ಒಂದು ಕಾಲದಲ್ಲಿ ಅಗ್ನಿಶಾಮಕ ದಳದಲ್ಲಿ ಬೆಂಕಿ ನಂದಿಸುತ್ತಿದ್ದಾಕೆ ಇಂದು ಬೆಂಕಿ ಐಎಎಸ್ ಅಧಿಕಾರಿ: ಅಷ್ಟಕ್ಕೂ ಯಾರೀಕೆ ಗೊತ್ತಾ?

in Uncategorized 4,756 views

ಇಲ್ಲೊಬ್ಬರು ಮಹಿಳೆ ಸರ್ಕಾರಿ ಕೆಲಸದಲ್ಲಿದ್ದು, ಈಗ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹಾಗಿದ್ರೆ ಇವರ ಯುಪಿಎಸ್​ ಸಕ್ಸಸ್ ಕಥೆ ಇಲ್ಲಿದೆ ನೋಡಿ.
Advertisement

ಸಾಮಾನ್ಯವಾಗಿ ಈ ಸರ್ಕಾರಿ ಕೆಲಸದಲ್ಲಿ ಇರುವರರನ್ನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ‘ನೀವೇ ಅದೃಷ್ಟವಂತರು, ನಿಮ್ಮ ಕೆಲಸ ಸುರಕ್ಷಿತವಾಗಿರುತ್ತದೆ ಮತ್ತು ಜೀವನಕ್ಕೆ ಒಂದು ಭದ್ರತೆ ಇರುತ್ತದೆ’ ಅಂತೆಲ್ಲಾ ಹೇಳುವುದನ್ನು ನಾವು ಕೇಳಿರುತ್ತೇವೆ. ಹೌದು.. ಈಗಂತೂ ಖಾಸಗಿ ಕಂಪನಿಗಳ (Private Company) ಕೆಲಸಗಳು ನೀರಿನ ಮೇಲಿನ ಗುಳ್ಳೆಯಂತಾಗಿವೆ. ಆ ಗುಳ್ಳೆ ಯಾವುದೇ ಸಮಯದಲ್ಲಿ ಬೇಕಾದರೂ ಒಡೆಯಬಹುದು, ಹಾಗೆಯೇ ಖಾಸಗಿ ಕಂಪನಿಗಳ ಕೆಲಸಗಳು ಸಹ ಯಾವುದೇ ಸಮಯದಲ್ಲಿ ಬೇಕಾದರೂ ಹೋಗಬಹುದು. ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ನಂತರದಲ್ಲಿ ನಡೆದ ಲೇ-ಆಫ್‌ಗಳೇ ಇದಕ್ಕೆ ಉದಾಹರಣೆ ಅಂತ ಹೇಳಬಹುದು.

ಜನರಿಗೆ ಒಂದು ಸರ್ಕಾರಿ ಕೆಲಸ ಸಿಕ್ಕಾಗ, ಅವರು ಮತ್ತೊಂದು ಕೆಲಸಕ್ಕೆ ಪ್ರಯತ್ನಿಸುವುದಿಲ್ಲ. ಏಕೆಂದರೆ 60 ವರ್ಷಗಳ ಕಾಲ ವ್ಯಕ್ತಿ ಜೀವನಕ್ಕೆ ಭದ್ರತೆ ಒದಗಿಸುವ ಆ ಸರ್ಕಾರಿ ಕೆಲಸವನ್ನು ಯಾರು ತಾನೇ ಮಧ್ಯೆದಲ್ಲಿ ಬಿಡಲು ಇಷ್ಟಪಡುತ್ತಾರೆ ಹೇಳಿ?

ಒಳ್ಳೆಯ ಸಂಬಳ, ರಜಾದಿನಗಳು ಮತ್ತು ನಿವೃತ್ತಿಯಾದ ನಂತರ ಕೈಗೆ ಬರುವ ಮಾಸಿಕ ಪಿಂಚಣಿ ಇದೆಲ್ಲವನ್ನು ಯಾರೂ ಸಹ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇಂತಹ ಸರ್ಕಾರಿ ಕೆಲಸಗಳಲ್ಲಿಯೇ ಅನಿರೀಕ್ಷಿತ ಬಡ್ತಿ ಸಿಕ್ಕು, ಊಹಿಸದೆ ಇರುವ ದೊಡ್ಡ ಅಧಿಕಾರಿಯಾದಾಗ ಕೇಳುಗರಿಗೆ ಮತ್ತು ನೋಡುಗರಿಗೆ ಆಶ್ಚರ್ಯವಾಗುವುದು ಖಂಡಿತ.

ಮೊದಲಿಗೆ ಅಗ್ನಿಶಾಮಕ ಸೇವೆಯ ಅಧಿಕಾರಿ ಆಗಿದ್ರಂತೆ ಈ ಐಎಎಸ್ ಅಧಿಕಾರಿ

ಆದರೆ ಅದೃಷ್ಟದ ಆಟ ಹೇಗಿರುತ್ತದೆ ನೋಡಿ.. ಇಲ್ಲೊಬ್ಬರು ಮಹಿಳೆ ಸರ್ಕಾರಿ ಕೆಲಸದಲ್ಲಿದ್ದು, ಈಗ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹೌದು.. ತಮಿಳುನಾಡು ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಯ ಎಂದರೆ ಟಿಎನ್ಎಫ್ಆರ್‌ಎಸ್ ಅಧಿಕಾರಿಯಾದ ಎನ್ ಪ್ರಿಯಾ ರವಿಚಂದ್ರನ್ ಅವರನ್ನು ತಮಿಳುನಾಡಿನ ರಾಜ್ಯೇತರ ನಾಗರಿಕ ಸೇವೆಯ ಅಡಿಯಲ್ಲಿ ಐಎಎಸ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಗೆಜೆಟ್ ಅಧಿಸೂಚನೆಯ ಪ್ರಕಾರ, ಟಿಎನ್‌ಎಫ್‌ಆರ್‌ಎಸ್ ಜಂಟಿ ನಿರ್ದೇಶಕಿಯಾಗಿದ್ದ ಎನ್ ಪ್ರಿಯಾ ರವಿಚಂದ್ರನ್ ಅವರನ್ನು ಐಎಎಸ್ ಅಧಿಕಾರಿಯಾಗಿ ನೇಮಿಸಲಾಗಿದೆ.

2003 ರಲ್ಲಿ ಗ್ರೂಪ್-1 ಸೇವಾ ನೇಮಕಾತಿಯ ಮೂಲಕ ಪ್ರಿಯಾ ಅವರ ವೃತ್ತಿ ಪ್ರಯಾಣ ಪ್ರಾರಂಭವಾಯಿತು. ಇದೀಗ ಪ್ರಿಯಾ ಅವರು ಐಎಎಸ್ ಅಧಿಕಾರಿಯ ಶ್ರೇಣಿಯನ್ನು ಏರಿದ ಮೊದಲ ಟಿಎನ್‌ಎಫ್‌ಆರ್‌ಎಸ್ ಅಧಿಕಾರಿಯಾಗಿದ್ದಾರೆ.

ಪ್ರಿಯಾ ಅವರ ಧೈರ್ಯ ಮೆಚ್ಚಿ ರಾಷ್ಟ್ರಪತಿ ಪದಕ ನೀಡಿದ ರಾಜ್ಯ ಸರ್ಕಾರ

ಅವರು ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ (ಚೆನ್ನೈ ಸಿಟಿ ಸೆಂಟ್ರಲ್) ಸೇವೆ ಸಲ್ಲಿಸುತ್ತಿರುವಾಗ ಜನವರಿ 15, 2012 ರಂದು ಪ್ರಾಚೀನ ಪರಂಪರೆಯ ರಚನೆಯಾದ ಕಲಾಸ್ ಮಹಲ್‌ನಲ್ಲಿ ಏಕಾಏಕಿ ಸಂಭವಿಸಿತ್ತು.

ಈ ಬೆಂಕಿ ಅವಘಡದ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇವರು ತುಂಬಾನೇ ಗಮನ ಸೆಳೆದರು. ಅವರ ಶೌರ್ಯವನ್ನು ಗುರುತಿಸಿದ ರಾಜ್ಯ ಸರ್ಕಾರವು 2012 ರಲ್ಲಿ ಶೌರ್ಯಕ್ಕಾಗಿ ಅಣ್ಣಾ ಪದಕ ಮತ್ತು ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪದಕವನ್ನು ನೀಡಿ ಗೌರವಿಸಿತು.

2008 ಮತ್ತು 2009 ರ ಸತತ ಎರಡು ವರ್ಷಗಳ ಕಾಲ ಚೆನ್ನೈನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ತಂಡಗಳಿಗೆ ಪ್ರಿಯಾ ಅವರು ತಮ್ಮ ತಂಡವನ್ನು ಮುನ್ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರು ಅಗ್ನಿ ಸುರಕ್ಷತೆಯನ್ನು ಉತ್ತೇಜಿಸುವ ಉಪಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಅಗ್ನಿಶಾಮಕ ಇಲಾಖೆ ಕುರಿತು ಶೈಕ್ಷಣಿಕ ಚಲನಚಿತ್ರಗಳ ರಚನೆ ಮತ್ತು ‘ಸೇಫ್ ದೀಪಾವಳಿ’ ಅಂತಹ ಜಾಗೃತಿ ಅಭಿಯಾನಗಳನ್ನು ಸಹ ಶುರು ಮಾಡಿದ ಕೀರ್ತಿ ಪ್ರಿಯಾ ಅವರಿಗೆ ಸಲ್ಲುತ್ತದೆ.

ಜರ್ಮನಿಯಲ್ಲಿ ಭಾರತ ಸರ್ಕಾರ ಆಯೋಜಿಸಿದ್ದ ‘ಉದ್ಯಮಗಳಲ್ಲಿ ಅಪಾಯ ನಿರ್ವಹಣೆ’ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಿಯಾ ಅವರು ರಾಜ್ಯದ ಏಕೈಕ ಪ್ರತಿನಿಧಿಯಾಗಿದ್ದರು.

Advertisement
Share this on...