ತಮಿಳುನಾಡಿನ ಕೂನೂರಿನಲ್ಲಿ ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನವಾಗಿದ್ದು ಹೇಗೆ? ಟ್ರೈ ಸರ್ವಿಸ್ ಕೋರ್ಟ್ (ತ್ರಿ-ಸೇವಾ ನ್ಯಾಯಾಲಯ) ಆಫ್ ಇನ್ಕ್ವೈರಿ ನಡೆಯುತ್ತಿದೆ. ಏತನ್ಮಧ್ಯೆ, ಬುಧವಾರ ನೀಲಗಿರಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗುವ ಮುನ್ನ ಅದನ್ನು ವಿಡಿಯೋ ಮಾಡಿದ್ದ ವ್ಯಕ್ತಿಯ ಮೊಬೈಲ್ ಅನ್ನು ಕೊಯಮತ್ತೂರು ಪೊಲೀಸರು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತದಲ್ಲಿ ಸಿಡಿಎಸ್ ರಾವತ್, ಅವರ ಪತ್ನಿ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು.
ಹೆಲಿಕಾಪ್ಟರ್ ಕ್ರ್ಯಾಶ್ ಆಗುವ ಮುನ್ನ ಮಾಡಿದ್ದ ವೀಡಿಯೋ
ಪತನಗೊಂಡ ಹೆಲಿಕಾಪ್ಟರ್‌ನ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಆದರೆ ಬಹುತೇಕ ವಿಡಿಯೋಗಳು ಹೆಲಿಕಾಪ್ಟರ್ ಕ್ರ್ಯಾಶ್ ಆಗಿ ಬಿದ್ದ ಬಳಿಕದ ವಿಡಿಯೋಗಳಾಗಿವೆ. ಆದರೆ ಹೆಲಿಕಾಪ್ಟರ್ ಆಕಾಶದಲ್ಲಿ ಹಾರುತ್ತಿರುತ್ತದೆ ಮತ್ತು ಎರಡು ಅಥವಾ ಮೂರು ಸೆಕೆಂಡುಗಳ ನಂತರ ಅದು ಮೋಡಗಳಲ್ಲಿ ಎಲ್ಲೋ ಕಣ್ಮರೆಯಾಗಿಬಿಡುತ್ತದೆ, ನಂತರ ಆ ಹೆಲಿಕಾಪ್ಟರ್ ಕ್ರ್ಯಾಶ್ ಆಗುವ ವೀಡಿಯೊ ಕೂಡ ವೈರಲ್ ಆಗಿತ್ತು. ಹೆಲಿಕಾಪ್ಟರ್ ಪತನದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದೆ.
ಇಡೀ ಪ್ರಕರಣ
ತಮಿಳುನಾಡಿನ ಕುನ್ನೂರಿನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ಕ್ರ್ಯಾಶ್ ನಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದ್ದರು. ಸಿಡಿಎಸ್ ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೂ ಕೆಲವೇ ನಿಮಿಷಗಳ ಮುನ್ನ ಪತನಗೊಂಡಿತ್ತು. ಹೆಲಿಕಾಪ್ಟರ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅಪಘಾತಕ್ಕೂ ಮುನ್ನದ್ದು ಎಂದು ಹೇಳಲಾಗುತ್ತಿದೆ. ಅದರಲ್ಲಿ ಹೆಲಿಕಾಪ್ಟರ್ ಚೆನ್ನಾಗಿ ಹಾರುತ್ತಿರುವುದನ್ನು ಕಾಣಬಹುದು. ನಂತರ ಇದ್ದಕ್ಕಿದ್ದಂತೆ ಅದು ಮಂಜಿನ ಮೋಡದಲ್ಲಿ ಮರೆಯಾಗಿ ಕಾಣೆಯಾಗಿಬಿಡುತ್ತದೆ.
ಅತ್ಯಂತ ಸುರಕ್ಷತ ಹೆಲಿಕಾಪ್ಟರ್ Mi-17 V-5
Mi-17 V-5 ಹೆಲಿಕಾಪ್ಟರ್ ಅನ್ನು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಇದನ್ನು ಪ್ರಧಾನಿ ಸೇರಿದಂತೆ ಇತರ ವಿವಿಐಪಿಗಳೂ ಬಳಸುತ್ತಾರೆ. ಇದು ಡಬಲ್ ಎಂಜಿನ್ ಹೊಂದಿದೆ. ಹೀಗಿರುವಾಗ ಈ ಹೆಲಿಕಾಪ್ಟರ್ ಇಷ್ಟು ಸುರಕ್ಷಿತವಾಗಿದ್ದರೆ ಈ ದುರ್ಘಟನೆ ಹೇಗೆ ಸಂಭವಿಸಿತು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ತಾಂತ್ರಿಕ ದೋಷವೋ ಅಥವಾ ಇನ್ನೇನು? ಅದೇ ಸಮಯದಲ್ಲಿ, ಕುನ್ನೂರಿನಲ್ಲಿ ಸಂಭವಿಸಿದ ಈ ಅಪಘಾತಕ್ಕೆ ದಟ್ಟ ಮಂಜು ಮತ್ತು ಕಳಪೆ ಗೋಚರತೆಯೇ ಕಾರಣ ಎಂದು ತಜ್ಞರು ನಂಬುತ್ತಾರೆ. ಇದರಲ್ಲಿ ತಾಂತ್ರಿಕ ದೋಷ ಉಂಟಾಗುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ತಜ್ಞರು. ಆದರೆ, ಭಾರತೀಯ ವಾಯುಪಡೆಯು ನ್ಯಾಯಾಲಯದ ವಿಚಾರಣೆ ನಡೆಸಿದ ನಂತರವೇ ಅಪಘಾತದ ತನಿಖೆಯ ಹಿಂದಿನ ನಿಜವಾದ ಕಾರಣಗಳು ತಿಳಿಯಲಿವೆ. ಹೆಲಿಕಾಪ್ಟರ್‌ನ ಅವಶೇಷಗಳ ಹೆಚ್ಚಿನ ಫೋರೆನ್ಸಿಕ್ ಪರೀಕ್ಷೆಯ ಬಳಿಕ ಅಪಘಾತಕ್ಕೆ ಬಾಹ್ಯ ಕಾರಣಗಳಿವೆಯೇ ಎಂಬುದನ್ನು ಸಹ ತಿಳಿಯಬಹುದಾಗಿದೆ. ಇದರ ಹೊರತಾಗಿ ಚಿಕಿತ್ಸೆ ಪಡೆಯುತ್ತಿರವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಹಾಗು ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಡೈರೆಕ್ಟಿಂಗ್ ಸ್ಟಾಫ್ ಕೂಡ ಹೆಲಿಕಾಪ್ಟರ್ ಹಾರಾಟದ ಬಗ್ಗೆ ನೇರ ಮಾಹಿತಿ ನೀಡಬಹುದಾಗಿದೆ.