ಲೈಂಗಿಕ ಕಿರುಕುಳಕ್ಕೆ ಒಳಗಾದವರ ಎದೆಯು (ಸ್ತನಗಳು) ವಿಕಸಿತಗೊಳ್ಳದಿದ್ದರೂ ತಪ್ಪು ಉದ್ದೇಶದಿಂದ ಅವುಗಳನ್ನ ಸ್ಪರ್ಶಿಸುವುದು ಲೈಂಗಿಕ ಅಪರಾಧವಾಗುತ್ತದೆ ಎಂದು ಪಶ್ಚಿಮ ಬಂಗಾಳದ ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ಆರೋಪಿಯು ಸಂತ್ರಸ್ತೆಯ ನಿರ್ದಿಷ್ಟ ಭಾಗವನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸಿದ್ದಾನೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವ ಪ್ರಶ್ನೆಯೇ ಇಲ್ಲ, ಈ ಪ್ರಕರಣದಲ್ಲಿ ಬಾಲಕಿಯ ಸ್ತನಗಳು ಬೆಳವಣಿಗೆಯೇ ಆಗಿಲ್ಲ ಎಂದು ವೈದ್ಯಾಧಿಕಾರಿ ಹೇಳಿಕೆ ನೀಡಿದ್ದರು ಎಂದು ವಾದಮಂಡಿಸಿದರು. ಆದರೆ, ಈ ವಾದಕ್ಕೆ ನ್ಯಾಯಾಲಯ ಸಹಮತ ವ್ಯಕ್ತಪಡಿಸಲಿಲ್ಲ.
ಇದಕ್ಕೆ ನ್ಯಾಯಮೂರ್ತಿ ವಿವೇಕ್ ಚೌಧರಿ ಅವರು ಪ್ರತಿಕ್ರಿಯಿಸುತ್ತ, 13 ವರ್ಷದ ಬಾಲಕಿ ಸ್ತನಗಳು ವಿಕಸಿತವಾಗಿಯೋ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ, ವೈದ್ಯಕೀಯ ಕಾರಣಗಳಿಂದಾಗಿ ಆಕೆಯ ಸ್ತನಗಳು ವಿಕಸಿತವಾಗದಿದ್ದರೂ ಸಹ, ಹುಡುಗಿಯ ದೇಹದ ಒಂದು ನಿರ್ದಿಷ್ಟ ಭಾಗವನ್ನು ಸ್ತನ ಎಂದೇ ಕರೆಯಲಾಗುತ್ತದೆ ಎಂದರು. POCSO ಕಾಯಿದೆಯ ಸೆಕ್ಷನ್ 7 ಅನ್ನು ವ್ಯಾಖ್ಯಾನಿಸಿದ ನ್ಯಾಯಮೂರ್ತಿ ಚೌಧರಿ, ಮಗುವಿನ ಶಿಶ್ನ, ಯೋನಿ, ಗುದದ್ವಾರ ಅಥವಾ ಎದೆಯನ್ನು ಸ್ಪರ್ಶಿಸುವುದು ಅಥವಾ ಲೈಂಗಿಕ ಉದ್ದೇಶದಿಂದ ಮಗುವನ್ನು ಸ್ಪರ್ಶಿಸುವುದು ಲೈಂಗಿಕ ಕಿರುಕುಳದ ಅಪರಾಧವಾಗಿದೆ ಎಂದರು.
ವಾಸ್ತವವಾಗಿ, 2017 ರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿತು. ಈ ವೇಳೆ 13 ವರ್ಷದ ಬಾಲಕಿಯ ತಾಯಿ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು. ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ಬಂದು ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ ಮುಖಕ್ಕೆ ಮುತ್ತಿಟ್ಟಿದ್ದಾರೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು.
ಸಂತ್ರಸ್ತೆಯನ್ನು ಚುಂಬಿಸುವ ಉದ್ದೇಶವನ್ನು ಪ್ರಶ್ನಿಸಿದ ನ್ಯಾಯಾಲಯ, ‘“ಆರೋಪಿಯು ತನ್ನ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸಿ ಚುಂಬಿಸಿದ್ದಾನೆ ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಳೆ. ಸಂತ್ರಸ್ತ ಹುಡುಗಿಗೆ ಯಾವುದೇ ರೀತಿಯ ಸಂಬಂಧವಿಲ್ಲದ ವಯಸ್ಕ ಪುರುಷನು ಆಕೆಯ ಮನೆಗೆ ಆಕೆಯ ಪೋಷಕರು ಇಲ್ಲದಿದ್ದಾಗ ಬಂದು ಅವಳನ್ನು ಚುಂಬಿಸಲು ಯಾಕೆ ಹೋಗುತ್ತಾನೆ?. ವ್ಯಕ್ತಿಯ ಲೈಂಗಿಕ ಉದ್ದೇಶವನ್ನು ಸಂಪರ್ಕ ಮತ್ತು ಸುತ್ತಮುತ್ತಲಿನ ಸಂದರ್ಭಗಳಿಂದ ಕಂಡುಹಿಡಿಯಬಹುದು” ಎಂದು ನ್ಯಾಯಾಲಯ ಹೇಳಿದೆ.
ಲೈಂಗಿಕ ಉದ್ದೇಶಕ್ಕೆ ಯಾವುದೇ ನೇರ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯು ಆಕೆ ಮತ್ತು ಆಕೆಯ ಪತಿ ಇಲ್ಲದ ಸಮಯದಲ್ಲಿ ದೂರುದಾರರ ಮನೆಗೆ ನುಗ್ಗಿ ಸಂತ್ರಸ್ತ ಬಾಲಕಿಯ ದೇಹವನ್ನು ಸ್ಪರ್ಶಿಸಿ ಆಕೆಯನ್ನು ಚುಂಬಿಸಿರುವುದು ಆರೋಪಿಗೆ ಲೈಂಗಿಕ ಉದ್ದೇಶವಿರುವುದನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:
“ಹೆಣ್ಣುಮಗುವಿನ ಸ್ತ#ನ ಮುಟ್ಟಿದರೆ ತಪ್ಪಿಲ್ಲ, ಅವನು ತನ್ನ ಪ್ಯಾಂಟ್ ಬಿಚ್ಚದೇ ಆಕೆಯ ಬ್ಲೌಸ್ ಒಳಗೆ ಕೈ ಹಾಕಿ ಮುಟ್ಟಿದ್ದು ‘ಅದೇ’ ಕಾರಣಕ್ಕೆ ಅಂತ ಪರಿಗಣಿಸೋಕಾಗಲ್ಲ”: ಎಂಬ ತೀರ್ಪು ಕೊಟ್ಟು ಡೀಮೋಟ್ ಆದ ಮಹಿಳಾ ಜಡ್ಜ್
ಬಾಂಬೆ ಹೈಕೋರ್ಟ್‌ನ ಜಡ್ಜ್ (ನ್ಯಾಯಮೂರ್ತಿ) ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಪದಚ್ಯುತಿ (demotion) ನಿರ್ಣಯ ಕೈಗೊಳ್ಳಲಾಗಿದೆ. ಅವರನ್ನು ಕಾಯಂ ನ್ಯಾಯಮೂರ್ತಿ ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ದೃಢಪಡಿಸಿಲ್ಲ. ಪ್ರಸ್ತುತ, ಅವರು ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿದ್ದಾರೆ. ಅವರ ಅವಧಿ ಫೆಬ್ರವರಿ 2022 ರಲ್ಲಿ ಕೊನೆಗೊಳ್ಳಲಿದೆ. ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೀಗಿರುವಾಗ ಜಿಲ್ಲಾ ನ್ಯಾಯಾಧೀಶರಾಗಿ ಡಿಮೋಷನ್ ಮಾಡಲಾಗುವುದು ಎಂದು ಹೇಳಲಾಗುತ್ತಿದೆ.
ಇದೇ ಜಸ್ಟಿಸ್ ಗನೇದಿವಾಲಾ ರವರೇ ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ (Skin-to-Skin Contact)’ ನ ವಿವಾದಾತ್ಮಕ ತೀರ್ಪು ನೀಡಿದ್ದರು. ಈ ತೀರ್ಪನ್ನು ಬಳಿಕ ಸುಪ್ರೀಂಕೋರ್ಟ್ ಬದಲಿಸಿತ್ತು. ಜಸ್ಟಿಸ್ ಪುಷ್ಪಾ ವೀರೇಂದ್ರ ಗನೇದಿವಾಲಾ ನೀಡಿದ್ದ ತೀರ್ಪಿನಲ್ಲಿ, “12 ವರ್ಷದ ಬಾಲಕಿಯ ಸ್ತನ ಒತ್ತಲಾಗುತ್ತದೆ. ಆದರೆ ಆರೋಪಿ ಆಕೆಯ ಟಾಪ್ ಬಿಚ್ಚಿದ್ದನೋ ಇಲ್ಲವೋ? ಅಥವ ಅವನು ಟಾಪ್‌ನೊಳಗೆ ಕೈ ಹಾಕಿ ಸ್ತನಗಳನ್ನ ಒತ್ತಿದ್ದನೋ? ಇಂತಹ ಸೂಚನೆಗಳಲ ಅಭಾವದಿಂದ ಇದನ್ನ ಲೈಂ ಗಿ ಕ ಕಿ ರು ಕು ಳ ಅಂತ ಹೇಳಲು ಸಾಧ್ಯವಿಲ್ಲ. ಸ್ತ್ರೀಯರ ಲಜ್ಜೆಯ ಜೊತೆ ಆಟವಾಡೋ ಆರೋಪದ ಮೇಲೆ ಸಜೆಯಾಗುತ್ತೆ, ಇದು IPC ಸೆಕ್ಷನ್ 354 ರ ಅಡಿಯಲ್ಲೇ ಬರುತ್ತೆ” ಎಂದಿದ್ದರು.
ಸುಪ್ರೀಂ ಕೋರ್ಟ್ ಕೊಲಿಜಿಯಂನ ತೀರ್ಪಿನ ನಂತರ, ಹೆಚ್ಚುವರಿ ನ್ಯಾಯಾಧೀಶರಾಗಿ ಅವರ ಅವಧಿಯನ್ನು ವಿಸ್ತರಿಸದಿದ್ದರೆ ಅಥವಾ ಅವರು ಖಾಯಂ ನ್ಯಾಯಾಧೀಶರು ಎಂದು ಖಚಿತಪಡಿಸದಿದ್ದರೆ, ಅವರು ಮತ್ತೆ ಜಿಲ್ಲಾ ನ್ಯಾಯಾಧೀಶರ ಹುದ್ದೆಯನ್ನೇ ವಹಿಸಿಕೊಳ್ಳಬೇಕಾಗುತ್ತದೆ. ಹೈಕೋರ್ಟ್‌ಗೆ ನೇಮಕಾತಿಗಳನ್ನು ನಿರ್ಧರಿಸಲು ಭಾರತದ ತ್ರಿಸದಸ್ಯ ಕೊಲಿಜಿಯಂ ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ್ಣ ಮತ್ತು ನ್ಯಾಯಮೂರ್ತಿಗಳಾದ ಯುಯು ಲಲಿತ್ ಮತ್ತು ಎಎಂ ಖಾನ್ವಿಲ್ಕರ್ ಇದ್ದಾರೆ.
ಪುಷ್ಪಾ ವೀರೇಂದ್ರ ಗನೇಡಿವಾಲಾ ಅವರ ಈ ‘ಸ್ಕಿನ್ ಟು ಸ್ಕಿನ್ ಕಾಂಟ್ಯಾಕ್ಟ್ (Skin-to-Skin Contact)’ ತೀರ್ಪನ ಬಳಿಕ ಪ್ರತಿಯೊಬ್ಬರೂ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಹ್ಮದಾಬಾದ್ ನಿವಾಸಿ ದೇವಶ್ರೀ ತ್ರಿವೇದಿ ಎಂಬ ಯುವತಿ ಜಸ್ಟಿಸ್ ಪುಷ್ಪಾ ವೀರೇಂದ್ರ ಗನೇಡಿವಾಲಾಗೆ ಬರೋಬ್ಬರಿ 150 ಕಾಂಡಮ್‌ಗಳನ್ನ ಕಳಿಸಿದ್ದಳು. ಈ ಬಗ್ಗೆ ಮಾತನಾಡಿ ಆಕೆ, “ಜಸ್ಟಿಸ್ ಪುಷ್ಪಾ ಅವರು ಹೇಳುವ ಪ್ರಕಾರ ಸ್ಕಿನ್‌ಗೆ ಮುಟ್ಟಲಿಲ್ಲವಾದರೆ ಅದು ಲೈಂ ಗಿ ಕ ಕಿ ರು ಕುಳ ಅಲ್ಲ, ನಾನು ಅವರಿಗೆ ಕಾಂಡೋಮ್‌ಗಳನ್ನ ಕಳಿಸಿ, ಇದನ್ನ ಬಳಸಿದರೂ ಸ್ಕಿನ್ ಟಚ್ ಆಗಲ್ಲ ಅಂತ ಹೇಳಿದ್ದೇನೆ. ಇದು ಸಾಧ್ಯವೇ?” ಎಂದಿದ್ದರು.
ಇದಾದ ನಂತರ ಜಸ್ಟಿಸ್ ಪುಷ್ಪಾ ಗನೇಡಿವಾಲಾ ಅವರ ಮತ್ತೊಂದು ತೀರ್ಪು ಬಂದಿತ್ತು. ಅವರ ನೇತೃತ್ವದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಏಕ ಪೀಠವು ಬಾಲಕಿಯ ಕೈ ಹಿಡಿದು ಆ ರೋ ಪಿಯ ಪ್ಯಾಂಟ್ ಅನ್ನು ಬಿಚ್ಚುವುದು ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಶುವಲ್ ಅಫೆನ್ಸಸ್ ಆ್ಯಕ್ಟ್, 2012 (POCSO) ಅಡಿಯಲ್ಲಿ ಲೈಂvಗಿಕ ದೌ ರ್ಜ ನ್ಯದ ಶ್ರೇಣಿಗೆ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ಬರುತ್ತದೆ.