VIDEO| ಜೋಕಾಲಿ ಆಡುವಾಗ 6,300 ಅಡಿ ಪ್ರಪಾತಕ್ಕೆ ಬಿದ್ದ ಮಹಿಳೆಯರು, ವಿಡಿಯೋ ವೈರಲ್

in Kannada News/News 183 views

ಮಾಸ್ಕೋ: ಪರ್ವತದ ತುದಿಯಲ್ಲಿ ಜೋಕಾಲಿ ಆಡುತ್ತಾ ಸಾಹಸ ಮಾಡುವುದು ಎಂದರೆ ಕೆಲವರಿಗೆ ರೋಮಾಂಚನ ನೀಡುತ್ತದೆ. ಅದೇ ರೀತಿ, ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್​ನಲ್ಲಿಯೂ ಇಂಥದ್ದೊಂದು ರೋಚಕ ಕ್ರೀಡೆ ಆಯೋಜಿಸಲಾಗಿತ್ತು.

ಬೆಟ್ಟದ ತುದಿಯಲ್ಲಿ ಜೋಕಾಲಿ ಆಟವನ್ನು ಆಯೋಜನೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್​ ಜೋಕಾಲಿ ಆಡುವಾಗ ಮಹಿಳೆಯರಿಬ್ಬರು ಬೆಟ್ಟದ ಮೇಲ್ಭಾಗದಿಂದ ಸುಮಾರು 6,300 ಅಡಿ ಕೆಳಕ್ಕೆ ಬಿ ದ್ದಿ ದ್ದಾ ರೆ! ಇದರ ವಿಡಿಯೋ ವೈರಲ್​ ಆಗಿದೆ.

Advertisement

ಇಬ್ಬರು ಮಹಿಳೆಯರು ಜೋಕಾಲಿ ಆಡಬೇಕೆಂದು ನಿರ್ಧರಿಸಿ ಜೋಕಾಲಿ ಮೇಲೆ ಕುಳಿತುಕೊಂಡಾಗ ಹಿಂದಿನಿಂದ ವ್ಯಕ್ತಿಯೊಬ್ಬರು ಜೋಕಾಲಿಯನ್ನು ತಳ್ಳುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದಂತೆ ಜೋಕಾಲಿ ತಿರುಗಿ ಇಬ್ಬರು 6,300 ಅಡಿಯಿಂದ ಕೆಳಗೆ ಬಿ ದ್ದಿ ದ್ದಾರೆ. ಎಲ್ಲರೂ ಕಿ ರು ಚಿ ಕೊಂಡಿರುವುದನ್ನು ಈ ದೃಶ್ಯದಲ್ಲಿ ಕಾಣಬಹುದು.

ಆದರೆ ಇಬ್ಬರೂ ಮಹಿಳೆಯರ ಪ್ರಾ ಣ ಕ್ಕೆ ಯಾವುದೇ ಅ ಪಾ ಯ ವಾಗಿಲ್ಲ, ಗಾ ಯ ಗಳಾಗಿವೆಯಷ್ಟೇ ಎನ್ನಲಾಗಿದೆ. ಅವರು ಬೀ‌ ಳು ವ ಸಮಯದಲ್ಲಿ ಅಲ್ಲಿರುವ ಕಂಬವೊಂದನ್ನು ಆಧಾರವಾಗಿ ಇಟ್ಟುಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಅಚ್ಚರಿ ಎನಿಸುವಂತೆ ಪಾರಾಗಿದ್ದಾರೆ ಎನ್ನಲಾಗಿದೆ. ಜೋಕಾಲಿಯಾಡುವ ವೇಳೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮಹಿಳೆಯರು ಬಿ ದ್ದಿ ದ್ದಾ ರೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದ್ದು, ತ ನಿ ಖೆ ಆದೇಶಿಸಿದೆ.

ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ: ಎದುರಿಗೆ ವೇಗವಾಗಿ ಬರುತ್ತಿದ್ದ ರೈಲು, ಇತ್ತ ಹಳಿಯ ಮೇಲೆ ಬೈಕ್ ನಲ್ಲಿ ಸಿಲುಕಿದ್ದ ವ್ಯಕ್ತಿ… ಮುಂದೇನಾಯ್ತು ನೀವೇ ನೋಡಿ

ಗಾಂಧೀನಗರ: ಗುಜರಾತಿನ ಜಮಾನಗರದಲ್ಲಿ ಸಿನಿಮಾ ಶೈಲಿಯ ಶಾಕಿಂಗ್ ವೀಡಿಯೋ ವೈರಲ್ ಆಗಿದೆ. ಒಂದು ಕಡೆ ರೈಲು ಬರುತ್ತಿದ್ರೆ, ಇತ್ತ ಓರ್ವ ವ್ಯಕ್ತಿ ಹಳಿಯಲ್ಲಿ ಸಿಲುಕಿದ್ದ ಸ್ಕೂಟಿ ತೆಗೆಯಲು ಹರಸಾಹಸ ಪಡುತ್ತಿರೋ ವೀಡಿಯೋ ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿದೆ.

ಯುವಕನೋರ್ವ ತನ್ನ ಸ್ಕೂಟಿ ಜೊತೆ ರೈಲ್ವೇ ಹಳಿಯನ್ನ ಕ್ರಾಸ್ ಮಾಡುತ್ತಿದ್ದನು. ಅಷ್ಟರಲ್ಲಿಯೇ ರೈಲು ಆಗಮಿಸುತ್ತಿರೋದು ಕಾಣಿಸಿದೆ. ಯುವಕ ಸಹ ಅವಸರದಲ್ಲಿ ಹಳಿ ಕ್ರಾಸ್ ಮಾಡುವಾಗ ಸ್ಕೂಟರ್ ಅಲ್ಲಿಯೇ ಸಿಲುಕಿಕೊಂಡಿದೆ. ಯುವಕ ಹಳಿಯಿಂದ ಸ್ಕೂಟಿ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ರೆ, ದೂರದಲ್ಲಿದ್ದ ಜನರ ಎದೆ ಬಡಿತ ಪಕ್ಕದಲ್ಲಿದವರಿಗೂ ಕೇಳಿಸುತ್ತಿತ್ತು.

ಯುವಕ 100 ಮೀಟರ್ ಸಮೀಪ ಬರೋವರೆಗೂ ಸ್ಕೂಟಿ ತೆಗೆಯಲು ಪ್ರಯತ್ನಿಸಿದ್ದಾನೆ. ಆದ್ರೆ ಸ್ಕೂಟಿ ಅಲ್ಲಿಯೇ ಸಿಲುಕಿದ ಪರಿಣಾಮ ರೈಲು ಸಮೀಪಕ್ಕೆ ಬರುತ್ತಿದ್ದಂತೆ ಪಕ್ಕಕ್ಕೆ ಜಿಗಿದು ಉಳಿಸಿಕೊಂಡಿದ್ದಾನೆ. ರೈಲು ಸ್ಕೂಟಿಯನ್ನ ಸುಮಾರು 100 ಮೀಟರ್ ವರೆಗೂ ಎಳೆದೊಯ್ದು ನಿಂತಿದೆ. ರೈಲು ನಿಲ್ಲಿಸಿದ ಬಳಿಕ ಚಾಲಕರು ಅಪ್ಪಚ್ಚಿಯಾಗಿದ್ದ ಸ್ಕೂಟಿಯನ್ನ ತೆಗೆದಿದ್ದಾರೆ.

ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎದೆ ಝಲ್ಲೆನ್ನಿಸುವ ವೀಡಿಯೋ ಹೆಚ್ಚು ಶೇರ್ ಆಗುತ್ತಿದೆ. ವಾಹನ ಸವಾರರು ಸೂಚಿತ ಮಾರ್ಗದಲ್ಲಿಯೇ ರೈಲು ಹಳಿಯನ್ನ ಕ್ರಾಸ್ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೋ ನೋಡಿ

 

Advertisement
Share this on...