ತಾಲಿಬಾನಿಗಳಿಂದ ಎಸ್ಕೇಪ್ ಆಗಿ ಬಂದ ಕನ್ನಡಿಗ ಬಿಚ್ಚಿಟ್ಟ ಭಯಾನಕ ಸ್ಟೋರಿ

in Kannada News/News 413 views

ಕಾಬೂಲ್ ಏರ್ಪೋರ್ಟ್ ಸಮೀಪದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಳ್ಳಾಲ ಮೂಲದ ಮೆಲ್ವಿನ್ ಎಂಬುವರು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ತಾಲಿಬಾನ್ ಬಗ್ಗೆ ಭ ಯಾ ನ ಕ ಅನುಭವ ಬಿಚ್ಚಿಟ್ಟಿದ್ದಾರೆ ಅವರು.

Advertisement

ಮಂಗಳೂರು: ಅಘ್ಘಾನ್‌ನಲ್ಲಿ ಅತಂತ್ರವಾಗಿರುವ ಕನ್ನಡಿಗರು ಸೇರಿದಂತೆ ಭಾರತೀಯರನ್ನು ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡುತ್ತಿದೆ. ಮಂಗಳೂರಿನ ಉಳ್ಳಾಲದ ಕನ್ನಡಿಗರೊಬ್ಬರು ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಉ ಗ್ರ ಸ್ಥಾ ನ ದಿಂದ ಬಂದಿರುವ ಕನ್ನಡಿಗ ಅಲ್ಲಿನ ಭೀ ಕ ರ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ರೀತಿ ಸುರಕ್ಷಿತವಾಗಿ ತಾಯ್ನಾಡು ಸೇರಿದವರಲ್ಲಿ ಮಂಗಳೂರು ಹೊರವಲಯದ ಉಳ್ಳಾಲದ ಉಳಿಯ ನಿವಾಸಿ ಮೆಲ್ವಿನ್ ಮೊಂತೇರೋ ಸಹ ಒಬ್ಬರು. ಕಾಬೂಲ್‌ನಿಂದ ವಾಯುಸೇನೆ ವಿಮಾನದಲ್ಲಿ ಏರ್ ಲಿಫ್ಟ್ ಆದ ಮೆಲ್ವಿನ್ ಮೊಂತೇರೋ ಕಳೆದ 10 ವರ್ಷಗಳಿಂದ ಕಾಬೂಲ್ ಆಸ್ಪತ್ರೆಯಲ್ಲಿ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಕಾಬೂಲ್‌ನಿಂದ ಗುಜರಾತ್‌ಗೆ ಬಂದು ನಿನ್ನೆ ದೆಹಲಿಯಿಂದ ಮಂಗಳೂರಿಗೆ ಮೆಲ್ವಿನ್ ಮೋಂತೋರೋ ಸುರಕ್ಷಿತವಾಗಿ ತಲುಪಿದ್ದಾರೆ.

ಅಘ್ಫಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮತ್ತೆ ಅಫ್ಘಾನಿಸ್ತಾನಕ್ಕೆ ಹೋಗೋದಿಲ್ಲ ಅಂತಾ ಮೆಲ್ವಿನ್ ಹೇಳಿದ್ದಾರೆ. ತಾಲಿಬಾನ್​ಗಳು ಪರಮ ಕ್ರೂ ರಿ ಗಳಾಗಿದ್ದು, ಅಲ್ಲಿ ಹೋದರೆ ಮತ್ತೆ ನೆಮ್ಮದಿಯಿಂದ ಇರೋಕೆ ಸಾಧ್ಯವಿಲ್ಲ. ಹೀಗಾಗಿ ತಾಲಿಬಾನ್ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದರೆ ಮತ್ತೆ ಅಲ್ಲಿ ಹೋಗೋದಿಲ್ಲ ಅನ್ನೋದು ಮೆಲ್ವಿನ್ ಅಭಿಪ್ರಾಯ. ಆದರೆ ಅಮೇರಿಕಾ ಸೇ ನೆ ಮತ್ತೆ ಅಧಿಕಾರ ಸ್ಥಾಪಿಸಿದರೆ, ಕರ್ತವ್ಯಕ್ಕೆ ಕರೆದರೆ ಮಾತ್ರ ಹೋಗೋದಾಗಿ ಮೆಲ್ವಿನ್ ಹೇಳಿದ್ದಾರೆ. ಅಮೇರಿಕಾ ಈಗಾಗಲೇ ತನ್ನ ಬಲವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದಿದ್ದರಿಂದ ತಾಲಿಬಾನ್ ಶ ಕ್ತಿ ಹೆಚ್ಚಾಗಿದೆ. ಹೀಗಾಗಿ, ಮತ್ತೆ ಅಮೇರಿಕಾ ಅಫ್ಘಾನಿಸ್ತಾನವನ್ನು ವ ಶ ಕ್ಕೆ ಪಡೆದುಕೊಳ್ಳೋದು ಕಷ್ಟ ಅನ್ನೋದು ಮೆಲ್ವಿನ್ ಅಭಿಪ್ರಾಯ.

ಮೆಲ್ವಿನ್ ಮೊಂತೇರೋ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆ ಕಾಬೂಲ್ ಏರ್‌ಪೋರ್ಟ್ ಬಳಿಯೇ ಇದ್ದ ಕಾರಣ ಶೀಘ್ರವಾಗಿ ವಾಪಸಾಗುವುದಕ್ಕೆ ಸಾಧ್ಯ ಆಗಿದೆ. ಅಘ್ಘಾನ್ ತಾಲಿಬಾನ್‌ಗಳ ವ ಶ ವಾಗುತ್ತಿದ್ದಂತೆ ಮೆಲ್ವಿನ್ ಅವರ ಮನೆಯವರು ಆ ಘಾ ತ ಕ್ಕೆ ಒಳಗಾಗಿದ್ದರು. ಸರಿಯಾಗಿ ಸಂಪರ್ಕ ಮಾಡಲು ಸಾಧ್ಯವಾಗದೆ ನಿದ್ದೆ ಬಿಟ್ಟು ಮೆಲ್ವಿನ್ ಬರುವಿಕೆಯ ದಾರಿಯನ್ನೇ ಕಾಯುತ್ತಿದ್ದರು. ಸದ್ಯ ಮೆಲ್ವಿನ್ ಸುರಕ್ಷಿತವಾಗಿ ಬಂದಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮೆಲ್ವಿನ್ ಅವರ ಸಹೋದರ ಸಹ ಕಾಬೂಲ್‌ನಲ್ಲೇ ಇದ್ದು ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸದ್ಯ ಅವರು ಕತಾರ್‌ಗೆ ಬಂದಿರಬಹುದು ಎಂಬ ವಿಶ್ವಾಸ ಕುಟುಂಬ ಸದಸ್ಯರದ್ದು.

ತನ್ನ ಪತಿ ಸುರಕ್ಷಿತವಾಗಿ ಮರಳಿ ಮನೆಗೆ ಬಂದಿರೋದಕ್ಕೆ ಮೆಲ್ವಿನ್ ಮೆಂತೆರೋ ಪತ್ನಿ ಲಿಡ್ವಿನ್ ಖುಷಿಯಾಗಿದ್ದಾರೆ. ‌ಈ ಬಗ್ಗೆ ಮಾತನಾಡಿದ ಲಿಡ್ವೀನಾ “ಭಾರತ ಸರ್ಕಾರ ವಾರಗಳ ಮೊದಲೇ ಪರಿಸ್ಥಿತಿ ಊಹಿಸಿ ಭಾರತೀಯರ ರಕ್ಷಣೆಗೆ ಮುಂದಾಗಿತ್ತು. ಅಫ್ಘಾನ್ ನಲ್ಲಿ ತಾಲಿಬಾನ್ ಅ ಟ್ಟ ಹಾ ಸ ಆರಂಭವಾದಾಗಲೇ ಭಾರತ ಸರ್ಕಾರ ನೆರವಿಗೆ ಬಂದಿದೆ. ವಾರಗಳ ಮೊದಲೇ ನಮ್ಮವರಿಗೆ ಭಾರತಕ್ಕೆ ತೆರಳಲು ರಿಜಿಸ್ಟರ್ ಮಾಡಲು ಸೂಚಿಸಲಾಗಿತ್ತು. ಹೀಗಾಗಿ ನನ್ನ ಪತಿ ಮೊದಲೇ ರಿಜಿಸ್ಟರ್ ಮಾಡಿ ಕಾಯುತ್ತಿದ್ದರು. ಏರ್​ಫೋರ್ಸ್ ವಿಮಾನ ಸಿಕ್ಕ ಕೂಡಲೇ ಅಲ್ಲಿಂದ ಇಲ್ಲಿಗೆ ಬಂದಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಹೆಮ್ಮೆ ಇದೆ” ಎಂದು ಧನ್ಯವಾದ ಸಲ್ಲಿಸಿದ್ದಾರೆ.

“ತಾಲಿಬಾನ್ ದಾ ಳಿ ಯಾದ ದಿನ ನನ್ನ ಪತಿ ದಿನನಿತ್ಯದಂತೆ‌ ನನಗೆ ಕಾಲ್ ಮಾಡಿರಲಿಲ್ಲ. ಹೀಗಾಗಿ ನಾನೇ ಅವರಿಗೆ ಕಾಲ್ ಮಾಡಿದಾಗ ಅಲ್ಲಿನ ಪರಿಸ್ಥಿತಿ ಬಗ್ಗೆ ಆ ತಂ ಕ ದಿಂ ದ ಹೇಳಿದ್ರು. ಆ ಕ್ಷಣದಿಂದ ಅವರು ಬರೋವರೆಗೆ ನಾವು ನಿದ್ದೆಯನ್ನೇ ಮಾಡಿಲ್ಲ.. ಊಟವನ್ನೂ ಮಾಡಿಲ್ಲ. ಇಲ್ಲಿನ ಶಾಸಕ ಖಾದರ್ ಅವರು ಕೂಡ ನಮ್ಮ ನೆರವಿಗೆ ಬಂದಿದ್ದಾರೆ. ಸದ್ಯ ನನ್ನ ಗಂಡನ ತಮ್ಮ ಅಲ್ಲಿಂದ ಕತಾರ್​ಗೆ ಏರ್ ಲಿಫ್ಟ್ ಆಗಿದ್ದಾನೆ. ಆದರೆ ಆ ಬಳಿಕ ಅವನು ನಮ್ಮ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈಗ ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಅನ್ನೋ ಬಗ್ಗೆ ಮಾಹಿತಿಯಿಲ್ಲ. ಆದರೆ ನನ್ನ ಪತಿಗೆ ಬೇರೊಬ್ಬರಿಂದ ಬಂದ ಮಾಹಿತಿ ಪ್ರಕಾರ ಅವನು ಕತಾರ್​ನಲ್ಲೇ ಇದ್ದಾನೆ ಅಂತ ಹೇಳಲಾಗ್ತಿದೆ. ಆದ್ರೆ ‌ನಮಗ್ಯಾರಿಗೂ ಅವನು ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಮಾಹಿತಿ ಪ್ರಕಾರ ಅವನು ಇಲ್ಲಿಗೆ ಬರೋಕೆ ಒಂದು ವಾರ ಆಗಬಹುದು” ಎಂದು ಲಿಡ್ವೀನಾ ಹೇಳಿದ್ದಾರೆ.

ಸದ್ಯ ತಾಯ್ನಾಡಿಗೆ ಸುರಕ್ಷಿತವಾಗಿ ತಲುಪಿಸಿರೋದಕ್ಕೆ ಭಾರತೀಯ ವಾಯುಸೇನೆಯ ಯೋಧರಿಗೆ ಮೆಲ್ವಿನ್ ಧನ್ಯವಾದ ಸಲ್ಲಿಸಿದ್ದಾರೆ. ಉಳ್ಳಾಲ ನಗರಸಭೆಯ ಆಯುಕ್ತರು ಮೆಲ್ವಿನ್ ಅವರ ಮನೆಗೆ ಬಂದು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಇನ್ನಷ್ಟು ಭಾರತೀಯರು, ಕನ್ನಡಿಗರು ಅಘ್ಘಾನ್‌ನಲ್ಲಿ ಇದ್ದು ಅವರು ಸಹ ಸುರಕ್ಷಿತವಾಗಿ ಬರಲಿ ಎಂಬುದೇ ಎಲ್ಲರ ಆಶಯ.

Advertisement
Share this on...