ಕೇರಳ ಹೈಕೋರ್ಟ್‌ನ ವಕೀಲ #ಮೊಹಮ್ಮದ್_ಮುಬಾರಕ್: ಕುತ್ತಿಗೆ ಕತ್ತರಿಸುವ ಟ್ರೇನಿಂಗ್ ಕೊಡುತ್ತಿದ್ದ, ಬೇರೆ ಬೇರೆ ರಾಜ್ಯಗಳಲ್ಲಿ ರೆಡಿ ಮಾಡಿದ್ದ ‘ಹಿಟ್ ಸ್ಕ್ವಾಡ್’

in Uncategorized 1,225 views

ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜತೆ ಸಂಬಂಧ ಹೊಂದಿರುವ ಮತ್ತೊಬ್ಬ ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಈತನ ಹೆಸರು ಮೊಹಮ್ಮದ್ ಮುಬಾರಕ್ ಆಗಿದ್ದು ಈತ ಕೇರಳ ಹೈಕೋರ್ಟ್‌ನಲ್ಲಿ ವಕೀಲನಾಗಿದ್ದಾರೆ. ಆರೋಪಿ ಮುಬಾರಕ್ ಕೇರಳದ ಎರ್ನಾಕುಲಂ ನಿವಾಸಿ. ಈತನನ್ನ ಗುರುವಾರ (ಡಿಸೆಂಬರ್ 29, 2022) ಬಂಧಿಸಲಾಗಿದೆ.

Advertisement

ಮಾಧ್ಯಮ ವರದಿಗಳ ಪ್ರಕಾರ, ಮೊಹಮ್ಮದ್ ಮುಬಾರಕ್ ಪಿಎಫ್‌ಐ ಕಾರ್ಯಕರ್ತರಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡುತ್ತಿದ್ದರು. ನಿಷೇಧಿತ ಸಂಘಟನೆಯ ಸದಸ್ಯರಿಗೆ ಟಾರ್ಗೆಟ್ ‌ನ್ನ ಹೀಗೆ ಕೊ-ಲ್ಲಬೇಕು ಎಂಬುದರ ಬಗ್ಗೆ ಟ್ರೇನಿಂಗ್ ನೀಡುತ್ತಿದ್ದ. ಮುಬಾರಕ್ ಮನೆಯಿಂದ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಕೊ ಡ ಲಿ, ಕ ತ್ತಿ ಸೇರಿದಂತೆ ಇತರ ಕೆಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಬ್ಯಾಡ್ಮಿಂಟನ್ ಬ್ಯಾಗ್‌ನಲ್ಲಿ ಇರಿಸಲಾಗಿತ್ತು.

ಬಂಧಿತ ವಕೀಲ ಮೊಹಮ್ಮದ್ ಮುಬಾರಕ್ ವಿವಿಧ ರಾಜ್ಯಗಳಲ್ಲಿ ಹಿಟ್ ಸ್ಕ್ವಾಡ್‌ಗಳನ್ನು ನಡೆಸುತ್ತಿದ್ದ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 20 ಗಂಟೆಗಳ ಮ್ಯಾರಥಾನ್ ವಿಚಾರಣೆಯ ನಂತರ ಎನ್‌ಐಎ ಈತನನ್ನ ಬಂಧಿಸಿದೆ. ಸದ್ಯ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಈತನ ಪತ್ನಿಯೂ ವಕೀಲೆ. ಗಮನಾರ್ಹವೆಂದರೆ ಡಿಸೆಂಬರ್ 29 ರಂದು ಎನ್‌ಐಎ ಕೇರಳದ 56 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು.

ಎಫ್‌ಐಆರ್ ಸಂಖ್ಯೆ RC-02/2022/NIA/KOC ಪ್ರಕರಣದಲ್ಲಿ ಸೆಪ್ಟೆಂಬರ್ 19, 2022 ರಂದು ಎನ್‌ಐಎ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಈ ದಾಳಿ ನಡೆಸಿದೆ. ಈ ಎಫ್‌ಐಆರ್‌ನಲ್ಲಿ, ಪಿಎಫ್‌ಐಗೆ ಸಂಬಂಧಿಸಿದ ಸದಸ್ಯರು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆಯೂ ಎನ್‌ಐಎ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

PFI ಗೆ ಸಂಬಂಧಿಸಿದ 11 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್

ಮತ್ತೊಂದೆಡೆ, ಮತ್ತೊಂದು ಪ್ರಕರಣದಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೈದರಾಬಾದ್‌ನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಗೆ ಸೇರಿದ 11 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣವು ತೆಲಂಗಾಣದ ನಿಜಾಮಾಬಾದ್‌ಗೆ ಸಂಬಂಧಿಸಿದೆ, ಇದರಲ್ಲಿ ಎಲ್ಲಾ ಆರೋಪಿಗಳು ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ ಮತ್ತು ಅಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಆರೋಪಿಗಳು ಯೋಗ ಮತ್ತು ಕರಾಟೆ ತರಗತಿ ನೆಪದಲ್ಲಿ ಮುಸ್ಲಿಂ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಮಯದಲ್ಲಿ ಮುಸ್ಲಿಂ ಯುವಕರಿಗೆ ಯಾರನ್ನಾದರೂ ತಕ್ಷಣವೇ ಕೊ ಲ್ಲ ಲು ದೇ ಹ ದ ಯಾವ ಭಾಗವನ್ನು ಹೇಗೆ ಕ ತ್ತ ರಿಸಬೇಕೆಂದು ಕಲಿಸಲಾಗುತ್ತಿತ್ತು. ಇದರಲ್ಲಿ ಗಂ ಟ ಲು ಕ ತ್ತ ರಿ‌ಸುವ ತರಬೇತಿಯನ್ನೂ ನೀಡಲಾಗುತ್ತಿತ್ತು

ಬಂಧಿತ ಆರೋಪಿಗಳ ಹೆಸರು ಅಬ್ದುಲ್ ಖಾದಿರ್, ಅಬ್ದುಲ್ ಅಹದ್, ಶೇಖ್ ಇಲ್ಯಾಸ್, ಅಬ್ದುಲ್ ಸಲೀಂ, ಶೇಖ್ ಸಾಹದುಲ್ಲಾ, ಫಿರೋಜ್ ಖಾನ್, ಮುಹಮ್ಮದ್ ಉಸ್ಮಾನ್, ಸೈಯದ್ ಯಾಹಿಯಾ ಸಮೀರ್, ಶೇಖ್ ಇಮ್ರಾನ್, ಮೊಹಮ್ಮದ್ ಅಬ್ದುಲ್ ಮುಬೀನ್ ಮತ್ತು ಮೊಹಮ್ಮದ್ ಇರ್ಫಾನ್.

Advertisement
Share this on...