ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಹಿಂದೂ ಯುವತಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮದರಸಾದ ಹಫೀಜ್ ಹಾಗೂ ಆತನ ಅಳಿಯನನ್ನ ಪೊಲೀಸರು ಬಂಧಿಸಿದ್ದಾರೆ. ತನ್ನ ಕುಕೃತ್ಯವೆಸಗಿ ಯುವತಿಯನ್ನ ರೇ-ಪ್ ಮಾಡಲು ಹಫೀಜ್ ಸಂತ್ರಸ್ತೆಗೆ ಭೂತ ಪ್ರೇತಗಳ ಭಯವನ್ನು ತೋರಿಸಿದ್ದ ಎಂದು ಹೇಳಲಾಗುತ್ತಿದೆ. ಯುವತಿಯನ್ನ ಅಪಹರಿಸಿ ನೇಪಾಳ ಗಡಿಯಲ್ಲಿರುವ ಮದರಸಾಕ್ಕೆ ಕರೆದೊಯ್ಯಲಾಗಿತ್ತು. ಘಟನೆಯು ಜನವರಿ 1, 2023 ರಂದು ನಡೆದಿದ್ದು, ಜನವರಿ 11, 2023 ರಂದು (ಬುಧವಾರ) ಪೊಲೀಸರಿಗೆ ದೂರು ನೀಡಲಾಗಿದೆ.
ಈ ಘಟನೆ ಕೊತ್ವಾಲಿ ನಗರ ಪ್ರದೇಶದ ಸಹಾದತ್ಪುರಕ್ಕೆ ಸಂಬಂಧಿಸಿದೆ. ಸಂತ್ರಸ್ತೆಯ ಸಂಬಂಧಿಕರು ಜನವರಿ 11 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಅವರು ಸಲ್ಮಾನ್ ಮತ್ತು ಅವರ ನೆರೆಹೊರೆಯಲ್ಲಿ ವಾಸಿಸುವ ಇನ್ನೊಬ್ಬ ಅಪರಿಚಿತ ವ್ಯಕ್ತಿಯನ್ನು ಹೆಸರಿಸಿದ್ದಾರೆ ಮತ್ತು ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಯ ಕುಟುಂಬದ ಬಳಿ ಸಲ್ಮಾನ್ ಎಂಬ ವ್ಯಕ್ತಿ ಬಾಡಿಗೆಗೆ ವಾಸವಾಗಿದ್ದ. ಸಂತ್ರಸ್ತ ಕುಟುಂಬದವರ ಮನೆಗೆ ಆಗಾಗ ಆತ ಭೇಟಿ ನೀಡುತ್ತಿದ್ದರು. ಆತನನ್ನು ತಿಳಿಹೇಳಲು ಪ್ರಯತ್ನಿಸಿದಾಗ ಆತ ಯುವತಿಯನ್ನ ಮನೆಯಿಂದ ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜನವರಿ 1 ರಂದು 21 ವರ್ಷದ ಸಂತ್ರಸ್ತೆ ಔಷಧಿ ತರಲು ಮನೆಯಿಂದ ಹೊರ ಹೋದವಳು ವಾಪಸ್ ಹಿಂತಿರುಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತೆ ತನ್ನ ತಾಯಿಯ ಮೊಬೈಲ್‌ನ್ನ ತೆಗೆದುಕೊಂಡು ಹೋಗಿದ್ದಳು, ಆದರೆ ಬಳಿಕ ಅದು ಸ್ವಿಚ್ ಆಫ್ ಆಗಿತ್ತು. ಸಂತ್ರಸ್ತೆಯ ಮನೆಯವರು ಸಾಕಷ್ಟು ಹುಡುಕಾಟ ನಡೆಸಿದರೂ ಯುವತಿ ಎಲ್ಲಿಯೂ ಪತ್ತೆಯಾಗಿರಲಿಲ್ಲ. ನಂತರ ಅವರು ಸಲ್ಮಾನ್‌ಗಾಗಿ ಹುಡುಕಾಟ ನಡೆಸಿದರು ಆದರೆ ಸಲ್ಮಾನ್ ಕೂಡ ನಾಪತ್ತೆಯಾಗಿದ್ದ. ಸಲ್ಮಾನ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಆತನ ತಂದೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದರು. ಸಲ್ಮಾನ್‌ನಿಂದ ಹುಡುಗಿಯರ ಖರೀದಿ ಮತ್ತು ಮಾರಾಟದ ಬಗ್ಗೆಯೂ ತನಗೆ ಮಾಹಿತಿ ಸಿಕ್ಕಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.
ತಕ್ಷಣ ಪೊಲೀಸರು ಅಪಹರಣಕ್ಕಾಗಿ ಐಪಿಸಿ 366, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಹಾಗು ಬೆದರಿಕೆ ಹಾಕಿದ್ದಕ್ಕಾಗಿ ಸೆಕ್ಷನ್ 506 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಯುವತಿಯನ್ನು ತನ್ನೊಂದಿಗೆ ಉತ್ತರ ಪ್ರದೇಶದ ನೇಪಾಳದ ಗಡಿಯಲ್ಲಿರುವ ಮಹಾರಾಜ್‌ಗಂಜ್ ಜಿಲ್ಲೆಯ ಸಿಸ್ವಾ ಪಟ್ಟಣದ ಮದರಸಾಕ್ಕೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಈ ಮದರಸಾದ ಹಫೀಜ್ ಮೊಹಮ್ಮದ್ ಇಸ್ಲಾಂ ಸಲ್ಮಾನ್ ನ ಭಾವನಾಗಿದ್ದಾನೆ.
ಸಲ್ಮಾನ್ ನ ಭಾವ ಮೊಹಮ್ಮದ್ ಇಸ್ಲಾಂ ತನಗೆ ಭೂತ ಪ್ರೇತಗಳ ಭಯವನ್ನು ತೋರಿಸಿ ಸಲ್ಮಾನ್ ಜೊತೆ ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ನ್ಯಾಯಾಲಯದಲ್ಲಿ ದಾಖಲಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಪೊಲೀಸರು ಸಲ್ಮಾನ್‌ನ ಭಾವ ಮೊಹಮ್ಮದ್ ಇಸ್ಲಾಂ ನನ್ನೂ ಬಂಧಿಸಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇಬ್ಬರೂ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ:
“ನಾನೇನು ಹಿಂದೂ ಅಂದ್ಕೊಂಡಿದ್ದಾ? ನನ್ನ ಹೆಸರು ರಿಯಲ್ ಹೆಸರು ಫೈಜಲ್, ನಿನ್ನ ಆ ವಿಡಿಯೋ ಮಾಡ್ಕೊಂಡು ಇಟ್ಟಿದೀನಿ”: ಅಪ್ರಾಪ್ತ ದಲಿತ ಯುವತಿಯನ್ನ ಹಲವು ಬಾರಿ ರೇ-ಪ್ ಮಾಡಿ ಲವ್ ಜಿಹಾದ್ ಖೆಡ್ಡಾಗೆ ಬೀಳಿಸಿದ ಮುಸ್ಲಿಂ ಯುವಕ
ಲವ್ ಜಿಹಾದ್ ಆರೋಪಿ ಫೈಝಲ್ ಸೈಯದ್ ಅಬ್ಬಾಸ್ ನನ್ನು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬಂಧಿಸಿದ ಬಳಿಕ ಇದೀಗ ಅಪ್ರಾಪ್ತ ಬಾಲಕಿಗೆ ಅಬಾರ್ಷನ್ ಮಾಡಿದ ವೈದ್ಯನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಡಾ.ಮಯಾಂಕ್ ಶ್ರೀವಾಸ್ತವ್‌ನ ಹೋಮಿಯೋಪತಿ ಕ್ಲಿನಿಕ್ ಅನ್ನು ಸೀಲ್ ಮಾಡಿದ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ಮಾಡಿಸಿ ಫೈಝಲ್ ತನ್ನನ್ನು ಬಲೆಗೆ ಬೀಳಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.
ಓಜಾಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ ತ್ಯಾ ಚಾರ ಮತ್ತು ಲವ್ ಜಿಹಾದ್ ಪ್ರಕರಣದ ತನಿಖೆ ನಡೆಸುತ್ತಿರುವ ಭೋಪಾಲ್ ಪೊಲೀಸರು ಹೋಮಿಯೋಪತಿ ವೈದ್ಯ ಮಯಾಂಕ್ ಶ್ರೀವಾಸ್ತವ್‌ನನ್ಮೂ ಬಂಧಿಸಿದ್ದಾರೆ. 50 ಸಾವಿರ ರೂಪಾಯಿ ಪಡೆದು ಅಪ್ರಾಪ್ತ ಬಾಲಕಿಗೆ ಮಯಾಂಕ್ ಶ್ರೀವಾಸ್ತವ ಅಬಾರ್ಷನ್ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಅಕ್ರಮವಾಗಿ ಅಬಾರ್ಷನ್ ಮಾಡಿದ್ದಕ್ಕಾಗಿ ಡಾ. ಮಯಾಂಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತನ ಕ್ಲಿನಿಕ್ ಕೂಡ ಸೀಲ್ ಮಾಡಲಾಗಿದೆ. ಆರೋಪಿ ವೈದ್ಯ ಇದುವರೆಗೆ ಎಷ್ಟು ಅಕ್ರಮ ಅಬಾರ್ಷನ್ ಮಾಡಿದ್ದಾನೆ ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಡಿಸೆಂಬರ್ 13, 2022 ರಂದು ದಲಿತ ಯುವತಿಯೊಬ್ಬಳು ಫೈಝಲ್ ಸೈಯದ್ ಅಬ್ಬಾಸ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಫೈಝಲ್ ಎಂಬ ವ್ಯಕ್ತಿ ಶಾನ್ ಪಂಡಿತ್ ಎಂದು ಹೇಳಿಕೊಂಡು ತನ್ನೊಂದಿಗೆ ಸ್ನೇಹ ಬೆಳೆಸಿದ್ದ. ಆರೋಪಿ ಶಾನ್ ಪಂಡಿತ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಕೂಡ ಹೊಂದಿದ್ದ. ಇದರಿಂದಾಗಿ ಯುವತಿ ಆತನನ್ನ ನಂಬಿದ್ದಳು. ಮೂರು ವರ್ಷಗಳ ಹಿಂದೆ ಆಕೆಯ ಹುಟ್ಟುಹಬ್ಬದ ನೆಪದಲ್ಲಿ ಆರೋಪಿ ಆಕೆಯನ್ನು ಹೋಟೆಲ್‌ಗೆ ಕರೆಸಿಕೊಂಡಿದ್ದನು. ಅಲ್ಲಿ ಆಕೆ ಮೊದಲ ಬಾರಿಗೆ ಅ ತ್ಯಾ ಚಾ ರಕ್ಕೊಳಗಾಗಿದ್ದಳು ಎಂದು ಹುಡುಗಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕಿಯ ಜೊತೆಗಿನ ದುಷ್ಕರ್ಮದ ಬಳಿಕ ಫೈಜಲ್ ತನ್ನ ಅಸಲಿಯತ್ತನ್ನ ಹುಡುಗಿಗೆ ತಿಳಿಸಿದ್ದಾನೆ. “ನನ್ನ ಹೆಸರು ಫೈಜಲ್ ಅಬ್ಬಾಸ್ ಹೊರತು ನಾನೇನು ಹಿಂದೂ ಅಲ್ಲ. ನಿನ್ನ ವಿಡಿಯೋ ಮಾಡಿಟ್ಟಿದೀನಿ, ಈಗ ನಾನು ಯಾವಾಗ ಎಲ್ಲೇ ಕರೆದರೂ ನೀನು ಬರಲೇಬೇಕು. ಒಂದು ವೇಳೆ ಈ ವಿಷಯವನ್ನ ಹೊರಗಡೆ ಯಾರಿಗಾದರೂ ತಿಳಿಸಿದರೆ ಈ ವಿಡಿಯೋ ನಿನ್ನ ಮನೆಯವರಿಗೆ ತೋರಿಸಿಬಿಡ್ತೀನಿ, ಸೋಶಿಯಲ್ ಮೀಡಿಯಾಗಳಲ್ಲೂ ಅಪ್‌ಲೋಡ್ ಮಾಡಿಬಿಡ್ತೀನಿ” ಎಂದಿದ್ದ.
ಸಮಾಜದಲ್ಲಿ ತನ್ನ ಮರ್ಯಾದೆ ಹರಾಜಾಗುತ್ತೆ ಎಂಬ ಭಯದಿಂದ ಮೂರು ವರ್ಷಗಳ ಕಾಲ ಆತ ಹೇಳಿದ್ದನ್ನೆಲ್ಲಾ ಕೇಳುತ್ತಾ ಬಂದಿದ್ದೆ ಎಂದು ಹುಡುಗಿ ತಿಳಿಸಿದ್ದಾಳೆ. ಈ ಮಧ್ಯೆ ಹುಡುಗಿ ಗರ್ಭಿಣಿಯಾಗಿದ್ದಾಳೆ. ವರದಿಗಳ ಪ್ರಕಾರ 2 ಬಾರಿ ಯಾವುದೋ ಔಷಧದ ಮೂಲಕ ಅಬಾರ್ಷನ್ ಮಾಡಿಸಲಾಗಿತ್ತು ಹಾಗು ಒಂದು ಬಾರಿ ಡಾ.ಮಯಾಂಕ್ ಶ್ರೀವಾಸ್ತವ್ ಸಹಾಯ ಪಡೆಯಲಾಗಿತ್ತು. ಹುಡುಗಿಯ ಅಬಾರ್ಷನ್ ಮಾಡಿಸೋಕೆ ಮಯಾಂಕ್ 50 ಸಾವಿರ ಪಡೆದಿದ್ದ ಎಂದು ಹೇಳಲಾಗುತ್ತಿದೆ.
ಫೈಜಲ್‌ನ ಈ ಕೃತ್ಯದಲ್ಲಿ ಆತನ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರೆ. ತಾನು ಫೈಜಲ್‌ನ ತಂದೆಯ ಅಕೌಂಟ್ ಗೆ ಹಲವಾರು ಬಾರಿ ಹಣ ಕಳುಹಿಸಿದ್ದೆ. ಇಷ್ಟೇ ಅಲ್ಲದೆ ಫೈಜಲ್ ಸಂತ್ರಸ್ತೆಯ ಕಾಲೇಜ್ ಫೀಸನ್ನೂ ಕಸಿದುಕೊಂಡಿದ್ದನು. ಹುಡುಗಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ “ದಲಿತಳನ್ನ ನಾನು ಮದುವೆಯಾಗೋಕೆ ಸಾಧ್ಯವಿಲ್ಲ, ಮೊದಲು ಇಸ್ಲಾಂಗೆ ಮತಾಂತರವಾಗಬೇಕು” ಎಂದು ಫೈಜಲ್ ಹೇಳುತ್ತಿದ್ದ. ಬಳಿಕ ಫೈಜಲ್‌ನ ಕಾಟದಿಂದ ಬೇಸತ್ತು ಹುಡುಗಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ನೀಡಿ FIR ದಾಖಲಿಸಿದ್ದಾಳೆ.