ಲವ್ ಜಿಹಾದ್ ಆರೋಪಿ ಫೈಝಲ್ ಸೈಯದ್ ಅಬ್ಬಾಸ್ ನನ್ನು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಬಂಧಿಸಿದ ಬಳಿಕ ಇದೀಗ ಅಪ್ರಾಪ್ತ ಬಾಲಕಿಗೆ ಅಬಾರ್ಷನ್ ಮಾಡಿದ ವೈದ್ಯನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಡಾ.ಮಯಾಂಕ್ ಶ್ರೀವಾಸ್ತವ್ನ ಹೋಮಿಯೋಪತಿ ಕ್ಲಿನಿಕ್ ಅನ್ನು ಸೀಲ್ ಮಾಡಿದ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್ ಮಾಡಿಸಿ ಫೈಝಲ್ ತನ್ನನ್ನು ಬಲೆಗೆ ಬೀಳಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾಳೆ.
ಓಜಾಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ ತ್ಯಾ ಚಾರ ಮತ್ತು ಲವ್ ಜಿಹಾದ್ ಪ್ರಕರಣದ ತನಿಖೆ ನಡೆಸುತ್ತಿರುವ ಭೋಪಾಲ್ ಪೊಲೀಸರು ಹೋಮಿಯೋಪತಿ ವೈದ್ಯ ಮಯಾಂಕ್ ಶ್ರೀವಾಸ್ತವ್ನನ್ಮೂ ಬಂಧಿಸಿದ್ದಾರೆ. 50 ಸಾವಿರ ರೂಪಾಯಿ ಪಡೆದು ಅಪ್ರಾಪ್ತ ಬಾಲಕಿಗೆ ಮಯಾಂಕ್ ಶ್ರೀವಾಸ್ತವ ಅಬಾರ್ಷನ್ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಅಕ್ರಮವಾಗಿ ಅಬಾರ್ಷನ್ ಮಾಡಿದ್ದಕ್ಕಾಗಿ ಡಾ. ಮಯಾಂಕ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆತನ ಕ್ಲಿನಿಕ್ ಕೂಡ ಸೀಲ್ ಮಾಡಲಾಗಿದೆ. ಆರೋಪಿ ವೈದ್ಯ ಇದುವರೆಗೆ ಎಷ್ಟು ಅಕ್ರಮ ಅಬಾರ್ಷನ್ ಮಾಡಿದ್ದಾನೆ ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ದಲಿತ ಯುವತಿಯೊಬ್ಬಳು ಫೈಝಲ್ ಸೈಯದ್ ಅಬ್ಬಾಸ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಫೈಝಲ್ ಎಂಬ ವ್ಯಕ್ತಿ ಶಾನ್ ಪಂಡಿತ್ ಎಂದು ಹೇಳಿಕೊಂಡು ತನ್ನೊಂದಿಗೆ ಸ್ನೇಹ ಬೆಳೆಸಿದ್ದ. ಆರೋಪಿ ಶಾನ್ ಪಂಡಿತ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಕೂಡ ಹೊಂದಿದ್ದ. ಇದರಿಂದಾಗಿ ಯುವತಿ ಆತನನ್ನ ನಂಬಿದ್ದಳು. ಮೂರು ವರ್ಷಗಳ ಹಿಂದೆ ಆಕೆಯ ಹುಟ್ಟುಹಬ್ಬದ ನೆಪದಲ್ಲಿ ಆರೋಪಿ ಆಕೆಯನ್ನು ಹೋಟೆಲ್ಗೆ ಕರೆಸಿಕೊಂಡಿದ್ದನು. ಅಲ್ಲಿ ಆಕೆ ಮೊದಲ ಬಾರಿಗೆ ಅ ತ್ಯಾ ಚಾ ರಕ್ಕೊಳಗಾಗಿದ್ದಳು ಎಂದು ಹುಡುಗಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕಿಯ ಜೊತೆಗಿನ ದುಷ್ಕರ್ಮದ ಬಳಿಕ ಫೈಜಲ್ ತನ್ನ ಅಸಲಿಯತ್ತನ್ನ ಹುಡುಗಿಗೆ ತಿಳಿಸಿದ್ದಾನೆ. “ನನ್ನ ಹೆಸರು ಫೈಜಲ್ ಅಬ್ಬಾಸ್ ಹೊರತು ನಾನೇನು ಹಿಂದೂ ಅಲ್ಲ. ನಿನ್ನ ವಿಡಿಯೋ ಮಾಡಿಟ್ಟಿದೀನಿ, ಈಗ ನಾನು ಯಾವಾಗ ಎಲ್ಲೇ ಕರೆದರೂ ನೀನು ಬರಲೇಬೇಕು. ಒಂದು ವೇಳೆ ಈ ವಿಷಯವನ್ನ ಹೊರಗಡೆ ಯಾರಿಗಾದರೂ ತಿಳಿಸಿದರೆ ಈ ವಿಡಿಯೋ ನಿನ್ನ ಮನೆಯವರಿಗೆ ತೋರಿಸಿಬಿಡ್ತೀನಿ, ಸೋಶಿಯಲ್ ಮೀಡಿಯಾಗಳಲ್ಲೂ ಅಪ್ಲೋಡ್ ಮಾಡಿಬಿಡ್ತೀನಿ” ಎಂದಿದ್ದ.
ಸಮಾಜದಲ್ಲಿ ತನ್ನ ಮರ್ಯಾದೆ ಹರಾಜಾಗುತ್ತೆ ಎಂಬ ಭಯದಿಂದ ಮೂರು ವರ್ಷಗಳ ಕಾಲ ಆತ ಹೇಳಿದ್ದನ್ನೆಲ್ಲಾ ಕೇಳುತ್ತಾ ಬಂದಿದ್ದೆ ಎಂದು ಹುಡುಗಿ ತಿಳಿಸಿದ್ದಾಳೆ. ಈ ಮಧ್ಯೆ ಹುಡುಗಿ ಗರ್ಭಿಣಿಯಾಗಿದ್ದಾಳೆ. ವರದಿಗಳ ಪ್ರಕಾರ 2 ಬಾರಿ ಯಾವುದೋ ಔಷಧದ ಮೂಲಕ ಅಬಾರ್ಷನ್ ಮಾಡಿಸಲಾಗಿತ್ತು ಹಾಗು ಒಂದು ಬಾರಿ ಡಾ.ಮಯಾಂಕ್ ಶ್ರೀವಾಸ್ತವ್ ಸಹಾಯ ಪಡೆಯಲಾಗಿತ್ತು. ಹುಡುಗಿಯ ಅಬಾರ್ಷನ್ ಮಾಡಿಸೋಕೆ ಮಯಾಂಕ್ 50 ಸಾವಿರ ಪಡೆದಿದ್ದ ಎಂದು ಹೇಳಲಾಗುತ್ತಿದೆ.
ಫೈಜಲ್ನ ಈ ಕೃತ್ಯದಲ್ಲಿ ಆತನ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರೆ. ತಾನು ಫೈಜಲ್ನ ತಂದೆಯ ಅಕೌಂಟ್ ಗೆ ಹಲವಾರು ಬಾರಿ ಹಣ ಕಳುಹಿಸಿದ್ದೆ. ಇಷ್ಟೇ ಅಲ್ಲದೆ ಫೈಜಲ್ ಸಂತ್ರಸ್ತೆಯ ಕಾಲೇಜ್ ಫೀಸನ್ನೂ ಕಸಿದುಕೊಂಡಿದ್ದನು. ಹುಡುಗಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ “ದಲಿತಳನ್ನ ನಾನು ಮದುವೆಯಾಗೋಕೆ ಸಾಧ್ಯವಿಲ್ಲ, ಮೊದಲು ಇಸ್ಲಾಂಗೆ ಮತಾಂತರವಾಗಬೇಕು” ಎಂದು ಫೈಜಲ್ ಹೇಳುತ್ತಿದ್ದ. ಬಳಿಕ ಫೈಜಲ್ನ ಕಾಟದಿಂದ ಬೇಸತ್ತು ಹುಡುಗಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ನೀಡಿ FIR ದಾಖಲಿಸಿದ್ದಾಳೆ.