ಇದುವರೆಗೂ ನೀವು ಹಿಂದೂ ಧರ್ಮದಿಂದ ಅನ್ಯ ಮತಗಳಿಗೆ ಮ ತಾಂ ತ ರ ವಾಗುವ ಸುದ್ದಿಗಳನ್ನ ಕೇಳಿರುತ್ತೀರ. ಆದರೆ ಮು-ಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಘರ್ ವಾಪಸಿ ಆಗಲು ನ್ಯಾಯಾಲಯದಲ್ಲಿ ಅರ್ಜಿ ಹಾಕಿರುವ ಅಥವ ಅಫಿಡವಿಟ್ ಸಲ್ಲಿಸಿರುವ ಸುದ್ದಿಗಳನ್ನ ಕೇಳಿರುವುದಿಲ್ಲ. ಹೌದು ನಾವಿಂದು ನಿಮಗೆ ಅಂತಹ ಒಂದು ಸುದ್ದಿಯ ಬಗ್ಗೆ ತಿಳಿಸಲಿದ್ದೇವೆ.
ಬಾಲ್ಯದಿಂದಲೂ ಹಿಂದೂ ಧರ್ಮ ಅಪ್ಪಿಕೊಳ್ಳುವ ಆಸೆ
ಬಿಹಾರದ ಗಯಾ ಜಿಲ್ಲೆಯ ವ್ಯಕ್ತಿಯೊಬ್ಬ ಹಿಂದೂ ಧರ್ಮವನ್ನ ಅಪ್ಪಿಕೊಳ್ಳಲು ಒಂದು ಅಫಿಡವಿಟ್ ರೆಡಿ ಮಾಡಿದ್ದಾನೆ. ಆ ಅಫಿಡವಿಟ್ ಪ್ರಕಾರ ಆತ ತನ್ನಿಷ್ಟದಂತೆ ಹಿಂದೂ ಧರ್ಮಕ್ಕೆ ಬರಲು ಇಚ್ಛಿಸಿದ್ದಾನೆ. ಈ ಬಗ್ಗೆ ಮಾತನಾಡಿದ ಯುವಕ, “ಬಾಲ್ಯದಿಂದಲೂ ನನಗೆ ಹಿಂದೂ ಧರ್ಮವೆಂದರೆ ಪಂಚಪ್ರಾಣ ಹಾಗು ಬಾಲ್ಯದಿಂದಲೂ ನಾನು ಸನಾತನ ಧರ್ಮಕ್ಕೆ ಬರಲು ಬಯಸಿದ್ದೆ. ನಾನು ಚಿಕ್ಕವನಿದ್ದಾಗ ಹೋಳಿ, ದೀಪಾವಳಿಯಂತಹ ಹಬ್ಬದ ಸಂದರ್ಭಗಳಲ್ಲಿ ಎಲ್ಲರೂ ಜತೆಗೂಡಿ ಹಬ್ಬ ಆಚರಿಸುತ್ತಿದ್ದರು. ಅದನ್ನೆಲ್ಲಾ ನೋಡಿ ನಾನ್ಯಾಕೆ ಹಿಂದೂ ಆಗಿ ಹುಟ್ಟಲಿಲ್ಲ ಅಂತ ಅಂದುಕೊಳ್ಳುತ್ತಿದ್ದೆ” ಎಂದಿದ್ದಾನೆ.
ಬಾಲ್ಯದಿಂದಲೂ ಪೂಜೆ ಪುನಸ್ಕಾರ ಮಾಡುವ ಆಸೆಯಿತ್ತು
ಯುವಕನು ಮುಂದೆ ಮಾತನಾಡುತ್ತ, “ತಾನು ಹಿಂದೂ ಧರ್ಮಕ್ಕೆ ಮತಾಂತರವಾಗಲು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದೇನೆ” ಎಂದಿದ್ದಾನೆ. ಈ ಯುವಕನ ಹೆಸರು ಮಿಸಾಬ್ ಎಂಬುದಾಗಿದ್ದು ಈತ ಜನಿಸಿದ್ದು ಸನ್ 2000 ಇಸವಿಯಲ್ಲಿ. ಹಾಗಾಗಿ ಈಗ ಈತ 21 ವರ್ಷದವನಾಗಿದ್ದಾನೆ. ಈ ಬಗ್ಗೆ ಮಾತನಾಡಿದ ಮಿಸಾಬ್, “ಬಾಲ್ಯದಿಂದಲೂ ನನಗೆ ಹಿಂದೂ ಧರ್ಮದ ರೀತಿ ರಿವಾಜುಗಳು, ಆಚರಣೆಗಳು, ಸಂಸ್ಕೃತಿ, ಪೂಜೆ ಪುನಸ್ಕಾರ ಇಷ್ಟವಿತ್ತು. ಇದೇ ಕಾರಣಕ್ಕಾಗಿ ನನ್ನನ್ಮ ಜನ ಪ್ರಿನ್ಸ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಯಾರೇ ನನ್ನ ಹೆಸರನ್ನ ಕೇಳಿದರೂ ನಾನು ಮಿಸಾಬ್ ಅಂತ ಹೇಳದೆ ಪ್ರಿನ್ಸ್ ಎಂದೇ ಹೇಳುತ್ತಿದ್ದೆ” ಎನ್ನುತ್ತಾನೆ ಮಿಸಾಬ್ ಅಲಿಯಾಸ್ ಪ್ರಿನ್ಸ್
ತನ್ನ ಪ್ರೀತಿಗಾಗಿಯೂ ಹಿಂದೂ ಆಗಲು ಬಯಸಿದ ಮಿಸಾಬ್
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಮಿಸಾಬ್‌ನ ಮೇಲೆ ಹಿಂದೂ ಯುವತಿಯೊಬ್ಬಳನ್ನ ಮನೆಯಂದ ಓಡಿಸಿಕೊಂಡು ಹೋದ ಪ್ರಕರಣವಿದೆ. ಮಾಹಿತಿಯ ಪ್ರಕಾರ ಆತನ ಮೇ ಲೆ ಪೋ ಕ್ಸೋ ಪ್ರಕರಣ ದಾಖಲಾಗಿದೆ. ಈ ಪ್ರಕರಣ 3 ತಿಂಗಳ ಹಿಂದೆ ರಾಮಪುರ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಬಳಿಕ ನ್ಯಾಯಾಲಯದಲ್ಲಿ ಯುವತಿಯು ತಾನು ಮಿಸಾಬ್‌ನನ್ನ ಪ್ರೀತಿಸುತ್ತೇನೆ ಅಂತ ಹೇಳಿ ಆತನನ್ನ ಬಚಾವ್ ಮಾಡಿದ್ದಳು. ಮಿಸಾಬ್ ಆ ಹಿಂದೂ ಯುವತಿಯನ್ನ ಪ್ರೀತಿಸುತ್ತಿದ್ದಾನೆ, ಆಕೆಯ ಪ್ರೀತಿ ಹಾಗು ಆಕೆಯ ಕುಟುಂಬಸ್ಥರ ಒಪ್ಪಿಗೆ ಪಡೆಯಲು ಆತ ಹಿಂದೂ ಧರ್ಮಕ್ಕೆ ಬರಲು ಇಚ್ಛಿಸಿದ್ದಾನೆ ಎಂದು ತಿಳಿದುಬಂದಿದೆ.