“50-100 ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರ ಆಡಳಿತ ಬರುತ್ತೆ, ಆಗ ರಾಮಮಂದಿರ ಕೆಡವಿ ಮತ್ತೆ ಮಸ್ಜಿದ್ ಕಟ್ಟುತ್ತೇವೆ, ನಮ್ಮ ಮುಂದಿನ ಪೀಳಿಗೆ ಸುಮ್ಮನಿರಲ್ಲ”: ಮೌಲಾನಾ ಸಾಜಿದ್

in Uncategorized 2,890 views

ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಬಗ್ಗೆ ಹಗಲಿರುಳು ಅಳುವ ಮೂಲಭೂತವಾದಿಗಳು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಯೋಧ್ಯೆಯಲ್ಲಿ ಮಸೀದಿ ಇತ್ತು ಮುಂದೆಯೂ ಅದು ಹಾಗೆಯೇ ಉಳಿಯುತ್ತದೆ ಎಂದು ಕಾಲಕಾಲಕ್ಕೆ ಬೆದರಿಕೆ ಹಾಕುತ್ತಲೇ ಇರುತ್ತಾರೆ. ಇನ್ನು 100 ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಂ ಆಡಳಿತ ಬಂದ ತಕ್ಷಣ ರಾಮಮಂದಿರದ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗುವುದು ಎಂದು ಮೌಲಾನಾ ಹೇಳಿದ್ದಾನೆ.

Advertisement

ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಭಾರತದ ಕಾನೂನು ಮತ್ತು ಸುವ್ಯವಸ್ಥೆಗೆ ನೇರವಾಗಿ ಸವಾಲು ಹಾಕಿದ್ದಾನೆ. 50-100 ವರ್ಷಗಳ ನಂತರ ಭಾರತದಲ್ಲಿ ಮತ್ತೆ ಮುಸ್ಲಿಂ ಆಡಳಿತ ಬಂದಾಗ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಕೆಡವಿ ಮತ್ತೆ ಮಸೀದಿ ಕಟ್ಟಬಹುದು, ನಮ್ಮ ಮುಂದಿನ ಪೀಳಿಗೆ ಸುಮ್ಮನಿರಲ್ಲ ಎಂದು ಹೇಳಿದ್ದಾನೆ.

ಮೌಲಾನಾ ರಶೀದಿ ಮಾತನಾಡುತ್ತ, “ಇಂದು ಮುಸ್ಲಿಮರು ಮೌನವಾಗಿದ್ದಾರೆ. ನಮ್ಮ ಮುಂದಿನ ಸಂತತಿ… ನನ್ನ ಮಗ, ಅವನ ಮಗ, ಅವನ ಮೊಮ್ಮಗ…. 50-100 ವರ್ಷಗಳ ನಂತರ ನಮ್ಮ ಮಸೀದಿಯನ್ನು ಕೆಡವಿ ದೇವಸ್ಥಾನವನ್ನಾಗಿ ಮಾಡಿದ ಇತಿಹಾಸ ಅವರ ಮುಂದೆ ಬರುತ್ತದೆ. ಆ ಸಮಯದಲ್ಲಿ ಭಾರತದಲ್ಲಿ ಮುಸ್ಲಿಂ ದೊರೆ ಇರಬಹುದು, ಮುಸ್ಲಿಂ ನ್ಯಾಯಾಧೀಶರು ಬರಬಹುದು ಅಥವಾ ಮುಸ್ಲಿಂ ಆಡಳಿತ ಬರಬಹುದು… ಬದಲಾವಣೆ ಆಗಬಹುದು ಎಂದು ಏನೂ ಹೇಳಲಾಗದು… ಹಾಗಾದರೆ ಆ ಇತಿಹಾಸದ ಆಧಾರದಲ್ಲಿ ನಮ್ಮ ಮುಂದಿನ ಪೀಳಿಗೆ ಈ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟುವುದಿಲ್ಲವೇ? ಖಂಡಿತವಾಗಿಯೂ ಮಾಡಲಾಗುವುದು” ಎಂದಿದ್ದಾನೆ.

ಟೈಮ್ಸ್ ನೌ ನವಭಾರತದೊಂದಿಗೆ ಮಾತನಾಡಿದ ಮೌಲಾನಾ, “ಈ ದೇಶದ ಇತಿಹಾಸವನ್ನು ಬರೆಯಲಾಗುವುದು ಮತ್ತು 1992 ರಲ್ಲಿ ಬಾಬರಿ ಮಸೀದಿ ಧ್ವಂಸವಾಯಿತು ಎಂದು ಇತಿಹಾಸವನ್ನು ಬರೆಯಲಾಗುವುದು ಎಂದು ಹೇಳಿದರು ಮತ್ತು ಆ ನಂತರ ಅಂದಿನ ಪ್ರಧಾನಿ ಹೋಗಿ ರಾಮಮಂದಿರದ ಶಂಕುಸ್ಥಾಪನೆ ಮಾಡಿದರು. ಇದು ಸಂಪೂರ್ಣವಾಗಿ ಸಂವಿಧಾನಕ್ಕೆ ವಿರುದ್ಧವಾಗಿತ್ತು” ಎಂದಿದ್ದಾನೆ.

ಆದಾಗ್ಯೂ, ಟಿವಿ ಚರ್ಚೆಯ ಸಮಯದಲ್ಲಿ ಮುಸ್ಲಿಂ ಭಾಷಣಕಾರರು ರಶೀದಿಯ ಹೇಳಿಕೆಯನ್ನು ವೈಯಕ್ತಿಕ ಎಂದು ಹೇಳುವ ಮೂಲಕ ಆತನ ಅಪಾಯಕಾರಿ ಉದ್ದೇಶಗಳ ಗಂಭೀರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಆದರೆ, ರಶೀದಿಯ ಹೇಳಿಕೆಯನ್ನು ಖಂಡಿಸುವ ಅಥವಾ ಆತನ ಹೇಳಿಕೆಯ ವಿರುದ್ಧ ಫತ್ವಾ ಹೊರಡಿಸುವ ಒಬ್ಬೇ ಒಬ್ಬ ಮುಸ್ಲಿಂ ವಿದ್ವಾಂಸರೂ ಮುಂದೆ ಬಂದಿಲ್ಲ.

ಇದು ಕೇವಲ ಸಾಜಿದ್ ರಶೀದಿ ಹೇಳಿಕೆಯಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಹಲವು ಮುಖಂಡರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ‘ಬಾಬರಿ ಮಸೀದಿ ಅಯೋಧ್ಯೆಯಲ್ಲೇ ಇತ್ತು, ಇದೆ ಮತ್ತು ಅಲ್ಲೇ ಇರುತ್ತೆ, ಇನ್ಶಾ ಅಲ್ಲಾಹ್’ ಎಂದು ಪದೇ ಪದೇ ಹೇಳುತ್ತಲೇ ಇರುತ್ತಾನೆ. ಮಸ್ಜಿದ್‌ನ್ನ ಶಹೀದ್ ಮಾಡಿ ನಂತರ ಅಲ್ಲಿ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಮುಸ್ಲಿಮರು ತಮ್ಮ ಮುಂದಿನ ಸಂತತಿಯನ್ನು ಹೇಳುತ್ತಾರೆ ಎಂದೂ ಓವೈಸಿ ಹೇಳಿದ್ದ.

ಇಷ್ಟೇ ಅಲ್ಲ, ಡಿಸೆಂಬರ್ 6, 2022 ರಂದು, ಅಲಿಘಡ್ ಮುಸ್ಲಿಂ ಯೂನಿವರ್ಸಿಟಿ (AMU) ವಿದ್ಯಾರ್ಥಿ ನಾಯಕ ಮೊಹಮ್ಮದ್ ಫರೀದ್ ಅದನ್ನು ‘ಬ್ಲ್ಯಾಕ್ ಡೇ’ ಎಂದು ಆಚರಿಸುವ ಮೆರವಣಿಗೆಯನ್ನು ನಡೆಸಿದ್ದ. ‘ಜಬ್ ಅರ್ಜೆ ಖುದಾ ಕೆ ಕಾಬ್ ಸೇ, ಸಬ್ ಬೂತ್ ಉತರವಾಯೇ ಜಾಯೇಂಗೆ’ ಎಂಬ ಭಿತ್ತಿಪತ್ರಗಳನ್ನು ವಿದ್ಯಾರ್ಥಿಗಳು ಕೈಯಲ್ಲಿ ಹಿಡಿದುಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳು ‘ಬಾಬ್ರಿ ಮಸೀದಿ ಇನ್ನೂ ಜೀವಂತವಾಗಿದೆ. ಮಸೀದಿ ಇತ್ತು, ಅದು ಇದೆ ಮತ್ತು ಇನ್ಶಾ ಅಲ್ಲಾ ಅದು ಮುಂದೆಯೂ ಇರುತ್ತದೆ’ ಎಂದು ಘೋಷಣೆ ಕೂಗಿದ್ದರು.

ಮುಸ್ಲಿಂ ರಾಜಕಾರಣಿ ಅಸಾದುದ್ದೀನ್ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಹೇಳುತ್ತಿರುವ ಮಾತನ್ನೇ ಮೌಲಾನಾ ಸಾಜಿದ್ ರಶೀದಿ ಹೇಳುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ ಇದು ಒಬ್ಬ ವ್ಯಕ್ತಿಯ ವೈಯಕ್ತಿಕ ಹೇಳಿಕೆಯೆಂದು ಗಂಭೀರವಾಗಿ ಪರಿಗಣಿಸದೆ ಇರಲು ಸಾಧ್ಯವಿಲ್ಲ. 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು PFI ಯ ಟೂಲ್‌ಕಿಟ್‌ನಂತೆ ಇದರ ಹಿಂದೆ ಕೆಲವು ಆಳವಾದ ಪಿತೂರಿ ಇರಬಹುದು.

Advertisement
Share this on...