“ಜಾತ್ಯಾತೀತತೆ (ಸೆಕ್ಯೂಲರಿಸಂ) ನಮಗೆ ಬೇಕಿಲ್ಲ, ಮುಸಲ್ಮಾನರು ಮದುವೆಯಾಗಿ ಹೆಚ್ಚೆಚ್ಚು ಮಕ್ಕಳನ್ನ ಹುಟ್ಟಿಸಿ ಈ ದೇಶವನ್ನ….”: ಓವೈಸಿ

in Uncategorized 4,040 views

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮುಸ್ಲಿಂ ಯುವಕರಿಗೆ ಮದುವೆಯಾಗುವಂತೆ ಸಲಹೆ ನೀಡಿದ್ದಾನೆ, ಹೆಂಡತಿ ಮನೆಯಲ್ಲಿದ್ದರೆ ಮನಸ್ಸು ಹಗುರವಾಗಿರುತ್ತದೆ. ಇದರೊಂದಿಗೆ ಮುಸ್ಲಿಮರು ಜಾತ್ಯತೀತತೆಯನ್ನು (ಸೆಕ್ಯೂಲರಿಸಂ) ಅನುಸರಿಸಬೇಡಿ ಎಂದು ಸಲಹೆ ನೀಡಿದ್ದಾನೆ. ಅವರ ಈ ಭಾಷಣದ ತುಣುಕು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ವರದಿಗಳ ಪ್ರಕಾರ, ಓವೈಸಿ ಭಾನುವಾರ (ಡಿಸೆಂಬರ್ 12) ಮುಂಬೈನಲ್ಲಿ ತಿರಂಗಾ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದನು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಓವೈಸಿ, “ಶಾದಿ ಕರೆಂಗೆ ನಾ (ಮದುವೆಯಾಗ್ತೀರಿ ತಾನೆ)?, ಬ್ಯಾಚುಲರ್ ಮತ್ ರಹನಾ (ಬ್ಯಾಚುಲರ್ ಆಗೇ ಇರಬೇಡಿ) ಬ್ಯಾಚುಲರ್‌ಗಳು ತುಂಬಾ ಕಿರಿಕಿರಿಯಲ್ಲಿರ್ತಾರೆ” ಮುಸಲ್ಮಾನರನ್ನು ಬೇಗ ಮದುವೆಯಾಗಿ ಮಕ್ಕಳನ್ನು ಹೆರುವಂತೆ ಪ್ರೇರೇಪಿಸಿದ ಓವೈಸಿ, “18-19 ವರ್ಷ ವಯಸ್ಸಿನ ಯುವಕರು ಬೇಗ ಮದುವೆಯಾದರೆ ಅವರಿಗೆ ಮಕ್ಕಳಾಗುತ್ತವೆ. ನೀವು ಮದುವೆಯಾಗುವುದಿಲ್ಲವೇ? ಹೆಂಡತಿ ಮನೆಯಲ್ಲಿದ್ದರೆ ಪುರುಷನ ಮನಸ್ಸು ಹಗುರವಾಗಿರುತ್ತದೆ” ಎಂದು ಎಐಎಂಐಎಂ ಸಂಸದ ಓವೈಸಿ ಹೇಳಿದ್ದಾನೆ

Advertisement

ಜಾತ್ಯತೀತತೆಯನ್ನು ಅನುಸರಿಸಬೇಡಿ ಎಂದು ಮುಸ್ಲಿಮರಿಗೆ ಸಲಹೆ

ಅಸಾದುದ್ದೀನ್ ಓವೈಸಿ ಜಾತ್ಯಾತೀತತೆ (ಸೆಕ್ಯುಲರಿಸಂ) ಯನ್ನು ನಿಷ್ಪ್ರಯೋಜಕ ಎಂದು ಬಣ್ಣಿಸಿದ್ದಾನೆ. ಆತ ಮಾತನಾಡುತ್ತ, “ನಾನು ಭಾರತದ ಮುಸ್ಲಿಮರನ್ನು ಕೇಳಲು ಬಯಸುತ್ತೇನೆ, ನಾವು ಜಾತ್ಯತೀತತೆಯಿಂದ ಏನು ಪಡೆದುಕೊಂಡಿದ್ದೇವೆ? ಸೆಕ್ಯುಲರಿಸಂ ಮೂಲಕ ನಮಗೆ ಮೀಸಲಾತಿ ಸಿಕ್ಕಿದೆಯೇ? ಮಸೀದಿ ಕೆಡವಿದವರಿಗೆ ಶಿಕ್ಷೆಯಾಗಿದೆಯೇ? ಇಲ್ಲ, ಯಾರಿಗೂ ಏನೂ ಸಿಕ್ಕಿಲ್ಲ…ನಾನು ಸಾಂವಿಧಾನಿಕ ಜಾತ್ಯತೀತತೆಯನ್ನು ನಂಬುತ್ತೇನೆಯೇ ಹೊರತು ರಾಜಕೀಯ ಜಾತ್ಯತೀತತೆಯಲ್ಲ. ದಯವಿಟ್ಟು ಮುಸ್ಲಿಮರು ರಾಜಕೀಯ ಜಾತ್ಯತೀತತೆಯಿಂದ ದೂರವಿರಿ” ಎಂದನು.

ಓವೈಸಿಯ ಇದೇ ವರ್ಷದ ಎರಡನೇ ಭಾಷಣವನ್ನು ನೋಡಿದರೆ, ಅವರು ನಿರಂತರವಾಗಿ ಜಾತ್ಯತೀತತೆಯ ಕೂಗು ಹಾಕುತ್ತಿದ್ದಾನೆ ಎಂಬುದು ಗೊತ್ತಾಗುತ್ತದೆ. 2021 ರ ಸೆಪ್ಟೆಂಬರ್‌ನಲ್ಲಿ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಚುನಾವಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದ ಈತ, ಬಿಜೆಪಿ ದೇಶದ ಜಾತ್ಯತೀತತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದನು. ಒವೈಸಿಯ ಎರಡೂ ಹೇಳಿಕೆಗಳನ್ನು ನೋಡಿದರೆ ಇಲ್ಲಿಯವರೆಗೆ ಜಾತ್ಯತೀತತೆಯ ಬಳಕೆಯು ಜನರನ್ನು ದಾರಿತಪ್ಪಿಸಲು ಮಾತ್ರ ಬಳಸಲಾಗಿದೆ ಎಂಬುದು ಅವರ ಮಾತಿನಿಂದ ಸ್ಪಷ್ಟವಾಗುತ್ತದೆ.

ಜಾತ್ಯತೀತತೆಯಿಂದಾಗಿ ಮುಸ್ಲಿಮರು ಉದ್ಯೋಗದಲ್ಲಿ ಮೀಸಲಾತಿಯನ್ನು ಪಡೆಯಲಿಲ್ಲ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪಡೆಯಲಿಲ್ಲ, ಆದರೆ ಅದು ಅವರಿಗೆ ಲಾಭಕ್ಕಿಂತ ಹೆಚ್ಚು ಹಾನಿಯನ್ನೇ ಉಂಟುಮಾಡಿದೆ ಎಂದು ಓವೈಸಿ ಮಾತಿನ ಅರ್ಥವಾಗಿದೆ.

ಕೆಲ ತಿಂಗಳ ಹಿಂದೆ ಹೆಚ್ಚುತ್ತಿರುವ ಹಿಂದೂ ಅಲೆಯ ಬಗ್ಗೆಯೂ ಮಾತನಾಡಿದ್ದ ಓವೈಸಿ

ಓವೈಸಿ ಕಳೆದ ವರ್ಷ ಹಿಂದುತ್ವದ ಬಗ್ಗೆ ಹೇಳಿಕೆ ನೀಡಿದ್ದನು. ಆತನ ಈ ಹೇಳಿಕೆಯಲ್ಲಿ ಆತ ಮಾತನಾಡುತ್ತ ಬಿಜೆಪಿ/ಆರೆಸ್ಸೆಸ್ ನವರು ಹೇಳುವ ಹಿಂದುತ್ವವು ಒಂದು ಸಮುದಾಯಕ್ಕೆ ಮಾತ್ರ ರಾಜಕೀಯ ಅಧಿಕಾರವನ್ನು ಹೊಂದಿರಬೇಕು ಎಂಬ ಸುಳ್ಳನ್ನು ಆಧರಿಸಿದೆ ಎಂದಿದ್ದನು. ಸೋಷಿಯಲ್ ಮೀಡಿಯಾದಲ್ಲಿ ತನ್ನ ಹೇಳಿಕೆಗಳಿಗಾಗಿ ಸದಾ ಸುದ್ದಿಯಲ್ಲಿರುವ ಅಸದುದ್ದೀನ್ ಓವೈಸಿ ಹಿಂದುತ್ವದ ಕುರಿತಾಗಿ ಟ್ವೀಟ್ ಮಾಡಿ, “ಒಂದು ಸಮುದಾಯಕ್ಕೆ ಮಾತ್ರ ಎಲ್ಲಾ ರಾಜಕೀಯ ಅಧಿಕಾರ ಇರಬೇಕು ಮತ್ತು ಮುಸ್ಲಿಮರಿಗೆ ರಾಜಕೀಯದಲ್ಲಿ ಭಾಗವಹಿಸುವ ಹಕ್ಕು ಇರಬಾರದು ಎಂಬ ಸುಳ್ಳಿನ ಮೇಲೆ ಹಿಂದುತ್ವವನ್ನು ನಿರ್ಮಿಸಲಾಗಿದೆ” ಎಂದು ಹೇಳಿದ್ದಾನೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ನಮ್ಮ ಉಪಸ್ಥಿತಿಯು ಹಿಂದುತ್ವದಿಂದ ನಮ್ಮನ್ನು (ಮುಸಲ್ಮಾನರನ್ನ) ರಕ್ಷಿಸಿಕೊಳ್ಳು ಇರುವ ಏಕೈಕ ಮಾರ್ಗ ಎಂದು ಒವೈಸಿ ಹೇಳಿದ್ದಾನೆ.

ಅಷ್ಟೇ ಅಲ್ಲ, ಅಸದುದ್ದೀನ್ ಒವೈಸಿ ಅವರು ಸಂಘವನ್ನು ಗುರಿಯಾಗಿಸಿಕೊಂಡಿದ್ದಾರೆ, ಈ ಬಗ್ಗೆ ಟ್ವೀಟ್ ಮಾಡುತ್ತ ನಾವು ಸುಲಭವಾಗಿ ಸಂಸತ್ತಿಗೆ ಅಥವಾ ಅಸೆಂಬ್ಲಿಗೆ ಹೋದರೆ ಸಂಘವು ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾನೆ. ವಾಸ್ತವವಾಗಿ, ಓವೈಸಿ ಅವರು ಸುದ್ದಿಯೊಂದನ್ನ ರೀಟ್ವೀಟ್ ಮಾಡುತ್ತ ಪ್ರತಿಕ್ರಿಯೆಯಾಗಿ ಈ ಹೇಳಿಕೆಯನ್ನು ನೀಡಿದ್ದಾನೆ, ಅದರಲ್ಲಿ ತನಗೆ ಸಂಬಂಧಿಸಿದ ಸುದ್ದಿಯನ್ನು ಉಲ್ಲೇಖಿಸಲಾಗಿತ್ತು. ನಂತರ ಓವೈಸಿ ಟ್ವಿಟ್ಟರ್ ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, ಹಿಂದುತ್ವವು ಒಂದು ಸಮುದಾಯಕ್ಕೆ ಮಾತ್ರ ರಾಜಕೀಯ ಅಧಿಕಾರವನ್ನು ಹೊಂದಿರಬೇಕು ಎಂಬ ಸುಳ್ಳನ್ನು ಆಧರಿಸಿದೆ ಎಂದು ಹೇಳಿದ್ದಾನೆ.

ಅಸದುದ್ದೀನ್ ಒವೈಸಿ ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲವಾದರೂ, ಹಿಂದೂ ಮತ್ತು ಹಿಂದುತ್ವದ ವಿರುದ್ಧ ಮಾತನಾಡುವಲ್ಲಿ ಇಂತಹ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ತಮಗೆಲ್ಲಾ ಗೊತ್ತಿರುವ ವಿಷಯವೇ. ಓವೈಸಿ NRC ಬಗ್ಗೆಯೂ ಮಾತನಾಡಿದ್ದ, ಕೇಂದ್ರ ಸರ್ಕಾರ ಇದಕ್ಕಾಗಿ, ಎನ್‌ಪಿಆರ್‌ನ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆಯೆಂದರೆ, ನಂತರ ಅದರ ವಿರೋಧದ ವೇಳಾಪಟ್ಟಿಯನ್ನು ಸಹ ನಾವು ಕೂಡ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದನು.

Advertisement
Share this on...