NASA ಗೆ ಸಿಕ್ಕ ಲೋಹದ ಆ್ಯಸ್ಟ್ರಾಯ್ಡ್: ಇದನ್ನ ಮಾರಿದರೆ ಪ್ರತಿಯೊಬ್ಬನಿಗೂ ಸಿಗಬಹುದಂತೆ 9,621 ಕೋಟಿ ರೂ.

in Kannada News/News/Story 2,761 views

ಅಮೇರಿಕಾದ ಅಂತರಿಕ್ಷ ಏಜೆನ್ಸಿ ನಾಸಾ ಆ್ಯಸ್ಟ್ರಾಯ್ಡ್ (astroid) ಒಂದನ್ನ ಶೋಧಿಸಿ ಹೊರತೆಗೆದಿದೆ. ಇದರಲ್ಲಿ ಅದೆಷ್ಟು ಲೋಹವಿದೆಯೆಂದರೆ ಅದನ್ನ ತಂದು ಭೂಮಿಯ ಮೇಲೆ ಮಾರಾಟ ಮಾಡಿದರೆ ಭೂಮಿಯ ಮೇಲೆ ವಾಸಿಸುತ್ತಿರುವ ಪ್ರತಿಯೊಬ್ಬರಿಗೂ 1 ಬಿಲಿಯನ್ ಪೌಂಡ್ ಅಂದರೆ 9,621 ಕೋಟಿಯಷ್ಟು ಹಣ ಸಿಗುತ್ತದೆ.

Advertisement

ನಾಸಾ ಈ ಆ್ಯಸ್ಟ್ರಾಯ್ಡ್‌ಗೆ 16 ಸೈಕಿ (16 Psyche) ಎಂದು ಹೆಸರಿಸಿದ್ದಾರೆ. ಈ ಇಡೀ ಆ್ಯಸ್ಟ್ರಾಯ್ಡ್ ಮೇಲಿರುವ ಲೋಹದ ಒಟ್ಟು ಬೆಲೆ ಅಂದಾಜು 8000 ಕ್ವಾಡ್ರಲಿಯನ್ ಪೌಂಡ್ ನಷ್ಟಿದೆಯಂತೆ. ಅಂದರೆ 8000 ದ ಮುಂದೆ  15 ಸೊನ್ನೆಗಳು… ಲೆಕ್ಕ ಹಾಕೋಕೂ ಕಷ್ಟ ಅಲ್ವಾ

ಬ್ರಿಟಿಷ್ ಮ್ಯಾಗಜೀನ್ ದಿ ಟೈಮ್ಸ್ ನ ವರದಿಯ ಪ್ರಕಾರ 8000 ಕ್ವಾಡ್ರಿಲಿಯನ್ ಪೌಂಡ್ (8,000,000,000,000,000,000 ಪೌಂಡ್) ಅಂದರೆ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಹಂಚಿದರೆ ಒಬ್ಬ ವ್ಯಕ್ತಿಗೆ 1 ಬಿಲಿಯನ್ ಪೌಂಡ್ (9621 ಕೋಟಿ) ಗಳಷ್ಟು ನೀಡಬಹುದಾಗಿದೆ.‌

ನಾಸಾ ಸಂಸ್ಥೆ ಸ್ಪೇಸ್ ಎಕ್ಸ್ ಮಾಲೀಕನಾದ ಎಲನ್ ಮಸ್ಕ್ ರವರಿಗೆ ಸಹಾಯ ಕೇಳುತ್ತ ಈ ಆ್ಯಸ್ಟ್ರಾಯ್ಡ್ ನ ಮೇಲಿರುವ ಲೋಹದ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಲು ತಮ್ಮ ಅಂತರಿಕ್ಷಯಾನದ ಮಿಷನ್ ಶುರುಮಾಡುವಂತೆ ಕೇಳಿದೆ.

ಈ ಆ್ಯಸ್ಟ್ರಾಯ್ಡ್ ನ ವ್ಯಾಸ 226 ಕಿಲೋಮೀಟರ್ ನಷ್ಟಿದೆ. ಇದು ಸೂರ್ಯನನ್ನ 5 ವರ್ಷಗಳಲ್ಲಿ ನಾಲ್ಕೂ ಕಡೆಯಿಂದ ಒಂದು ಸುತ್ತು ಹಾಕುತ್ತದೆ‌. ಈ ಆ್ಯಸ್ಟ್ರಾಯ್ಡ್‌ನ ಒಂದು ದಿನದಲ್ಲಿ ಕೇವಲ 4.196 ಗಂಟೆಗಳಷ್ಟೇ ಇರುತ್ತವೆ.‌

ಈ ಆ್ಯಸ್ಟ್ರಾಯ್ಡ್‌ನ ತೂಕ ಚಂದ್ರನ ತೂಕಕ್ಕೆ ಹೋಲಿಕೆ ಮಾಡಿದರೆ ಚಂದ್ರನ ಕೇವಲ 1% ತೂಕವಿದೆ. ಆದರೆ ಈ ಇಡೀ ಆ್ಯಸ್ಟ್ರಾಯ್ಡ್ ಲೋಹದಿಂದ ಕೂಡಿದೆ. ಇದು ಮಂಗಳ ಮತ್ತು ಬೃಹಸ್ಪತಿ ಗ್ರಹಗಳ ಮಧ್ಯೆಯಿದೆ.

ಈ ಆ್ಯಸ್ಟ್ರಾಯ್ಡ್ ನ್ನ ಭೂಮಿಯ ಸಮೀಪ ತರುವಂತಹ ಯಾವ ಯೋಜನೆಗಳು ಇಲ್ಲ ಆದರೆ ಈ ಆ್ಯಸ್ಟ್ರಾಯ್ಡ್‌ನಲ್ಲಿ ಹೋಗಿ ಅಲ್ಲಿರುವ ಲೋಹದ ಬಗ್ಗೆ ತನಿಖೆ/ರಿಸರ್ಚ್ ನಡೆಸುವ ಯೋಜನೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.

ಒಂದು ವೇಳೆ ಸ್ಪೇಸ್ ಎಕ್ಸ್ ತನ್ನ ಅಂತರಿಕ್ಷಯಾನದಲ್ಲಿ ರೋಬೋಟ್ ಒಂದನ್ನ ಈ ಮಿಷನ್ ಗಾಗಿ ಈ ಆ್ಯಸ್ಟ್ರಾಯ್ಡ್‌ಗೆ ಕಳಿಸಿದ್ದೇ ಆದಲ್ಲಿ ಅದು ಆ್ಯಸ್ಟ್ರಾಯ್ಡ್‌ನ ಅಧ್ಯಯನ ಮಾಡಿ ವಾಪಸ್ ಬರೋಕೆ 7 ವರ್ಷಗಳೇ ಬೇಕಾಗುತ್ತದೆಯಂತೆ‌.

Advertisement
Share this on...