಂದು ಹೇಳುವ ಮೂಲಕ ತನ್ನ ವಿಕೃತ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ. ಇದಕ್ಕಿಂತಲೂ ಬೆಚ್ಚಿಬೀಳಿಸುವ ಆಘಾತಕಾರಿ ಸಂಗತಿಯೇನೆಂದರೆ, ತನ್ನ ಮಗಳನ್ನ ತನ್ನ ಗಂಡನ ಜೊತೆ ನಿಕಾಹ್ ಮಾಡಿಸುವಲ್ಲಿ ಆತನ ಹೆಂಡತಿಯೇ ಪ್ರಧಾನ ಸಾಕ್ಷಿಯಾಗಿದ್ದಳು.
ಅಲಿ, ಸಕೀನಾ ಮತ್ತು ದಂಪತಿಗಳ ಐದು ಮಕ್ಕಳು ಲ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಕಾಸಿಯಾಜೋರಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆದರೆ ಮನೆಯೊಳಗೆ ನಡೆದ ಗೌಪ್ಯ ವಿವಾಹದ ಬಗ್ಗೆ ಗ್ರಾಮಸ್ಥರಿಗೆ ಗೊತ್ತೇ ಇರಲಿಲ್ಲ
ಅಫಜುದ್ದೀನ್ ಅಲಿ ತನ್ನ ಮಗಳನ್ನ ಸದ್ದಿಲ್ಲದೆ ಮದುವೆ ಮಾಡಿಕೊಂಡಿದ್ದ. ಮದುವೆ ಕೂಡ ಜನರಿಗೆ ಗೊತ್ತಾಗದಂತೆ ಆಡಂಬರ ಇಲ್ಲದೆ ನಡೆದಿತ್ತು. ಕಾರಣ ತನ್ನ ಈ ಕೃತ್ಯ ಜನರಿಗೆ ಗೊತ್ತಾದರೆ ಛೀ ಥೂ ಅಂತ ಉಗೀತಾರೆ ಅಂತ ಗುಟ್ಟಾಗಿ ಮಾಡಿಕೊಂಡಿದ್ದಾನೆ. ಜಲ್ಪೈಗುರಿ ಜಿಲ್ಲೆಯ ಕಾಸಿಯಾಜೋರಾ ಗ್ರಾಮದಲ್ಲಿ ಈ ಮದುವೆ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ, ಆರು ತಿಂಗಳ ನಂತರ, ಹುಡುಗಿ ಗರ್ಭಾವಸ್ಥೆಯ ಲಕ್ಷಣಗಳನ್ನು ಕಾಣಿಸಿದ ಕೂಡಲೇ ಜನರು ಈ ಬಗ್ಗೆ ಮಾತನಾಡಲಾರಂಭಿಸಿದರು. ಒಬ್ಬರಿಂದೊಬ್ಬರಿಗೆ ಈ ವಿಷಯ ಹಬ್ಬಲಾರಂಭಿಸಿ ಅಂತಿಮವಾಗಿ ಈ ಪ್ರಕರಣ ಬೆಳಕಿಗೆ ಬಂದಿತು.
ಗ್ರಾಮದ ಮುಖಂಡ ಶೇಖ್ ರಂಜಾನ್ ಮಾತನಾಡಿ, ಅವರು ಅಲಿ ಮೇಲೆ ಎಷ್ಟು ಕೋಪಗೊಂಡಿದ್ದಾರೆಂದರೆ ಅವನ ತಲೆಯನ್ನು ಒಡೆದು ಹಾಕಲು ಮುಂದಾಗಿದ್ದೆ ಎಂದು ತಿಳಿಸಿದ್ದಾರೆ.
ಸಮಾಜವೇ ತಲೆ ತಗ್ಗಿಸುವ ಈ ಘಟನೆಯಿಂದ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದರು. ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದು ಅಲಿ ಅಪ್ರಾಪ್ತ ವಯಸ್ಕಳನ್ನು ಮದುವೆಯಾಗಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮದಾದ್ಯಂತ ಜನರ ಆಕ್ರೋಶ ಮತ್ತು ಕೋಪವು ವ್ಯಾಪಿಸಿತು ಮತ್ತು ಈ ಕುಟುಂಬದ ಮೇಲೆ ಹಲ್ಲೆ ಮಾಡುವ ಮಾತು ಕೂಡ ನಡೆಯಿತು. ನಂತರ ತಮ್ಮ ಮೇಲೆ ಕೋಪೋದ್ರಿಕ್ತ ಗುಂಪು ದಾಳಿ ಮಾಡಬಹುದೆಂಬ ಭಯದಿಂದ ದಂಪತಿಗಳು ಬೇರೆ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದರು.
ಪ್ರಕರಣ ನಿಯಂತ್ರಣಕ್ಕೆ ಬಾರದಿದ್ದರೆ ಪ್ರಾಣಕ್ಕೇ ಕತ್ತು ಎಂದು ಗ್ರಹಿಸಿದ ಬನರ್ಹತ್ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿ ಅಲಿ, ಆಕೆ ಪತ್ನಿ ಸಕೀನಾ ಮತ್ತು ಅವರ 15 ವರ್ಷದ ಮಗಳನ್ನು ಬಂಧಿಸಿದ್ದಾರೆ.
ಮೂವರನ್ನು ಪೋಲಿಸರು SDO ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು ಆದರೆ ದುರದೃಷ್ಟಕರ ಸಂಗತಿಯೇನೆಂದರೆ ಮ್ಯಾಜಿಸ್ಟ್ರೇಟ್ ಈ ಮೂವರಿಗೂ ಯಾವುದೇ ಕ್ರಿಮಿನಲ್ ನ್ಯಾಯವ್ಯಾಪ್ತಿಯಿಲ್ಲದ (no criminal jurisdiction) ಕಾರಣ ಅವರನ್ನು ಬಿಡುಗಡೆ ಮಾಡಬೇಕಾಯಿತು; ಯಾವುದೇ ದೂರುದಾರರಿರಲಿಲ್ಲ ಮತ್ತು ಪೊಲೀಸರು ಅಲಿ ವಿರುದ್ಧ ಅತ್ಯಾಚಾರದ ಪ್ರಕರಣವನ್ನೂ ದಾಖಲಿಸಿರಲಿಲ್ಲ.
“ಪೊಲೀಸರು ಯಾವುದೇ ನಿರ್ದಿಷ್ಟ ಪ್ರಕರಣವನ್ನು ದಾಖಲಿಸಿಲ್ಲ ಮತ್ತು ಕ್ರಿಮಿನಲ್ ಪ್ರಕರಣಗಳ ಬಗ್ಗೆ ನ್ಯಾಯಾಲಯವು ಅಧಿಕಾರ ವ್ಯಾಪ್ತಿ ಹೊಂದಿಲ್ಲ. ಆದ್ದರಿಂದ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಲಾಗಿದೆ” ಎಂದು ಎಸ್‌ಡಿಒ, ಅತಾನು ಕುಮಾರ್ ರೇ ಹೇಳಿದ್ದಾರೆ.
ಅಲಿ ಅಲ್ಲಾಹ್‌ನೇ ನನಗೆ ಅನುಮತಿ ನೀಡಿದ್ದಾನೆ ಎಂದು ಹೇಳಿದಾಗ ಅಲಿ ಪತ್ನಿ ಪತ್ನಿ ಸಕೀನಾ ಕೂಡ ತನ್ನ ಮಗಳ ಜೊತೆ ಗಂಡನ ನಿಕಾಹ್‌ಗೆ ಒಪ್ಪಿಕೊಂಡಳು. ತನ್ನ ಪತಿ ಎಂದಿಗೂ ದೇವರ ಹೆಸರಿನಲ್ಲಿ ಸುಳ್ಳು ಹೇಳುವುದಿಲ್ಲ ಹಾಗಾಗಿ ನಾನೇ ನಿಕಾಹ್‌ಗೆ ಸಾಕ್ಷಿಯಾದೆ ಎಂದು ಆಕೆ ತಿಳಿಸಿದ್ದಾಳೆ.