Rumors of China’s Xi Jinping house arrest: ಚೀನಾದಲ್ಲಿ ಜಿನ್‌ಪಿಂಗ್ ಹೌಸ್ ಅರೆಸ್ಟ್ ಆಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿವೆ. ಈ ವದಂತಿಗಳ ಮೂಲ ಬೇರೆ ಯಾವುದೇ ದೇಶವಲ್ಲ ಚೀನಾದಿಂದಲೇ ಬಂದಿವೆ ಎಂಬುದು ಗಮನಿಸಬೇಕಾದ ಸಂಗತಿ. ಈ ವದಂತಿಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಮುಂಬರುವ ಸಮಯವೇ ಹೇಳಲಿದೆ, ಆದರೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಿಲಿಟರಿ ದಂಗೆಯಿಂದ ಅಪಾಯದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕ್ಸಿ ಜಿನ್‌ಪಿಂಗ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಮುಂದಿನ ನಾಯಕನನ್ನ ಆಯ್ಕೆ ಮಾಡುವ ಕಸರತ್ತು ವೇಗ ಪಡೆದಿದ್ದು ಪ್ರಬಲ ಮಿಲಿಟರಿ ಜನರಲ್ ಲಿ ಕಿಯಾಓಮಿಂಗ್ ಅವರ ಹೆಸರು ಚರ್ಚೆಯು ಅಗ್ರಸ್ಥಾನದಲ್ಲಿದೆ. ಬನ್ನಿ ಈ ಲಿ ಕಿಯಾಓಮಿಂಗ್ ಯಾರು ಅನ್ನೋದನ್ನ ನೋಡೋಣ.
ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (PlA) ಯ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಲಿ ಕಿಯಾಓಮಿಂಗ್ ಒಬ್ಬರು. ಅವರು ಸೆಪ್ಟೆಂಬರ್ 2017 ರಿಂದ ಸೆಪ್ಟೆಂಬರ್ 2022 ರವರೆಗೆ ಉತ್ತರ ಥಿಯೇಟರ್ ಕಮಾಂಡ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. 361 ನೇ ರೆಜಿಮೆಂಟ್‌ನ ಚೀಫ್ ಆಫ್ ಸ್ಟಾಫ್, 364 ನೇ ರೆಜಿಮೆಂಟ್‌ನ ಕಮಾಂಡರ್, 124 ನೇ ಡಿವಿಷನ್‌ನ ಚೀಫ್ ಆಫ್ ಸ್ಟಾಫ್, 42 ನೇ ಗ್ರೂಪ್‌ನ ಸೈನ್ಯದ ಡೆಪ್ಯುಟಿ ಚೀಫ್ ಆಫ್ ಸ್ಟಾಫ್ ಮತ್ತು 42 ನೇ ಸೇನೆ 124 ನೇ ಡಿವಿಷನ್‌ನ ಕಮಾಂಡರ್ ಶ್ರೇಣಿ ಸೇರಿದಂತೆ ಚೀನಾದ ಸೈನ್ಯದಲ್ಲಿ ಲಿ ಕ್ವಿಯಾಓಮಿಂಗ್ ಅವರು ವಿವಿಧ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ ವಿಡಿಯೋ
#PLA military vehicles heading to #Beijing on Sep 22. Starting from Huanlai County near Beijing & ending in Zhangjiakou City, Hebei Province, entire procession as long as 80 KM. Meanwhile, rumor has it that #XiJinping was under arrest after #CCP seniors removed him as head of PLA pic.twitter.com/hODcknQMhE
— Jennifer Zeng 曾錚 (@jenniferzeng97) September 23, 2022
2017 ರಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ 19 ನೇ ಸೆಂಟ್ರಲ್ ಕಮಿಟಿಯ ಸದಸ್ಯರಾಗಿ ಲಿ ಕಿಯಾಓಮಿಂಗ್ ಆಯ್ಕೆಯಾದರು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಚೀನಾದ ಅನೇಕ ಕ್ಷೇತ್ರಗಳ ತಜ್ಞರು ಬೀಜಿಂಗ್‌ನಲ್ಲಿರುವ ಕ್ಸಿ ಜಿನ್‌ಪಿಂಗ್ ಅವರ ನಿವಾಸದ ಕಡೆಗೆ ಸಾಗುತ್ತಿರುವ ಮಿಲಿಟರಿ ಆಂದೊಲನಕ್ಕೆ ಸಾಕ್ಷಿಯಾದರು. ಕ್ಸಿ ಜಿನ್‌ಪಿಂಗ್ ನಿವಾಸದ ಬಳಿ ಸೇನಾ ವಾಹನಗಳು ಚಲಿಸುತ್ತಿರುವುದು ಕಂಡುಬಂದಿದೆ. ಇಂತಹ ಚೇಷ್ಟೆಗಳ ಕೆಲವು ನಕಲಿ ವಿಡಿಯೋಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ಈ ಬಗ್ಗೆ ಚೀನಾ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ವರದಿಯಾಗಿಲ್ಲ.
Breaking: #XiJinping is still on the name list of all delegates to the 20th National Congress of the #CCP. (See the name in red circle on the 4th row). #Xinhua released the list today. pic.twitter.com/UPoQuE0xjP
— Jennifer Zeng 曾錚 (@jenniferzeng97) September 25, 2022
ಚೀನಾ ಜನರ ಆಘಾತಕಾರಿ ಹೇಳಿಕೆಗಳು
ಚೀನಾದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ದೇಶದಲ್ಲಿ ಕ್ಸಿ ಜಿನ್‌ಪಿಂಗ್‌ನ್ನ ಅಧಿಕಾರದಿಂದ ಕಿತ್ತೆಸೆಯೋದು ಬಹುತೇಕ ದೃಢಪಟ್ಟಿದೆ ಎಂದು ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದೆ 9,000 ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಿಲಿಟರಿ ಮುಖ್ಯಸ್ಥ ಜನರಲ್ ಲಿ ಕಿಯಾಓಮಿಂಗ್ ಮುಂದಿನ ಅಧ್ಯಕ್ಷರಾಗಲು ಸಿದ್ಧರಾಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
So. 9000 flights cancelled over China, reports of military vehicles converging on the capital, and reports of senior officials being imprisoned.
But no certainty about anything.
That's what regime change looks like under authoritarianism, kids. #chinacoup pic.twitter.com/AhIT0EuLMB— Dean Gloster (@deangloster) September 25, 2022