“ಹಾಂ ನಾನು ಹಿಮಾಲಯದಲ್ಲಿ ಸಾಕ್ಷಾತ್ ಶಿವನನ್ನ ನೋಡಿದೀನಿ, ದೇವರೇ ಬಂದು ನಮಗೆ ಸಹಾಯ ಮಾಡಿದ.. ನನ್ನ ಟೀಂ ಮೆಂಬರ್ಸ್ ಕೂಡ ನೋಡಿದಾರೆ”: ಆರ್ಮಿ ಆಫೀಸರ್ ಬಿಚ್ಚಿಟ್ಟ ರೋಚಕ ಸ್ಟೋರಿ

in Uncategorized 38,257 views

ಭಾರತವೆಂತಹ ದೇಶವೆಂದರೆ ಪ್ರತಿ ಕಣ ಕಣದಲ್ಲೂ ಭಗವಂತನಿದ್ದಾನೆ ಎಂದು ಪೂಜಿಸುವ ಪುಣ್ಯ ಭೂಮಿಯಿದು. ಭೂಮಂಡಲದ ಮೇಲಿರುವ ಪ್ರತಿಯೊಂದು ಜೀವರಾಶಿಯಲ್ಲೂ ಭಗವಂತನಿದ್ದಾನೆ ಎನ್ನುವ ಶ್ರೇಷ್ಟ ತತ್ವ ಭಾರತೀಯರಲ್ಲಿದೆ. 84 ಲಕ್ಷ ಜೀವ ಚರಾಚರಗಳಲ್ಲೂ ನಾವು ಭಗವಂತನನ್ನ ಕಾಣುತ್ತೇವೆ. ಆದರೆ ದೇವರನ್ನ ನಾನು ನೋಡಿದ್ದೇನೆ ಎಂದು ಯಾರಾದರೂ ಹೇಳಿದರೆ ನೀವು ಅದನ್ನ ಸಾರಾಸಗಟಾಗಿ ತಿರಸ್ಕರಿಸುತ್ತೀರ.

Advertisement

ಆದರೆ ಭಗವಂತನನ್ನ ನೋಡಿದ್ದೇನೆ ಎಂದು ಇದೀಗ ಹಿಮಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರ್ಮಿ ಮೇಜರ್ ಒಬ್ಬರು ಹೇಳಿಕೊಂಡಿದ್ದಾರೆ. ಒಬ್ಬ ಮೇಜರ್ ನೇತೃತ್ವದಲ್ಲಿ 15 ಸೈನಿಕರ ಒಂದು ತುಕಡಿ ತಾನು ತೆರಳಿದ್ದ ರಸ್ತೆಯಲ್ಲಿ ಹಾಗು ತಲುಪುವ ಸ್ಥಳದಲ್ಲಿ ಇನ್ನೊಂದು ತುಕಡಿ ಬರೋವರೆಗೂ ಅದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಬೇಕಿತ್ತು.

ಅತೀ ದುರ್ಗಮವಾದ ಸ್ಥಳ, ಭಯಂಕರ ಚಳಿ ಹಾಗು ಮಂಜಿನ ಮಳೆಯಲ್ಲಿ ಒಂದು ಕಪ್ ಚಾಯ್ ಸಿಕ್ಕರೆ ಅದಕ್ಕಿಂತ ಶರೀರಕ್ಕೆ ಸ್ವಲ್ಪ ಟಾನಿಕ್ ಸಿಕ್ಕ ಹಾಗಾಗುತ್ತೆ, ಚಾಯ್ ಕುಡಿದ ಬಳಿಕ ಆರಾಮಾಗಿ ಮುಂದೆ ಸಾಗಲು ಶಕ್ತಿ ಬರುತ್ತೆ ಎಂದು ಮೇಜರ್ ಅಂದುಕೊಳ್ಳುತ್ತಿದ್ದರು. ಆದರೆ ಆ ದು-ರ್ಗ-ಮ ಪ್ರದೇಶದ ಸುತ್ತಮುತ್ತ ಹುಡುಕಿದರೂ ಒಂದು ನರ ಪಿಳ್ಳೆ ಕೂಡ ಕಾಣುತ್ತಿರಲಿಲ್ಲ, ಒಂದು ಮನೆಯೂ ಇರಲಿಲ್ಲ.

ಹೀಗೇ ಮುಂದೆ ಹಲವು ಗಂಟೆಗಳ ಕಾಲ ಪರ್ವತವನ್ನ ಏರುತ್ತಲೇ ಅಲ್ಲೊಂದು ಟೀ ಅಂಗಡಿ ಕಾಣಿಸಿತ್ತು ಆದರೆ ದುರದೃಷ್ಟವಶಾತ್ ಆ ಅಂಗಡಿಗೆ ಹೋಗಿ ಚಹಾ ಕೊಡಿ ಎಂದು ಹೇಳಲು ಹೋದಾಗ ನೋಡಿ ಅಂಗಡಿ ಬಂದ್ ಆಗಿತ್ತು. ಹಸಿವು ಹಾಗು ದಣಿವಿನ ತೀವ್ರತೆಯಿಂದಾಗಿ ಸೈನಿಕರ ಮುಂದೆ ಸಾಗೋಕೆ ಆಗಲ್ಲ ಸರ್, ಈ ಅಂಗಡಿಯ ಲಾ-ಕ್ ಮು ರಿ ದು ಬಿಡೋಣ ಎಂದರು. ಬಳಿಕ ತನ್ನ ಸೈನಿಕರ ಮಾತಿಗೆ ಒಪ್ಪಿದ ಮೇಜರ್ ಆ ಚಹಾ ಅಂಗಡಿಯ ಲಾಕ್ ಮು ರಿ ಯೋಕೆ ಒಪ್ಪಿಗೆ ನೀಡಿಯೇ ಬಿಟ್ಟರು.

ತನ್ನ ತುಕಡಿಯಲ್ಲಿದ್ದ ಸೈನಿಕರು ಲಾಕ್ ಮು ರಿ ದು ಒಳ ನೋಡಿದಾಗ ಚಹಾ ಮಾಡುವ ಎಲ್ಲ ಸಾಮಗ್ರಿಗಳೂ ಅಲ್ಲಿದ್ದವು. ಬಳಿಕ ಸೈನಿಕನೊಬ್ಬ ಆ ಸಾಮಗ್ರಿಗಳನ್ನ ತೆಗೆದುಕೊಂಡು ಚಾಯ್ ಮಾಡಿ ಕುಡಿದು ಅಲ್ಲೇ ಇದ್ದ ಬಿಸ್ಕಟ್ ಗಳನ್ನೂ ತಿಂದು ತಮಗಾಗಿದ್ದ ದಣಿವನ್ನ ಆರಿಸಿಕೊಂಡರು. ಬಳಿಕ ತಮ್ಮ ಪಯಣವನ್ ಮುಂದುವರೆಸಲಾರಂಭಿಸಿದರು.

ಆದರೆ ಕ ಳ್ಳ ರಂತೆ ಅಂಗಡಿಯನ್ನ ಹೀಗೆ ಒ ಡೆ ದು ಹೋಗೋದು ಸರಿಯಲ್ಲ, ನಮಗೂ ಕ ಳ್ಳ ರಿಗೂ ವ್ಯತ್ಯಾಸವೇನಿರುತ್ತೆ ಎಂಬ ಭಾವನೆ ಮೇಜರ್ ರಲ್ಲಿ ಮೂಡಿತು. ಆಗ ಅವರು ತಮ್ಮ ಪರ್ಸ್ ನಿಂದ ಒಂದು ಸಾವಿರ ರೂ. ನೋಟನ್ನ (ನೋಟ್ ಬ್ಯಾನ್ ಆಗುವ ಮುನ್ನ ನಡೆದ ಘಟನೆಯಿದು) ಹೊರತೆಗೆದು ಸಕ್ಕರೆ ಡಬ್ಬದಲ್ಲಿಟ್ಟು ಅಂಗಡಿಯ ಶಟರ್ ಮುಚ್ಚಿ ಅಲ್ಲಿಂದ ಮುಂದೆ ಸಾಗಲಾರಂಭಿಸಿದರು. ಹೀಗೆ ಮಾಡಿದ್ದರಿಂದ ಮೇಜರ್ ರ ಮನಸ್ಸಿಗೂ ಸಂತೃಪ್ತಿಯಾಯಿತು.

ಬಳಿಕ ಮೇಜರ್ ತಮ್ಮ ತುಕಡಿಯ 15 ಜನ ಸೈನಿಕರ ತಂಡದ ಜೊತೆ ತಾವು ಸೇರಬೇಕಿದ್ದ ಸ್ಥಳದತ್ತ ಹೆಜ್ಜೆ ಹಾಕಲು ಶುರು ಮಾಡಿದರು, ಬಳಿಕ ಇವರು ಸೇರಬೇಕಿದ್ದ ಸ್ಥಳದಲ್ಲಿ ಇವರಿಗಾಗಿಯೇ ಕಾಯುತ್ತಿದ್ದ ಹಾಗು ಬೇರೆ ಸ್ಥಳಕ್ಕೆ ಹೋಗಬೇಕಿದ್ದ ತುಕಡಿಯೊಂದು ಕಾಯುತ್ತಿತ್ತು. ಮೇಜರ್ ರವರ ತುಕಡಿ ಆ ಸ್ಥಳಕ್ಕೆ ತಲುಪಿ ಮುಂದಿನ ಮೂರು ತಿಂಗಳುಗಳ ಕಾಲ ಡ್ಯೂಟಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು.

ಆ ಸ್ಥಳಕ್ಕೆ ತಲುಪಿ ಮೂರು ತಿಂಗಳುಗಳ ಕಾಲ ಅದೆ ಜಾಗದಲ್ಲಿ ಕಾರ್ಯ ನಿರ್ವಹಿಸಿ ಮೇಜರ್ ತನ್ನ 15 ಜನ ಸೈನಿಕರ ತುಕಡಿಯ ಜೊತೆ ತಾವು ಬಂದಿದ್ದ ಮತ್ತೆ ಅದೇ ಮಾರ್ಗದತ್ತ ಹೆಜ್ಜೆ ಹಾಕಿದರು. ವಾಪಸ್ ಬರುವಾಗ ಅವರಿಗೆ ತಾವು ಚಹಾ ಕುಡಿದಿದ್ದ ಅಂಗಡಿಯ ನೆನಪಾಗಿ ಆ ಅಂಗಡಿಯಲ್ಲೇ ಸ್ವಲ್ಪ ವಿಶ್ರಾಂತಿ‌ಪಡೆಯೋಣವೆಂದು ತೀರ್ಮಾನಿಸಿದರು. ಆ ಚಹಾ ಅಂಗಡಿ ಕೂಡ ಆಗ ತೆರೆದಿತ್ತು. ಅಂಗಡಿಯಲ್ಲಿ ಹಣ್ಣು ಹಣ್ಣು ವಯಸ್ಸಾದ ಚಾಯ‌್‌ವಾಲಾ ಇದ್ದ, ಆತನಿಗೆ ಹದಿನೈದು ಜನ ಗ್ರಾಹಕರನ್ನ ಒಮ್ಮೆಲೆ ಕಂಡು ಬಹಳಷ್ಟು ಖುಷಿಗೊಂಡಿದ್ದ.

ಅವರೆಲ್ಲರಿಗೂ ಆತ ಚಾಯ್ ಮಾಡಲು ನಿಂತ, ಆಗ ಸೇನೆಯ ಸೈನಿಕರು ಆತನಿಗೆ ಇಂತಹ ದುರ್ಗಮ ಹಾಗು ಯಾರೂ ಬರದೇ ಇರುವ ಸ್ಥಳದಲ್ಲಿ ನೀನ್ಯಾಕೆ ಒಬ್ಬನೇ ಇದೀಯ ಅಂತ ಕೇಳಲಾರಂಭಿಸಿದರು. ಆ ವಯೋವೃದ್ಧ ತಾತ ತನ್ನ ಜೀವನದ ಹಲವಾರು ಕಥೆಗಳನ್ನ ಹೇಳಲಾರಂಭಿಸಿದ ಹಾಗು ದೇವರಿಗೆ ತನ್ನ ಧನ್ಯವಾದಗಳನ್ನ ಅರ್ಪಿಸುತ್ತಲೇ ಇದ್ದ.

ಆಗಲೇ ಒಬ್ಬ ಸೈನಿಕ “ಬಾಬಾ ನೀವು ದೇವರನ್ನ ಇಷ್ಟು ನಂಬುತ್ತೀರ, ಒಂದು ವೇಳೆ ದೇವರಿರೋದು ನಿಜವೇ ಆಗಿದ್ದರೆ ನಿಮ್ಮನ್ನ ಇಂತಹ ಸ್ಥಿತಿಯಲ್ಯಾಕೆ ಇಟ್ಟಿದ್ದಾನೆ?” ಎಂದ. ಅದಕ್ಕುತ್ತರಿಸಿದ ಆ ತಾತ “ಇಲ್ಲ ಸಾರ್ ಹಾಗೆಲ್ಲ ಹೇಳಬಾರದು ಭಗವಂತನಿದ್ದಾನೆ, ನಿಜವಾಗಿಯೂ ದೇವರಿದ್ದಾನೆ… ನಾನು ದೇವರನ್ನ ನೋಡಿದ್ದೇನೆ” ಎಂದ. ಆ ಅಜ್ಜನ ಬಾಯಿಂದ ಬಂದ ಕೊನೆಯ ಶಬ್ದ ಕೇಳಿ ಆ ಸೈನಿಕರು ಕುತೂಹಲದಿಂದ ಆ ಅಜ್ಜನ ಮುಖವನ್ನೇ ನೋಡುತ್ತ ಆತ ಹೇಳುತ್ತಿರೋ ವಿಷಯ ಕೇಳುತ್ತ ಕುಳಿತುಬಿಟ್ಟರು.

ಆ ತಾತ ಮುಂದೆ ಮಾತನಾಡುತ್ತ “ಸಾಹೇಬ್ರೇ ನಾನು ಒಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿ ಲು ಕಿದ್ದೆ, ಭ ಯೋತ್ಪಾ ದಕರು ನನ್ನ ಮಗನನ್ನ ಹಿ ಡಿ ದಿದ್ದರು, ಅವನಿಗೆ ಅವರು ಹಿಗ್ಗಾಮುಗ್ಗಾ ಹೊ ಡೆ ದರು, ಅವನ ಬಳಿ ಯಾವುದೇ ಮಾಹಿತಿ ಇಲ್ಲದಿರೋದನ್ನ ನೋಡಿ ಅವನನ್ನ ಬಿಟ್ಟು ಕಳಿಸಿದರು. ಅದೇ ಸಮಯದಲ್ಲಿ ಅವನನ್ನ ಆಸ್ಪತ್ರೆಗೆ ದಾಖಲಿಸೋಕಂತ ನಾನು ನನ್ನ ಅಂಗಡಿ ಬಂದ್ ಮಾಡಿ ಹೊರಟು ಹೋಗಿದ್ದೆ, ಭ ಯೋತ್ಪಾ ದಕರ ಭ ಯ ದಿಂದ ನನ್ನ ಮಗನ ಚಿಕಿತ್ಸೆಗಾಗಿ ಯಾರೂ ಹಣ ಸಹಾಯ ಮಾಡಲಿಲ್ಲ.

ನನ್ನ ಬಳಿ ಔಷಧಿ ತರೋಕೂ ದುಡ್ಡಿರಲಿಲ್ಲ, ನನ್ನ ಮಗನನ್ನ ಉಳಿಸೋಕೆ ನನ್ನಿಂದ ಸಾಧ್ಯವಾಗುತ್ತಿಲ್ಲ ಅಂತ ರೋ-ದಿಸಿ ನಾನು ಬಿಕ್ಕಿ ಬಿಕ್ಕಿ ಅಳುತ್ತ ಕೂತೆ. ಆಗ ನಾನು ಭಗವಂತನನ್ನ ಪ್ರಾರ್ಥಿಸಿ ನನ್ನ ಕಷ್ಟಕ್ಕೆ ಸಹಾಯ ಮಾಡಪ್ಪಾ ತಂದೆ ಅಂತ ಬೇಡಿಕೊಂಡೆ. ಅದೇ ರಾತ್ರಿ ಸಾಕ್ಷಾತ್ ಭಗವಂತನೇ ನನ್ನ ಅಂಗಡಿಗೆ ಬಂದಿದ್ದ. ನಾನು ಬೆಳಿಗ್ಗೆ ನನ್ನ ಅಂಗಡಿ ತೆರೆಯೋಕೆ ಬಂದು ನೋಡಿದಾಗ ನನ್ನ ಅಂಗಡಿಯಲ್ಲಿದ್ದ ಅಲ್ಪಸ್ವಲ್ಪ ವಸ್ತುಗಳನ್ನೂ ಕ ಳ್ಳ ಕಾಕರು ಲೂ ಟಿ ಮಾಡಿದ್ದಾರಂತ ಅನಿಸಿತು. ಅಂಗಡಿಯೊಳಗೆ ಬಂದು ನೋಡಿದರೆ ಅಲ್ಲಿ ಸಕ್ಕರೆ ಡಬ್ಬದೊಳಗೆ ಒಂದು ಸಾವಿರ ರೂಪಾಯಿಯ ನೋಟ್ ಕಂಡಿತು. ಆ ದೇವರೇ ನನ್ನ ಸಹಾಯಕ್ಕೆ ಆ ರಾತ್ರಿ ಬಂದಿದ್ದ” ಎಂದ.

ಸಾಹೇಬರೇ, ಆ ದಿನ ಆ ಒಂದು ಸಾವಿರ ರೂಪಾಯಿಯ ಆ ನೋಟು ನನ್ನ ಪಾಲಿಗೆ ಬೆಲೆ ಕಟ್ಟಲಾಗದ ವಸ್ತುವಾಗಿಬಿಟ್ಟಿತ್ತು, ಆದರೆ ಭಗವಂತನಿದ್ದಾನೆ ಸಾಹೇಬರೆ, ದೇವರಿದ್ದಾನೆ ಅಂತ ಆ ಅಜ್ಜ ಬಡಬಡಾಯಿಸುತ್ತ ಚಹಾ ಮಾಡುತ್ತಿದ್ದ. ಭಗವಂತನಿದ್ದಾನೆ ಅನ್ನೋ ಆತ್ಮವಿಶ್ವಾಸ ಆ ಅಜ್ಜನ ಕಣ್ಣಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಅಜ್ಜನ ಮಾತುಗಳನ್ನ ಕೇಳುತ್ತ ಕೇಳುತ್ತಲೇ ಅಂಗಡಿಯಲ್ಲಿ ಮೌನ ಆವರಿಸಿತ್ತು.

ಹದಿನೈದು ಜನರ ಆ ತುಕಡಿಯ ಸೈನಿಕರು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ತಮ್ಮ ಮೇಜರ್ ನತ್ತ ಕಣ್ಣು ಹಾಯಿಸಿದ್ದರು. ಮೇಜರ್ ತಮ್ಮ ಕಣ್ಣ ಸನ್ನೆಯಿಂದಲೇ ಅವರಿಗೆ ಸ್ಪಷ್ಟ ಸಂದೇಶವನ್ನ ರವಾನಿಸಿ ಸುಮ್ಮನಿರುವಂತೆ ಸೂಚಿಸಿದ್ದರು. ಬಳಿಕ ಅಲ್ಲಿಂದ ಎದ್ದ ಮೇಜರ್ ಆ ತಾತನನ್ನ ತಬ್ಬಿಕೊಂಡು ಥ್ಯಾಂಕ್ಸ್ ಹೇಳುತ್ತ “ಹೌದು ತಾತ ನನಗೆ ಗೊತ್ತು ದೇವರಿದ್ದಾನೆ ಹಾಗು ನಿಮ್ಮ ಚಾಯ್ ಕೂಡ ಮಸ್ತ್ ಇತ್ತು” ಎಂದು ಬಿಲ್ ನೀಡಿ ಅಲ್ಲಿಂದ ತಮ್ಮ ಮುಂದಿನ ಪ್ರಯಾಣಕ್ಕೆ ಅಣಿಯಾದರು.

ಗೆಳೆಯರೇ ದೇವರಿದ್ದಾನೆ ಅನ್ನೋದನ್ನ ನೀವು ನಂಬುತ್ತೀರೋ ಬಿಡುತ್ತೋರೋ ಗೊತ್ತಿಲ್ಲ ಆದರೆ ಭಗವಂತ ಜನರ ಸಂಕಷ್ಟಗಳಿಗೆ ಸ್ಪಂದಿಸೋಕೆ ದೇವರ ರೂಪದಲ್ಲೇ ಬರಬೇಕಂತೇನಿಲ್ಲ, ನಿಮ್ಮನ್ನೇ ದೇವರಾಗಿಯೂ ಕೂಡ ಬೇರೆಯವರ ಕಷ್ಟಕ್ಕೆ ಸ್ಪಂದಿಸುವಂತೆ ಮಾಡುತ್ತಾನೆ ಅಥವ ಬೇರೆ ಯಾವುದೋ ರೂಪದಲ್ಲಿ ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಬಂದೇ ಬರುತ್ತಾನೆ. ಈ ಅಂಕಣ ಇಷ್ಟವಾಗಿದ್ದರೆ ತಪ್ಪದೇ ಶೇರ್ ಮಾಡಿ

– Vinod Hindu Nationalist

Advertisement
Share this on...