ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಹಾಗು ಹೈದ್ರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಸಾದುದ್ದೀನ್ ಓವೈಸಿ, “ನನ್ನ ಮಸೀದಿ (ಬಾಬ್ರಿ) ಶಹೀದ್ ಆಯಿತು. ಇದಕ್ಕೆ ಕಳಂಕ ತರುವ ಕೆಲಸ ಮಾಡಿದವರು ಭಾರತದ ತಳಹದಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈ ಬಗ್ಗೆ, ಸಮಾಜವಾದಿ (SP) ಬಹುಜನ ಸಮಾಜವಾದಿ (BSP) ಅಥವಾ ಕಾಂಗ್ರೆಸ್‌ನ ಯಾರಾದರೂ ಏನಾದರೂ ಹೇಳಿದ್ದೀರಾ? ಅದು ನನ್ನ ಮಸೀದಿ (ಬಾಬ್ರಿ), ತಮ್ಮದಲ್ಲ ಎಂಬ ಕಾರಣಕ್ಕೆ ಅವರೆಲ್ಲ ಕಣ್ಣು ಮುಚ್ಚಿಕೊಂಡರು” ಎಂದಿದ್ದಾರೆ.
ಇದಕ್ಕೂ ಮೊದಲು, ಚುನ್ನಿಗಂಜ್‌ನ ಜಿಐಸಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅಸಾದುದ್ದೀನ್ ಓವೈಸಿ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ನೂರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದರು.
ಸಣ್ಣ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿಯೂ ಅವರು ಹೇಳಿದ್ದರು. ಈ ವೇಳೆ ನಗರದಲ್ಲಿ ಸಮಾಜವಾದಿ ಪಕ್ಷ ಹಾಗೂ ಸೋಲಂಕಿ ಕುಟುಂಬದವರನ್ನೂ ಟಾರ್ಗೆಟ್ ಮಾಡಿದ್ದಾರೆ. ಸಿಎಎ-ಎನ್‌ಆರ್‌ಸಿ ವಿವಾದದ ಸಂದರ್ಭದಲ್ಲಿ ಅವರು ನಾಲ್ವರ ಸಾವು, ಕಿದ್ವಾಯಿ ನಗರ, ಉನ್ನಾವೋ ಮತ್ತು ಕಾಸ್‌ಗಂಜ್‌ನಲ್ಲಿ ಮುಸ್ಲಿಮರ ಸಾವಿನ ಬಗ್ಗೆ ಸರ್ಕಾರಕ್ಕೆ ತೀಕ್ಷ್ಣವಾದ ಪ್ರಶ್ನೆಗಳನ್ನು ಹಾಕಿದರು.
#WATCH | My Masjid (Babri) was martyred. People who tarnished it disrupted the foundation of India & the rule of law…Did anyone from SP, BSP or Congress say anything? They turned a blind eye as it was my Masjid being tarnished, not theirs: AIMIM Chief Asaddudin Owaisi in Kanpur pic.twitter.com/odcFTZqkkB
— ANI UP (@ANINewsUP) December 12, 2021
ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸಾದುದ್ದೀನ್ ಓವೈಸಿ, ರಾಜ್ಯದಲ್ಲಿ ಶೇಕಡಾ 19 ರಷ್ಟು ಮುಸ್ಲಿಮರು ಇದ್ದರೂ ಅವರಿಗೆ ಇಂದು ನಾಯಕರೇ ಇಲ್ಲ. ಅವರ್ಯಾರೂ ಉಪ ಮುಖ್ಯಮಂತ್ರಿ ಆಗಲಿಲ್ಲ. ಮುಸ್ಲಿಮರು ಈಗ ತಮ್ಮ ಪಾಲಿಗಾಗಿ ಧ್ವನಿ ಎತ್ತಬೇಕಾಗಿದೆ. ಇದಕ್ಕಾಗಿ ಅವರು ನಾಯಕತ್ವವನ್ನು ರಚಿಸಬೇಕು ಎಂದರು.
ಎಐಎಂಐಎಂನ ಅಸಾದುದ್ದೀನ್ ಓವೈಸಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷಗಳಿಗೆ ಮುಸ್ಲಿಮರ ಬಗ್ಗೆ ಕಾಳಜಿ ಇಲ್ಲ. ಮುಸ್ಲಿಮರ ಪ್ರಾಣಕ್ಕೆ ಬೆಲೆ ಇಲ್ಲ. ಮುಸ್ಲಿಂ ಯಾವುದೇ ರಾಜಕೀಯ ಪಕ್ಷದ ಅಡಿಯಾಳಲ್ಲ. ಅವನು ತನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಒಗ್ಗಟ್ಟಾಗಿ ತಮ್ಮ ಮತದ ಶಕ್ತಿ ತೋರಿಸಬೇಕಿದೆ.
ಮುಸ್ಲಿಮರು ತಮ್ಮವರನ್ನೇ ಉಪಮುಖ್ಯಮಂತ್ರಿ ಮಾಡಬೇಕು. ಅಲ್ಲದೆ ಅಖಿಲೇಶ್ ಯಾದವ್ ಅಜಂ ಖಾನ್ ಮುಸ್ಲಿಮರಿಗಾಗಿ ಏನನ್ನೂ ಮಾಡಿಲ್ಲ. ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಸಚಿವರಾಗಿದ್ದ ದೊಡ್ಡ ದೊಡ್ಡ ವ್ಯಕ್ತಿಗಳು ಜೈಲಿನಲ್ಲಿದ್ದಾರೆ ಮತ್ತು ಅಖಿಲೇಶ್ ಯಾದವ್ ಮೌನವಾಗಿ ಕುಳಿತಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಅಸಾದುದ್ದೀನ್ ಓವೈಸಿ ಮಾತನಾಡಿ, ಎಸ್‌ಪಿ ಶಾಸಕರು ಯಾವುದೇ ರೀತಿಯ ಕೆಲಸ ಮಾಡಿಲ್ಲ. ಈ ಜನ ತಮ್ಮನ್ನ ತಾವು ಮುಸಲ್ಮಾನರೆಂದು, ತಮಗಿಂತ ದೊಡ್ಡ ಮುಸ್ಲಿಮರಿಲ್ಲ ಹೇಳಿಕೊಂಡು ಗೆಲ್ಲುತ್ತಾರೆ, . ಸಿಂಹ ಬಂದಿದೆ ಎಂಬುದನ್ನು ಸೋಲಂಕಿ ಅರ್ಥ ಮಾಡಿಕೊಳ್ಳಬೇಕು, ಈಗ ಬಿಜೆಪಿಯ ಭಯವನ್ನು ನಮ್ಮ ಹತ್ತಿರ ತೋರಿಸಬೇಡಿ ಎಂದರು.
ತಮ್ಮ ಮಾತನ್ನು ಮುಂದಿಟ್ಟ ಅಸಾದುದ್ದೀನ್ ಓವೈಸಿ, ಯೋಗಿ ಸರ್ಕಾರದಲ್ಲಿ ಪ್ರತಿ ಪೊಲೀಸ್ ಠಾಣೆಗಳಲ್ಲಿ ಇಬ್ಬರು ಠಾಕೂರ್‌ಗಳು ಕಂಡುಬರುತ್ತಾರೆ ಎಂದು ಹೇಳಿದರು. ಅವರು ಯೋಗಿ ಆದರೆ ಅವರು ಹೃದಯದಲ್ಲಿ ಠಾಕೂರ್. ಅವರು ಠಾಕೂರರನ್ನು ಪ್ರೋತ್ಸಾಹಿಸುತ್ತಾರೆ. ಅದೇ ರೀತಿ ಎಸ್‌ಪಿ ಸರ್ಕಾರದಲ್ಲಿ ಯಾದವರು ಇದ್ದರು ಎಂದರು.
ಜೈಲಿನಲ್ಲಿರುವ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಸಾರ್ವಜನಿಕ ಸಭೆಯಲ್ಲಿ ಅವರ ಪತ್ರವನ್ನು ಓದಿದರು. ಪತ್ರದ ಮೂಲಕ ಅವರು “ಜಿನ್ನಾ ಮದ್ಯವ್ಯಸನಿ, ಮುಸ್ಲಿಮರಿಗೆ ದ್ರೋಹ ಬಗೆದು ದೇಶವನ್ನು ಒಡೆದಿದ್ದಾರೆ. ಸ್ವಾತಂತ್ರ್ಯ ಸಿಕ್ಕ ನಂತರವೂ ಇಂದು ಮುಸಲ್ಮಾನರು ಪಂಕ್ಚರ್ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ” ಎಂದರು.
ಕಾಂಗ್ರೆಸ್ ಸರಕಾರ ಮುಸ್ಲಿಮರನ್ನು ಗಲಭೆ ಮಾಡುವ ಮೂಲಕ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು. ಇಂದಿರಾಗಾಂಧಿ ಅಜ್ಮೀರ್ ಷರೀಫ್ ಗೆ ಹೋಗಿದ್ದರೆ ಮುಸ್ಲಿಂ ಸಮಾಜ ಸಂತಸ ಪಡುತ್ತಿತ್ತು. ಮುಲಾಯಂ ಸಿಂಗ್ ಕೂಡ ಮುಸ್ಲಿಮರಿಗಾಗಿ ಏನನ್ನೂ ಮಾಡಿಲ್ಲ ಎಂದರು.