ನಾಸ್ಟ್ರಡಾಮಸ್ ಪ್ರಕಾರ 2021 ಕ್ಕಿಂತಲೂ ಹೆಚ್ಚು ಭಯಾನಕವಾಗಿರಲಿದೆಯಂತೆ 2022 ರ ಹೊಸ ವರ್ಷ: ಈ ದುರ್ಘಟನೆಗಳೆಲ್ಲಾ ಸಂಭವಿಸಲಿವೆ

in Kannada News/News 22,503 views

ಫ್ರಾನ್ಸ್ ಅಸ್ಟ್ರಾಲಾಜರ್ ನಾಸ್ಟ್ರಾಡಾಮಸ್ ಪ್ರಪಂಚದ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಲು ಮತ್ತು ಸಾಕಷ್ಟು ನಿಖರವಾದ ಮುನ್ಸೂಚನೆಗಳನ್ನು ನೀಡಲು ಪ್ರಸಿದ್ಧರಾಗಿದ್ದಾರೆ (Nostradamus Predictions 2022). ಅವರ ಹೆಸರು ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಸುದ್ದಿಯ ಮುಂಚೂಣಿಯಲ್ಲಿರುತ್ತಾರೆ ಹಾಗು ಮುನ್ಸೂಚನೆಗಳನ್ನು ನೀಡುತ್ತಾರೆ, ಇದು ಪ್ರಪಂಚದಾದ್ಯಂತ ಚರ್ಚಿಸಲ್ಪಡುತ್ತದೆ. ಈ ವರ್ಷ 2022 ರ ಬಗ್ಗೆ ಅವರು ಇಂತಹ ಕೆಲವು ಭವಿಷ್ಯ ನುಡಿದಿದ್ದು, ಇದನ್ನು ಕೇಳಿ ಜನರು ಬೆಚ್ಚಿಬೀಳುತ್ತ ಭಯಪಡುತ್ತಿದ್ದಾರೆ.

Advertisement

2022 ಕ್ಕೆ ಬರಲಿವೆ ಭಾರೀ ಸಂಕಷ್ಟಗಳು

ಕರೋನಾದ ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದಾಗಿ ಜನರು ಈಗಾಗಲೇ ಭಯಭೀತರಾಗಿದ್ದಾರೆ. ಏತನ್ಮಧ್ಯೆ, ಅಸ್ಟ್ರಾಲಾಜರ್ ನಾಸ್ಟ್ರಾಡಾಮಸ್ 2022 ರಲ್ಲಿ ಬರಲಿರುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುವ ಮೂಲಕ ಪ್ರಪಂಚದ ಜನರನ್ನ ಮತ್ತೆ ಕಂಗಾಲಾಗುವಂತೆ ಮಾಡಿದ್ದಾರೆ. ವಿಜ್ಞಾನಿಗಳು ಈ ಭವಿಷ್ಯವಾಣಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದಿದ್ದರೂ, ನಾಸ್ಟ್ರಾಡಾಮಸ್ ಅನ್ನು ಅಧ್ಯಯನ ಮಾಡುವವರನ್ನ ನಂಬಬೇಕಾದರೆ, 2022 ವಿನಾಶದ ವರ್ಷವೆಂದೇ ಹೇಳಬಹುದಂತೆ. ಇದಕ್ಕೂ ಮೊದಲು, ನಾಸ್ಟ್ರಾಡಾಮಸ್‌ನ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಆದ್ದರಿಂದ ಅವರ 2022 ರ ಭವಿಷ್ಯವಾಣಿಗಳನ್ನು ಒಂದೊಂದಾಗಿ ನೋಡೋಣ ಬನ್ನಿ.

ಕೊರೋನಾದ ಮೂರನೆಯ ಅಲೆ ಅಪ್ಪಳಿಸಲಿದೆ

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯ ಪ್ರಕಾರ, 2022 ರಲ್ಲಿ ಕರೋನದ ಮೂರನೇ ಅಲೆ ಬರಬಹುದು. ಇದು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅಂದಹಾಗೆ, ಈ ಭವಿಷ್ಯ ನಿಜವಾಗುವ ಸಾಧ್ಯತೆಗಳು ಈಗಾಗಲೇ ಗೋಚರಿಸುತ್ತಿವೆ. ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೋನಾ ಹೊಸ ರೂಪಾಂತರದ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ಅದೇ ಸಮಯದಲ್ಲಿ, ಎರಡೂ ಡೋಸ್‌ಗಳ ನಿಯಮಗಳು, ಬೂಸ್ಟರ್ ಡೋಸ್ ಮತ್ತು ನೈಟ್ ಕರ್ಫ್ಯೂ ಮುಂತಾದ ವಿಷಯಗಳು ಸಹ ಮುನ್ನೆಲೆಗೆ ಬರಲು ಪ್ರಾರಂಭಿಸಿವೆ.

ವಿಶ್ವದಾದ್ಯಂತ ಹಸಿವಿನಿಂದ ಜನ ಬಳಲಲಿದ್ದಾರೆ

2022 ರ ವರ್ಷ ಫ್ರಾನ್ಸ್‌ಗೆ ತುಂಬಾ ಕೆಟ್ಟ ವರ್ಷವೆಂದು ಸಾಬೀತಾಗಲಿದೆ‌. ಇದು ಚಂಡಮಾರುತಗಳು, ತೀವ್ರ ಬೆಂಕಿ, ಬರ ಮತ್ತು ಪ್ರವಾಹಗಳನ್ನು ಎದುರಿಸಲಿದೆ. ಇದರ ಪರಿಣಾಮವೆಂದರೆ ಭವಿಷ್ಯದಲ್ಲಿ ಹಸಿವಿನ ಸನ್ನಿವೇಶಗಳು ಪ್ರಪಂಚದಾದ್ಯಂತ ಉದ್ಭವಿಸಬಹುದು.

ಔಟ್ ಆಫ್ ಕಂಟ್ರೋಲ್ ಆಗಲಿದೆ ಬೆಲೆಯೇರಿಕೆ 

ಕೊರೊನಾ ಮೂರನೆ ಅಲೆ ಮತ್ತು ನೈಸರ್ಗಿಕ ವಿಕೋಪಗಳಿಂದ ಹಣದುಬ್ಬರ (ಬೆಲೆಯೇರಿಕೆ) ನಿಯಂತ್ರಣಕ್ಕೆ ಬರುವುದಿಲ್ಲ. ಯುಎಸ್ ಡಾಲರ್ ತೀವ್ರ ಕುಸಿತವನ್ನು ಕಾಣಲಿದೆ. ಅಂದರೆ 2022 ರಲ್ಲಿ ನಿಮ್ಮ ಪಾಕೆಟ್ ತುಂಬಾ ಖಾಲಿಯಾಗಲಿದೆ.

ರಹಸ್ಯಮಯ ಕತ್ತಲು ಕವಿಯಲಿದೆ

ನಾಸ್ಟ್ರಾಡಾಮಸ್ ಭವಿಷ್ಯವನ್ನು ನಂಬಬೇಕಾದರೆ, 2022 ರಲ್ಲಿ ಮೊದಲು ವಿನಾಶ ಸಂಭವಿಸುತ್ತದೆ ಮತ್ತು ನಂತರ ಎಲ್ಲವೂ ಶಾಂತವಾಗಿರುತ್ತದೆ. ಈ ಶಾಂತಿಯ ಮೊದಲು, ಜಗತ್ತಿನಲ್ಲಿ 72 ಗಂಟೆಗಳ ನಿಗೂಢ ಕತ್ತಲೆ ಆವರಿಸಲಿದೆ. ಪರ್ವತಗಳ ಮೇಲೆ ಹಿಮ ಬೀಳುತ್ತದೆ, ಅನೇಕ ದೇಶಗಳು ಪ್ರಾರಂಭಿಸಿದ ಯುದ್ಧಗಳು ಕೊನೆಗೊಳ್ಳುತ್ತವೆ. ಇದೆಲ್ಲವೂ ನೈಸರ್ಗಿಕ ಘಟನೆಗಳಿಂದ ಸಂಭವಿಸುತ್ತದೆ.

ಪರಮಾಣು ದಾ ಳಿಯ ಭಯ

2022ರಲ್ಲಿ ಪರಮಾಣು ಬಾಂಬ್ ಸ್ಫೋ ಟವಾಗುವ ಸಾಧ್ಯತೆಯೂ ಇದೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಭೂಮಿಯ ಸ್ಥಿತಿಯೇ ಬದಲಾಗುತ್ತದೆ. ಹವಾಮಾನ ಬದಲಾಗುತ್ತದೆ. ಪ್ರವಾಹ, ಬಿರುಗಾಳಿ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳು ಎದುರಾಗಲಿವೆ. ದೊಡ್ಡ ವಿನಾಶವಾಗುತ್ತದೆ. ಭೂಮಿಯ ಸ್ಥಿತಿಯೇ ಬದಲಾಗುತ್ತದೆ.

ಈ ವಿಷಯದಲ್ಲಿ ಮಾತ್ರ 2022 ಒಳ್ಳೆಯದಾಗಲಿದೆ

2022 ರಲ್ಲಿ ಅನೇಕ ಸಮಸ್ಯೆಗಳಿದ್ದರೂ ಅದು ಪ್ರೀತಿ ಮತ್ತು ಸಂಬಂಧಗಳ ವಿಷಯದಲ್ಲಿ ಉತ್ತಮವಾಗಿದೆ ಎಂದು ಸಾಬೀತುಪಡಿಸುತ್ತದೆ. ಈ ವರ್ಷ ಜನರ ಸಂಬಂಧಗಳು ಗಟ್ಟಿಯಾಗುತ್ತವೆ. ಪರಸ್ಪರ ಪ್ರೀತಿ ಹೆಚ್ಚುತ್ತದೆ. ಪ್ರೇಮಿಗಳಿಗೆ ಈ ವರ್ಷ ತುಂಬಾ ಒಳ್ಳೆಯದಾಗಿರಲಿದೆ. ಇಬ್ಬರ ನಡುವೆ ಯಾವುದೇ ರೀತಿಯ ಸಂಘರ್ಷ ಇರುವುದಿಲ್ಲ. ದಂಪತಿಗಳು ಸಂತೋಷವಾಗಿರುತ್ತಾರೆ. ಪ್ರೀತಿಯಲ್ಲಿನ ಅಡೆತಡೆಗಳು ದೂರವಾಗುತ್ತವೆ. ಅಂದರೆ 2022 ಪ್ರೀತಿಯ ವಿಷಯದಲ್ಲಿ ಅದ್ಭುತವಾಗಿರುತ್ತದೆ ಎಂದು ಹೇಳಬಹುದು.

ಅಂದಹಾಗೆ, ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಈ ಭವಿಷ್ಯವಾಣಿಗಳಲ್ಲಿ ನೀವು ಎಷ್ಟು ನಂಬುತ್ತೀರಿ ಎಂದು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Advertisement
Share this on...