“ಮೊಹಮ್ಮದ್ ಅಲಿ ಜಿನ್ನಾ ಅದ್ಭುತ ನಾಯಕ, ಅವರಿಂದಲೇ ದೇಶ ಸ್ವತ್ರವಾಗಿದ್ದು, ದೇಶ ವಿಭಜನೆ ಮಾಡಿದ್ದು ಜಿನ್ನಾ ಅಲ್ಲ, ಅವರು ಮಹಾನ್…”: ಮೆಹಬೂಬಾ ಮುಫ್ತಿ

in Kannada News/News 149 views

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ಜಮ್ಮುವಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೆಹಬೂಬಾ, ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ, ಅವರು ಜಿನ್ನಾ ದೇಶವನ್ನು ವಿಭಜಿಸಿದರು ಎಂದು ಹೇಳುತ್ತಾರೆ, ಆದರೆ ಭೂಮಿಯನ್ನು ಮಾತ್ರವಲ್ಲದೆ ಜನರನ್ನು ಸಹ ವಿಭಜಿಸುವ ಸಾವಿರಾರು ಜಿನ್ನಾಗಳು ಈ ದೇಶದಲ್ಲಿದ್ದಾರೆ ಎಂದು ಹೇಳಿದ್ದಾಳೆ.

Advertisement

ಇವರು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡದ ವ್ಯಕ್ತಿಗಳು ಎಂದೂ ಮೆಹಬೂಬಾ ಹೇಳಿದ್ದಾಳೆ. ಬ್ರಿಟಿಷರ ಬೂಟನ್ನ ನೆಕ್ಕುತ್ತಿದ್ದ ಅವರು ಇಂದು ನಮಗೆ ದೇಶಭಕ್ತಿ ಕಲಿಸುತ್ತಿದ್ದಾರೆ ಎಂದರು. ಜವಾಹರಲಾಲ್ ನೆಹರು, ಗಾಂಧೀಜಿ, ಸರ್ದಾರ್ ಪಟೇಲ್, ಸರ್ ಸೈಯದ್ ಅಹ್ಮದ್ ಖಾನ್ ಮತ್ತು ಅಂಬೇಡ್ಕರ್ ಜೀ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿ ಭಾರತವನ್ನು ಸ್ವತಂತ್ರಗೊಳಿಸಿದ ಜಿನ್ನಾ ಅವರನ್ನು ಇವರು ದೂಷಿಸುತ್ತಾರೆ ಎಂದು ಮೆಹಬೂಬಾ ಹೇಳಿದಳು. ಆದರೆ ಅವರು (ಜಿನ್ನಾ) ನಮ್ಮ ದೇಶವನ್ನು ವಿಭಜಿಸಿದರು ಎಂಬ ಒಂದೇ ಒಂದು ಕಾರಣಕ್ಕೆ ಅವರ ದೇಶಭಕ್ತಿಯನ್ನ ಮರೆಮಾವಿ ನಾವು ಇಂದು ಅವರ ಹೆಸರನ್ನು ತೆಗೆದುಕೊಳ್ಳೋಕೆ ಹಿಂದೆ ಮುಂದೆ ನೋಡುತ್ತೇವೆ ಎಂದಳು.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರವನ್ನು ‘ಪರೀಕ್ಷಾ ಪ್ರಯೋಗಾಲಯ’ವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದಳು. ಹಿಂದೆ ಅಸ್ತಿತ್ವದಲ್ಲಿದ್ದ ರಾಜ್ಯದ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುವ ಬದಲು ಸೇನೆಯನ್ನು ಕರೆಸಲಾಗಿತ್ತು ಎಂದು ಅವರು ಆರೋಪಿಸಿದಳು.

ಭಾರತವನ್ನು ಜಿಯಾ-ಉಲ್-ಹಕ್ ಜೊತೆ ಹೋಲಿಕೆ ಮಾಡಿದ ಮುಫ್ತಿ

ಜಮ್ಮುವಿನಲ್ಲಿ ನಡೆದ ರ್ಯಾಲಿಯಲ್ಲಿ, ಮೆಹಬೂಬಾ ಭಾರತವನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಜನರಲ್ ಮೊಹಮ್ಮದ್ ಜಿಯಾ-ಉಲ್-ಹಕ್‌ಗೆ ಹೋಲಿಸಿ ತನ್ನನ್ನು ಬಲಿಪಶು ಮತ್ತು ತುಳಿತಕ್ಕೊಳಗಾದವಳು ಎಂದು ಬಿಂಬಿಸಲು ಪ್ರಯತ್ನಿಸಿದಳು. ಇತ್ತೀಚೆಗೆ ಪಾಕಿಸ್ತಾನದಲ್ಲಿ ಗುಂಪು ಹ ತ್ಯೆ ನಡೆದಾಗ ಪ್ರಧಾನಿ ಇಮ್ರಾನ್ ಖಾನ್ ‘ಇದರ ವಿರುದ್ಧ ಹರಿಹಾಯ್ದರು’, ಆದರೆ ಭಾರತದಲ್ಲಿ ಜನರು ಇದೇ ರೀತಿಯ ಅಪರಾಧಗಳಿಗೆ ‘ಬಹುಮಾನ’ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ. ವರ್ಲ್ಡ ಹಂಗರ್ ಇಂಡೆಕ್ಸ್ (ವಿಶ್ವ ಹಸಿವಿನ ಸೂಚ್ಯಂಕ) ನಲ್ಲಿ ಭಾರತವು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಬಹಳ ಮುಂದಿದೆ ಎಂದು ಮೆಹಬೂಬಾ ಹೇಳಿದ್ದಾಳೆ.

ತನ್ನ ಭಾಷಣದಲ್ಲಿ ಕಿಸಾನ್ ಆಂದೋಲನ್‌ನ್ನ ಉಲ್ಲೇಖಿಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಕೇಂದ್ರ ಸರ್ಕಾರದ ವಿರುದ್ಧ ಆಂದೋಲನ ಮಾಡುವಂತೆ ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಕರೆ ನೀಡಿದಳು

ಈ ಹಿಂದೆಯೂ ಕಾಶ್ಮೀರದ ಯುವಕರಿಗೆ ಪ್ರಚೋದಿಸಿದ್ದ ಮೆಹಬೂಬಾ ಮುಫ್ತಿ 

370 ನೇ ವಿಧಿಯನ್ನು ಕಾಶ್ಮೀರದಿಂದ ರದ್ದುಪಡಿಸಲಾಗಿರುವುದರಿಂದ ಮೆಹಬೂಬಾ ಮುಫ್ತಿ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಲೇ ಇರುತ್ತಾಳೆ. ಆರ್ಟಿಕಲ್ 370 ರದ್ದುಪಡಿಸಿದಾಗಿನಿಂದ ಈಕೆ ಇಂತಹ ಹಲವಾರು ಹೇಳಿಕೆಗಳನ್ನ ನೀಡುತ್ತಿದ್ದಾಳೆ. ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಈ ಹಿಂದೆ ಹೇಳಿಕೆಯೊಂದನ್ನ ನೀಡುತ್ತ ರಾಜ್ಯದಲ್ಲಿರು ಕ-ಲ್ಲು ತೂ ರಾಟಗಾರರು, ಉ-ಗ್ರ-ರಿಗೆ ಬೆಂಬಲಿಸಿದ್ದಳು. ಕೆಲಸವಿಲ್ಲದಿದ್ದಾಗ ಹುಡುಗರು ಬಂ-ದೂ-ಕು-ಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಳು.

ರಾಜ್ಯದಲ್ಲಿ ತನ್ನ ರಾಜಕೀಯ ಅಸ್ತಿತ್ವ ಕೊನೆಯಾಗುತ್ತಿರುವ ಬಗ್ಗೆ ಕಂಗಾಲಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಪಿಡಿಪಿ ಅಧ್ಯಕ್ಷೆ, “ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ಜಮ್ಮು ಕಾಶ್ಮೀರದ ಭೂಮಿ ಮತ್ತು ಉದ್ಯೋಗಗಳನ್ನು ಕಿತ್ತುಕೊಳ್ಳಲು ಬಿಜೆಪಿ ಉದ್ದೇಶಿಸಿದೆ. ಡೋಗ್ರಾ ಸಂಸ್ಕೃತಿಯನ್ನು ಉಳಿಸುವುದು 370 ರ ಗುರಿಯಾಗಿತ್ತು. ಅದು ದೇಶದ ಧ್ವಜವಾಗಲಿ, ಜಮ್ಮು ಕಾಶ್ಮೀರದ ಧ್ವಜವಾಗಲಿ, ಅದನ್ನು ನಮಗೆ ಸಂವಿಧಾನವು ನೀಡಿದೆ. ಬಿಜೆಪಿ ನಮ್ಮಿಂದ ಆ ಧ್ವಜವನ್ನು ಕಸಿದುಕೊಂಡಿದೆ” ಎಂದಿದ್ದಳು.

ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, “ಇಂದು ಅವರ (ಬಿಜೆಪಿ) ಸಮಯವಿದೆ, ಕಾಲ ಹೀಗೇ ಇರಲ್ಲ ನಾಳೆ ನಾವು ಅಧಿಕಾರಕ್ಕೆ ಬರುತ್ತೇವೆ. ಬಾರ್ಡರ್‌ನ ರಸ್ತೆಗಳನ್ನ ಓಪನ್ ಮಾಡಬೇಕು. ಜಮ್ಮು ಕಾಶ್ಮೀರ ಉಭಯ ದೇಶಗಳ (ಭಾರತ ಪಾಕಿಸ್ತಾನ) ನಡುವೆ ಶಾಂತಿಯ ಸೇತುವೆಯಾಯಿತು. ನಮ್ಮ ಧ್ವಜವನ್ನು ನಮಗೆ ಹಿಂತಿರುಗಿಸಿ. ನಾವು ಒಟ್ಟಾಗಿ ಚುನಾವಣೆಗಳಲ್ಲಿ ಹೋ-ರಾ-ಡು-ತ್ತಿದ್ದೇವೆ. ಜಮ್ಮು ಕಾಶ್ಮೀರವನ್ನು ತುಂ-ಡು-ಗಳಾಗಿ ಕ-ತ್ತ-ರಿ-ಸಲಾಗಿದೆ. ಈ ಶ’ಕ್ತಿಯ’ನ್ನ (ಬಿಜೆಪಿ) ಸೋಲಿಸಲು ನಾವು ಕೈಜೋಡಿಸಿದ್ದೇವೆ” ಎಂದು ಹೇಳಿದ್ದಳು.

370 ನೇ ವಿಧಿಗೆ ಸಂಬಂಧಿಸಿದಂತೆ ಮಾತನಾಡಿದ ಮೆಹಬೂಬಾ, ಇದು ಮು-ಸ್ಲಿಂ ಅಥವಾ ಹಿಂ-ದೂ-ಗಳಿಗೆ ಸಂಬಂಧಿಸಿದ ವಿಷಯವಲ್ಲ, ಆದರೆ ಇದು ಜಮ್ಮು ಕಾಶ್ಮೀರದ ಜನರ ಗುರುತು. ಜನರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕೇಂದ್ರ ಸರ್ಕಾರ ಬಾಬಾಸಾಹೇಬರ ಸಂವಿಧಾನದೊಂದಿಗೆ ಆಟವಾಡಿದೆ ಎಂದು ಹೇಳಿದ್ದಳು. ಬಿಜೆಪಿಯನ್ನು ಗುರಿಯಾಗಿಸಿ‌ಕೊಂಡು ಮೆಹಬೂಬಾ ಮುಫ್ತಿ ಕಾಶ್ಮೀರಿ ಪಂಡಿತರ ವಿಷ್ಯ ಏನಾಯ್ತು? ಬಿಜೆಪಿ ಅವರಿಗೆ ಭರವಸೆ ನೀಡಿತ್ತು ಆದರೆ ಏನೂ ಆಗಲಿಲ್ಲ ಎಂದು ಬಿಜೆಪಿಯನ್ನ ಪ್ರಶ್ನಿಸಿದ್ದಳು.

Advertisement
Share this on...