ಮಹಾರಾಣಾ ಪ್ರತಾಪ್ ಎಂದರೆ ಅದೊಂದು ಶಕ್ತಿ, ಅದೊಂದು ಮಿಂಚು, ಅದೊಂದು ರಾಷ್ಟ್ರಾಭಿಮಾನದ ಕಿಚ್ಚು, ಅದೊಂದು ಹಿಂದುತ್ವದ ಪ್ರತೀಕವಾಗಿರೋ ಕ್ಷಾತ್ರತೇಜಸ್ಸಿನ ಜ್ವಾಲೆ.
ಒಟ್ಟಿನಲ್ಲಿ ಮಹಾರಾಣಾ ಪ್ರತಾಪರ ಬಗ್ಗೆ ಓದುವುದು ಒಂದು ಕಡೆ ರೋಚಕತೆಯಾದರೆ ಅವರು ಬಾಳಿ ಬದುಕಿದ್ದ ರಾಜಸ್ಥಾನದ ಚಿತ್ತೋಡ್, ಹಲ್ದೀಘಾಟಿ ನೋಡಿ ಬರುವುದೂ ಜೀವನದ ಅಮೃತಘಳಿಗೆಯೇ ಸರಿ.
ಮಹಾರಾಣಾ ಪ್ರತಾಪರ ಈ ಪೋಸ್ಟ್ ನ್ನ ಬರೆದಿದ್ದಾಗ ನನಗೆ ಮಹಾರಾಣಾ ಪ್ರತಾಪ ಸಿಂಗರ ಬಗ್ಗೆಯಾಗಲಿ, ಹಲ್ದೀಘಾಟಿ ಯುದ್ಧದ ಬಗ್ಗೆಯಾಗಲಿ ಬರೀ ಪುಸ್ತಕದಲ್ಲಿ ಓದಿದ ಅನುಭವವಷ್ಟೇ ಇತ್ತು ಆದರೆ ಈ ಪೋಸ್ಟ್ ಬರೆದು ಒಂದು ವಾರದಲ್ಲೇ ಹಲ್ದೀಘಾಟಿ ಹಾಗು ಚಿತ್ತೋಡಗಢ ಕ್ಕೆ ಭೇಟಿ ನೀಡ್ತೀನಿ ಅಂತ ಕನಸು ಮನಸ್ಸಲ್ಲೂ ಅನ್ಕೊಂಡಿರಲಿಲ್ಲ. ಚಿತ್ತೋಢಗಢ್ ಹಾಗು ಹಲ್ದೀಘಾಟಿಯ ಬಗ್ಗೆ ಹಾಗು ಮಹಾರಾಣಾ ಪ್ರತಾಪ್ ಸಿಂಗರ ಶೌರ್ಯ ಸಾಹಸ, ದೇಶ ಧರ್ಮ ಪ್ರೇಮದ ಬಗ್ಗೆ ನಿಮಗೆ ಗೊತ್ತಿರದ ಕೆಲ ಮಾಹಿತಿಯನ್ನ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಮಹಾರಾಣಾ ಪ್ರತಾಪ ಸಿಂಗ್ ಭಾರತ ಕಂಡ ಶ್ರೇಷ್ಟ, ಮಹಾನ್ ಯೋಧನಾಗಿದ್ದ ಹಾಗು ಪ್ರತಿಯೊಂದು ಯುದ್ದದಲ್ಲೂ ಎದುರಾಳಿಗಳ ಮೈ ನೀರಿಳಿಸಿದವನಾಗಿದ್ದನು.
ಮಹಾರಾಣಾ ಪ್ರತಾಪ್ ಸಿಂಗ್ ಭಾರತ ಸ್ವಾತಂತ್ರ್ಯದ ಮೊದಲ ಯೋಧ ಅಥವಾ ರೂವಾರಿ ಅನ್ನೋ ಮಾತೂ ಇದೆ.
ಮಾತೃಭೂಮಿಯ ರಕ್ಷಣೆ ಹಾಗು ಸ್ವಾಭಿಮಾನಕ್ಕಾಗಿ ತಮ್ಮ ಸಿಂಹಾಸನವನ್ನೇ ತೊರೆದು ಕಾಡು ಮೇಡಿನಲ್ಲಿ ಜೀವನ ಕಳೆದರು ಹೊರತು ಮೊಘಲರ ಎದುರು ಎಂದೂ ಸೋಲನ್ನೊಪ್ಪಿಕೊಂಡು ತಲೆಬಾಗಲಿಲ್ಲ.
ಇತಿಹಾಸದ ಪುಟಗಳಲ್ಲಿ ಮಹಾರಾಣಾ ಪ್ರತಾಪರ ಶೌರ್ಯ ಹಾಗು ಸ್ವಾಭಿಮಾನ ಅಜರಾಮರವಾಗಿ ಉಳಿದಿದೆ.
ಇಂದು ಮಹಾರಾಣಾ ಪ್ರತಾಪರು ಲಕ್ಷಾಂತರ ಜನರ ಪ್ರೇರಣೆಯೂ ಆಗಿದ್ದಾರೆ.
ಬನ್ನಿ ಮಹಾರಾಣಾ ಪ್ರತಾಪರ ಕುರಿತಾದ ಕೆಲ ಸಂಗತಿಗಳನ್ನ ತಿಳಿಯೋಣ
ಮಹಾರಾಣಾ ಪ್ರತಾಪರ ಜೀವನ :
ಮಹಾರಾಣಾ ಪ್ರತಾಪರ ಜನಿಸಿದ್ದು ಮೇ 9, 1540 ಮೇವಾಡ(ರಾಜಸ್ಥಾನ)ದಲ್ಲಿ.
ಮಹಾರಾಣಾ ಪ್ರತಾಪರ ತಂದೆ ಮೇವಾಡದ ರಾಜ ಉದಯಸಿಂಹರಾಗಿದ್ದರು. ಬಾಲ್ಯದಿಂದಲೇ ವೀರ ಹಾಗು ಸಾಹಸಿಯಾಗಿದ್ದ
ತನ್ನ ಜೀವನದುದ್ದಕ್ಕೂ ಮಾತೃಭೂಮಿಯ ರಕ್ಷಣೆ ಹಾಗು ಸ್ವಾಭಿಮಾನಕ್ಕಾಗಿ ಸಂಘರ್ಷ ಮಾಡಿದವನು ಮಹಾರಾಣಾ ಪ್ರತಾಪ ಸಿಂಗ್
16 ನೆಯ ಶತಮಾನದಲ್ಲಿ ಪೂರ್ತಿ ಭಾರತವೇ ಅಕ್ಬರ್’ನ ವಶವಾಗಿದ್ದ ಕಾಲದಲ್ಲಿ ಅಕ್ಬರ್ ನ ವಿರುದ್ಧ ತೊಡೆ ತಟ್ಟಿ ನಿಂತ ಏಕೈಕ ಧೀರ ಮಹಾರಾಣಾ ಪ್ರತಾಪ್ ಸಿಂಗ್
ಜೀವನಪೂರ್ತಿ ಸಂಘರ್ಷದಲ್ಲೇ ಕಳೆದರೂ ಅಕ್ಬರ್ ನಿಗೆ ಕಡೆಗೂ ತಲೆಬಾಗಲೇ ಇಲ್ಲ ಮಹಾರಾಣಾ
ಮಹಾರಾಣಾ ಪ್ರತಾಪರ ಎತ್ತರ ಹಾಗು ತೂಕ :
ಮಹಾರಾಣಾ ಪ್ರತಾಪ ಸಿಂಗ್ ಬರೋಬ್ಬರಿ ಏಳೂವರೆ ಅಡಿ ಎತ್ತರ ಹಾಗು 110 ಕಿಲೋ ತೂಕವುಳ್ಳವನಾಗಿದ್ದ.
ಅವನ ಸುರಕ್ಷ ಕವಚ 72 ಕೆ.ಜಿ ಹಾಗು ಭಲ್ಲೆ (ಭರ್ಚಿ)ಯೇ ಬರೋಬ್ಬರಿ 80 ಕೆ.ಜಿ. ತೂಕದ್ದಾಗಿತ್ತು.
ಅವನ ಕವಚ, ಭಲ್ಲೆ, ತಲ್ವಾರ್ ಆದಿಯಾಗಿ ಸುಮಾರು 200 ಕೆ.ಜಿ. ತೂಕದ ಯು-ದ್ಧ ಪೋಷಾಕು ಅವನ ಮೈಮೇಲಿರುತ್ತಿತ್ತು.
ಮಹಾರಾಣಾ ಪ್ರತಾಪ ಸಿಂಗರ ಆ ಯುದ್ಧ ಪೋಷಾಕುಗಳು, ಭರ್ಚಿ, ತಲ್ವಾರ್, ಕವಚಗಳು ಇಂದಿಗೂ ಉದಯಪುರದ ಸಂಗ್ರಹಾಲಯದಲ್ಲಿ ನಾವು ಕಾಣಬಹುದು.
ಅಕ್ಬರ್ ನೀಡಿದ್ದ ಆಹ್ವಾನ :
ಮಹಾರಾಣಾನ ಮುಂದೆ ಒಂದು ಪ್ರಸ್ತಾವನೆಯನ್ನ ಮುಂದಿಟ್ಟಿದ್ದನು. ಅದೇನು ಗೊತ್ತಾ?
ಮಹಾರಾಣಾ ಪ್ರತಾಪ ಸಿಂಗ್ ತನ್ನ(ಅಕ್ಬರ್) ಆಡಳಿತವನ್ನ ಒಪ್ಪಿಕೊಂಡು ತನ್ನ ಮಾಂಡಲಿಕ (ರಾಜನ ಅಧೀನದಲ್ಲಿ ತಮ್ಮ ತಮ್ಮ ರಾಜ್ಯವನ್ನು ಆಳುವ) ನಾಗಲು ಒಪ್ಪಿದರೆ ಅರ್ಧ ಭಾರತವನ್ನೆ ಬಿಟ್ಟುಕೊಡುತ್ತೇನೆ ಅಂತ ಅಕ್ಬರ್ ಪ್ರಸ್ತಾಸಿದ್ದ. ಆದರೆ ಇದಕ್ಕೆ ಮಹಾರಾಣಾ ಪ್ರತಾಪ್ ಒಪ್ಪದೆ ರಾಷ್ಟ್ರದ ಸ್ವಾಭಿಮಾನಕ್ಕಾಗಿ ತನ್ನ ಸಾಮ್ರಾಜ್ಯ ತ್ಯಜಿಸಿ ಕಾಡು ಮೇಡಿನಲ್ಲಿ ಜೀವನ ಸಾಗಿಸಿದ್ದ.
ಆದರೆ ಸತತ ಮೂವತ್ತು ವರ್ಷಗಳಾದರೂ ಅಕ್ಬರ್ ಮಾತ್ರ ಮಹಾರಾಣಾನನ್ನ ಬಂಧಿಸಲು ಸಾಧ್ಯವಾಗಲಿಲ್ಲ.
ಹಲ್ದೀಘಾಟಿ ಯುದ್ಧ :
ಮಹಾರಾಣಾ ಪ್ರತಾಪ್ ಸಿಂಗ್ ಹಾಗು ಅಕ್ಬರ್ ನ ಯುದ್ಧ ಹಲ್ದೀಘಾಟಿ ಎಂಬ ಪ್ರದೇಶದಲ್ಲಿ ಸನ್ 1576 ರಲ್ಲಿ ನಡೆದಿತ್ತು.
ಈ ಯುದ್ಧದಲ್ಲಿ ಮಹಾರಾಣಾ ಪ್ರತಾಪನ ಸೈನ್ಯ ಬಲ 20,000 ಇದ್ದರೆ ಅಕ್ಬರನ ಸೈನ್ಯ ಬಲ 2 ಲಕ್ಷ ಆಗಿತ್ತು.
ಅಕ್ಬರನದು ಅಷ್ಟು ವಿಶಾಲ ಸೈನ್ಯವಾಗಿದ್ದರೂ ಮಹಾರಾಣಾ ಪ್ರತಾಪ ಸಿಂಗ್ ಸೋಲನ್ನೊಪ್ಪಿಕೊಳ್ಳದೇ ಮಾತೃಭೂಮಿಯ ರಕ್ಷಣೆ ಮಾಡುತ್ತಲೇ ಇದ್ದ.
ಹಲ್ದೀಘಾಟಿ ಯುದ್ಧದ ಭೀಕರತೆ ಎಷ್ಟಿತ್ತಂದರೆ ಆ ಯುದ್ಧ ಮುಗಿದ 400 ವರ್ಷಗಳವರೆಗೂ ಆ ಭೂಮಿಯಲ್ಲಿ ತಲ್ವಾರ್ ಗಳೇ ಸಿಗುತ್ತಿದ್ದವು. ಹಾಗೆ ಕೊನೆಯಲ್ಲಿ ತಲ್ವಾರ್ ಸಿಕ್ಕದ್ದು ಸನ್ 1985 ರಲ್ಲಿ
ಮಹಾರಾಣಾ ಪ್ರತಾಪರ ಕುದುರೆ ಚೇತಕ್:
ಮಹಾರಾಣಾ ಪ್ರತಾಪ ಸಿಂಗರ ವೀರಗಾಥೆಯಲ್ಲಿ ಅವರ ನೆಚ್ಚಿನ ‘ಚೇತಕ್’ ಕೂಡ ಅಷ್ಟೇ ವಿಶ್ವವಿಖ್ಯಾತಿಯಾದ ಕುದುರೆ.
ಚೇತಕ್ ಒಂದು ವೀರ ಹಾಗು ಅತ್ಯಂತ ಬುದ್ಧಿಯುಳ್ಳ ಕುದುರೆಯಾಗಿದ್ದು 26 ಅಡಿ ಉದ್ದದ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಹಾರಿ ಮಹಾರಾಣಾರನ್ನ ಕಾಪಾಡಿತ್ತು.
ಹಲ್ದೀಘಾಟಿಯಲ್ಲಿ ಇಂದಿಗೂ ಚೇತಕ್ ಮಂದಿರವಿದೆ
ಇಂದು ಆ ಮಹಾನ್ ವೀರ, ಕಲಿಯುಗದ ಹಿಂದೂ ಆಪ್ತರಕ್ಷಕ ಮಹಾರಾಣಾ ಪ್ರತಾಪ್ ಸಿಂಗರವರ ಬಗ್ಗೆ ಅದೆಷ್ಟೋ ಭಾರತೀಯರಿಗೆ ಗೊತ್ತೇ ಇಲ್ಲ. ಅಂತಹ ಶೂರನನ್ನ ಗ್ರೇಟ್ ಅನ್ನದೆ ಮೋಸದಿಂದ ಭಾರತವನ್ನಾಳಿದ ಹಾಗು ಇಸ್ಲಾಮಿ ದಾಸ್ಯತೆಗೆ ದೂಡಿದ್ದ ಅಕ್ಬರ್ ಅನ್ನುವ ಮತಾಂಧನನ್ನ ‘ದಿ ಗ್ರೇಟ್ ಅಕ್ಬರ್’ ಅಂತ ನಮ್ಮ ಪಠ್ಯಪುಸ್ತಕಗಳಲ್ಲಿ ಓದಿದಾಗ ಹೊಟ್ಟೆ ಉರಿಯುತ್ತೆ.
ಇನ್ನು ಮುಂದಾದರೂ ಪಠ್ಯಪುಸ್ತಕಗಳಲ್ಲಿನ ಈ ಸುಳ್ಳಿನ ಕಂತೆಗಳನ್ನ ಮೋದಿ ಜೀ ಸರಿಪಡಿಸಿ ಭಾರತದ ಸ್ವಾಭಿಮಾನವನ್ನ ಮತ್ತೆ ನಮ್ಮ ಯುವಪೀಳಿಗೆಯಲ್ಲಿ ಪುಟಿದೇಳುವಂತೆ ಮಾಡಲಿ.
– Vinod Hindu Nationalist