ತನ್ನ ಮಗಳ ಮೇಲೆ ರೇ-ಪ್ ಮಾಡಿದ ಆರೋಪದ ಮೇಲೆ ಕೇರಳದ ಮದರಸಾದ ಮೌಲ್ವಿಯೊಬ್ಬನೊಗೆ ಒಂದಲ್ಲ ಮೂರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ರೇಪಿಸ್ಟ್ ಅಬ್ಬುಗೆ ಮಲಪ್ಪುರಂ ತ್ವರಿತ ನ್ಯಾಯಾಲಯ 6.6 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಪದೇ ಪದೇ ಅತ್ಯಾಚಾರ ನಡೆದ ಬಳಿಕ ಬಾಲಕಿ ಗರ್ಭಿಣಿಯಾಗಿದ್ದಳು. ನಂತರ ಆಕೆಗೆ ಗರ್ಭಪಾತ ಮಾಡಿಸಲಾಗಿತ್ತು. 2022ರಲ್ಲಿ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿತ್ತು.
ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 2021 ರಲ್ಲಿ ಮೊದಲ ಬಾರಿಗೆ ಮದರಸಾದ ಮೌಲ್ವಿ ತನ್ನ ಮಗಳ ಮೇಲೆಯೇ ರೇ-ಪ್ ಮಾಡಿದ್ದ. ಆ ಸಮಯದಲ್ಲಿ, ಕರೋನಾ ಇದ್ದ ಕಾರಣ, 15 ವರ್ಷದ ಸಂತ್ರಸ್ತ ಬಾಲಕಿ ತನ್ನ ಕೊಠಡಿಯಿಂದ ಆನ್ಲೈನ್ನಲ್ಲಿ ಸ್ಟಡಿ ಮಾಡುತ್ತಿದ್ದಳು. ಆಗ ಆಕೆಯ ತಂದೆ ಕೋಣೆಗೆ ನುಗ್ಗಿ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಲಾರಂಭಿಸಿ ಲೈಂಗಿಕ ಕಿರುಕುಳ ನೀಡಲಾರಂಭಿಸಿದ. ಮಗಳು ವಿರೋಧ ವ್ಯಕ್ತಪಡಿಸಿದಾಗ ಮೌಲ್ವಿ ಆಕೆಯನ್ನು ಬಲವಂತವಾಗಿ ತನ್ನ ಬೆಡ್ರೂಮ್ಗೆ ಎಳೆದೊಯ್ದು ರೇ-ಪ್ ಮಾಡಿದ್ದಾನೆ.
ಈ ಕೃತ್ಯವನ್ನ ತಡೆಯಲು ಮುಂದಾದ ತನ್ನ ಪತ್ನಿಗೂ ಮೌಲ್ವಿ ಕೊ-ಲೆ ಬೆದರಿಕೆ ಹಾಕಿದ್ದಾನೆ. ಮಾರ್ಚ್ 2021 ಮತ್ತು ಅಕ್ಟೋಬರ್ 2021 ರ ನಡುವೆ, ಆತ ಮಗಳನ್ನು ಹಲವಾರು ಬಾರಿ ಕಾಮಕ್ಕೆ ಬಳಸಿಕೊಂಡಿದ್ದಾನೆ. ನವೆಂಬರ್ 2021 ರಿಂದ ಶಾಲೆಗಳು ಓಪನ್ ಆದಾಗ, ಸಂತ್ರಸ್ತ ಬಾಲಕಿ ಶಾಲೆಗೆ ಹೋಗಲು ಪ್ರಾರಂಭಿಸಿದಳು. ಜನವರಿ 2022 ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಶಾಲೆಯ ಸಿಬ್ಬಂದಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ತನ್ನ ತಂದೆ ತನ್ನ ಜೊತೆ ನಡೆಸಿದ ಕೃತ್ಯದ ಬಗ್ಗೆ ಬಾಲಕಿ ಶಾಲಾ ಸಿಬ್ಬಂದಿಗೆ ತಿಳಿಸಿದ್ದಾಳೆ, ಇದಾದ ಬಳಿಕ ಪೊಲೀಸರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡು ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಮದರಸಾ ಮೌಲ್ವಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸ್ವಲ್ಪ ಸಮಯದ ನಂತರ ವೈದ್ಯಕೀಯ ಪರೀಕ್ಷೆಯ ನಂತರ ಬಾಲಕಿಯ ಗರ್ಭಪಾತವೂ ಆಯಿತು. ಈ ವೇಳೆ ಪೊಲೀಸರು ಸಂತ್ರಸ್ತೆಯ ಗರ್ಭದಿಂದ ಹೊರಬಂದ ಭ್ರೂಣದ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿದ್ದರು ಎಂದು ಪ್ರಾಸಿಕ್ಯೂಷನ್ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಭ್ರೂಣದ ಸ್ಯಾಂಪಲ್ ಬಾಲಕಿಯ ತಂದೆಯೊಂದಿಗೆ ತಾಳೆ ಮಾಡಿದಾಗ, ಅದು ಮ್ಯಾಚ್ ಆಯಿತು. ಈ ಬಗ್ಗೆ ಪೊಲೀಸ್ ಅಧಿಕಾರಿ ಅಬ್ದುಲ್ ಬಶೀರ್ ತನಿಖೆ ನಡೆಸುತ್ತಿದ್ದರು. ಪೊಲೀಸರು ಬಾಲಕಿಯ ತಾಯಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಅಂತಿಮವಾಗಿ, ನ್ಯಾಯಾಲಯವು ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯವನ್ನು ಅಂಗೀಕರಿಸಿತು ಮತ್ತು ಮೌಲ್ವಿಗೆ 3 ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತ ಮೌಲ್ವಿಯ ಈ ಕೃತ್ಯ ನಿಜಕ್ಕೂ ಅಸಹ್ಯಕರವಾಗಿದೆ ಎಂದು ಛೀಮಾರಿ ಕೂಡ ಹಾಕಿತು. ನ್ಯಾಯಾಲಯದ ಆದೇಶದ ಪ್ರಕಾರ, ರೇಪಿಸ್ಟ್ ಮೌಲ್ವಿ ತನ್ನ ಕೊನೆಯ ಉಸಿರು ಇರುವವರೆಗೂ ಜೈಲಿನಲ್ಲೇ ಕೊಳೆಯಬೇಕಿದೆ. ಯಾಕಂದ್ರೆ ಜೀವಾವಾದಿ ಶಿಕ್ಷೆ ಎಂದರೆ ಅದು 14 ವರ್ಷದ್ದಾಗಿರುತ್ತದೆ ಆದರೆ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ಈಗ ಆತ 42 ವರ್ಷಗಳ ಜೈಲುವಾಸ ಅನುಭವಿಸಬೇಕಿದೆ.
ಇದನ್ನೂ ಓದಿ:
ಮದರಸಾಗೆ ಓದಲು ಹೋಗುತ್ತಿದ್ದ 12 ವರ್ಷದ ಬಾಲಕನ್ನ ಪ್ರಜ್ಞೆ ತಪ್ಪಿಸಿ ರೇ-ಪ್ ಮಾಡುತ್ತಿದ್ದ ಮೌಲ್ವಿ ಮೊಹಮ್ಮದ್ ಜಾವೇದ್, ಬಳಿಕ ಬಾಲಕನನ್ನ….
ದೆಹಲಿಯ ಸರಾಯ್ ರೋಹಿಲ್ಲಾ ಪ್ರದೇಶದಲ್ಲಿ ಮೊಹಮ್ಮದ್ ಇಸ್ರಾನ್ ಎಂಬ ಮೌಲ್ವಿ ಮದರಸಾದಲ್ಲಿ ಓದುತ್ತಿರುವ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮೌಲ್ವಿಯು ಬಾಲಕನಿಗೆ ಪುಸಲಾಯಿಸುವ ಮೂಲಕ ಹಲವು ಬಾರಿ ರೇ-ಪ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೇ-ಪಿಸ್ಟ್ ಮೌಲ್ವಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಮೊಹಮ್ಮದ್ ಇಸ್ರಾನ್ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಬಾಲಕನ ವಯಸ್ಸು 12 ವರ್ಷ. ಮೌಲ್ವಿ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ಲೈಂ-ಗಿ-ಕ ಸಂ-ಭೋ-ಗ ನಡೆಸುತ್ತಿದ್ದ ಎಂದು ಉತ್ತರ ದೆಹಲಿಯ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಆರೋಪಿ ಮೌಲ್ವಿ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಕಲಂ 377/506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮೌಲ್ವಿ ತಲೆಮರೆಸಿಕೊಂಡಿದ್ದಾನೆ.
Police filed an FIR under POCSO Act & 377, 506 sections of IPC. The accused committed unnatural sex with the victim several times after sedating him: Sagar Singh Kalsi, DCP North Delhi
— ANI (@ANI) December 15, 2022
ರಾಜಧಾನಿ ದೆಹಲಿಯಿಂದ ಇಂತಹ ಸುದ್ದಿ ಹೊರಬೀಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಕ್ಟೋಬರ್ 13, 2022 ರಂದು ಇದೇ ರೀತಿಯ ಪ್ರಕರಣವು ಬೆಳಕಿಗೆ ಬಂದಿತ್ತು. ದೆಹಲಿಯ ಕರವಾಲ್ ನಗರದಲ್ಲಿರುವ ಮದೀನಾ ಮಸೀದಿಯ ಮೌಲಾನಾ ಕೂಡ 11 ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಅ-ತ್ಯಾ-ಚಾ-ರ ಎಸಗಿದ್ದ.
ಮಗು ಮದರಸಾದಿಂದ ಓಡಿಹೋಗಿ ಮನೆಗೆ ತಲುಪಿದಾಗ ಮಗುವಿನ ಕುಟುಂಬಸ್ಥರಿಗೆ ಈ ವಿಷಯ ತಿಳಿದುಬಂದಿದ್ದು, ಮಗು ತನ್ನ ಪೋಷಕರಿಗೆ ತನ್ನ ಜೊತೆ ನಡೆದ ಕೃತ್ಯದ ಬಗ್ಗೆ ವಿವರಿಸಿದೆ. ಅಕ್ಟೋಬರ್ 11, 2022 ರಂದು ತನ್ನ ಮಗ ಮದರಸಾದಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾನೆ ಎಂದು ಮಗುವಿನ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಮಗು ಮೌಲಾನಾ ಮೊಹಮ್ಮದ್ ಜಾವೇದ್ ನ ಕರಾಳ ಕೃತ್ಯವನ್ನು ಕುಟುಂಬ ಸದಸ್ಯರ ಮುಂದೆ ಬಹಿರಂಗಪಡಿಸಿತ್ತು.
ಆಗಸ್ಟ್ ತಿಂಗಳಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ತಯಾರಿ ನಡೆಯುತ್ತಿರುವಾಗ ಮೌಲಾನಾ ಮೊಹಮ್ಮದ್ ಜಾವೇದ್ ಮಗುವನ್ನು ತನ್ನ ಕೋಣೆಗೆ ಕರೆದು ಅ-ತ್ಯಾ-ಚಾ&ರ ಎ-ಸಗಿ-ದ್ದಾನೆ ಎಂದು ಮಗು ತನ್ನ ಮನೆಯವರಿಗೆ ತಿಳಿಸಿದೆ. ಮೌಲಾನಾ ಮಗುವನ್ನು ಬೆದರಿಸಿ ಹಲವು ಬಾರಿ ಅ-ತ್ಯಾ-ಚಾ-ರವೆಸಗಿದ್ದ.
ಮತ್ತೊಂದೆಡೆ, ಇದೇ ರೀತಿಯ ಪ್ರಕರಣವು ಡಿಸೆಂಬರ್ 12, 2022 ರಂದು ಜಾರ್ಖಂಡ್ನಿಂದ ಬೆಳಕಿಗೆ ಬಂದಿತ್ತು, ಅಲ್ಲಿ ಮದರಸಾದ ಇಮಾಮ್ ಎಂಟು ವರ್ಷದ ಬಾಲಕಿಯ ಮೇ-ಲೆ ಅ-ತ್ಯಾ-ಚಾ-ರವೆಸ-ಗಿದ್ದ. ಈ ಘಟನೆ ಮುನ್ನೆಲೆಗೆ ಬಂದ ನಂತರ ಪೊಲೀಸರು ಆರೋಪಿ ಮೌಲಾನಾನನ್ನು ಬಂಧಿಸಿದ್ದರು.
ಇದನ್ನೂ ಓದಿ:
ಶಾಲೆಯಲ್ಲಿ ಓದುತ್ತಿದ್ದ 6-7 ತರಗತಿಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಅರಬಿ ಶಿಕ್ಷಕ #ಫೈಜಲ್ ಅರೆಸ್ಟ್: ಕೌನ್ಸಿಲಿಂಗ್ ನಲ್ಲಿ ಮಕ್ಕಳು ಬಿಚ್ಚಿಟ್ಟ ಸತ್ಯ ಕೇಳಿ ದಂಗಾದ ಪೋಲಿಸರು
ಕೇರಳದ ಕಣ್ಣೂರಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕನ ಮೇಲೆ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅರೇಬಿಕ್ ಕಲಿಸುವ ಶಿಕ್ಷಕ ಫೈಝಲ್ ವಿರುದ್ಧ 6 ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯರು ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತ ಬಾಲಕಿಯರ ಸಂಖ್ಯೆ ಹೆಚ್ಚಾಗಬಹುದು. ಶಾಲೆಯ ಇತರ ಬಾಲಕಿಯರ ಹೇಳಿಕೆಯನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕಣ್ಣೂರಿನ ತಳಿಪರಂಬದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಐವರು ವಿದ್ಯಾರ್ಥಿನಿಯರು ತಮ್ಮದೇ ಶಾಲೆಯ ಶಿಕ್ಷಕ ಫೈಝಲ್ (52) ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಫೈಝಲ್ ಶಾಲೆಯಲ್ಲಿ ಅರೇಬಿಕ್ ಕಲಿಸುತ್ತಾನೆ. ಆರೋಪಿ ಶಿಕ್ಷಕ ಒಂದು ವರ್ಷದಿಂದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಐದು ದೂರುಗಳು ಬಂದಿವೆ ಆದರೆ ಸಂತ್ರಸ್ತ ಬಾಲಕಿಯರ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಶಾಲೆಯ ಇತರ ವಿದ್ಯಾರ್ಥಿನಿಯರನ್ನೂ ವಿಚಾರಣೆ ನಡೆಸಲಾಗುತ್ತಿದೆ.
Kerala | Faizal, a 52-year-old teacher in a higher secondary school in Taliparamba, Kannur dist arrested by Police for allegedly sexually assaulting students. Police have registered 5 cases on basis of statements from 5 students of classes 6 & 7. More statements are being taken.
— ANI (@ANI) January 13, 2023
ಶಾಲೆಯಲ್ಲಿ ನಡೆದ ನಿಯಮಿತ ಕೌನ್ಸೆಲಿಂಗ್ ಅವಧಿಯಲ್ಲಿ, ವಿದ್ಯಾರ್ಥಿನಿಯರು ತಮ್ಮ ಆಘಾತಕಾರಿ ಅನುಭವಗಳನ್ನು ಕೌನ್ಸಿಲರ ಜೊತೆ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಮಾತನ್ನು ಆಲಿಸಿದ ಕೌನ್ಸಿಲರ್ ಪೊಲೀಸರ ಸಹಾಯ ಪಡೆದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿಯು ಸಮಯಕ್ಕೆ ಸರಿಯಾಗಿ ಪೊಲೀಸರ ಸಹಾಯ ಪಡೆದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾಲಾ ಆಡಳಿತದ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ.
ಆರೋಪಿ ಫೈಝಲ್ ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ನಿವಾಸಿಯಾಗಿದ್ದಾನೆ. ಈತ ಕಣ್ಣೂರಿನ ತಳಿಪರಂಬದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಾಲೆಯಲ್ಲಿ ಅರೇಬಿಕ್ ಪಾಠ ಮಾಡುತ್ತಿದ್ದ. ಸದ್ಯ ಆರೋಪಿ ಫೈಝಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಫೈಜಲ್ನನ್ನ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಫೈಝಲ್ ಇದುವರೆಗೆ ಎಷ್ಟು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.