ಹಿರಿಯ ಚಿತ್ರನಿರ್ಮಾಪಕ ಮಹೇಶ್ ಭಟ್ ಕೂಡ ಕೋಲ್ಕತ್ತಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವೇದಿಕೆಯಲ್ಲಿ ರಾಜಕೀಯ, ಭಾರತೀಯ ಸಂಸ್ಕೃತಿ ಕುರಿತು ಮಾತನಾಡಿದರು. ಅಶಾಂತಿಯ ಈ ಯುಗದಲ್ಲಿ ಭಾರತದ ಮಕ್ಕಳು ಪಾಶ್ಚಿಮಾತ್ಯ ನಾಗರಿಕತೆಯ ಕಲ್ಪನೆಗಳನ್ನು ತಿರಸ್ಕರಿಸುತ್ತಾರೆ ಎಂದು ಮಹೇಶ್ ಭಟ್ ಹೇಳುತ್ತಾರೆ. ಭಾರತದ ಎಲ್ಲ ಜಾತಿಗಳ ಏಕತೆಗಾಗಿ ರವೀಂದ್ರನಾಥ ಟ್ಯಾಗೋರರ ಚಿಂತನೆ ಭಾರತೀಯ ಹೃದಯಗಳಲ್ಲಿ ಅನುರಣಿಸುವಂತಾಗಬೇಕು ಎಂದರು.
ಶಾರುಖ್ ಖಾನ್‌ಗೆ ಕಿಸ್ ಮಾಡಿದ ಮಹೇಶ್ ಭಟ್
ಯಾವುದೇ ಜಾತಿ, ಸಂಸ್ಕೃತಿಯನ್ನು ನಿರಾಕರಿಸುವುದು ಭಾರತದ ಚೇತನವಲ್ಲ. ವಿಷಯಗಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ನಮ್ಮ ಏಕೈಕ ಗುರಿಯಾಗಿರಬೇಕು. ಇದು ಭಾರತದ ಸ್ಪೂರ್ತಿ ಅಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಮಹೇಶ್ ಭಟ್ ಅವರಲ್ಲದೆ, ಶಾರುಖ್ ಖಾನ್ ಮತ್ತು ಬಿಗ್ ಬಿ ಕೂಡ ಉಪಸ್ಥಿತರಿದ್ದರು. ಶಾರುಖ್ ಖಾನ್ ಮಹೇಶ್ ಭಟ್ ಅವರನ್ನು ಭೇಟಿಯಾಗಲು ಬಂದಾಗ, ಚಿತ್ರ ನಿರ್ಮಾಪಕರು ಶಾರುಖ್ ಖಾನ್‌ನ್ನ ಪಕ್ಕಕ್ಕೆ ಕರೆದು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟರು.
#WATCH | Veteran actors Amitabh Bachchan and Jaya Bachchan, film stars Shah Rukh Khan, Rani Mukherji attend the inaugural program of the 28th International Kolkata Film Festival in Kolkata with West Bengal CM Mamata Banerjee and former India Cricket captain Sourav Ganguly pic.twitter.com/tKg3bXXFEJ
— ANI (@ANI) December 15, 2022
ರಾಹಾ ಗಾಗಿ ಬರೆಯಲಿದ್ದಾರೆ ಪುಸ್ತಕ
ಸಿನಿಮಾಗಳ ಹೊರತಾಗಿ ಮಹೇಶ್ ಭಟ್ ಅವರಿಗೆ ಪುಸ್ತಕಗಳೆಂದರೆ ತುಂಬಾ ಇಷ್ಟ. ಇತ್ತೀಚೆಗೆ, glamsham.com ಜೊತೆ ಮಾತನಾಡುತ್ತಾ, ಅವರು ತಮ್ಮ ಮೂರನೇ ಪುಸ್ತಕವನ್ನು ತಮ್ಮ ಮೊಮ್ಮಗಳಿಗೆ ಅರ್ಪಿಸುವುದಾಗಿ ಹೇಳಿದರು. ಇದು ಆಡಿಯೊ ಬುಕ್ ಆಗಿರಲಿದೆ. ಗಮನಾರ್ಹವಾಗಿ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಜೀವನದಲ್ಲಿ ಪುಟ್ಟ ಏಂಜಲ್ ರಾಹಾ ಪ್ರವೇಶಿಸಿದ್ದಾರೆ.
ಮಹೇಶ್ ಭಟ್ ತಮ್ಮ ಆಡಿಯೋ ಬುಕ್ ನ್ನ ತಮ್ಮ ಮೊಮ್ಮಗಳಿಗೆ ಅರ್ಪಿಸಲು ಬಯಸಿದ್ದಾರೆ. ಮೊಮ್ಮಗಳಿಗಾಗಿಯೇ ದನಿ ನೀಡಲು ಬಯಸಿದ್ದಾರೆ ಎನ್ನಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆ ಮಗು ಸ್ವಲ್ಪ ಸಮಯದ ನಂತರ ತನ್ನ ಅಜ್ಜನ ಧ್ವನಿಯನ್ನು ಕೇಳಲು ಸಾಧ್ಯವಾಗುತ್ತದೆ. ಆಲಿಯಾ ಭಟ್ ನನ್ನ ಹೆಗಲ ಮೇಲೆ ಕೂತು ತಿರುಗಾಡಿದ್ದು ನಿನ್ನೆ ಮೊನ್ನೆಯಷ್ಟೇ ಅನ್ನಿಸುತ್ತಿದೆ, ಇಂದು ಆಕೆಯೇ ತಾಯಿಯಾಗಿದ್ದಾಳೆ ಎನ್ನುತ್ತಾರೆ ಮಹೇಶ್ ಭಟ್.
ಇದನ್ನೂ ಓದಿ:
ತನ್ನ ಮಗಳನ್ನೇ ಮದುವೆಯಾಗುತ್ತೇನೆ ಎಂದಿದ್ದ ಮಹೇಶ್ ಭಟ್
ಬಾಲಿವುಡ್‌ನಲ್ಲಿ ಸದಾ ವಾದ ವಿವಾದ ಇದ್ದೇ ಇರುತ್ತದೆ, ಈ ಕಾರಣದಿಂದಾಗಿ ಫಿಲ್ಮಿ ದುನಿಯಾದ ಜನರು ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅಂತಹ ಕೆಲವು ಕಥೆಗಳು ಹೊರಬರುತ್ತವೆ, ಅದು ತಿಳಿದರೆ ನಮಗೆ ಆಶ್ಚರ್ಯವಾಗುತ್ತದೆ, ಅಚ್ಚರಿಯೆನಿಸುತ್ತದೆ ಮತ್ತು ಅವುಗಳನ್ನು ನಂಬುವುದು ಕೂಡ ಕಷ್ಟವೆನಿಸುತ್ತದೆ. ಹೀಗೆ ಈ ಹಿಂದೆಯೂ ಬಹಳ ಬಾರಿ ಆಗಿದೆ. ಫಿಲ್ಮಿ ದುನಿಯಾದ ತೆರೆಮರೆಯ ಕಥೆ ಜನರ ಮುಂದೆ ಬಂದಾಗಲೆಲ್ಲಾ ಕೇಳುಗರಿಗೆ ವಿಚಿತ್ರವೆನಿಸಿರುತ್ತದೆ, ಆಶ್ಚರ್ಯವಾಗುತ್ತದೆ. ಈಗ ಅಂತಹುದೇ ಸ್ಟೋರಿಯೊಂದು ಬೆಳಕಿಗೆ ಬಂದಿದ್ದು ಇದನ್ನ ಒಪ್ಪುಕೊಳ್ಳಲೂ ನಮಗೆ ಸಾಧ್ಯವಾಗುವುದಿಲ್ಲ. ಈ ಸ್ಟೋರಿ ಒಬ್ಬ ತಂದೆಯದ್ದಾಗಿದ್ದು ಆತ ತನ್ನ ಮಗಳನ್ನು ಮದುವೆಯಾಗಲು ಬಯಸಿದ್ದ.
ಹೌದು, ಈ ಸ್ಟೋರಿ ಬಾಲಿವುಡ್‌ನೊ್ಸಿದ್ಧ ಭಟ್ ಕುಟುಂಬದ್ದಾಗಿದೆ. ತಮ್ಮ ಅದ್ಭುತ ಕಲೆಯ ಮೂಲಕ ಮಹೇಶ್ ಭಟ್ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಒಲಿದು ಬಂದಿತ್ತು. ಮಹೇಶ್ ಭಟ್ ಅವರನ್ನು ಬಾಲಿವುಡ್ ನ ಪ್ರಸಿದ್ಧ ಮತ್ತು ಯಶಸ್ವಿ ನಿರ್ದೇಶಕ ಎಂದು ಪರಿಗಣಿಸಲಾಗಿದೆ ಮತ್ತು ಅವರು ತಮ್ಮ ಚಿತ್ರಗಳ ಮೂಲಕ ಇದನ್ನು ಅನೇಕ ಬಾರಿ ಸಾಬೀತುಪಡಿಸಿದ್ದಾರೆ. ಆದರೆ ಮಹೇಶ್ ಭಟ್ ಅವರ ನಿರ್ದೇಶಕನ ಹೊರತಾಗಿ ತುಂಬಾ ವರ್ಣರಂಜಿತ ಮನಸ್ಥಿತಿಯ ವ್ಯಕ್ತಿಯೆಂದಲೂ ಹೆಸರುವಾಸಿಯಾಗಿದ್ದಾರೆ. ಈ ಕಾರಣದಿಂದಲೇ ಹಲವಾರು ಬಾರಿ ಅವರು ಮಾಧ್ಯಮ ಮತ್ತು ದೇಶದ ಮುಂದೆ ಅನೇಕ ಬಾರಿ ಮುಜುಗರವನ್ನು ಅನುಭವಿಸಿದ್ದಾರೆ.
ಮಗಳ ಜೊತೆಯೇ ಲಿಪ್‌ಲಾಕ್ ಮಾಡಿದ್ದ ಮಹೇಶ್ ಭಟ್
ನಿಮಗೆ ನೆನಪಿರಬಹುದು, ಒಮ್ಮೆ ಮ್ಯಾಗಜೀನ್‌ನ ಕವರ್ ಒಂದರ ಮೇಲೆ ಮಹೇಶಗ ಭಟ್ ಹಾಗು ಮಗಳು ಪೂಜಾ ಭಟ್ ಫೋಟೊ ಪ್ರಕಟವಾಗಿತ್ತು. ಈ ಫೋಟೋ ಅಸಹ್ಯಕರವಾಗಿತ್ತು, ಇದರಲ್ಲಿ ಮಹೇಶ್ ಭಟ್ ತನ್ನ ಮಗಳಾದ ಪೂಜಾ ಭಟ್‌ಗೆ ಲಿಪ್ ಲಾಕ್ ಮಾಡುತ್ತಿದ್ದ ದೃಶ್ಯವದು. ಈ ಫೋಟೋ ವೈರಲ್ ಆಗುತ್ತಲೇ ಬಾಲಿವುಡ್‌ನ ಜೊತೆ ಜೊತೆಗೆ ಮಹೇಶ್ ಭಟ್ ಬದುಕಲ್ಲೂ ಕೋಲಾಹಲವೇ ಸೃಷ್ಟಿಯಾಯಿತು. ಈ ವಿಷಯ ಮೀಡಿಯಾಗಳಲ್ಲೂ ಹಬ್ಬಿಬಿಟ್ಟಿತು ಮತ್ತು ಮಹೇಶ್ ಭಟ್ ಈ ಕಾರಣದಿಂದಾಗಿ ಸಾಕಷ್ಟು ಮುಜುಗರವೂ ಅನುಭವಿಸಬೇಕಾಯಿತು. ವಿಷಯ ಇಲ್ಲಿಗೇ ನಿಂತು ಹೋಯಿತು ಅನ್ನೋಷ್ಟೋತ್ತಿಗೆ ಮಹೇಶ್ ಭಟ್ ಮತ್ತೊಂದು ವಿವಾದ ಸೃಷ್ಟಿಸಿಯೇ ಬಿಟ್ಟರು.
ಅವಳು ಮಗಳಾಗಿರದಿದ್ದರೆ ಅವಳನ್ನೇ ಮದುವೆಯಾಗುತ್ತಿದ್ದೆ: ಮಹೇಶ್ ಭಟ್
ಮ್ಯಾಗಜೀನ್ ಕವರ್ ಫೋಟೋ ವಿವಾದ ಕೊನೆಗೊಳಿಸಲು ಮಹೇಶ್ ಭಟ್ ಪ್ರೆಸ್ ಕಾನ್ಫರೆನ್ಸ್ ಒಂದನ್ನ ಕರೆಯುತ್ತಾರೆ, ಅದರಲ್ಲಿ ಅವರು ಮಾತನಾಡುತ್ತ, “ಒಂದು ವೇಳೆ ಪೂಜಾ ಭಟ್ ನನ್ನ ಮಗಳಾಗಿರದಿದ್ದರೆ ನಾನು ಅವನನ್ನೇ ಮದುವೆಯಾಗಿಬಿಡುತ್ತಿದ್ದೆ” ಎಂದು ಹೇಳಿದರು. ಮಹೇಶ್ ಭಟ್ ಇಷ್ಟು ಹೇಳುತ್ತಲೇ ಲಿಪ್ ಲಾಕ್ ವಿವಾದ ಬೇರೆಯ ಹಂತಕ್ಕೇ ಹೋಗಿ ತಲುಪಿಬಿಟ್ಟಿತು. ಈ ವಿವಾದ ಮಹೇಶ್ ಭಟ್ ಮದುವೆಯ ಹೇಳಿಕೆಯ ಬಳಿಕವಂತೂ ಮತ್ತಷ್ಟು ತಾರಕಕ್ಕೇರಿತು.
ಡಿಪ್ರೆಶನ್‌ಗೆ ಸಿಲುಕಿದ್ದ ಮಹೇಶ್ ಭಟ್
ಈ ವಿವಾದದ ಪ್ರಭಾವ ಮಹೇಶ್ ಭಟ್ ಮೇಲೆ ಎಷ್ಟರ ಮಟ್ಟಿಗೆ ಆಯಿತೆಂದರೆ ಅವರು ಡಿಪ್ರೆಶನ್ ಗೆ ಹೋಗಿಬಿಟ್ಟರು. ಬಳಿಕ ಮಹೇಶ್ ಭಟ್ ಮೀಡಿಯಾಗಳಲ್ಲಿ ಸ್ಪಷ್ಟೀಕರಣ ನೀಡುತ್ತ ತಾನು ಬಹಳಷ್ಟು ವಿವಾದಗಳಲ್ಲಿದ್ದೆ ಹಾಗಾಗಿ ಅಂತಹ ಹೇಳಿಕೆ ನೀಡಿದ್ದೆ ಎಂದು ಹೇಳಿದರು. ಆದರೆ ಮಹೇಶ್ ಭಟ್ ಜೀವನದ ಈ ವಿವಾದ ಮಾತ್ರ ಈಗಲೂ ಜೀವಂತವಾಗೇ ಇದೆ ಹಾಗು ಈಗಲೂ ಮಹೇಶ್ ಭಟ್ ಇದಕ್ಕಾಗಿ ಪರಿತಪಿಸುತ್ತಿದ್ದಾನೆ.