ಇರಾನ್‌ನಲ್ಲಿ, ಸೆಪ್ಟೆಂಬರ್ 2022 ರ ಮಧ್ಯದಲ್ಲಿ, ಮಹಾಸಾ ಅಮಿನಿ ಎಂಬ ಮಹಿಳೆಯನ್ನು ಅಲ್ಲಿನ ನೈತಿಕ ಪೊಲೀಸರು (Morality Police) ಚಿ-ತ್ರಹಿಂ-ಸೆ ನೀಡಿ ಕೊಂ-ದಿ-ದ್ದರು. ಇದಾದ ಬಳಿಕ ಆಗ ಇರಾನ್ ನಲ್ಲಿ ಶುರುವಾಗಿದ್ದ ಹಿ-ಜಾ-ಬ್ ವಿರುದ್ಧದ ಮಹಿಳೆಯರ ಪ್ರತಿಭಟನೆ ಈಗಲೂ ಮುಂದುವರಿದಿದೆ. ಇದೇ ವೇಳೆ ಪ್ರತಿಭಟನೆಗೆ ತಲೆಬಾಗಿ ಇಸ್ಲಾ-ಮಿಕ್ ದೇಶ ‘ನೈತಿಕತೆ ಪೊಲೀಸ್ (Morality Polce)’ ರದ್ದು ಮಾಡಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹಬ್ಬಿತ್ತು. ಆದರೆ, ಇರಾನಿನ ಪತ್ರಕರ್ತೆ ಮಸೀಹ್ ಅಲಿನೆಜಾದ್ ಈ ವಿಷಯದಲ್ಲಿ ಹೇಳೋದು ಬೇರೆನೇ ಇದೆ. ಅವರು ‘ನ್ಯೂಯಾರ್ಕ್ ಟೈಮ್ಸ್ (NYT)’ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ ಎಂದು ಆರೋಪಿಸಿದ್ದಾರೆ.
ನೈತಿಕತೆಯ ಪೋಲಿಸ್ (Morality Police) ಅನ್ನು ರದ್ದುಗೊಳಿಸಿರುವುದು ಮಹಿಳಾ ಪ್ರತಿಭಟನಾಕಾರರ ವಿಜಯವೇ ಎಂದು ಎಬಿಸಿ ನ್ಯೂಸ್ ಕೇಳಿದಾಗ, ಇರಾನ್-ಅಮೇರಿಕನ್ ಪತ್ರಕರ್ತೆ ಈ ಸುದ್ದಿಯು ತನಗೆ ಮತ್ತು ಇರಾನಿಯನ್ನರಿಗೆ ತುಂಬಾ ನೋವುಂಟುಮಾಡಿದೆ ಎಂದು ಉತ್ತರಿಸಿದರು, ಏಕೆಂದರೆ NYT (New York Times) ಈ ಸುದ್ದಿಯ ಶೀರ್ಷಿಕೆಯನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಇದು ಯಾವ ರೀತಿಯ ಗೆಲುವು? ಎಂದು ಅವರು ಕೇಳಿದರು. ಇದೊಂದು ಹಸಿ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿ ಎಂದು ಅವರು ಹೇಳಿದ್ದಾರೆ. ಕೇವಲ 2 ತಿಂಗಳಲ್ಲಿ ಇರಾನ್ ಸರ್ಕಾರ 500 ಕ್ಕೂ ಹೆಚ್ಚು ಜನರನ್ನು ಕೊಂ-ದಿ-ದೆ ಎಂದು ಮಸಿಹ್ ಅಲಿನೆಜಾದ್ ಹೇಳಿದ್ದಾರೆ.
ಮೃ-ತ-ರಲ್ಲಿ 62 ಮಕ್ಕಳೂ ಸೇರಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ, 18,000 ಕ್ಕೂ ಹೆಚ್ಚು ಪ್ರ-ತಿ-ಭಟನಾಕಾರರನ್ನು ಬಂ-ಧಿ-ಸಲಾಗಿದೆ. ‘ನೈತಿಕತೆ ಪೊಲೀಸ್’ ರದ್ದತಿಯ ಸುದ್ದಿಯನ್ನು ಅವರು ಇರಾನ್ ಸರ್ಕಾರದ ಪ್ರಚಾರದ ಕ್ರಮ ಎಂದು ಬಣ್ಣಿಸಿದರು. ಸರ್ವಾಧಿಕಾರಿಯ ಗದ್ದುಗೆ ಅಲುಗಾಡಿದಾಗ ಆತ ದಾರಿತಪ್ಪಿಸುವ ಮಾಹಿತಿಯನ್ನು ಬಳಸಿಕೊಂಡು ಜಗತ್ತಿನ ಇತರರನ್ನು ದಾರಿ ತಪ್ಪಿಸುತ್ತಾನೆ. ಸಮಾಜದಲ್ಲಿ ಪ್ರತಿಭಟನೆಗಳು ನಡೆಯದಂತೆಯೂ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಪತ್ರಕರ್ತೆ ಹೇಳಿದ್ದಾರೆ.
ಮಹಿಳೆಯೊಬ್ಬರು ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಇರಾನ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಅನ್ನು ಮುಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು, ಅದೇ ದಿನ ಮಾಧ್ಯಮಗಳು ‘ನೈತಿಕತೆ ಪೊಲೀಸ್’ ನ್ನು ರದ್ದು ಮಾಡಕಾಗಿದೆ ಎಂದು ವರದಿ ಮಾಡಿದೆ. ಈ ಮಹಿಳೆಯ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 7 ವರ್ಷದ ಬಾಲಕಿಯರು ಕೂಡ ಹಿಜಾಬ್ ಇಲ್ಲದೆ ಶಾಲೆಗೆ ಹೋಗಲು ಸಾಧ್ಯವಿಲ್ಲ ಎಂದು ಮಹಿಳಾ ಪತ್ರಕರ್ತೆ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹುಡುಗಿಯರು ಕಾಲೇಜು-ವಿಶ್ವವಿದ್ಯಾಲಯವನ್ನು ಹೇಗೆ ತಲುಪುತ್ತಾರೆ? ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಮಸಿಹ್ ಅಲಿನೆಜಾದ್ ಮಾತನಾಡುತ್ತ, ‘ನೈತಿಕತೆಯ ಪೋಲೀಸ್’ ಅನ್ನು ರದ್ದುಗೊಳಿಸುವುದು ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಸಮಸ್ಯೆ ಮಾತ್ರಷ್ಟೇ ಅಲ್ಲದೆ ಲಿಂಗ ತಾರತಮ್ಯವನ್ನು ನಿಲ್ಲಿಸುವುದೂ ಆಗಿದೆ ಎಂದು ಹೇಳಿದರು. ಐದು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ಮಾಧ್ಯಮಗಳು ಇರಾನ್‌ನ ‘ನೈತಿಕತೆಯ ಪೊಲೀಸರು’ ಇನ್ನು ಮುಂದೆ ಹಿಜಾಬ್ ಧರಿಸದ ಮಹಿಳೆಯರನ್ನು ಬಂಧಿಸುವುದಿಲ್ಲ, ಬದಲಿಗೆ ಅವರನ್ನು ‘ಶೈಕ್ಷಣಿಕ ತರಬೇತಿ’ಗೆ ಕಳುಹಿಸುತ್ತಾರೆ ಎಂದು ಅವರು ಹೇಗೆ ವರದಿ ಮಾಡಿದ್ದರು ಎಂಬುದನ್ನು ಅವರು ನೆನಪಿಸಿಕೊಂಡರು. ಈಗ ಅದೇ ಪೋಲೀಸರು ಮಹಾಸಾ ಅಮಿನಿಯನ್ನು ಕೊಂ-ದರು, ಅದಾದ ನಂತರವೇ ದೇಶಾದ್ಯಂತ ಪ್ರತಿಭಟನೆಗಳು ಪ್ರಾರಂಭವಾದವು ಎಂದು ಅವರು ಹೇಳಿದರು.
ಇರಾನಿ-ಅಮೆರಿಕನ್ ಪತ್ರಕರ್ತೆ ಇಂಟರ್‌ವ್ಯೂ ನಲ್ಲಿ ಮುಂದೆ ಮಾತನಾಡುತ್ತ, “ನಿಶಸ್ತ್ರ ಜನರು ಇರಾನ್‌ನಲ್ಲಿ ಗುಂ-ಡು-ಗಳು ಮತ್ತು ಬಂ-ದೂ-ಕುಗಳನ್ನು ಎದುರಿಸುತ್ತಿದ್ದಾರೆ. ಜನರು ಇಸ್ಲಾಮಿಕ್ ಗಣರಾಜ್ಯಕ್ಕೆ ‘No’ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ FIFA ವಿಶ್ವಕಪ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಸೋಲನ್ನು ಇರಾನಿಯನ್ನರು ಸಂಭ್ರಮಿಸಿದ್ದರು. ಇನ್ನು ಈ ಸರ್ಕಾರವನ್ನು ಜನರು ಸರ್ಕಾರ ಎಂದೇ ಪರಿಗಣಿಸುವುದಿಲ್ಲ. ಇದೊಂದು ಕೊ-ಲೆ-ಗಡುಕ ಸರಕಾರ. ಇರಾನ್ ಸರ್ಕಾರ ಏನೇ ಹೇಳಲಿ, ಇಸ್ಲಾಮಿಕ್ ಗಣರಾಜ್ಯದ ಅಂತ್ಯವಾದರೆ ಮಾತ್ರ ಈ ಸಮಸ್ಯೆ ಪರಿಹರಿಸಲ್ಪಡುತ್ತದೆ, ಏಕೆಂದರೆ ನಂತರ ಈ ಸರ್ಕಾರವೂ ಹೋಗಲೇಬೇಕು” ಎಂದಿದ್ದಾರೆ.
ಇದು 21ನೇ ಶತಮಾನವಾಗಿದ್ದು, ಇರಾನಿಯನ್ನರು ಜಾತ್ಯತೀತ ಗಣರಾಜ್ಯವನ್ನು ಬಯಸುತ್ತಾರೆ ಹೊರತು ಇಸ್ಲಾಮಿಕ್ ಸರ್ವಾಧಿಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಧರ್ಮವು ಜನರ ಮನೆಯಲ್ಲಿ ಉಳಿಯಬೇಕು ಮತ್ತು ಅವರಿಗೆ ಸ್ವಾತಂತ್ರ್ಯ ಮತ್ತು ಗೌರವ ಸಿಗಬೇಕು, ಇದು ಈ ಆಂದೋಲನದ ಉದ್ದೇಶವಾಗಿದೆ ಎಂದು ಹೇಳಿದರು. ಪಾಶ್ಚಿಮಾತ್ಯ ಮಾಧ್ಯಮಗಳು ‘ನೈತಿಕ ಪೊಲೀಸ್’ ರದ್ದತಿಯನ್ನು ವಿಜಯ ಎಂದು ಕರೆಯುತ್ತಿವೆ, ಆದರೆ ಈ ಮುಲ್ಲಾ ಮೌಲಾನಾಗಳ ಸರ್ಕಾರ ಹೋದಾಗಲೇ ನಿಜವಾದ ಗೆಲುವು ಎಂದು ಅವರು ಹೇಳಿದರು. ಜನರಲ್ಲಿ ಆಶಾಭಾವನೆ ಇದ್ದು ಗೆಲುವು ಖಂಡಿತಾ ಸಿಗುತ್ತದೆ ಎಂದರು.