ಯಾವುದೇ ಟೆಕ್ನಾಲಜಿ ಇಲ್ಲದೇ 4000 ಸಾವಿರ ವರ್ಷಗಳ ಹಿಂದೆ‌ ಒಂದೇ ಸಮಾನ ರೇಖೆಯಲ್ಲಿ ಕಟ್ಟಲಾಗಿತ್ತು ಶಿವನ ಈ ಮಂದಿರಗಳು: ಸಂಶೋಧನೆಯಿಂದ ಚಕಿತರಾದ ವಿಜ್ಞಾನಿಗಳು

in Uncategorized 1,318 views

ನಿಮಗೆ ಈ ಮಾಹಿತಿಯನ್ನ ತಿಳಿದ ಬಳಿಕ ಆಶ್ಚರ್ಯಚಕಿತರಾಗಬಹುದು, ಹೌದು ಭಾರತದಲ್ಲಿ ಶಿವನ ಮಂದಿರಗಳನ್ನ ಮೇಲೆ ಕೇದಾರನಾಥ ದೇವಸ್ಥಾನದಿಂದ ಹಿಡಿದು ಕೆಳಗೆ ದಕ್ಷಿಣದ ರಾಮೇಶ್ವರಂ ವರೆಗಿನ ಶಿವನ ದೇವಸ್ಥಾನಗಳನ್ನ ಒಂದೇ ಸ್ಟ್ರೇಟ್ ಲೈನಿನಲ್ಲಿ ಕಟ್ಟಲಾಗಿದೆ. ಇಲ್ಲಿ ನಮ್ಮನ್ನ ಚಕಿತಗೊಳಿಸುವ ಮತ್ತೊಂದು ವಿಚಾರವೇನೆಂದರೆ ನಮ್ಮ ಪೂರ್ವಜರು ಯಾವುದೇ ಟೆಲ್ನಾಲಜಿ ಇಲ್ಲದಿದ್ದ ಸಮಯದಲ್ಲಿ ಅದ್ಹೇಗೆ ಇಂತಹ ವಿಸ್ಮಯಗಳನ್ನ ಸೃಷ್ಟಿಸಿದ್ದರೋ ಆ ದೇವರೇ ಬಲ್ಲ.

Advertisement

ಆಗಿ‌ನ ಕಾಲದಲ್ಲಿ ಅದ್ಯಾವ ಟೆಕ್ನಾಲಜಿಯನ್ನು ಬಳಸಿ ಇಂತಹ ಸಾಧನೆಗಳನ್ನ ಮಾಡಿದ್ದರು ಅನ್ನೋದು ಈಗಲೂ ಯಕ್ಷಪ್ರಶ್ನೆಯಾಗೇ ಉಳಿದಿದೆ. ಉತ್ತರಾಖಂಡದ ಕೇದಾರನಾಥ, ತೆಲಂಗಾಣದ ಕಾಲೇಶ್ವರಂ, ಆಂಧ್ರಪ್ರದೇಶದ ಕಾಳಹಸ್ತಿ, ತಮಿಳುನಾಡಿನ ಏಕಂಬೇಶ್ವರ, ಚಿದಂಬರಂ ಹಾಗು ಕೊನೆಯಲ್ಲಿ ರಾಮೇಶ್ವರಂ ಮಂದಿರಗಳ ವರೆಗೆ 79° E 41’54” Longitude ನ ಭೌಗೋಳಿಕ ಸ್ಟ್ರೈಟ್ ಲೈನ್ ನಲ್ಲಿ ಕಟ್ಟಲಾಗಿದೆ.

ಈ ಮಂದಿರಗಳೆಲ್ಲವೂ ಪ್ರಕೃತಿಯ 5 ತತ್ವಗಳ ಮೇಲಿನ ಲಿಂಗದ ಅಭಿವ್ಯಕ್ತಿಯನ್ನ ಪ್ರತಿನಿಧಿಸುತ್ತವೆ, ಇದನ್ನ ಇಂದು ನಾವು ನಮ್ಮ ಭಾಷೆಯಲ್ಲಿ ಪಂಚಭೂತ ಗಳೆಂದು ಹೇಳುತ್ತೇವೆ. ಪಂಚಭೂತಗಳು ಅಂದರೆ ಪೃಥ್ವಿ, ಜಲ, ಅಗ್ನಿ, ವಾಯು ಹಾಗು ಅಂತರಿಕ್ಷ. ಈ ಐದು ತತ್ವಗಳ ಆಧಾರದ ಮೇಲೆಯೇ ಈ ಐದು ಶಿವಲಿಂಗಗಳನ್ನ ಪ್ರತಿಷ್ಟಾಪನೆ ಮಾಡಲಾಗಿದೆ.

ಜಲದ ಪ್ರತಿನಿಧಿತ್ವ ತಿರುವನೈಕವಲ್ ಮಂದಿರದಲ್ಲಿದೆ, ಅಗ್ನಿಯ ಪ್ರತಿನಿಧಿತ್ವ ತಿರುವಣ್ಣಾಮಲೈ ನಲ್ಲಿದೆ, ವಾಯುವಿನ ಪ್ರತಿನಿಧಿತ್ವ ಕಾಳಹಸ್ತಿಯಲ್ಲಿದೆ, ಪೃಥ್ವಿಯ ಪ್ರತಿನಿಧಿತ್ವ ಕಾಂಚೀಪುರಂ ನಲ್ಲಿ ಹಾಗು ಕೊನೆಯದಾಗಿ ಅಂತರಿಕ್ಷದ ಪ್ರತಿನಿಧಿತ್ವ ಚಿದಂಬರಂ ದೇವಸ್ಥಾನದಲ್ಲಿದೆ.

ವಾಸ್ತು-ವಿಜ್ಞಾನ-ವೇದ ಗಳ ಅದ್ಭುತ ಸಮಾಗಮವನ್ನ ನಾವು ಪಂಚ ಮಂದಿರಗಳಲ್ಲಿ ಕಾಣಬಹುದಾಗಿದೆ. ಭೌಗೋಳಿಕ ರೂಪದಿಂದ ಈ ಮಂದಿರಗಳು ಬಹಳ ವಿಶಿಷ್ಟವಾಗಿವೆ. ಈ ಮಂದಿರಗಳಲ್ಲಿ ಯೋಗ ಹಾಗು ವಿಜ್ಞಾನಗಳ ಅನುಸಾರವಾಗಿಯೇ ಕಟ್ಟಲಾಗಿದೆ. ಹಾಗು ಇವೆಲ್ಲಾ ಶಿವನ ಮಂದಿರಗಳು ಭೌಗೋಳಿಕವಾಗಿ ಒಂದೇ ನೇರ ಸಂರೇಖಣದಲ್ಲಿ ಇಡಲಾಗಿದೆ. ಅಂದರೆ ನೀವು ಗೂಗಲ್ ಮ್ಯಾಪ್ ನಲ್ಲಿ ಈ ದೇವಸ್ಥಾನಗಳನ್ನು ನೋಡಿದರೆ ಒಂದೇ ಸ್ಟ್ರೇಟ್ ಲೈನ್ ನಲ್ಲಿ ಈ ಮಂದಿರಗಳನ್ನ ಕಾಣಬಹುದಾಗಿದೆ.

ಇದರ ಹಿಂದೆ ನಿಶ್ಚಿತವಾಗಿ ಮಾನವನ ಶರೀರದ ಮೇಲೆ ಪ್ರಭಾವ ಬೀರುವಂತಹ ಯಾವುದೋ ವೈಜ್ಞಾನಿಕ ಕಾರಣವಂತೂ ಇರಲೇಬೆಕು.‌ ಈ ಮಂದಿರಗಳನ್ನ ಹತ್ತಿರತ್ತಿರ ಸುಮಾರು 4 ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ, ಆಗ ಭೂಮಿಯ ಅಕ್ಷಾಂಶ ರೇಖಾಂಶ ಅಳೆಯುವ ಅಥವ ಭೂಮಂಡಲದ ಮೇಲಿನ ನಿಖರ ಮಾಹಿತಿ ತಿಳಿಯಲು ಯಾವ ಉಪಗ್ರಹಗಳೂ ಇರಲಿಲ್ಲ. ಹಾಗಿದ್ದಮೇಲೆ ಇಷ್ಟು ನಿಖರವಾಗಿ ಭೂಮಂಡಲದ ಮೇಲಿನ ಈ ಐದೂ ಮಂದಿರಗಳನ್ನ ಅದ್ಹೇಗೆ ಒಂದೇ ಸ್ಟ್ರೇಟ್ ಲೈನ್ ಗಳಿಗೆ ಅನುಗುಣವಾಗಿ ಕಟ್ಟಲು ಸಾಧ್ಯವಾದರೂ ಹೇಗೆ? ಅದಿ ಆ ಭಗವಂತನಿಗೇ ಗೊತ್ತಿರಬಹುದು.

ಕೇದಾರನಾಥದಿಂದ ರಾಮೇಶ್ವರಂ ವರೆಗೆನ ಅಂತರ 2383 ಕಿಲೋಮೀಟರ್ ದೂರವಿದೆ. ಆದರೆ ಈ ಎಲ್ಲಾ ಮಂದಿರಗಳೂ ಕೂಡ ಒಂದೇ ಸಮನಾಂತರ ರೇಖೆಯ ಮೇಲಿವೆ. ಹಾಗಾದರೆ ಸಾವಿರಾರು ವರ್ಷಗಳ ಹಿಂದೆಯೇ ಅದ್ಯಾವ ಅದ್ಭುತ ಟೆಕ್ನಾಲಜಿಯ ಬಳಸಿ ಈ ರೀತಿಯ ಸಮಾನಾಂತರ ದೂರದಲ್ಲಿರುವ ಮಂದಿರಗಳನ್ನ ಕರಾರುವಕ್ಕಾಗಿ ಕಟ್ಟಿದ್ದರು ಅನ್ನೋದು ಮಾತ್ರ ಈವರೆಗೂ ರಹಸ್ಯವಾಗೇ ಉಳಿದಿದೆ.

ಶ್ರೀಕಾಳಹಸ್ತಿಯಲ್ಲಿ ಮಿನುಗುವ ದೀಪದಿಂದ ತಿಳಿದು ಬರುವ ಸಂಗತಿಯೆಂದರೆ ಇದು ವಾಯು ಲಿಂಗ. ತಿರುವನಿಕ್ಕಾ ಮಂದಿರದಲ್ಲಿ ಶಿವಲಿಂಗದ ಜಲವಸಂತದಿಂದ ತಿಳಿದು ಬರುವ ಸಂಗತಿಯೆಂದರೆ ಇದು ಜಲ ಲಿಂಗವೆಂದು. ಅಣ್ಣಾಮಲೈ ಬೆಟ್ಟದಲ್ಲಿರುವ ವಿಶಾಲ ದೀಪ ದಿಂದ ತಿಳಿದು ಬರುವ ಸಂಗತಿಯೆಂದರೆ ಅದು ಅಗ್ನಿ ಲಿಂಗವೆಂದು. ಕಾಂಚೀಪುರಂ ನಲ್ಲಿನ ಮರಳಿನ ಸ್ವಯಂಭೂ ಲಿಂಗದಿಂದ ತಿಳಿದುಬರುವ ಸಂಗತಿಯೆಂದರೆ ಅದು ಪೃಥ್ವಿ ಲಿಂಗವೆಂದು ಹಾಗು ಚಿದಂಬರಂ ನಲ್ಲಿರುವ ನಿರಾಕಾರ ರೂಪದ ದೇವರ ನಿರಾಕಾರತೆ ಅಂದರೆ ಅದು ಆಕಾಶ ತತ್ವ ಲಿಂಗವೆಂದು ಹೇಳಬಹುದಾಗಿದೆ.

ಬ್ರಹ್ಮಾಂಡದ ಪಂಚತತ್ವಗಳನ್ನ ಪ್ರತಿನಿಧಿಸುವ ಪಂಚ ಲಿಂಗಗಳು ಒಂದೇ ಸಮಾನಾಂತರ ರೇಖೆಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಪ್ರತಿಷ್ಟಾಪನೆ ಮಾಡಿರುವುದು ಮಾತ್ರ ಆಶ್ಚರ್ಯಕರ ಸಂಗತಿಯೇ ಸರಿ. ನಮ್ಮ ಪೂರ್ವಜರ ಜ್ಞಾನ ಹಾಗು ಬುದ್ಧಿಮತ್ತೆಯ ಬಗೆಗೆ ನಮಗೆ ಅತೀವ ಗೌರವ ಹಾಗು ಗರ್ವವಾಗಲೇಬೇಕು. ಅವರ ಅಂದಿನ ತಂತ್ರಜ್ಞಾನ ಹಾಗು ಬುದ್ಧಿಮತ್ತೆಯ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದರೆ ಬಹುಶಃ ಅದು ಈಗಿನ ವಿಜ್ಞಾನಿಗಳ ಹಾಗು ಅವರ ಸಂಶೋಧನೆಗಳಿಗೂ ನೆರವಾಗಬಹುದಾಗಿದೆ.

ಇನ್ನೂ ಹಲವರ ವಾದಗಳ ಪ್ರಕಾರ ಕೇವಲ ಈ ಐದು ಮಂದಿರಗಳಷ್ಟೇ ಅಲ್ಲದೆ ಇನ್ನೂ ಹಲವಾರು ಮಂದಿರಗಳು ಇದೇ ರೇಖೆಯಲ್ಲಿ ಕೇದಾರನಾಥದಿಂದ ರಾಮೇಶ್ವರಂ ವರೆಗೆ ಇವೆ ಎಂದು ಹೇಳಲಾಗುತ್ತದೆ‌. ಈಗಿರುವ ಈ ಐದು ಮಂದಿರಗಳ ಸಮಾನಾಂತರ ರೇಖೆಯನ್ನ “ಶಿವಶಕ್ತಿ ಅಕ್ಷರೇಖೆ” ಅಂತಲೂ ಕರೆಯುತ್ತಾರೆ.

– Vinod Hindu Nationalist

Advertisement
Share this on...