ಭಾರತವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ದೇಶ. ಇಲ್ಲಿ ವಿವಿಧ ಸಮುದಾಯದ ಜನರು ಒಟ್ಟಿಗೆ ವಾಸಿಸುತ್ತಾರೆ. ಆದರೂ ದೇಶದಲ್ಲಿ ದಿನಂಪ್ರತಿ, ಧಾರ್ಮಿಕ ಮತಾಂತರದ ಪ್ರಕರಣಗಳು ವಿವಿಧ ಪ್ರದೇಶಗಳಿಂದ ಕೇಳಿಬರುತ್ತಲೇ ಇರುತ್ತವೆ.
ಒಂದು ಕಾಲದಲ್ಲಿ ಹಿಂದೂ ಸಮುದಾಯದ ಕೆಲವರು ಇಸ್ಲಾಂ, ಕ್ರಿಶ್ಚಿಯನ್ ಮತಕ್ಕೆ ಸೇರುತ್ತಿದ್ದರು. ಆದರೆ ಈಗ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ.
ಬಿಹಾರದ ಸಮಸ್ತಿಪುರದ ಮೊಹಮ್ಮದ್ ಅಬ್ದುಲ್ಲಾ ಇದೀಗ ಮತ್ತೆ ಉಮೇಶ್ ರಾಯ್ ಆಗಿದ್ದಾರೆ. ಮೊಹಮ್ಮದ್ ಅಬ್ದುಲ್ಲಾ 15 ವರ್ಷಗಳ ನಂತರ ‘ಘರ್ ವಾಪ್ಸಿ’ ಮಾಡಿದ್ದಾರೆ. ಒಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬಂದು ಇಸ್ಲಾಂಗೆ ಮತಾಂತರಗೊಂಡ ಉಮೇಶ್ ರಾಯ್ ನಂತರ ಮುಸ್ಲಿಂ ಸಮುದಾಯದ ಜನರು ತನ್ನನ್ನು ತನ್ನವ ಎಂದು ಪರಿಗಣಿಸಲಿಲ್ಲ ಎಂದು ಅರಿತುಕೊಂಡರು. ಇದರ ನಂತರ ಅವರು ಮತ್ತೆ ಹಿಂದೂ ಧರ್ಮಕ್ಕೆ ಮರಳಲು ನಿರ್ಧರಿಸಿದರು.
ಅಬ್ದುಲ್ಲಾ ಗ್ರಾಮದ ಮೊಹಮ್ಮದ್ ರಿಯಾಜ್ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದಕ್ಕಾಗಿ ಕರೆದ ಪಂಚಾಯತಿಯಲ್ಲಿ ಆರೋಪಿಯ ಬದಲಾಗಿ ತನ್ನನ್ನ ಆರೋಪಿಯನ್ನಾಗಿ ಮಾಡಿ ತನ್ನ ವಿರುದ್ಧ ತೀರ್ಪು ಬದಲು ಮಾಡಿ ದೂಷಿಸಿದ್ದು ನೋವುಂಟು ಮಾಡಿದೆ. ಈ ಕಾರಣದಿಂದಾಗಿ ಅವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು. ಇದು ಸಮಸ್ತಿಪುರದ ತಾಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೈರವ್ ಖಾರಾ ಗ್ರಾಮದ ಪ್ರಕರಣವಾಗಿದೆ
ಶನಿವಾರ ಗ್ರಾಮದ ಕಾಳಿ ದೇವಸ್ಥಾನದಲ್ಲಿ ಘರ್ ವಾಪಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಹಿಂದೂ ಪುತ್ರ ಸಂಘಟನೆಯು ಪ್ರಮುಖ ಪಾತ್ರ ವಹಿಸಿದೆ. ಮೊದಲಿಗೆ, ಮೊಹಮ್ಮದ್ ಅಬ್ದುಲ್ಲಾ ತನ್ನ ಕ್ಷೌರವನ್ನು ಮಾಡಿಸಿಕೊಂಡನು. ಇದಾದ ನಂತರ ಸ್ನಾನ ಮುಗಿಸಿ ಹಿಂದೂ ಪದ್ಧತಿಯಂತೆ ಪಾಗು, ಜನಿವಾರ ನೀಡಿ ಘರ್ ವಾಪಸಿ ಮಾಡಲಾಯಿತು. ಮಾಹಿತಿಯ ಪ್ರಕಾರ ಮೊಹಮ್ಮದ್ ಅಬ್ದುಲ್ಲಾ ನಿಂದ ಉಮೇಶ್ ಆದ ವ್ಯಕ್ತಿಯ ಜೊತೆ ಪಕ್ಕದ ಮನೆಯವನಾದ ಮೊಹಮ್ಮದ್ ರಿಯಾಜ್ ಹ ಲ್ಲೆ ನಡೆಸಿ ಕೊ ಲೆ ಗೆ ಯತ್ನಿಸಿದ್ದನು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರಿಂದ ಪಂಚಾಯತಿ ನಡೆಸಲಾಗಿತ್ತು. ಆರೋಪಿಯ ಬದಲಿಗೆ, ಮತಾಂತರಗೊಂಡ ಮೊಹಮ್ಮದ್ ಅಬ್ದುಲ್ಲಾ (ಈಗ ಉಮೇಶ್) ನನ್ನೇ ಆರೋಪಿಯನ್ನಾಗಿ ಮಾಡಿ ಆತನ ವಿರುದ್ಧವೇ ಪಂಚಾಯಿತಿ ತೀರ್ಪು ನೀಡಿತು. ಪಂಚಾಯತಿಯ ನಿರ್ಧಾರದಿಂದ ಮನನೊಂದ ಅವರು ಧರ್ಮವನ್ನು ಬದಲಾಯಿಸಲು ನಿರ್ಧರಿಸಿದರು. ಅವರು 15 ವರ್ಷಗಳ ನಂತರ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಮತ್ತು ಅಬ್ದುಲ್ಲಾನಿಂದ ಉಮೇಶ್ ಆದರು.
ಈ ಬಗ್ಗೆ ಮಾತನಾಡಿದ ಉಮೇಶ್, “ಎಲ್ಲರೂ ಒಂದಾಗಿ ನನ್ನ ಜೊತೆ ನಡೆದ ಘಟನೆಯನ್ನ ಮುಚ್ಚಿಟ್ಟು ನನ್ನದೇ ಮ ರ್ಡರ್ ಮಾಡಲು ಪ್ಲ್ಯಾನ್ ಮಾಡಿದ್ದರು. ಹಾಗಾಗಿ ನಾನು ಅಲ್ಲಿಂದ ಓಡಿ ಹೋದೆ. ಅಲ್ಲಿ ನನಗೆ ಯಾರೂ ಆಶ್ರಯ ನೀಡಲಿಲ್ಲ. ಯಾರು ತಪ್ಪು ಮಾಡಿದ್ದರೋ ಅವರ ಜೊತೆಗೇ ಎಲ್ಲರೂ ಹೋದರು. ಎರಡು ದಿನ ನಾನು ಬೇರೆಯವರ ಮನೆಯಲ್ಲಿ ಮಲಗಿದ್ದೆ. ನನ್ನ ಪತ್ನಿಯೂ ನನ್ನ ಮಾತನ್ನ ಕೇಳಲಿಲ್ಲ. ನಾನು ಯಾರ ಜೊತೆ 15 ವರ್ಷ ಕಳೆದಿದ್ದರೋ ಅವಳೇ ಈ ಮಾತನ್ನ ಬಚ್ಚಿಟ್ಟಳು. ಹಾಗಾಗಿ ನಾನು ಅಲ್ಲಿಂದ ಓಡಿ ಹೋದೆ. ನನಗೆ ಜೀವ ಭಯವಿದೆ. ಸ್ಥಳೀಯ ಆಡಳಿತ ನನಗೆ ಭದ್ರತೆ ಕೊಡಬೇಕು” ಎಂದಿದ್ದಾರೆ.
ಮೊಹಮ್ಮದ್ ಅಬ್ದುಲ್ಲಾ ನಿಂದ ಉಮೇಶ್ ಆಗಿ ಘರ್ ವಾಪಸಿ ಆಗಿದ್ದನ್ನ ಸ್ವಾಗತಿಸಿದ ಬಿಜೆಪಿಯ ಸ್ಥಳೀಯ ಶಾಸಕ ವೀರೇಂದ್ರ ಕುಮಾರ್, “ಅವರು ತಮ್ಮ ಸನಾತನ ಧರ್ಮಕ್ಕೆ ಮರಳಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ಇಬ್ರಾಹಿಂ ನಿಂದ ಆದಿತ್ಯ ಆದ 19 ವರ್ಷದ ಯುವಕ
ಉತ್ತರ ಪ್ರದೇಶದ ಯುವಕನೊಬ್ಬ ಇತ್ತೀಚೆಗೆ ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ್ದಾನೆ. ಈ ಯುವಕನ ಹೆಸರು ಇಬ್ರಾಹಿಂ ಆಗಿದ್ದು, ಈ ಇಬ್ರಾಹಿಂ ಈಗ ಆದಿತ್ಯ ಮಿಶ್ರಾ ಆಗಿದ್ದಾನೆ. ಆದಿತ್ಯ ಮಿಶ್ರಾನ ವಯಸ್ಸು 19 ವರ್ಷ. ಹಿಂದೂ ಧರ್ಮಕ್ಕೆ ಸೇರಿದ ನಂತರ ಆತ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾನೆ. ಅಷ್ಟೇ ಅಲ್ಲ ಹಿಂದೂ ಧರ್ಮಕ್ಕೆ ಸೇರಲು ಕಾರಣವನ್ನೂ ತಿಳಿಸಿದ್ದಾನೆ. ಹಿಂದೂ ಧರ್ಮಕ್ಕೆ ಸೇರಿದ ನಂತರವೇ ಕೆಲವರು ಇಬ್ರಾಹಿಂ ನಿಂದ ಆದಿತ್ಯ ಮಿಶ್ರಾ ಆದ ಯುವಕನ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೆಲವರು ಇದನ್ನ ವಿರೋಧಿಸುತ್ತಿರೋದು ಕಂಡುಬರುತ್ತಿದೆ.
ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಆದ ಯುವಕ
19 ವರ್ಷದ ಯುವಕ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಸೇರಲು ನಿರ್ಧರಿಸಿದ್ದ. ಈ ಸಂಪೂರ್ಣ ಪ್ರಕ್ರಿಯೆಯನ್ನು ಲಕ್ನೋದ ನರ್ಹಿಯಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಮಾಡಲಾಗಿದೆ. ದೇವಸ್ಥಾನದಲ್ಲಿ ಆದಿತ್ಯ ವೇದ ಮಂತ್ರಗಳನ್ನು ಪಠಿಸಿದ್ದಾನೆ. ಮಂತ್ರಗಳನ್ನು ಪಠಿಸುವುದರೊಂದಿಗೆ ಹೋಮ ಹವನ ಮಾಡುವ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಚಿತ್ರಗಳಲ್ಲಿ, ಆದಿತ್ಯ ಮಿಶ್ರಾ ಕೇಸರಿ ಬಣ್ಣದ ಶಾಲ್ ಧರಿಸಿರುವುದನ್ನು ನೀವು ನೋಡಬಹುದು.
ಹಿಂದೂ ಕುಟುಂಬದಲ್ಲೇ ಜನಿಸಿದ್ದ ಇಬ್ರಾಹಿಂ
ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚಿನವರು ಹಿಂದೂ ಕುಟುಂಬದಲ್ಲಿ ಜನಿಸಿದವರಾಗಿದ್ದರು. ಆದಿತ್ಯನ ತಾಯಿಯ ಹೆಸರು ಅಲ್ಕಾ ಚತುರ್ವೇದಿ. ಅಲ್ಕಾ ಕಾನ್ಪುರದ ವಿನೋದ್ ಮಿಶ್ರಾ ಅವರನ್ನು 2000 ರಲ್ಲಿ ವಿವಾಹವಾದರು. 2001 ರಲ್ಲಿ ಮಗಳು ಮತ್ತು 2003 ರಲ್ಲಿ ಆದಿತ್ಯ ಜನಿಸಿದರು. ಆದಿತ್ಯ 9 ವರ್ಷ ವಯಸ್ಸಿನವನಾಗಿದ್ದಾಗ ಅವನ ಹೆತ್ತವರು ಡೈವೋರ್ಸ್ ಪಡೆದರು. 2014ರಲ್ಲಿ ಆದಿತ್ಯನ ತಾಯಿ ಲಿಯಾಖತ್ ಖಾನ್ ಎಂಬ ವ್ಯಕ್ತಿಯ ಜೊತೆ ಮದುವೆಯಾದರು. ಅದಾದ ಬಳಿಕವೇ ಆದಿತ್ಯ 2014 ರಲ್ಲಿಯೇ ಇಸ್ಲಾಂ ಮತಕ್ಕೆ ಸೇರಿದ್ದನು.